ಯೆಶಾಯ 29:11 - ಕನ್ನಡ ಸಮಕಾಲಿಕ ಅನುವಾದ11 ದರ್ಶನವೆಲ್ಲಾ ನಿಮಗೆ ಮುದ್ರೆ ಹಾಕಿದ ಗ್ರಂಥದ ವಾಕ್ಯಗಳ ಹಾಗಾಯಿತು. ಅದನ್ನು ಅಕ್ಷರ ಬಲ್ಲವನಿಗೆ ಕೊಟ್ಟು, “ಇದನ್ನು ಓದು,” ಎಂದು ವಿನಂತಿಸಿದರೆ ಅವನು, “ಮುದ್ರೆ ಹಾಕಿದೆಯೆಲ್ಲಾ, ಆಗುವುದಿಲ್ಲ,” ಅನ್ನುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ದೈವದರ್ಶನವೆಲ್ಲಾ ಮುದ್ರೆಹಾಕಿದ ಶಾಸ್ತ್ರದ ಮಾತಿನ ಹಾಗಿದೆ; ಅದನ್ನು ಅಕ್ಷರ ಬಲ್ಲವನಿಗೆ, “ಇದನ್ನು ಓದು” ಎಂದು ಹೇಳಿದರೆ ಅವನು, “ಮುದ್ರೆ ಹಾಕಿದೆಯಲ್ಲಾ, ಆಗುವುದಿಲ್ಲ” ಎಂದು ಹೇಳುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಈ ಕಾರಣ, ನಿನ್ನ ಕುರಿತ ದಿವ್ಯದರ್ಶನ ನಿಗೂಢ ಗ್ರಂಥವಾಕ್ಯವಾಗಿಬಿಟ್ಟಿದೆ. ಅದನ್ನು ಅಕ್ಷರಬಲ್ಲವನಿಗೆ, “ದಯಮಾಡಿ ಇದನ್ನು ಓದು,” ಎಂದು ಕೊಟ್ಟರೆ, ಅವನು : “ಇದು ನಿಗೂಢವಾಗಿದೆ, ಆಗುವುದಿಲ್ಲ,” ಎನ್ನುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ದೈವದರ್ಶನವೆಲ್ಲಾ ಮುದ್ರೆಹಾಕಿದ ಶಾಸ್ತ್ರದ ಮಾತಿನ ಹಾಗಿದೆ; ಅದನ್ನು ಅಕ್ಷರಬಲ್ಲವನಿಗೆ - ದಯಮಾಡಿ ಓದೆಂದು ಒಪ್ಪಿಸಿದರೆ ಅವನು - ಮುದ್ರೆಹಾಕಿದೆಯಲ್ಲಾ, ಆಗುವದಿಲ್ಲ ಅನ್ನುವನು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ನಾನು ಖಂಡಿತವಾಗಿ ಹೇಳುತ್ತೇನೆ, ಈ ಸಂಗತಿಗಳು ನೆರವೇರುವವು. ಆದರೆ ನೀವು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ನನ್ನ ಮಾತುಗಳು ಒಂದು ಪುಸ್ತಕದಲ್ಲಿ ಬರೆದು ಮುಚ್ಚಿ ಅದಕ್ಕೆ ಮುದ್ರೆಹಾಕಿ ಇರಿಸಿದಂತಿರುವದು. ಅಧ್ಯಾಯವನ್ನು ನೋಡಿ |