Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 29:10 - ಕನ್ನಡ ಸಮಕಾಲಿಕ ಅನುವಾದ

10 ಯೆಹೋವ ದೇವರು ನಿಮ್ಮ ಮೇಲೆ ಗಾಢನಿದ್ರೆಯ ಆತ್ಮವನ್ನು ಹೊಯ್ದು, ನಿಮ್ಮ ಕಣ್ಣುಗಳನ್ನು ಮುಚ್ಚಿದ್ದಾರೆ. ಪ್ರವಾದಿಗಳನ್ನೂ, ನಿಮ್ಮ ಮುಖ್ಯಸ್ಥರಾದ ದರ್ಶಿಗಳನ್ನು ಮುಚ್ಚಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಯೆಹೋವನು ನಿಮ್ಮ ಮೇಲೆ ಗಾಢನಿದ್ರೆಯನ್ನು ಬರಮಾಡಿ, ಪ್ರವಾದಿಗಳ ಕಣ್ಣುಗಳನ್ನು ಮುಚ್ಚಿ, ದಿವ್ಯದರ್ಶಿಗಳ ತಲೆಗಳಿಗೆ ಮುಸುಕು ಹಾಕಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಸರ್ವೇಶ್ವರ ನಿಮ್ಮ ಮೇಲೆ ಗಾಢನಿದ್ರೆಯನ್ನು ಬರಮಾಡಿ ಪ್ರವಾದಿಗಳೆಂಬ ಕಣ್ಣುಗಳನ್ನು ಕಟ್ಟಿಬಿಟ್ಟಿದ್ದಾರೆ. ದಿವ್ಯದರ್ಶನಗಳೆಂಬ ಕಲೆಗಳಿಗೆ ಮುಸುಕು ಹಾಕಿಬಿಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಯೆಹೋವನು ನಿಮ್ಮ ಮೇಲೆ ಗಾಢನಿದ್ರೆಯನ್ನು ಬರಮಾಡಿ ಪ್ರವಾದಿಗಳೆಂಬ ಕಣ್ಣುಗಳನ್ನು ಮುಚ್ಚಿ ದಿವ್ಯದರ್ಶಿಗಳೆಂಬ ತಲೆಗಳಿಗೆ ಮುಸುಕು ಹಾಕಿದ್ದಾನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಯೆಹೋವನು ನಿಮಗೆ ತೂಕಡಿಕೆ ಬರಮಾಡುವನು. ಆತನು ನಿಮ್ಮ ಕಣ್ಣುಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ಕಣ್ಣುಗಳಾಗಿದ್ದಾರೆ.) ಯೆಹೋವನು ನಿಮ್ಮ ತಲೆಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ತಲೆಗಳಾಗಿದ್ದಾರೆ.)

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 29:10
21 ತಿಳಿವುಗಳ ಹೋಲಿಕೆ  

ಪವಿತ್ರ ವೇದದಲ್ಲಿ ಬರೆದಿರುವಂತೆ, “ದೇವರು ಅವರಿಗೆ ಜಡಸ್ವಭಾವದ ಆತ್ಮವನ್ನು, ಕಾಣಲಾರದ ಕಣ್ಣನ್ನು ಮತ್ತು ಕೇಳಲಾರದ ಕಿವಿಯನ್ನು ಕೊಟ್ಟರು, ಅದು ಇಂದಿನವರೆಗೂ ಹಾಗೆಯೇ ಇದೆ.”


ಅವರು ಏನೂ ತಿಳಿಯದವರು ಇಲ್ಲವೆ ಏನೂ ಗ್ರಹಿಸಲಾರದವರು. ಏಕೆಂದರೆ ಆತನು ಅವರ ಕಣ್ಣು ಕಾಣದಂತೆಯೂ, ಹೃದಯಗಳು ಗ್ರಹಿಸದಂತೆಯೂ ಮುಚ್ಚಿಬಿಟ್ಟಿದ್ದಾನೆ.


ಅವರು ನೋಡುವವರಿಗೆ, “ನೋಡಬೇಡಿರಿ,” ಎಂದು ಪ್ರವಾದಿಗಳಿಗೆ, “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ, ನಮಗೆ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ. ನಯವಾದವುಗಳನ್ನೇ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ.


ಪೂರ್ವದಲ್ಲಿ ಇಸ್ರಾಯೇಲಿನಲ್ಲಿ ಯಾವನಾದರೂ ದೇವರ ಹತ್ತಿರ ವಿಚಾರಿಸಬೇಕಾದರೆ, “ಪ್ರವಾದಿಯ ಬಳಿಗೆ ಹೋಗೋಣ ಬನ್ನಿರಿ,” ಎನ್ನುವನು. ಏಕೆಂದರೆ ಈ ಕಾಲದಲ್ಲಿ ಪ್ರವಾದಿ ಎಂದು ಕರೆಯಿಸಿಕೊಳ್ಳುವವರನ್ನು ಪೂರ್ವಕಾಲದಲ್ಲಿ ದರ್ಶಿ ಎಂದು ಕರೆಯುತ್ತಿದ್ದರು.


ಈ ಲೋಕದ ದೇವರು ನಂಬದವರ ಮನಸ್ಸನ್ನು ಕುರುಡುಮಾಡಿರುತ್ತಾನೆ. ಆದ್ದರಿಂದ ದೇವರ ಸ್ವರೂಪವಾಗಿರುವ ಕ್ರಿಸ್ತ ಯೇಸುವಿನ ಸುವಾರ್ತೆಯ ಮಹಿಮೆಯ ಬೆಳಕನ್ನು ಅವರು ಕಾಣಲಾರರು.


ದರ್ಶನವಿಲ್ಲದೆ, ನಿಮಗೆ ರಾತ್ರಿಯಾಗುವುದು; ಶಕುನವಿಲ್ಲದೆ ನಿಮಗೆ ಕತ್ತಲಾಗುವುದು. ಪ್ರವಾದಿಗಳಿಗೆ ಸೂರ್ಯ ಮುಳುಗುವುದು. ಅವರ ಮೇಲೆ ಹಗಲು ಕತ್ತಲೆಯಾಗುವುದು.


“ ‘ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ, ಯೆಹೋವ ದೇವರಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ. ನಾನು ನನ್ನ ಕೈಯನ್ನು ಅವನ ವಿರುದ್ಧವಾಗಿ ಚಾಚಿ, ನನ್ನ ಜನರಾದ ಇಸ್ರಾಯೇಲರ ಮಧ್ಯದೊಳಗಿಂದ ಅವನನ್ನು ನಾಶಪಡಿಸುವೆನು.


ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ. ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ


ದಾವೀದನು ಸೌಲನ ತಲೆದಿಂಬಿನ ಬಳಿಯಲ್ಲಿದ್ದ ಈಟಿಯನ್ನೂ, ನೀರಿನ ತಂಬಿಗೆಯನ್ನೂ ತೆಗೆದುಕೊಂಡನು. ಅವರು ಹೊರಟು ಹೋದರು. ಒಬ್ಬರಾದರೂ ನೋಡಲಿಲ್ಲ ಇಲ್ಲವೆ ತಿಳಿದುಕೊಳ್ಳಲಿಲ್ಲ, ಅರಿತಿದ್ದಿಲ್ಲ, ಯಾರೂ ಎಚ್ಚೆತ್ತಿರಲಿಲ್ಲ. ಏಕೆಂದರೆ ಯೆಹೋವ ದೇವರಿಂದ ಗಾಢನಿದ್ರೆಯು ಅವರ ಮೇಲೆ ಇಳಿದ ಕಾರಣ ಅವರೆಲ್ಲರು ಗಾಢ ನಿದ್ರೆಯಲ್ಲಿದ್ದರು.


ಆಗ ನಾನು, “ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ. ನೀವು ನ್ಯಾಯವನ್ನು ಪ್ರೀತಿಸಬಾರದೇ.


ಹೀಗಿರುವುದರಿಂದ, ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಇನ್ನೂ ಮಾಡುವೆನು. ಅವರ ಜ್ಞಾನಿಗಳ ಜ್ಞಾನವು ಅಳಿಯುವುದು. ಅವರ ವಿವೇಕಿಗಳ ವಿವೇಕವು ಅಡಗಿಕೊಳ್ಳುವುದು.”


ನಿನ್ನ ಮೂಲಪಿತೃ ಪಾಪಮಾಡಿದ್ದಾನೆ. ನಿನ್ನ ಬೋಧಕರು ನನಗೆ ವಿರೋಧವಾಗಿ ದ್ರೋಹ ಮಾಡಿದ್ದಾರೆ.


ಆ ದಿವಸದಲ್ಲಿ, “ಅರಸನ ಹೃದಯವೂ ಎದೆಗುಂದುವುದು. ಅಧಿಪತಿಯ ಹೃದಯವೂ ಕುಗ್ಗುವುದು. ಯಾಜಕರು ಭ್ರಮೆಗೊಳ್ಳುವರು. ಪ್ರವಾದಿಗಳು ಸ್ತಬ್ಧರಾಗುವರು,” ಎಂದು ಯೆಹೋವ ದೇವರು ನುಡಿಯುತ್ತಾರೆ.


ಅವರು ಬೀದಿಗಳಲ್ಲಿ ಕುರುಡರಂತೆ ಅಲೆದಾಡಿದರು. ಅವರು ರಕ್ತದಿಂದ ತಮ್ಮನ್ನು ತಾವೇ ಕಲುಷಿತಗೊಳಿಸಿಕೊಂಡರು. ಆದ್ದರಿಂದ ಮನುಷ್ಯರು ಅವರ ವಸ್ತ್ರಗಳನ್ನು ಮುಟ್ಟಲಾರದೇ ಹೋದರು.


“ಪ್ರವಾದಿಸಬೇಡ, ಈ ಸಂಗತಿಗಳ ಬಗ್ಗೆ ಪ್ರವಾದನೆ ಹೇಳಬೇಡ. ಅವಮಾನ ನಮ್ಮ ಮೇಲೆ ಬರುವುದೇ ಇಲ್ಲ,” ಎಂದು ಅವರ ಪ್ರವಾದಿಗಳು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು