ಯೆಶಾಯ 28:27 - ಕನ್ನಡ ಸಮಕಾಲಿಕ ಅನುವಾದ27 ಅಗಸೆಯನ್ನು ತುಳಿಯುವ ಯಂತ್ರದಿಂದ ತುಳಿಯುವುದಿಲ್ಲ. ಜೀರಿಗೆಯನ್ನು ಒಕ್ಕುವುದು ಬಂಡಿಯ ಚಕ್ರ ತಿರುಗಿಸುವುದರಿಂದ ಅಲ್ಲ. ಅಗಸೆಯು ಕೋಲಿನಿಂದಲೂ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದ ಆಗಿರುತ್ತದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಆದುದರಿಂದ ಅವನು ಜೀರಿಗೆಯನ್ನು ಒಕ್ಕುವುದು ಯಂತ್ರದಿಂದಲ್ಲ ಅಥವಾ ಗಾಡಿಯ ಚಕ್ರದಿಂದಲ್ಲ ಆದರೆ ಕೋಲಿನಿಂದಲೇ; ಅಗಸೆಯನ್ನು ಒಕ್ಕುವುದು ಕೋಲಿನಿಂದಲೇ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದಲೇ, ಕಣದ ಗುಂಡಿನಿಂದಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಸದಾಪನ್ನು ಒಕ್ಕುವುದು ಕಣದ ಗುಂಡಿನಿಂದಲ್ಲ, ದೊಣ್ಣೆಯಿಂದಲೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಆದಕಾರಣ ಅವನು ಕರಿಯ ಜೀರಿಗೆಯನ್ನು ಒಕ್ಕುವದು ಹಲಿವೆಯಿಂದಲ್ಲ, ಕೋಲಿನಿಂದಲೇ; ಜೀರಿಗೆಯನ್ನು ಒಕ್ಕುವದು ಕಣದ ಗುಂಡಿನಿಂದಲ್ಲ, ದೊಣ್ಣೆಯಿಂದಲೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ವ್ಯವಸಾಯಗಾರನು ಜೀರಿಗೆಯನ್ನು ಒಕ್ಕುವದು ಹಲಿವೆಯಿಂದಲ್ಲ, ಕೋಲಿನಿಂದಲೇ. ಜೀರಿಗೆಯನ್ನು ಕುದುರೆಯಿಂದ ಗುಂಡನ್ನು ಉರುಳಿಸಿ ನುಚ್ಚುನೂರು ಮಾಡುವನೋ? ಇಲ್ಲ! ಅವನೊಂದು ಸಣ್ಣ ಕೋಲನ್ನು ಉಪಯೋಗಿಸುವನು. ಅಧ್ಯಾಯವನ್ನು ನೋಡಿ |
ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡಬೇಡ,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿ ಓಡಿಸಿದೆನೋ, ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ಮುಗಿಸಿಬಿಡುತ್ತೇನೆ; ಆದರೆ ನಿನ್ನನ್ನು ಸಂಪೂರ್ಣವಾಗಿ ಮುಗಿಸಿಬಿಡುವುದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದರೂ ನಿನ್ನನ್ನು ಶಿಕ್ಷಿಸದೆ ಬಿಡುವುದಿಲ್ಲ.”