ಯೆಶಾಯ 27:3 - ಕನ್ನಡ ಸಮಕಾಲಿಕ ಅನುವಾದ3 ಯೆಹೋವ ದೇವರಾದ ನಾನೇ ಅದನ್ನು ಕಾಯುತ್ತೇನೆ. ಸತತವಾಗಿ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ. ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 “ಯೆಹೋವನಾದ ನಾನೇ ಅದನ್ನು ಕಾಯುತ್ತೇನೆ. ಪ್ರತಿ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ಹಗಲಿರುಳೂ ಕಾಯುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಸರ್ವೇಶ್ವರನಾದ ನಾನೇ ಇದರ ತೋಟಗಾರ, ಕ್ಷಣಕ್ಷಣಕ್ಕೂ ಇದಕೆ ಹೊಯ್ಯುವೆ ನೀರ, ಇದನ್ನಾದರೂ ಮುಟ್ಟದಂತೆ ಕಾಯುವೆ ನಿರಂತರ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಯೆಹೋವನಾದ ನಾನು ತೋಟಗಾರನು, ಕ್ಷಣಕ್ಷಣವೂ ನೀರು ಹೊಯ್ಯುತ್ತಿದ್ದೇನೆ; ಯಾರೂ ಮುಟ್ಟದ ಹಾಗೆ ಹಗಲಿರುಳೂ ಕಾಯುತ್ತೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 “ಯೆಹೋವನಾದ ನಾನು ಆ ತೋಟವನ್ನು ಚೆನ್ನಾಗಿ ನೋಡಿಕೊಳ್ಳುವೆನು; ಸರಿಯಾದ ಕಾಲದಲ್ಲಿ ತೋಟಕ್ಕೆ ನೀರು ಹೊಯ್ಯುವೆನು. ಹಗಲಿರುಳು ತೋಟವನ್ನು ಕಾಯುವೆನು. ಆ ತೋಟವನ್ನು ಯಾರೂ ಹಾಳುಮಾಡುವದಿಲ್ಲ. ಅಧ್ಯಾಯವನ್ನು ನೋಡಿ |
ಇದಲ್ಲದೆ ಯೆಹೋವ ದೇವರು ತಾವೇ ದೇವರಾಗಿದ್ದಾರೆ. ಅವರ ಹೊರತು ಬೇರೊಬ್ಬರಿಲ್ಲವೆಂದು ಭೂಲೋಕದ ಜನರೆಲ್ಲರೂ ತಿಳಿಯುವ ಹಾಗೆ, ಕಾರ್ಯಕ್ಕೆ ತಕ್ಕದ್ದಾಗಿ ಸಕಲ ಕಾಲಗಳಲ್ಲಿ ತಮ್ಮ ಸೇವಕನ ನ್ಯಾಯವನ್ನೂ, ತಮ್ಮ ಜನರಾದ ಇಸ್ರಾಯೇಲಿನ ನ್ಯಾಯವನ್ನೂ ತೀರಿಸುವ ಹಾಗೆ, ನಾನು ಯೆಹೋವ ದೇವರ ಮುಂದೆ ವಿಜ್ಞಾಪನೆ ಮಾಡಿದ ಈ ನನ್ನ ಮಾತುಗಳು, ರಾತ್ರಿ ಹಗಲು ನಮ್ಮ ದೇವರಾದ ಯೆಹೋವ ದೇವರ ಬಳಿಯಲ್ಲಿ ಇರಲಿ.