Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 23:4 - ಕನ್ನಡ ಸಮಕಾಲಿಕ ಅನುವಾದ

4 ಸೀದೋನೇ ಮತ್ತು ಸಮುದ್ರದ ಕೋಟೆಯೇ ನಾಚಿಕೆಪಡಿರಿ. ಏಕೆಂದರೆ ಇದೇ ಸಮುದ್ರದ ಘೋಷಣೆಯಾಗಿದೆ: “ನಾವು ಪ್ರಸವವೇದನೆ ಪಡುವುದಿಲ್ಲ, ಹೆರುವುದಿಲ್ಲ, ಇಲ್ಲವೆ ಪುತ್ರಪುತ್ರಿಯರನ್ನು ಸಾಕಿ ಸಲಹುವುದಿಲ್ಲ,”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಚೀದೋನೇ, ನಾಚಿಕೆಪಡು. ಏಕೆಂದರೆ ಸಮುದ್ರವೂ, ಸಮುದ್ರದ ದುರ್ಗವೂ, “ನಾವು ವೇದನೆ ಪಡಲಿಲ್ಲ, ಪ್ರಸವಿಸಲಿಲ್ಲ, ಯುವತಿ ಯುವಕರನ್ನು ಸಾಕಿ ಸಲಹಲಿಲ್ಲ” ಎಂದು ನುಡಿದಿದೆಯಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಸಿದೋನ್ ನಗರವೇ, ನಿನಗೆ ನಾಚಿಕೆಗೇಡು ! ಸಮುದ್ರವೂ ಸಮುದ್ರ ತಳವೂ ನಿನ್ನನ್ನು ನಿರಾಕರಿಸುತ್ತಾ; “ನಾನು ಗರ್ಭಧರಿಸಲಿಲ್ಲ, ಪ್ರಸವಿಸಲಿಲ್ಲ, ಪುತ್ರಪುತ್ರಿಯರನ್ನು ಸಾಕಿ ಸಲಹಲಿಲ್ಲ,” ಎಂದು ನುಡಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಚೀದೋನೇ, ನಾಚಿಕೆಪಡು; ಸಮುದ್ರವು, ಸಮುದ್ರದುರ್ಗವು - ನಾವು ವೇದನೆಪಡಲಿಲ್ಲ, ಪ್ರಸವಿಸಲಿಲ್ಲ, ಯುವತಿಯುವಕರನ್ನು ಸಾಕಿ ಸಲಹಲಿಲ್ಲ ಎಂದು ನುಡಿದಿದೆಯಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಚೀದೋನೇ, ನೀನು ತುಂಬಾ ದುಃಖದಿಂದಿರಬೇಕು. ಯಾಕೆಂದರೆ ಸಮುದ್ರವೂ ಸಮುದ್ರದ ಕೋಟೆಯೂ ಹೇಳುವುದೇನೆಂದರೆ, “ನನಗೆ ಮಕ್ಕಳಿಲ್ಲ, ನಾನು ಪ್ರಸವವೇದನೆ ಅನುಭವಿಸಲಿಲ್ಲ. ನಾನು ಮಕ್ಕಳನ್ನು ಹೆರಲಿಲ್ಲ. ನಾನು ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ಬೆಳೆಸಲಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 23:4
12 ತಿಳಿವುಗಳ ಹೋಲಿಕೆ  

ದೀಪದ ಬೆಳಕು ನಿನ್ನಲ್ಲಿ ಎಂದೂ ಪ್ರಕಾಶಿಸದು. ವಧೂವರರ ಸ್ವರವು ಮತ್ತೆ ನಿನ್ನಲ್ಲಿ ಎಂದೂ ಕೇಳಿಬರದು. ಏಕೆಂದರೆ ನಿನ್ನ ವರ್ತಕರು ಭೂಮಿಯ ಮಹಾ ಪುರುಷರಾಗಿದ್ದು, ನಿನ್ನ ಮಾಂತ್ರಿಕ ಶಕ್ತಿಯ ದೆಸೆಯಿಂದ ಎಲ್ಲಾ ದೇಶಗಳವರು ವಂಚಿತರಾದರು.


ಕಾನಾನ್ಯರ ಮೇರೆಯು ಸೀದೋನ್ ಪಟ್ಟಣದಿಂದ ಗೆರಾರಿನ ಮಾರ್ಗವಾಗಿ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳ ಮಾರ್ಗವಾಗಿ ಲೆಷಾ ಊರಿನವರೆಗೂ ಇರುತ್ತದೆ.


ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆಮೇಲೆ ಹೇತನು ಹುಟ್ಟಿದನು.


ಯೆಹೋವ ದೇವರು ಅವರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿಕೊಟ್ಟರು. ಇವರು ಅವರನ್ನು ಹೊಡೆದು ದೊಡ್ಡ ಸೀದೋನ್, ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಕಣಿವೆಯವರೆಗೂ ಹಿಂದಟ್ಟಿ, ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ಎಲ್ಲರನ್ನು ಸಂಹರಿಸಿದರು.


ಇಸ್ರಾಯೇಲರು ಪುನಃ ಯೆಹೋವ ದೇವರ ಮುಂದೆ ಕೆಟ್ಟತನವನ್ನು ಮಾಡಿ, ಬಾಳನನ್ನೂ, ಅಷ್ಟೋರೆತನ್ನೂ, ಅರಾಮ್ ದೇಶದ ದೇವರುಗಳನ್ನೂ, ಸೀದೋನಿನ ದೇವರುಗಳನ್ನೂ, ಮೋವಾಬಿನ ದೇವರುಗಳನ್ನೂ, ಅಮ್ಮೋನಿಯರ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸಿದರು.


ಟೈರಿನ ಅರಸರೆಲ್ಲರಿಗೂ, ಸೀದೋನಿನ ಅರಸರೆಲ್ಲರಿಗೂ, ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ,


ಅವುಗಳನ್ನು ಎದೋಮಿನ ಅರಸನಿಗೂ, ಮೋವಾಬಿನ ಅರಸನಿಗೂ, ಅಮ್ಮೋನ್ಯರ ಅರಸನಿಗೂ, ಟೈರಿನ ಅರಸನಿಗೂ, ಸೀದೋನಿನ ಅರಸನಿಗೂ, ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಯೆರೂಸಲೇಮಿನಲ್ಲಿ ಬಂದಿರುವ ರಾಯಭಾರಿಗಳ ಕೈಯಿಂದ ಕಳುಹಿಸು.


“ಮನುಷ್ಯಪುತ್ರನೇ, ನೀನು ಸೀದೋನಿಗೆ ಅಭಿಮುಖವಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.


ನೀನು ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಸೀದೋನೇ ನಾನು ನಿನಗೆ ವಿರೋಧವಾಗಿದ್ದೇನೆ. ನಿನ್ನ ಮಧ್ಯದಲ್ಲಿ ಘನವನ್ನು ಹೊಂದುವೆನು. ಆಗ ನಾನು ಅದರಲ್ಲಿ ನ್ಯಾಯಗಳನ್ನು ತೀರಿಸಿ, ಪರಿಶುದ್ಧವಾಗುವಾಗ ನಾನೇ ಯೆಹೋವ ದೇವರೆಂದು ತಿಳಿಯುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು