ಯೆಶಾಯ 23:3 - ಕನ್ನಡ ಸಮಕಾಲಿಕ ಅನುವಾದ3 ಪ್ರವಾಹದಿಂದ ಶೀಹೋರಿನ ಧಾನ್ಯವೂ, ನೈಲ್ ನದಿಯ ಸುಗ್ಗಿಯೂ ಅದಕ್ಕೆ ಆದಾಯವಾಗಿತ್ತು. ಅನೇಕ ಜನಾಂಗಗಳಿಗೆ ವ್ಯಾಪಾರ ಸ್ಥಳವಾಗಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ವಿಶಾಲವಾದ ಸಾಗರದ ಮೇಲೆ ತಂದ ಶೀಹೋರಿನ ಧಾನ್ಯದಿಂದಲೂ, ನೈಲ್ ನದಿಯ ಬೆಳೆಯಿಂದಲೂ ಆದಾಯಹೊಂದಿದ ನಿಮ್ಮ ನಗರವು ಅನೇಕ ಜನಾಂಗಗಳಿಗೆ ವ್ಯಾಪಾರ ಸ್ಥಳವಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಶೀಹೋರಿನ ಧಾನ್ಯದಿಂದಲೂ ನೈಲಿನ ಬೆಳೆಯಿಂದಲೂ ಆದಾಯ ಪಡೆದಿರಿ, ನಿಮ್ಮ ನಗರ ಹಲವಾರು ನಾಡುಗಳಿಗೆ ಮಾರುಕಟ್ಟೆಯಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ವಿಶಾಲವಾದ ಸಾಗರದ ಮೇಲೆ ತಂದ ಶೀಹೋರಿನ ಧಾನ್ಯದಿಂದಲೂ ನೈಲಿನ ಬೆಳೆಯಿಂದಲೂ ಆದಾಯ ಹೊಂದಿದ [ನಿಮ್ಮ ನಗರಿಯು] ಅನೇಕ ಜನಾಂಗಗಳಿಗೆ ಲಾಭಕರವಾಗಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಅವರು ಸಮುದ್ರ ಪ್ರಯಾಣ ಮಾಡುತ್ತಾ ಧಾನ್ಯಕ್ಕಾಗಿ ಹುಡುಕುತ್ತಿದ್ದಾರೆ. ತೂರಿನ ಜನರು ನೈಲ್ ನದಿಯ ಬದಿಗಳಲ್ಲಿ ಬೆಳೆಸುವ ಧಾನ್ಯವನ್ನು ಕೊಂಡುಕೊಂಡು ಇತರ ದೇಶಗಳಿಗೆ ಮಾರುವರು. ಅಧ್ಯಾಯವನ್ನು ನೋಡಿ |