Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 23:12 - ಕನ್ನಡ ಸಮಕಾಲಿಕ ಅನುವಾದ

12 “ಹಿಂಸೆಗೆ ಈಡಾದ ಕನ್ಯೆಯಂತಿರುವ ಸೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಸಂತೃಪ್ತಿ ಇಲ್ಲ. “ಎದ್ದು, ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು. ಅಲ್ಲಿಯೂ ನಿನಗೆ ವಿಶ್ರಾಂತಿ ಇರದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆತನು, “ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು, ಅಲ್ಲಿಯೂ ನಿನಗೆ ವಿಶ್ರಾಂತಿ ಇರದು” ಎಂದು ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 “ಹಿಂಸೆಗೆ ಈಡಾದ ಕನ್ಯೆಯಂತೆ ಇರುವ ಸಿದೋನ್ ನಗರವೇ, ಇನ್ನು ಮೇಲೆ ನಿನಗಿರದು ಸಂತೃಪ್ತಿ: ಸಮುದ್ರ ದಾಟಿ ಸೈಪ್ರಸ್ಸಿಗೆ ಹಾದುಹೋಗು, ಅಲ್ಲಿಯೂ ನಿನಗೆ ದೊರಕದು ವಿಶ್ರಾಂತಿ,” ಎಂದು ಹೇಳಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀವಿುಗೆ ಸಮುದ್ರದ ಮೇಲೆ ಹಾದುಹೋಗು, ಅಲ್ಲಿಯೂ ನಿನಗೆ ವಿಶ್ರಾಂತಿಯಿರದು ಎಂದು ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯೆಹೋವನು ಹೇಳುವುದೇನೆಂದರೆ, “ಚೀದೋನ್ ಕುಮಾರಿಯೇ, ನೀನು ನಾಶವಾಗುವೆ; ಎಂದಿಗೂ ನೀನು ಹರ್ಷಿಸುವದಿಲ್ಲ. ತೂರಿನ ಜನರು, ‘ನಮಗೆ ಸೈಪ್ರಸ್‌ನವರು ಸಹಾಯ ಮಾಡುತ್ತಾರೆ’ ಎಂದು ಹೇಳುತ್ತಾರೆ. ಆದರೆ ನೀನು ಸಮುದ್ರ ಮಾರ್ಗವಾಗಿ ಸೈಪ್ರಸ್‌ಗೆ ಹೋದರೆ ಅಲ್ಲಿ ನಿನಗೆ ವಿಶ್ರಮಿಸಲು ಸ್ಥಳ ದೊರಕುವದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 23:12
21 ತಿಳಿವುಗಳ ಹೋಲಿಕೆ  

ಬಾಬಿಲೋನೇ, ನಿನ್ನಲ್ಲಿ ಮತ್ತೆ ತಂತಿವಾದ್ಯ ನುಡಿಸುವವರು, ಸಂಗೀತಗಾರರು, ಕೊಳಲೂದುವವರು, ತುತೂರಿಯವರು, ಮಾಡುವ ಧ್ವನಿ ಎಂದೂ ಕೇಳಿಸದು. ಯಾವುದೇ ವಿಧವಾದ ಕಸಬುಗಾರನೂ ನಿನ್ನಲ್ಲಿ ಎಂದೂ ಕಂಡುಬಾರನು. ಬೀಸುವ ಕಲ್ಲಿನ ಶಬ್ದವು, ನಿನ್ನಲ್ಲಿ ಎಂದೂ ಕೇಳಿಸದು.


ಬಾಬಿಲೋನಿನ ಪುತ್ರಿಯಾದ ಕನ್ನಿಕೆಯೇ, ಕೆಳಕ್ಕೆ ಇಳಿದುಬಂದು, ಧೂಳಿನಲ್ಲಿ ಕುಳಿತುಕೋ! ಕಸ್ದೀಯರ ಪುತ್ರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ. ಏಕೆಂದರೆ ಇನ್ನು ಮೇಲೆ ನಿನ್ನನ್ನು ಕೋಮಲೆ ಮತ್ತು ನಾಜೂಕಾದವಳು ಎಂದು ಕರೆಯುವುದಿಲ್ಲ.


ನಿನ್ನ ಹುಟ್ಟುಗೋಲನ್ನು ಬಾಷಾನಿನ ಅಲ್ಲೋನ್ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಮ್ ದ್ವೀಪಗಳಿಂದ ತಂದ ಹಲಗೆಗಳಿಂದ ನಿನ್ನ ಹಡಗಿನ ಮೇಲ್ಮಾಳಿಗೆಯನ್ನು ಕಟ್ಟಿ, ಅದನ್ನು ದಂತದಿಂದ ಶೃಂಗರಿಸಿದ್ದಾರೆ.


ಅವರು ಜನರಿಗೆ, ನೀವು ದೂರ ಹೋಗಿರಿ, ನೀವು ಅಶುದ್ಧವಾಗಿದ್ದೀರಿ; ದೂರ ಹೋಗಿರಿ, ದೂರ ಹೋಗಿರಿ, ಮುಟ್ಟಬೇಡಿರಿ, ಎಂದು ಕೂಗಿಕೊಂಡರು. ಅವರು ಓಡಿಹೋಗಿ ಅಲೆದಾಡುತ್ತಿರುವಾಗ, ಅವರು ಇನ್ನು ಮೇಲೆ ಅಲ್ಲಿ ವಾಸಮಾಡುವುದಿಲ್ಲ, ಎಂದು ಬೇರೆ ಜನಾಂಗಗಳೊಳಗೆ ಹೇಳಿದರು.


ಕರ್ತದೇವರು ನನ್ನ ಶೂರರನ್ನೆಲ್ಲಾ ತಿರಸ್ಕರಿಸಿದ್ದಾರೆ. ಅವರು ನನಗೆ ವಿರುದ್ಧ ಸೈನ್ಯವನ್ನು ಬರಮಾಡಿ, ನನ್ನ ಯುವಕರನ್ನು ಜಜ್ಜಿದ್ದಾರೆ. ಕರ್ತದೇವರು ಯೆಹೂದದ ಕನ್ಯೆಯನ್ನು ದ್ರಾಕ್ಷಿಯ ತೊಟ್ಟಿಯಂತೆ ತುಳಿದಿದ್ದಾರೆ.


ಯೆಹೂದವೆಂಬಾಕೆಯು ಸಂಕಟದ ನಿಮಿತ್ತವೂ, ಘೋರವಾದ ದಾಸ್ಯದ ನಿಮಿತ್ತವೂ ಸೆರೆಯಾಗಿ ಹೋದಳು. ಆಕೆಯು ಬೇರೆ ಜನಾಂಗಗಳೊಳಗೆ ವಾಸಮಾಡುವವಳಾಗಿ, ವಿಶ್ರಾಂತಿಯನ್ನು ಕಾಣಳು. ಆಕೆಯು ಇಕ್ಕಟ್ಟಿಗೆ ಸಿಕ್ಕಿಕೊಂಡಿರುವಾಗಲೇ ಆಕೆಯ ಹಿಂಸಕರೆಲ್ಲಾ ಆಕೆಯನ್ನು ಹಿಂದಟ್ಟಿ ಹಿಡಿದರು.


“ಈಜಿಪ್ಟಿನ ಮಗಳಾದ ಕನ್ನಿಕೆಯೇ, ಗಿಲ್ಯಾದಿಗೆ ಹೋಗಿ ತೈಲವನ್ನು ತೆಗೆದುಕೋ. ನೀನು ಬಹಳ ಔಷಧವನ್ನು ತೆಗೆದುಕೊಳ್ಳುವುದು ವ್ಯರ್ಥವಾಗಿದೆ. ಏಕೆಂದರೆ ನಿನಗೆ ಗುಣವಾಗುವುದಿಲ್ಲ!


“ಆದ್ದರಿಂದ ನೀನು ಈ ಮಾತನ್ನು ಅವರಿಗೆ ಹೇಳಬೇಕು. “ ‘ನನ್ನ ಕಣ್ಣುಗಳು ರಾತ್ರಿ ಹಗಲು ಬಿಡದೆ ಕಣ್ಣೀರು ಸುರಿಸಲಿ. ನನ್ನ ಜನರ ಮಗಳಾದ ಕನ್ಯೆಯು ಕ್ರೂರವಾದ ಏಟಿನಿಂದಲೂ, ದೊಡ್ಡ ಪೆಟ್ಟಿನಿಂದಲೂ ಗಾಯಗೊಂಡಿದ್ದಾಳೆ.


ಕಸ್ದೀಯರ ಪುತ್ರಿಯೇ, “ಮೌನವಾಗಿ ಕುಳಿತುಕೋ, ಕತ್ತಲೆಯೊಳಗೆ ಹೋಗು. ಏಕೆಂದರೆ ಇನ್ನು ಮೇಲೆ ನಿನ್ನನ್ನು ರಾಜ್ಯಗಳ ರಾಣಿ ಎಂದು ಕರೆಯುವುದಿಲ್ಲ.


ಅವನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: “ಕನ್ನಿಕೆಯಾದ ಚೀಯೋನ್ ಪುತ್ರಿಯು ನಿನ್ನನ್ನು ತಿರಸ್ಕರಿಸಿ, ನಿನಗೆ ಅಪಹಾಸ್ಯ ಮಾಡುತ್ತಾಳೆ. ಯೆರೂಸಲೇಮಿನ ಪುತ್ರಿಯು ನೀನು ಓಡಿ ಹೋಗುವಾಗ ತನ್ನ ತಲೆಯಾಡಿಸುತ್ತಾಳೆ.


ನಿಮ್ಮ ಉಲ್ಲಾಸದ ಪಟ್ಟಣವೂ, ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ? ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ ನಿವಾಸಿಸುವುದಕ್ಕೆ ತೆಗೆದುಕೊಂಡು ಹೋಗುವವು.


ಯೆಹೋವ ದೇವರು ಅವರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿಕೊಟ್ಟರು. ಇವರು ಅವರನ್ನು ಹೊಡೆದು ದೊಡ್ಡ ಸೀದೋನ್, ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಕಣಿವೆಯವರೆಗೂ ಹಿಂದಟ್ಟಿ, ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ಎಲ್ಲರನ್ನು ಸಂಹರಿಸಿದರು.


ಕಿತ್ತೀಮೆಂಬ ತೀರದಿಂದ ಹಡಗುಗಳು ಬಂದು, ಅಸ್ಸೀರಿಯರನ್ನೂ, ಏಬೆರ್ ಜನರನ್ನೂ ಸೋಲಿಸುವುವು. ಅವನು ಸಹ ಸದಾಕಾಲಕ್ಕೂ ನಾಶವಾಗುವನು.”


“ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು, ಅವನಿಗೆ ಹಡಗುಗಳು ಸೇರುವ ರೇವೂ ಇರುವುದು. ಅವನ ಮೇರೆಯು ಸೀದೋನಿಗೆ ಮುಟ್ಟುವುದು.


ಕಿತ್ತೀಮ್ ದ್ವೀಪಗಳಿಗೆ ದಾಟಿ ಹೋಗಿ ನೋಡಿರಿ. ಕೇದಾರಿಗೆ ಕಳುಹಿಸಿ ಚೆನ್ನಾಗಿ ತಿಳಿದುಕೊಳ್ಳಿರಿ. ಅಂಥದ್ದು ಉಂಟೋ ಎಂದು ನೋಡಿರಿ.


ಏಕೆಂದರೆ ಕಿತ್ತೀಮಿನ ಹಡಗುಗಳು ಅವನಿಗೆ ವಿರೋಧವಾಗಿ ಬರುವುವು. ಆದ್ದರಿಂದ ಅವನು ಎದೆಗುಂದಿ, ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿ ಕೋಪಿಸಿಕೊಳ್ಳುವನು. ಹಿಂದಿರುಗಿ ಬಂದು ಪರಿಶುದ್ಧ ಒಡಂಬಡಿಕೆಯನ್ನು ತೊರೆದವರಿಗೆ ದಯೆ ತೋರಿಸುವನು.


ಯಾವಾನನ ಮಕ್ಕಳು: ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾನೀಮ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು