Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 21:3 - ಕನ್ನಡ ಸಮಕಾಲಿಕ ಅನುವಾದ

3 ಆದ್ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ. ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ. ಕಣ್ಣು ಕುರುಡಾಗುವಷ್ಟು ಭ್ರಾಂತನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆದುದ್ದರಿಂದ ನನ್ನ ಸೊಂಟದಲ್ಲಿ ನೋವು ತುಂಬಿದೆ, ಪ್ರಸವವೇದನೆಯಂತಿರುವ ವೇದನೆಯು ನನ್ನನ್ನು ಹಿಡಿದಿದೆ, ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ, ಕಣ್ಣು ಕುರುಡಾಗುವಷ್ಟು ತತ್ತರಗೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನಾನು ಕಂಡ ಈ ಭೀಕರ ದರ್ಶನದಿಂದ ನನಗೆ ಸೊಂಟ ಮುರಿದಂತಾಗಿದೆ. ಹೆರಿಗೆಯಂಥ ಬೇನೆಯುಂಟಾಗಿದೆ. ಕಿವಿ ಕಿತ್ತುಹೋಗುವಂತಿದೆ. ಕಣ್ಣು ಕರುಡಾಗುವಂತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಈ ದರ್ಶನದಿಂದ ನನ್ನ ಸೊಂಟದಲ್ಲಿ ನೋವು ತುಂಬಿದೆ, ಪ್ರಸವವೇದನೆಯಂತಿರುವ ವೇದನೆಯು ನನ್ನನ್ನು ಹಿಡಿದಿದೆ, ಕಿವಿ ಕಿವುಡಾಗುವಷ್ಟು ಯಾತನೆಪಡುತ್ತೇನೆ, ಕಣ್ಣು ಕುರುಡಾಗುವಷ್ಟು ತತ್ತರಗೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಾನು ಆ ಭಯಂಕರ ಸಂಗತಿಗಳನ್ನು ನೋಡಿದ್ದರಿಂದ ಈಗ ಭಯಪೀಡಿತನಾಗಿದ್ದೇನೆ. ಭಯದಿಂದ ನನ್ನ ಹೊಟ್ಟೆಯು ನೋಯುತ್ತಿದೆ. ಆ ನೋವು ಪ್ರಸವವೇದನೆಯಂತಿದೆ. ನಾನು ಕೇಳುವ ವಿಷಯಗಳು ನನ್ನನ್ನು ಭಯಪಡಿಸಿವೆ; ನಾನು ನೋಡುವ ವಿಷಯಗಳು ನನ್ನನ್ನು ನಡುಗಿಸುತ್ತಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 21:3
17 ತಿಳಿವುಗಳ ಹೋಲಿಕೆ  

ಅವರು ಭಯಪಡುವರು. ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವುವು. ಪ್ರಸವವೇದನೆಯಲ್ಲಿರುವ ಸ್ತ್ರೀಯರಂತೆ ಸಂಕಟಪಡುವರು. ಅವರು ಒಬ್ಬರಿಗೊಬ್ಬರು ಭ್ರಮೆ ಪಡುವರು. ಅವರ ಮುಖಗಳು ಜ್ವಾಲೆಯಂತಿರುವುವು.


ಗರ್ಭಿಣಿ ಸ್ತ್ರೀಯು ಹೆರುವುದಕ್ಕೆ ಸಮೀಪ ಬಂದಾಗ ನೋವಿನಲ್ಲಿದ್ದು ತನ್ನ ಬೇನೆಯಲ್ಲಿ ಅರಚುವಂತೆ, ಯೆಹೋವ ದೇವರೇ, ನಾವು ನಿಮ್ಮ ಸಮ್ಮುಖದಲ್ಲಿದ್ದೆವು.


ಅಲ್ಲಿ ನಡುಕವವೂ ಹೆರುವವಳ ಹಾಗೆ ನೋವೂ ಅವರನ್ನು ಹಿಡಿಯಿತು.


ಆದರೆ, “ಸಮಾಧಾನ, ಸುರಕ್ಷಿತ,” ಎಂದು ಜನರು ಹೇಳುತ್ತಿರುವಾಗಲೇ, ಅವರ ಮೇಲೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಬರುವಂತೆ ಫಕ್ಕನೆ ಬರುವುದು. ಅವರು ಹೇಗೂ ತಪ್ಪಿಸಿಕೊಳ್ಳಲಾರರು.


ಕೆರೀಯೋತ್ ಅವನಿಗೆ ವಶವಾಗುವುದು; ಬಲವಾದ ಕೋಟೆಗಳು ಅವನ ಕೈವಶವಾಗುವುವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೆರುವ ಹೆಣ್ಣಿನ ಎದೆಯದಂತೆ ಅದರುವುದು.


ಆದ್ದರಿಂದ ಮೋವಾಬಿನ ನಿಮಿತ್ತ ನನ್ನ ಹೃದಯವೂ, ಕೀರ್ ಹೆರೆಸೆಥ್ ನಿಮಿತ್ತ ನನ್ನ ಅಂತರಂಗವೂ ಕಿನ್ನರಿಯಂತೆ ಮಿಡಿಯುತ್ತಾ ದುಃಖಿಸುತ್ತಿದೆ.


ನಾನು ಕೇಳಿದಾಗ ನನ್ನ ಹೃದಯ ಬಡಿದುಕೊಂಡಿತು; ಆ ಶಬ್ದಕ್ಕೆ ನನ್ನ ತುಟಿಗಳು ಕದಲಿದವು; ನನ್ನ ಎಲುಬುಗಳು ಕ್ಷಯಗೊಂಡವು; ನನ್ನ ಕಾಲುಗಳು ನಡುಗಿದವು; ಆದರೂ ನಮ್ಮ ಮೇಲೆ ದಾಳಿಮಾಡುವ ಜನರ ಮೇಲೆ ನಾಶನ ಬರುವುದನ್ನು ನೋಡಲು ತಾಳ್ಮೆಯಿಂದ ಕಾದಿರುವೆನು.


ಬಾಬಿಲೋನಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ; ಅವನ ಕೈಗಳು ನಿತ್ರಾಣವಾದವು; ಸಂಕಟವೂ, ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು.


ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮಶಾಲಿಗಳು ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವುದು.


ಆದಕಾರಣ ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ ಯಜ್ಜೇರ್ ಪಟ್ಟಣದೊಂದಿಗೆ ಅಳುವೆನು. ಓ ಹೆಷ್ಬೋನ್ ಮತ್ತು ಎಲೆಯಾಲೆ ಪಟ್ಟಣಗಳೇ, ನಿಮ್ಮನ್ನು ನನ್ನ ಕಣ್ಣೀರಿನಿಂದ ತೋಯಿಸುವೆನು! ಏಕೆಂದರೆ ಶತ್ರುಗಳು ಬಿದ್ದುಹೋದ ನಿಮ್ಮ ಬೇಸಿಗೆಯ ಫಲಗಳಿಗೂ, ಬೆಳೆಗಳಿಗೂ ಆರ್ಭಟಿಸುತ್ತಾರೆ.


ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗುತ್ತದೆ. ಅಲ್ಲಿಂದ ಪಲಾಯನವಾದವರು ಚೋಗರ್ ಕಡೆಗೂ ಎಗ್ಲತ್ ಶೆಲಿಶೀಯ ಕಡೆಗೂ ಓಡಿಹೋಗುವರು. ಲೂಹೀತ್ ದಿಣ್ಣೆಯನ್ನು ಅಳುತ್ತಾ ಹತ್ತುವರು. ಏಕೆಂದರೆ ಹೊರೊನಯಿಮ್ ಊರಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ದನಿಗೈಯುವರು.


ನಿಮ್ಮ ಹೃದಯದಲ್ಲಿನ ಪ್ರಾಣಭೀತಿ, ಹೆದರಿಕೆಯ ನಿಮಿತ್ತವೂ ನಿಮ್ಮ ಕಣ್ಣುಗಳು ನೋಡುವ ಭಯಂಕರ ನೋಟದಿಂದ ನೀವು ಮುಂಜಾನೆಯಲ್ಲಿ, “ಸಂಜೆ ಆಗಬೇಕು,” ಎನ್ನುವಿರಿ. ಸಂಜೆಯಲ್ಲಿ, “ಮುಂಜಾನೆ ಆಗಬೇಕು,” ಎನ್ನುವಿರಿ.


ಒಬ್ಬ ಸ್ತ್ರೀಗೆ ಪ್ರಸವ ಗಳಿಗೆ ಬಂದಾಗ ದುಃಖವಿರುವುದು. ಆದರೆ ಆಕೆಯು ಮಗುವನ್ನು ಹೆತ್ತಾಗ ಈ ಲೋಕದೊಳಗೆ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಆಕೆಯು ಇನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.


ಓ, ನನ್ನ ಕರುಳು, ನನ್ನ ಕರುಳು! ನಾನು ನೋವಿನಿಂದ ನರಳುತ್ತೇನೆ. ನನ್ನ ಹೃದಯವು ನನ್ನಲ್ಲಿ ತಳಮಳಗೊಂಡಿದೆ. ನಾನು ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿ ಶಬ್ದವನ್ನೂ, ಯುದ್ಧದ ಆರ್ಭಟವನ್ನೂ ಕೇಳುತ್ತಿರುವೆ.


ಅದರ ಕೀರ್ತಿಯನ್ನು ಕೇಳಿದ್ದೇವೆ; ನಮ್ಮ ಕೈಗಳು ಜೋಲಾಡುತ್ತವೆ, ಸಂಕಟವೂ, ಹೆರುವವಳಂತಿರುವ ನೋವೂ ನಮ್ಮನ್ನು ಹಿಡಿಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು