Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 21:16 - ಕನ್ನಡ ಸಮಕಾಲಿಕ ಅನುವಾದ

16 ಏಕೆಂದರೆ ಕರ್ತರು ನನಗೆ ಹೀಗೆ ಹೇಳುತ್ತಾರೆ: “ಕೂಲಿಯವನ ವರುಷಗಳಂತೆ ಒಂದು ವರುಷದೊಳಗೆ ಕೇದಾರಿನ ವೈಭವವು ತೀರಿಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಕರ್ತನು ನನಗೆ ಹೇಳುವುದೇನೆಂದರೆ, “ಕೂಲಿಯವನ ವರ್ಷಗಳಂತೆ ಒಂದು ವರ್ಷದೊಳಗೆ ಕೇದಾರಿನ ಸಕಲ ವೈಭವವು ಇಲ್ಲವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಸರ್ವೇಶ್ವರ ನನಗೆ ಹೀಗೆಂದರು : “ಗುಲಾಮಗಿರಿಯ ವಾಯಿದೆಯ ಪ್ರಕಾರ, ಒಂದು ವರ್ಷದೊಳಗೆ ಕೇದಾರಿನ ಸಕಲ ವೈಭವ ಗತಿಸಿಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಕರ್ತನು ನನಗೆ ಹೇಳಿರುವದೇನಂದರೆ - ಆಳಿನ ವರುಷ ವಾಯಿದೆಗೆ ಸರಿಯಾದ ಒಂದು ವರುಷಕ್ಕೇ ಕೇದಾರಿನ ಸಕಲ ವೈಭವವು ಇಲ್ಲವಾಗುವದು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನನ್ನ ಒಡೆಯನಾದ ಯೆಹೋವನು ಈ ವಿಷಯಗಳು ಸಂಭವಿಸುವವೆಂದು ಹೇಳಿದನು. ಆತನು ಹೇಳಿದ್ದೇನೆಂದರೆ: “ಇನ್ನೊಂದು ವರ್ಷದಲ್ಲಿ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಕೇದಾರಿನ ಘನತೆಯೆಲ್ಲವೂ ಹೋಗಿ ಬಿಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 21:16
11 ತಿಳಿವುಗಳ ಹೋಲಿಕೆ  

ಕೇದಾರಿನ ಮಂದೆಗಳೆಲ್ಲಾ ನಿನ್ನಲ್ಲಿ ಸೇರಿಬರುವುವು. ನೆಬಾಯೋತಿನ ಟಗರುಗಳು ನಿನ್ನನ್ನು ಸೇವಿಸುವುವು. ನನ್ನ ಬಲಿಪೀಠದ ಮೇಲೆ ಮೆಚ್ಚಿಕೆಯಿಂದ ಏರುವುವು. ನನ್ನ ಮಹಿಮೆಯ ಆಲಯವನ್ನು ಘನಪಡಿಸುವೆನು.


ಆದರೆ ಈಗ ಯೆಹೋವ ದೇವರು ಮಾತನಾಡಿ, “ಗುಲಾಮಗಿರಿಯ ಕಟ್ಟುನಿಟ್ಟಿನ ಲೆಕ್ಕಾಚಾರದಂತೆ, ಮೂರು ವರುಷದೊಳಗೆ ಮೋವಾಬಿನ ವೈಭವವು ಹೀನಾಯಕ್ಕೆ ಈಡಾಗುವುದು. ಅಲ್ಲಿನವರ ದೊಡ್ಡ ಜನಸಂಖ್ಯೆಯಲ್ಲಿ ಅಳಿದುಉಳಿಯುವವರು ಬಲಹೀನರಾದ ಕೆಲವು ಜನರಾಗಿರುವರು,” ಎಂದು ಹೇಳಿದ್ದಾರೆ.


ಅಯ್ಯೋ, ನಾನು ಮೆಷೆಕಿನಲ್ಲಿ ತಂಗಬೇಕಲ್ಲಾ! ಕೇದಾರಿನ ಗುಡಾರಗಳ ಬಳಿ ವಾಸಮಾಡುತ್ತೇನೆ.


“ ‘ಅರೇಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ಗ್ರಾಹಕರಾಗಿದ್ದರು. ಕುರಿಮರಿಗಳಿಂದಲೂ ಹೋತಗಳಿಂದಲೂ ನಿನ್ನೊಡನೆ ವ್ಯಾಪಾರಮಾಡಿದರು.


ಯೆರೂಸಲೇಮಿನ ಪುತ್ರಿಯರೇ, ನಾನು ಕಪ್ಪಾದವಳು ಆದರೂ ಸುಂದರಿ. ಕೇದಾರಿನ ಗುಡಾರಗಳಂತೆಯೂ, ಸೊಲೊಮೋನನ ಡೇರೆಯ ತೆರೆಗಳಂತೆಯೂ ಚೆಲುವೆ.


ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದಾಳಿಮಾಡಿದ ಕೇದಾರ್ ಹಾಗೂ ಹಾಚೋರ್ ರಾಜ್ಯಗಳನ್ನು ಕುರಿತದ್ದು: ಯೆಹೋವ ದೇವರು ಹೀಗೆ ಹೇಳುತ್ತಾರೆ, “ಏಳಿರಿ, ಕೇದಾರಿನ ಬಳಿಗೆ ಏರಿ ಹೋಗಿರಿ. ಪೂರ್ವದಿಕ್ಕಿನ ಮನುಷ್ಯರನ್ನು ಸುಲಿದುಕೊಳ್ಳಿರಿ.


ಮರುಭೂಮಿಯು, ಅದರ ಪಟ್ಟಣಗಳು ಘೋಷಿಸಲಿ. ಕೇದಾರ್ ಊರಿನ ನಿವಾಸಿಗಳು ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ. ಸೆಲ ಪಟ್ಟಣದವರೂ ಹರ್ಷಧ್ವನಿಗೈಯಲಿ; ಅವರು ಪರ್ವತದ ತುದಿಯಲ್ಲಿ ಆರ್ಭಟಿಸಲಿ.


ಜನನದ ಪ್ರಕಾರ ಇಷ್ಮಾಯೇಲನ ಪುತ್ರರ ಹೆಸರುಗಳು ಇವೇ: ಇಷ್ಮಾಯೇಲನ ಚೊಚ್ಚಲ ಮಗನು ನೆಬಾಯೋತ್, ಕೇದಾರ್, ಅದ್ಬೆಯೇಲ್, ಮಿಬ್ಸಾಮ್,


“ಮನುಷ್ಯರಿಗೆ ಭೂಮಿಯಲ್ಲಿ ಕಠಿಣ ದುಡಿತ ಇಲ್ಲವೇ? ಮಾನವನ ದಿನಗಳು ಜೀತದಾಳಿನ ದಿನಗಳ ಹಾಗಲ್ಲವೋ?


ಇಷ್ಮಾಯೇಲನ ಮಕ್ಕಳು ಹನ್ನೆರಡು ಗೋತ್ರಗಳ ಮುಖ್ಯಸ್ಥರಾದರು. ಅವರು ನೆಬಾಯೋತ್, ಇಷ್ಮಾಯೇಲನ ಹಿರೀಮಗನಿಂದ ಈ ಹೆಸರಿನ ಉತ್ಪತ್ತಿ, ಕೇದಾರ್, ಅದ್ಬೆಯೇಲ್, ಮಿಬ್ಸಾಮ್,


ಕಿತ್ತೀಮ್ ದ್ವೀಪಗಳಿಗೆ ದಾಟಿ ಹೋಗಿ ನೋಡಿರಿ. ಕೇದಾರಿಗೆ ಕಳುಹಿಸಿ ಚೆನ್ನಾಗಿ ತಿಳಿದುಕೊಳ್ಳಿರಿ. ಅಂಥದ್ದು ಉಂಟೋ ಎಂದು ನೋಡಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು