Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 19:3 - ಕನ್ನಡ ಸಮಕಾಲಿಕ ಅನುವಾದ

3 ಈಜಿಪ್ಟಿನವರ ಮನಸ್ಸು ಭಯಗೊಳ್ಳುವುದು ಅವರ ಆಲೋಚನೆಯನ್ನು ಭಂಗಪಡಿಸುವೆನು. ಅಲ್ಲಿಯವರು ವಿಗ್ರಹಗಳನ್ನೂ, ಮಾಟಗಾರರನ್ನೂ, ಯಕ್ಷಣಿಗಾರರನ್ನೂ, ಮಂತ್ರವಾದಿಗಳನ್ನೂ ಆಶ್ರಯಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಐಗುಪ್ತದ ಅಂತರಾತ್ಮವು ಬರಿದಾಗುವುದು. ಅದರ ಆಲೋಚನೆಯನ್ನು ಕೆಡಿಸಿಬಿಡುವೆನು. ಅಲ್ಲಿಯವರು ವಿಗ್ರಹಗಳನ್ನೂ, ಮಂತ್ರಗಾರರನ್ನೂ, ಪ್ರೇತವಿಚಾರಕರನ್ನೂ, ಬೇತಾಳಿಕರನ್ನು ಆಶ್ರಯಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಈಜಿಪ್ಟಿನವರ ಚೈತನ್ಯ ಉಡುಗಿಹೋಗುವುದು. ಅವರ ಯೋಜನೆಗಳು ಭಂಗವಾಗುವುವು. ಜನರು ವಿಗ್ರಹಗಳನ್ನು, ಮಂತ್ರಗಾರರನ್ನು, ಪ್ರೇತವಿಚಾರಕರನ್ನು, ಕಣಿಹೇಳುವವರನ್ನು ಆಶ್ರಯಿಸುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಐಗುಪ್ತದ ಅಂತರಾತ್ಮವು ಬರಿದಾಗುವದು; ಅದರ ಆಲೋಚನೆಯನ್ನು ಭಂಗಪಡಿಸುವೆನು; ಅಲ್ಲಿಯವರು ವಿಗ್ರಹಗಳನ್ನೂ ಮಂತ್ರಗಾರರನ್ನೂ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಆಶ್ರಯಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಈಜಿಪ್ಟಿನ ಜನರಲ್ಲಿ ಗಲಿಬಿಲಿ ಉಂಟಾಗುವದು. ಆ ಜನರು ತಮ್ಮ ಸುಳ್ಳುದೇವರುಗಳ ಬಳಿಗೂ ಪಂಡಿತರ ಬಳಿಗೂ ಓಡಿ ತಾವು ಏನು ಮಾಡಬೇಕೆಂದು ವಿಚಾರಿಸುವರು. ಮಂತ್ರವಾದಿಗಳನ್ನೂ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಕೇಳುವರು. ಆದರೆ ಅವರ ಯಾವ ಸಲಹೆಗಳೂ ಪ್ರಯೋಜನಕ್ಕೆ ಬರುವದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 19:3
28 ತಿಳಿವುಗಳ ಹೋಲಿಕೆ  

ಲೊಚಗುಟ್ಟುವ, ಪಿಸುಮಾತಾಡುವ ಮಂತ್ರಗಾರರನ್ನೂ; ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ, ಜನರು ತಮ್ಮ ದೇವರನ್ನೇ ಹುಡುಕುವುದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವುದುಂಟೋ?


ಆದ್ದರಿಂದ, ಅರಸನು ತನ್ನ ಕನಸನ್ನು ತಿಳಿಸಲು ಮಂತ್ರಗಾರರನ್ನೂ, ಜೋತಿಷ್ಯರನ್ನೂ, ಮಾಟಗಾರರನ್ನೂ, ಪಂಡಿತರನ್ನೂ ಕರೆಯಲು ಆಜ್ಞಾಪಿಸಿದನು. ಇವರೆಲ್ಲರೂ ಬಂದು ಅರಸನ ಮುಂದೆ ನಿಂತರು.


ಹೀಗೆಯೇ ಸೌಲನು ಯೆಹೋವ ದೇವರಿಗೆ ವಿರೋಧವಾಗಿ ಮಾಡಿದ ತನ್ನ ಅಪರಾಧದ ನಿಮಿತ್ತ ಸತ್ತುಹೋದನು. ಅವನು ಯೆಹೋವ ದೇವರ ವಾಕ್ಯವನ್ನು ಕೈಗೊಳ್ಳದೆ, ಅದಕ್ಕೆ ವಿರೋಧವಾಗಿ ನಡೆದು, ಯೆಹೋವ ದೇವರನ್ನು ವಿಚಾರಿಸದೆ, ಯಕ್ಷಿಣಿಗಾರರನ್ನು ವಿಚಾರಿಸಿದ್ದರಿಂದ,


ಅರಸನು ಗಟ್ಟಿಯಾಗಿ ಕಿರುಚಿ ಜ್ಯೋತಿಷ್ಯರನ್ನೂ, ಪಂಡಿತರನ್ನೂ, ಶಕುನ ಹೇಳುವವರನ್ನೂ ಕರೆಸಿ, ಬಾಬಿಲೋನಿನ ಜ್ಞಾನಿಗಳಿಗೆ, “ಯಾರು ಈ ಬರಹವನ್ನು ಓದಿ, ಅದರ ಅರ್ಥವನ್ನು ನನಗೆ ತಿಳಿಸುವರೋ, ಅವರಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ, ರಾಜ್ಯದ ಮೂರನೆಯ ಅಧಿಕಾರಿಯಾಗಿ ಮಾಡುವೆನು,” ಎಂದು ಹೇಳಿದನು.


ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವುದೋ? ನಿನ್ನ ಕೈಗಳು ಬಲವಾಗಿರುವುವೋ? ಯೆಹೋವ ದೇವರಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುವೆನು.


‘ನೀನು ಏಕೆ ನರಳಾಡುತ್ತೀ?’ ಎಂದು ಅವರು ನಿನಗೆ ಕೇಳಿದಾಗ, ನೀನು ಹೇಳಬೇಕಾದದ್ದೇನೆಂದರೆ, ‘ಆ ಸುದ್ದಿಯ ನಿಮಿತ್ತವೇ ಅದು ಬರುವುದು. ಏಕೆಂದರೆ ಆಗ ಹೃದಯಗಳೆಲ್ಲಾ ಕರಗುವುವು. ಕೈಗಳೆಲ್ಲಾ ನಿತ್ರಾಣವಾಗುವುವು. ಪ್ರತಿಯೊಂದು ಆತ್ಮವು ಕುಂದುವದು. ಎಲ್ಲಾ ಮೊಣಕಾಲುಗಳು ನೀರಿನಂತೆ ತೇವವಾಗಿರುತ್ತವೆ. ಅದು ಬರುತ್ತದೆ, ಅದು ತರಲಾಗುತ್ತದೆ,’ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”


ನಿನ್ನ ಬಲಿಷ್ಠರು ಏಕೆ ಬಡಕೊಂಡು ಹೋಗಿದ್ದಾರೆ? ಯೆಹೋವ ದೇವರು ಅವರನ್ನು ಓಡಿಸಿದ್ದರಿಂದ ಅವರು ನಿಲ್ಲಲಿಲ್ಲ.


ನಾನು ಎಂದೆಂದಿಗೂ ವ್ಯಾಜ್ಯವಾಡುವುದಿಲ್ಲ. ಯಾವಾಗಲೂ ಕೋಪಿಸಿಕೊಳ್ಳೆನು. ಏಕೆಂದರೆ ಆತ್ಮವೂ, ನಾನು ಉಂಟುಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.


ನಿನ್ನ ಮಾಟಗಳ ಸಂಗಡ ನಿಂತುಕೋ. ನಿನ್ನ ಬಾಲ್ಯಾರಭ್ಯ ಬೇಸತ್ತು, ಅಭ್ಯಾಸಿಸಿರುವ ನಿನ್ನ ಮಂತ್ರ ತಂತ್ರಗಳನ್ನೂ, ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು. ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ಭಯ ಉಂಟಾದೀತು.


ಸುಳ್ಳುಗಾರರ ಗುರುತುಗಳನ್ನು ನಿರರ್ಥಕ ಮಾಡುವವನೂ ಮತ್ತು ಕಣಿ ಹೇಳುವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ, ಅವರ ತಿಳುವಳಿಕೆಯನ್ನು ಬುದ್ಧಿಹೀನವಾಗ ಮಾಡುವವನೂ


ಈಜಿಪ್ಟಿನವರ ವಿಷಯವಾದ ಪ್ರವಾದನೆ: ಇಗೋ, ಯೆಹೋವ ದೇವರು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಈಜಿಪ್ಟಿಗೆ ಬರುತ್ತಾರೆ. ಅವರು ಸಮ್ಮುಖರಾದಾಗ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯಗಳು ಅದರ ಮಧ್ಯೆ ಭಯದಿಂದ ಕರಗುವುವು.


ದೀಬೋನ್ ಊರಿನವರು ಅಳುವುದಕ್ಕಾಗಿ ಎತ್ತರವಾದ ಪೂಜಾಸ್ಥಳಕ್ಕೆ ಹೋಗಿದ್ದಾರೆ; ನೆಬೋ ಹಾಗೂ ಮೇದೆಬ ಪಟ್ಟಣದವರಿಗಾಗಿ ಮೋವಾಬ್ಯರು ಗೋಳಾಡುತ್ತಾರೆ. ಪ್ರತಿಯೊಬ್ಬರ ತಲೆಯು ಬೋಳು, ಪ್ರತಿಯೊಬ್ಬರ ಗಡ್ಡವೂ ವಿಕಾರವಾಗಿ ಕತ್ತರಿಸಿದೆ.


ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ಉದ್ದೇಶಿಸಿದ್ದಾರೆ. ಅದನ್ನು ಯಾರು ವ್ಯರ್ಥಪಡಿಸುವರು? ಅವರು ಎತ್ತಿದ ಕೈಯನ್ನು, ಹಿಂದಕ್ಕೆ ತಳ್ಳುವವರು ಯಾರು? ಎಂಬುದೇ.


ಯೆಹೋವ ದೇವರಿಗೆ ವಿರೋಧವಾಗಿ ಯಾವ ಜ್ಞಾನವೂ, ವಿವೇಕವೂ, ಯೋಜನೆಯೂ ಇಲ್ಲ.


ಅವರು ಅತ್ತಿತ್ತ ತೂಗಾಡಿ ಕುಡುಕರಂತೆ ಓಲಾಡುತ್ತಿದ್ದರು. ಅವರ ಜ್ಞಾನವೆಲ್ಲಾ ಮುಗಿದು ಹೋಯಿತು.


ದೇವರು ಅಧಿಕಾರಿಗಳ ಗರ್ವವನ್ನು ಮುರಿಯುತ್ತಾರೆ. ಭೂಲೋಕದ ಅರಸರು ದೇವರಿಗೆ ಭಯಪಡುತ್ತಾರೆ.


ಆದರೆ ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ, ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ, ತನ್ನ ಪಟ್ಟಣದಲ್ಲಿರುವ ತನ್ನ ಮನೆಗೆ ಹೋದನು. ಅವನು ಮನೆಯನ್ನು ಕ್ರಮಪಡಿಸಿ, ಉರುಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು.


ಆಗ ಅಬ್ಷಾಲೋಮನೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ, “ಅಹೀತೋಫೆಲನ ಆಲೋಚನೆಗಿಂತ ಅರ್ಕಿಯನಾದ ಹೂಷೈಯ ಆಲೋಚನೆ ಒಳ್ಳೆಯದು,” ಎಂದರು. ಏಕೆಂದರೆ ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೆಯ ಆಲೋಚನೆಯನ್ನು ವ್ಯರ್ಥಮಾಡುವುದಕ್ಕೆ ಯೆಹೋವ ದೇವರು ಹಾಗೆ ನೇಮಿಸಿದ್ದರು.


ಅಹೀತೋಫೆಲನು ಅಬ್ಷಾಲೋಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾನೆಂದು ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು, “ಯೆಹೋವ ದೇವರೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವನ್ನಾಗಿ ಮಾಡಿಬಿಡು,” ಎಂದನು.


ಉದಯದಲ್ಲಿ ನಾಬಾಲನ ದ್ರಾಕ್ಷಾರಸದ ಅಮಲು ಇಳಿದಾಗ, ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು, ಹೃದಯಾಘಾತವಾಗಿ ಅವನು ಕಲ್ಲಿನ ಹಾಗಾದನು.


ಯೆಹೋವ ದೇವರು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವರು; ಜನರ ದುರುದ್ದೇಶಗಳನ್ನು ನಿಷ್ಪಲ ಮಾಡುತ್ತಾರೆ.


ಅರಸನು ಅವರ ಹತ್ತಿರ ವಿಚಾರಿಸಿದಾಗ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರರಿಗಿಂತಲೂ, ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡನು.


ಅಹಜ್ಯನು ಸಮಾರ್ಯದಲ್ಲಿದ್ದ ತನ್ನ ಮೇಲುಪ್ಪರಿಗೆಯ ಕಿಟಕಿಯೊಂದರಿಂದ ಬಿದ್ದು ಅಸ್ವಸ್ಥನಾಗಿದ್ದನು. ಅವನು ತನ್ನ ಸೇವಕರನ್ನು ಕರೆದು, “ಎಕ್ರೋನಿನ ದೇವರಾದ ‘ಬಾಳ್ ಜೆಬೂಬನ’ ಸನ್ನಿಧಿಗೆ ಹೋಗಿ, ನಾನು ಈ ಅಸ್ವಸ್ಥತೆಯಿಂದ ಗುಣವಾಗುವೆನೋ ಇಲ್ಲವೋ? ಎಂದು ವಿಚಾರಿಸಿ ಬನ್ನಿ,” ಎಂದು ಹೇಳಿ ಕಳುಹಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು