ಯೆಶಾಯ 17:11 - ಕನ್ನಡ ಸಮಕಾಲಿಕ ಅನುವಾದ11 ಬೆಳೆಸಲು ಸಸಿಯನ್ನು ಹಾಕಿದ ದಿನದಲ್ಲಿ ಬೇಲಿಹಾಕಿ ಮತ್ತು ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆಯುವಂತೆ ಮಾಡಿದರೂ, ರೋಗದ ಹಾಗೂ ಗುಣಪಡಿಸಲಾರದ ಬೇನೆಯ ದಿನದಲ್ಲಿ ನಿನ್ನ ಸುಗ್ಗಿ ಏನೂ ಇರುವುದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಬೀಜವನ್ನು ನೆಟ್ಟ ದಿನದಲ್ಲಿಯೇ ಬೇಲಿಕಟ್ಟಿ, ಮರುದಿನ ಬೆಳಿಗ್ಗೆ ಮೊಳೆಯುವಂತೆ ಮಾಡಿದ್ದೀ. ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತ ವ್ಯಥೆಯ ದಿನವಾಗಿರುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಬೀಜವನ್ನು ನೆಟ್ಟ ದಿನವೇ ಬೇಲಿಕಟ್ಟಿದೆ. ಮಾರನೆಯ ದಿನವೇ ಅದು ಮೊಳೆಯುವಂತೆ ಮಾಡಿದೆ. ಆದರೂ ನಿನಗೆ ಸಿಗುವ ಸುಗ್ಗಿ, ವ್ಯಾಧಿ ಮತ್ತು ಅತೀವ ವ್ಯಥೆಯೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಬೀಜವನ್ನು ನೆಟ್ಟ ದಿವಸದಲ್ಲಿಯೇ ಬೇಲಿಕಟ್ಟಿ, ಮಾರಣೆಯ ಬೆಳಿಗ್ಗೆ ಮೊಳೆಯುವಂತೆ ಮಾಡಿದ್ದೀ; ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತವ್ಯಥೆಯ ದಿವಸವೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಒಂದು ದಿವಸ ಆ ಕೊಂಬೆಗಳನ್ನು ನೆಟ್ಟು ಅದು ಚಿಗುರುವಂತೆ ಮಾಡುವಿರಿ. ಮರುದಿವಸ ಅದು ಚಿಗುರುವದು. ಸುಗ್ಗಿಯ ಕಾಲದಲ್ಲಿ ನೀವು ದ್ರಾಕ್ಷಿತೋಟಕ್ಕೆ ಹೋದಾಗ ದ್ರಾಕ್ಷಿಬಳ್ಳಿಗಳೆಲ್ಲಾ ರೋಗದಿಂದ ಸತ್ತುಹೋಗಿರುವವು. ಅಧ್ಯಾಯವನ್ನು ನೋಡಿ |