Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 16:2 - ಕನ್ನಡ ಸಮಕಾಲಿಕ ಅನುವಾದ

2 ಗೂಡಿನಿಂದ ಹೊರಗೆ ಬಂದ ಹಕ್ಕಿಗಳ ಮರಿಗಳಂತೆ ಅಲೆದಾಡುವ ಹಾಗೆ, ಮೋವಾಬಿನ ಪುತ್ರಿಯರು ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಮೋವಾಬಿನ ಜನರು ಅಲೆಯುವ ಪಕ್ಷಿಗಳಂತೆಯೂ, ಗೂಡಿನಿಂದ ಚದುರಿರುವ ಮರಿಗಳಂತೆಯೂ ಆಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಮೋವಾಬಿನ ಮಹಿಳೆಯರು ಅರ್ನೊನ್ ನದಿಯ ಹಾಯ್ಗಡಗಳಲಿ, ಅಲೆಯುತಿಹರು ಗೂಡಿಂದ ಹೊರದೂಡಲಾದ ಹಕ್ಕಿಮರಿಗಳ ಪರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಮೋವಾಬಿನ ಊರುಗಳವರು ಅಲೆಯುವ ಪಕ್ಷಿಗಳಂತೆಯೂ ಗೂಡಿನಿಂದ ಚದರಿದ ಮರಿಗಳ ಹಾಗೂ ಆಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಮೋವಾಬಿನ ಸ್ತ್ರೀಯರು ಅರ್ನೋನ್ ಹೊಳೆಯನ್ನು ದಾಟಲು ಪ್ರಯತ್ನಿಸುವರು. ಅವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಹಾಯಕ್ಕಾಗಿ ಓಡುವರು. ಗೂಡಿನಿಂದ ಕೆಳಗೆ ಬಿದ್ದ ಪಕ್ಷಿಮರಿಗಳಂತೆ ಅವರಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 16:2
14 ತಿಳಿವುಗಳ ಹೋಲಿಕೆ  

ತನ್ನ ಮನೆಯನ್ನು ಬಿಟ್ಟು ಅಲೆಯುವ ಮನುಷ್ಯನು ತನ್ನ ಗೂಡನ್ನು ಬಿಟ್ಟು ಅಲೆಯುವ ಪಕ್ಷಿಯಂತೆ ಇದ್ದಾನೆ.


“ಮರುಭೂಮಿಯಲ್ಲಿ ನಡೆದು, ಎದೋಮ್ ದೇಶವನ್ನೂ, ಮೋವಾಬ್ ದೇಶವನ್ನೂ ಸುತ್ತಿಕೊಂಡು ಹೋಗಿ, ಮೋವಾಬ್ ದೇಶದ ಪೂರ್ವದಿಕ್ಕಿಗೆ ಬಂದು, ಮೋವಾಬಿನ ಮೇರೆಯೊಳಗೆ ಪ್ರವೇಶಿಸದೆ, ಮೋವಾಬಿನ ಮೇರೆಯಾದ ಅರ್ನೋನಿನ ಆಚೆಯಲ್ಲಿ ಇಳಿದುಕೊಂಡರು.


ಮೋವಾಬು ಚದರಿಹೋಯಿತೆಂದು ನಾಚಿಕೆಗೆ ಈಡಾಗಿದೆ. ಗೋಳಾಡಿರಿ, ಕೂಗಿರಿ; ಮೋವಾಬು ಹಾಳಾಯಿತೆಂದು ಅರ್ನೋನಿನಲ್ಲಿ ತಿಳಿಸಿರಿ.


ಅದು ಅಟ್ಟಿದ ಜಿಂಕೆಯಂತೆಯೂ, ಕುರುಬರಿಲ್ಲದ ಕುರಿಗಳಂತೆಯೂ ಇರುವುದು. ಅವರಲ್ಲಿ ಪ್ರತಿಯೊಬ್ಬನೂ ತನ್ನ ಜನರ ಕಡೆಗೆ ತಿರುಗಿಕೊಳ್ಳುವನು; ಪ್ರತಿಯೊಬ್ಬನು ತನ್ನ ಸ್ವದೇಶಕ್ಕೆ ಓಡಿಹೋಗುವನು.


ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣವು ಮೊದಲುಗೊಂಡು, ಮೇದೆಬಾದ ಬಳಿಯಲ್ಲಿರುವ ಸಕಲ ಸಮನಾದ ಭೂಮಿಯೂ,


ಆ ಕಾಲದಲ್ಲಿ ನಾವು ಸ್ವತಂತ್ರಿಸಿಕೊಂಡ ದೇಶವನ್ನು ಅರ್ನೋನ್ ಹಳ್ಳದ ಸಮೀಪದಲ್ಲಿರುವ ಅರೋಯೇರಿನಿಂದ ಮೊದಲ್ಗೊಂಡು, ಅರ್ಧ ಗಿಲ್ಯಾದ್ ಬೆಟ್ಟವನ್ನೂ, ಅದರ ಪಟ್ಟಣಗಳನ್ನೂ ರೂಬೇನ್ಯರ ಪ್ರದೇಶದವರೆಗೂ, ಗಾದನ ಪ್ರದೇಶದವರೆಗೂ ಕೊಟ್ಟೆನು.


ಆ ಕಾಲದಲ್ಲಿ ನಾವು ಯೊರ್ದನ್ ನದಿಯ ಈಚೆಯಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದವರೆಗೆ ಇರುವ ದೇಶವನ್ನು ಅಮೋರಿಯರ ಇಬ್ಬರು ಅರಸರ ಕೈಯಿಂದ ಸ್ವಾಧೀನಮಾಡಿಕೊಂಡೆವು.


ಅರ್ನೋನಿನ ತೀರದಲ್ಲಿರುವ ಅರೋಯೇರ್ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ. ನಮ್ಮ ದೇವರಾದ ಯೆಹೋವ ದೇವರು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದರು.


ಮೋವಾಬೇ, ನಿನಗೆ ದಿಕ್ಕಾರ! ಕೆಮೋಷಿನ ಜನವೇ ನಿಮಗೆ ದುರ್ಗತಿ ಉಂಟಾಯಿತಲ್ಲಾ! ಅವನು ತನ್ನ ಪುತ್ರರನ್ನು ದೇಶಭ್ರಷ್ಟರನ್ನಾಗಿಯೂ ತನ್ನ ಪುತ್ರಿಯರನ್ನು ಸೆರೆಯವರನ್ನಾಗಿಯೂ ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಒಪ್ಪಿಸಿಕೊಟ್ಟನು.


ಮೋವಾಬಿನ ಅರಸನಾದ ಮೇಷನು ಕುರಿ ಮಂದೆಯುಳ್ಳವನಾಗಿದ್ದು ಇಸ್ರಾಯೇಲಿನ ಅರಸನಿಗೆ ಒಂದು ಲಕ್ಷ ಕುರಿಮರಿಗಳನ್ನೂ, ಒಂದು ಲಕ್ಷ ಟಗರುಗಳ ಉಣ್ಣೆಯನ್ನೂ ಕಪ್ಪವಾಗಿ ಕೊಡುತ್ತಿದ್ದನು.


ಅಲೆದಾಡುವ ಪಕ್ಷಿಯಂತೆಯೂ, ಹಾರಾಡುವ ಬಾನಕ್ಕಿಯಂತೆಯೂ ಕಾರಣವಿಲ್ಲದೆ ಕೊಡುವ ಶಾಪವು ತಗಲದು.


ಹಾರಿಹೋಗುವ ಹಾಗೆ ಮೋವಾಬಿಗೆ ರೆಕ್ಕೆಗಳನ್ನು ಕೊಡಿರಿ; ಏಕೆಂದರೆ ಅದರ ಪಟ್ಟಣಗಳು ಹಾಳಾಗುವುವು; ಅವುಗಳಲ್ಲಿ ನಿವಾಸಿಗಳಿರುವುದಿಲ್ಲ.


ಮೋವಾಬೇ, ನೀನೇ ಅಯ್ಯೋ! ಕೆಮೋಷಿನ ಜನರು ನಾಶವಾದರು; ಏಕೆಂದರೆ ನಿನ್ನ ಗಂಡು ಹೆಣ್ಣುಮಕ್ಕಳು, ಗಡೀಪಾರಾಗಿ ಸೆರೆಯಾದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು