Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 15:2 - ಕನ್ನಡ ಸಮಕಾಲಿಕ ಅನುವಾದ

2 ದೀಬೋನ್ ಊರಿನವರು ಅಳುವುದಕ್ಕಾಗಿ ಎತ್ತರವಾದ ಪೂಜಾಸ್ಥಳಕ್ಕೆ ಹೋಗಿದ್ದಾರೆ; ನೆಬೋ ಹಾಗೂ ಮೇದೆಬ ಪಟ್ಟಣದವರಿಗಾಗಿ ಮೋವಾಬ್ಯರು ಗೋಳಾಡುತ್ತಾರೆ. ಪ್ರತಿಯೊಬ್ಬರ ತಲೆಯು ಬೋಳು, ಪ್ರತಿಯೊಬ್ಬರ ಗಡ್ಡವೂ ವಿಕಾರವಾಗಿ ಕತ್ತರಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಬಯಿತ್ ಮತ್ತು ದೀಬೋನ್ ಊರಿನವರು ಆಳುವುದಕ್ಕಾಗಿ, ತಮ್ಮ ಎತ್ತರವಾದ ಪೂಜಾ ಸ್ಥಳಗಳಿಗೆ ಹೋಗುತ್ತಾರೆ. ನೆಬೋವಿನಲ್ಲಿಯೂ, ಮೇದೆಬದಲ್ಲಿಯೂ ಮೋವಾಬ್ಯರು ಗೋಳಾಡುತ್ತಾರೆ. ಎಲ್ಲರ ತಲೆಯು ಬೋಳಾಗಿರುವುದು, ಎಲ್ಲರ ಗಡ್ಡವು ವಿಕಾರವಾಗಿ ಕತ್ತರಿಸಲ್ಪಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಹತ್ತಿಹರು ಗುಡಿಗೋಪುರಗಳನು ಆಳುವುದಕ್ಕಾಗಿ, ದೀಬೋನಿನವರು, ಗೋಳಾಡುತಿಹರು ನೆಬೋವಿನಲಿ ಮೇಣ್ ಮೇದೆಬದಲಿ, ಮೋವಾಬ್ಯರು ತಲೆ ಬೋಳಿಸಿಹರು, ಗಡ್ಡ ಕತ್ತರಿಸಿಹರು ದುಃಖದಿಂದ ಎಲ್ಲರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಬಯಿತ್ ಮತ್ತು ದೀಬೋನ್ ಊರುಗಳವರು ಅಳುವದಕ್ಕಾಗಿ ಪೂಜಾಸ್ಥಾನಗಳಿಗೆ ಹತ್ತಿದ್ದಾರೆ; ನೆಬೋವಿನಲ್ಲಿಯೂ ಮೇದೆಬದಲ್ಲಿಯೂ ಮೋವಾಬ್ಯರು ಗೋಳಾಡುತ್ತಾರೆ; ಎಲ್ಲರ ತಲೆಯು ಬೋಳು, ಎಲ್ಲರ ಗಡ್ಡವು ವಿಕಾರವಾಗಿ ಕತ್ತರಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅರಸನ ಪರಿವಾರದವರು ಮತ್ತು ದೀಬೋನಿನ ಜನರು ಪೂಜಾಸ್ಥಳಕ್ಕೆ ದುಃಖಿಸಲು ಹೋಗುತ್ತಿದ್ದಾರೆ. ಮೋವಾಬಿನ ಜನರು ನೆಬೋ ಮತ್ತು ಮೇದೆಬದವರಿಗಾಗಿ ರೋಧಿಸುತ್ತಾರೆ. ಜನರು ತಮ್ಮ ಗಡ್ಡಗಳನ್ನೂ ತಲೆಗಳನ್ನೂ ಬೋಳಿಸಿ ತಮ್ಮ ದುಃಖವನ್ನು ಪ್ರದರ್ಶಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 15:2
34 ತಿಳಿವುಗಳ ಹೋಲಿಕೆ  

ಮೋವಾಬನ್ನು ಕುರಿತದ್ದು: ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೆಬೋ ಊರಿನವರಿಗೆ ಕಷ್ಟ! ಆ ಊರು ಸೂರೆಯಾಯಿತು; ಕಿರ್ಯಾತಯಿಮು ಶತ್ರುವಿನ ಕೈವಶವಾಗಿ ಅವಮಾನಕ್ಕೆ ಗುರಿಯಾಗಿದೆ; ಬಲವಾದ ಕೋಟೆಯು ಸಹ ಚದರಿ ನಾಚಿಕೆಗೆ ಈಡಾಗಿದೆ.


“ ‘ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿಕೊಳ್ಳಬಾರದು. ದೇಹವನ್ನು ಗಾಯಮಾಡಿಕೊಳ್ಳಬಾರದು.


“ದೀಬೋನಿನ ನಿವಾಸಿಯಾದ ಮಗಳೇ, ನಿನ್ನ ವೈಭವದಿಂದ ಇಳಿದು ಬಾ; ಒಣಭೂಮಿಯ ಬಾಯಾರಿದವಳಂತೆ ಕೂತುಕೋ, ಏಕೆಂದರೆ ಮೋವಾಬನ್ನು ವಿನಾಶ ಮಾಡುವವನು ನಿನ್ನ ಮೇಲೆ ಬರುವನು; ನಿನ್ನ ಬಲವಾದ ಕೋಟೆಗಳನ್ನು ಕೆಡಿಸಿಬಿಡುವನು.


ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ನಡುಪಟ್ಟಿಗೆ ಬದಲಾಗಿ ಹಗ್ಗ, ಜಡೆಯ ಬದಲಾಗಿ ಬೋಳುತಲೆ, ರೇಷ್ಮೆಬಟ್ಟೆಗೆ ಬದಲಾಗಿ ಗೋಣಿತಟ್ಟು, ಸೌಂದರ್ಯಕ್ಕೆ ಬದಲಾಗಿ ಬರೆ, ಇವೆಲ್ಲ ಅವರಿಗೆ ಬಂದೊದಗುವುದು.


ಆಗ ಮೋಶೆ ಮೋವಾಬಿನ ಬಯಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿಹೋದನು. ಅಲ್ಲಿ ಯೆಹೋವ ದೇವರು ಅವನಿಗೆ ದೇಶವನ್ನೆಲ್ಲಾ ದಾನಿನವರೆಗಿರುವ ಗಿಲ್ಯಾದನ್ನೂ


“ನಾವು ಅವರನ್ನು ಪದಚ್ಚುತಿಗೊಳಿಸಿದೆವು. ಹೆಷ್ಬೋನು ದೀಬೋನಿನವರೆಗೂ ನಾಶವಾಯಿತು. ನಾವು ಅವರನ್ನು ಮೇದೆಬಾಕ್ಕೆ ಮುಟ್ಟುವ ನೋಫಹದ ತನಕ ಹಾಳುಮಾಡಿದೆವು.”


ಅವರು ತಮ್ಮಲ್ಲಿ ಗೋಣಿತಟ್ಟುಗಳನ್ನು ಕಟ್ಟಿಕೊಳ್ಳುವರು ಮತ್ತು ಭಯವು ಅವರನ್ನು ಮುಚ್ಚಿಬಿಡುವುದು. ಎಲ್ಲಾ ಮುಖಗಳ ಮೇಲೆ ನಾಚಿಕೆಯೂ, ಅವರ ಎಲ್ಲಾ ತಲೆಗಳು ಬೋಳಾಗಿಯೂ ಇರುವುವು.


ಆದ್ದರಿಂದ ನಾನು ಮೋವಾಬಿನ ನಿಮಿತ್ತ ಗೋಳಿಡುವೆನು; ಸಮಸ್ತ ಮೋವಾಬಿನ ನಿಮಿತ್ತ ಕೂಗುವೆನು; ಕೀರ್ ಹೆರೆಸಿನ ಮನುಷ್ಯರ ನಿಮಿತ್ತ ನನ್ನ ಹೃದಯವು ದುಃಖಿಸುವುದು.


ಗಾಜಾ ಊರು ಬೋಳಿಸಿಕೊಂಡಿದೆ. ಅಷ್ಕೆಲೋನ್ ನಾಶನ ಹೊಂದಿದೆ. ಫಿಲಿಷ್ಟಿಯದ ಬಯಲುಸೀಮೆಯಲ್ಲಿ ಉಳಿದ ಪಟ್ಟಣವೇ ನಿನ್ನನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿ?


“ ‘ಓ ಯೆರೂಸಲೇಮೇ, ನಿನ್ನ ಕೂದಲನ್ನು ಕತ್ತರಿಸಿ ಬಿಸಾಡಿಬಿಡು. ಉನ್ನತ ಸ್ಥಳಗಳಲ್ಲಿ ಗೋಳಾಟವನ್ನು ಎತ್ತು. ಏಕೆಂದರೆ ಯೆಹೋವ ದೇವರು ತನ್ನ ಕೋಪಕ್ಕೆ ಪಾತ್ರರಾದ ಈ ಸಂತತಿಯನ್ನು ನಿರಾಕರಿಸಿ ತಳ್ಳಿಬಿಟ್ಟಿದ್ದಾರೆ.


ಆ ದಿವಸದಲ್ಲಿ ಅತ್ತು, ದುಃಖಿಸಿ, ತಲೆ ಬೋಳಿಸಿಕೊಂಡು, ಗೋಣಿತಟ್ಟನ್ನು ಸುತ್ತಿಕೊಳ್ಳಬೇಕೆಂದು ಸರ್ವಶಕ್ತ ದೇವರಾದ ಯೆಹೋವ ದೇವರು ನಿಮ್ಮನ್ನು ಕರೆದರು.


ಹೀಗಿರುವಲ್ಲಿ ಮೋವಾಬು ಉನ್ನತ ಸ್ಥಳದಲ್ಲಿ ಆಯಾಸಗೊಂಡಂತೆ ಕಾಣಿಸಿಕೊಂಡು, ಅವಳ ದೇವಾಲಯಕ್ಕೆ ಪ್ರಾರ್ಥಿಸುವುದಕ್ಕೆ ಬಂದರೂ ಅದಕ್ಕೆ ಸಫಲವಾಗದು.


ಆದ್ದರಿಂದ ಮೋವಾಬಿನ ನಿಮಿತ್ತ ಮೋವಾಬ್ಯರು ಗೋಳಾಡುವರು, ಒಟ್ಟಾಗಿ ಗೋಳಾಡುವರು. ಏಕೆಂದರೆ ಕೀರ್ ಹರೆಷೆಥಿನ ದ್ರಾಕ್ಷಿಯ ಕಡುಬುಗಳಿಗೋಸ್ಕರ ನೀವು ದುಃಖಿಸುವಿರಿ. ನಿಜವಾಗಿಯೂ ಅವರು ನೊಂದು ಹೋಗಿದ್ದಾರೆ.


ಅವರು ತಮ್ಮ ಬೀದಿಗಳಲ್ಲಿ ಗೋಣಿತಟ್ಟನ್ನು ತಾವೇ ಸುತ್ತಿಕೊಳ್ಳುವರು. ಪ್ರತಿಯೊಬ್ಬನು ತನ್ನ ಮನೆಯ ಮೇಲೆಯೂ, ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕದಿಂದ ಗೋಳಾಡುವನು.


ದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಫಿಲಿಷ್ಟಿಯರೇ ಕರಗಿ ಹೋಗಿರಿ. ಹೊಗೆಯು ಉತ್ತರದಿಂದ ಬರುತ್ತದೆ. ಅದರಲ್ಲಿ ಅತ್ತಿತ್ತ ನಡೆಯುವವರು ಯಾರೂ ಇಲ್ಲ.


ಆಗ ಯೋಬನು ಎದ್ದು ತನ್ನ ಮೇಲಂಗಿಯನ್ನು ಹರಿದುಕೊಂಡನು. ನಂತರ ತನ್ನ ತಲೆ ಬೋಳಿಸಿಕೊಂಡು, ನೆಲಕ್ಕೆ ಬಿದ್ದು ಸಾಷ್ಟಾಂಗವೆರಗಿ,


ನೀವು ನಿಮ್ಮ ದೇವರಾದ ಯೆಹೋವ ದೇವರ ಮಕ್ಕಳು. ನೀವು ಸತ್ತವರಿಗೋಸ್ಕರ ಗಾಯಮಾಡಿಕೊಳ್ಳಬಾರದು. ಮುಂದಲೆಯನ್ನು ಬೋಳಿಸಿಕೊಳ್ಳಬಾರದು.


ನೆಬೋ, ಬಾಳ್ ಮೆಯೋನ್ ಎಂದು ಬೇರೆ ಈ ಹೆಸರು ಹೊಂದಿದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ, ತಾವು ಕಟ್ಟಿದ ಪಟ್ಟಣಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.


“ಅಟಾರೋತ್, ದೀಬೋನ್, ಯಜ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳು,


“ಒಬ್ಬ ಗಂಡಸಿನ ತಲೆಯ ಕೂದಲು ಉದುರಿ ಹೋದರೆ, ಅವನು ಬೋಳು ತಲೆಯವನು. ಆದರೂ ಅವನು ಶುದ್ಧನಾಗಿರುವನು.


“ಏಕೆಂದರೆ ಬೆಂಕಿ ಹೆಷ್ಬೋನಿನಿಂದಲೂ, ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು, ಮೋವಾಬಿನ ಆರ್ ಎಂಬ ಪಟ್ಟಣವನ್ನೂ, ಅರ್ನೋನ್ ಹೊಳೆಯ ಬಳಿಯಲ್ಲಿರುವ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು.


ಆದ್ದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿದು, ಅವರ ಅರ್ಧ ಗಡ್ಡವನ್ನು ಬೋಳಿಸಿ, ಅವರ ವಸ್ತ್ರಗಳನ್ನು ಬೆನ್ನ ಹಿಂದೆ ಮಧ್ಯದಿಂದ ಸೊಂಟದ ಕೆಳಗಿನವರೆಗೂ ಕತ್ತರಿಸಿ, ಅವರನ್ನು ಕಳುಹಿಸಿಬಿಟ್ಟನು.


ಉನ್ನತ ಸ್ಥಳಗಳ ಮೇಲೆ ಸ್ವರವು ಕೇಳಿತು. ಅವು ಇಸ್ರಾಯೇಲಿನ ಮಕ್ಕಳ ಅಳುವಿಕೆಯ ಬೇಡಿಕೆಗಳೇ. ಏಕೆಂದರೆ ಅವರು ತಮ್ಮ ಮಾರ್ಗವನ್ನು ಡೊಂಕು ಮಾಡಿ, ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟಿದ್ದರು.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪ್ರವಾಹಗಳು ಉತ್ತರದಿಂದ ಬರುತ್ತವೆ, ಅದು ತುಂಬಿ ತುಳುಕುವ ಪ್ರಳಯವಾಗುವುದು; ದೇಶವನ್ನೂ ಅದರಲ್ಲಿರುವ ಸಮಸ್ತ ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ಆಕ್ರಮಿಸುವುವು; ಆಗ ಮನುಷ್ಯರು ಕೂಗುವರು; ದೇಶದ ನಿವಾಸಿಗಳೆಲ್ಲರು ಗೋಳಾಡುವರು.


ಇದಲ್ಲದೆ ಎತ್ತರ ಸ್ಥಳಗಳಲ್ಲಿ ಅರ್ಪಿಸುವವನನ್ನೂ, ತನ್ನ ದೇವರುಗಳಿಗೆ ಧೂಪಸುಡುವವನನ್ನೂ ಮೋವಾಬಿನಲ್ಲಿ ನಿಲ್ಲಿಸಿಬಿಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ನಿನಗಾಗಿ ತಲೆ ಬೋಳಿಸಿಕೊಂಡು ಗೋಣಿಚೀಲವನ್ನು ಸುತ್ತಿಕೊಂಡು ಮನೋವ್ಯಥೆಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.


“ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ “ಅಯ್ಯೋ ಆ ದಿನ!” ಎಂದು, ಅಳುತ್ತಾ ಹೇಳಿರಿ.


ನಿಮ್ಮ ಹಬ್ಬಗಳನ್ನು ದುಃಖಕ್ಕೂ, ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು. ಎಲ್ಲರೂ ಸೊಂಟಗಳಿಗೆ ಗೋಣಿತಟ್ಟನ್ನು ಕಟ್ಟಿಕೊಂಡು, ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು. ಒಬ್ಬನೇ ಮಗನಿಗಾಗಿ ಗೋಳಾಡುವ ಸಮಯದಂತೆ ಮಾಡುವೆನು. ಅದರ ಅಂತ್ಯವು ಕಹಿಯಾದ ದಿನದಂತಿರುವುದು.


ಆದ್ದರಿಂದ ಹಾನೂನನು ದಾವೀದನ ದೂತರನ್ನು ಹಿಡಿದು ಅವರ ಗಡ್ಡ, ತಲೆ ಬೋಳಿಸಿ, ಅವರ ವಸ್ತ್ರಗಳನ್ನು ಬೆನ್ನ ಹಿಂದೆ ಮಧ್ಯದಿಂದ ಸೊಂಟದ ಕೆಳಗಿನವರೆಗೂ ಕತ್ತರಿಸಿ, ಅವರನ್ನು ಕಳುಹಿಸಿಬಿಟ್ಟನು.


“ಹೆಷ್ಬೋನೇ ಗೋಳಾಡು; ಏಕೆಂದರೆ ಆಯಿ ಎಂಬ ನಗರ ಹಾಳಾಯಿತು; ರಬ್ಬಾದ ನಿವಾಸಿಗಳೇ ಗೋಳಾಡಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಏಕೆಂದರೆ ಮಲ್ಕಾಮ್ ದೇವತೆ, ಅವನ ಯಾಜಕರು, ಅವನ ಪ್ರಧಾನರು ಒಟ್ಟಾಗಿ ಸೆರೆಗೆ ಹೋಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು