Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 14:4 - ಕನ್ನಡ ಸಮಕಾಲಿಕ ಅನುವಾದ

4 ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬಿಲೋನಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಸ್ವರವೆತ್ತಿ ಹಾಡಬೇಕು: ಹೀಗೆ ದಬ್ಬಾಳಿಕೆಗಾರನು ಕೊನೆಗೊಂಡನು. ಅವನ ಕೋಪ ಹೀಗೆ ಮುಗಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಸ್ವರವೆತ್ತಿ ಹಾಡಬೇಕು: “ಆಹಾ, ಹಿಂಸಕನು ಕೊನೆಗೊಂಡನು, ಕೋಪವು ನಿಂತು ಹೋಯಿತು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಬಿದ್ದುಹೋದನಿದೊ ವಿಧ್ವಂಸಕ ಸದ್ದಿಲ್ಲದಾಗಿದೆ ಅವನ ಅಟ್ಟಹಾಸದ ಬಿಂಕ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಎತ್ತಿ ಹೇಳಬೇಕು - ಆಹಾ, ಹಿಂಸಕನು ಕೊನೆಗೊಂಡನು, ರೇಗಾಟವು ನಿಂತಿತು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆ ಸಮಯದಲ್ಲಿ ಬಾಬಿಲೋನಿನ ಅರಸನ ಬಗ್ಗೆ ನೀವು ಹೀಗೆ ಹಾಡುವಿರಿ: ಅರಸನು ನಮ್ಮನ್ನಾಳುವಾಗ ಬಹಳ ಕ್ರೂರವಾಗಿದ್ದನು. ಆದರೆ ಈಗ ಅವನ ಆಳ್ವಿಕೆಯು ಅಂತ್ಯವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 14:4
35 ತಿಳಿವುಗಳ ಹೋಲಿಕೆ  

ನಿನ್ನ ಹಿಂಸಕರು ಸ್ವಮಾಂಸವನ್ನೇ ಭುಜಿಸುವಂತೆ ಅನುಮತಿಸುವೆನು. ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ಸ್ವರಕ್ತವನ್ನೇ ಕುಡಿದು ಅಮಲೇರುವರು. ಆಗ ಯೆಹೋವನಾದ ನಾನೇ ನಿನ್ನ ರಕ್ಷಕನೂ, ನಿನ್ನ ವಿಮೋಚಕನೂ, ಯಾಕೋಬ್ಯರ ಶೂರನೂ ಎಂದು ನರಮಾನವರೆಲ್ಲರಿಗೂ ಗೊತ್ತಾಗುವುದು.”


“ಪರಲೋಕವೇ ಸಂಭ್ರಮಿಸಿರಿ, ಪರಿಶುದ್ಧರೇ, ಅಪೊಸ್ತಲರೇ ಹಾಗೂ ಪ್ರವಾದಿಗಳೇ ಆಕೆಯ ನಿಮಿತ್ತ ಹರ್ಷಗೊಳ್ಳಿರಿ! ಏಕೆಂದರೆ ಆಕೆ ನಿಮಗೆ ತೀರ್ಪುಮಾಡಿದ್ದಕ್ಕೆ ಸರಿಯಾಗಿ ದೇವರು ಆಕೆಗೆ ತೀರ್ಪುಮಾಡಿದ್ದಾರೆ!”


“ ‘ಅಯ್ಯೋ! ಅಯ್ಯೋ! ಶೋಕಭರಿತ ಮಹಾನಗರಿಯೇ, ನೀನು ನೇರಳೆ, ಕಡುಗೆಂಪು ನಾರುಮಡಿಯನ್ನು ಧರಿಸಿ, ಚಿನ್ನ, ಬೆಲೆಬಾಳುವ ಕಲ್ಲು ಮತ್ತು ಮುತ್ತುಗಳಿಂದ ಬೆಳಗುತ್ತಿದ್ದೆ.


ಆ ಸ್ತ್ರೀಯು ಪರಿಶುದ್ಧರ ರಕ್ತವನ್ನೂ ಮತ್ತು ಯೇಸುವಿನ ಸಾಕ್ಷಿಗಳಾಗಿದ್ದವರ ರಕ್ತವನ್ನೂ ಕುಡಿದಿರುವುದನ್ನು ನಾನು ಕಂಡೆನು. ಆಕೆಯನ್ನು ನಾನು ಕಂಡಾಗ, ಬಹು ಆಶ್ಚರ್ಯಗೊಂಡೆನು.


ಲೆಬನೋನಿನ ಮೇಲೆ ಮಾಡಿದ ಬಲಾತ್ಕಾರವು ನಿನ್ನನ್ನು ಚಕಿತಗೊಳಿಸುವುದು. ಮೃಗಗಳ ನಾಶವು ನಿನ್ನನ್ನು ಹೆದರಿಸುವುದು. ಏಕೆಂದರೆ ನೀನು ಮನುಷ್ಯರ ರಕ್ತ ಸುರಿಸಿದ್ದೀ; ನೀನು ನಾಡುಗಳನ್ನು, ಪಟ್ಟಣಗಳನ್ನು, ಅವುಗಳಲ್ಲಿರುವ ಎಲ್ಲವುಗಳನ್ನು ನಾಶಮಾಡಿದ್ದೀ.


ಜನರನ್ನು, ಭೂಮಿಯ ಮೃಗಗಳನ್ನು, ಆಕಾಶದ ಪಕ್ಷಿಗಳನ್ನು, ಜೀವಿಸುವಂಥಾದ್ದೆಲ್ಲವನ್ನೂ ನಿನ್ನ ಕೈಯಲ್ಲಿ ಕೊಟ್ಟು, ಅವೆಲ್ಲವುಗಳಿಗೆ ನಿನ್ನನ್ನು ಆಳುವವನಾಗಿ ಮಾಡಿದ್ದಾರೆ. ಆ ಬಂಗಾರದ ತಲೆಯು ನೀನೇ.


ಹೀಗೆ ನಾನು ಕೋಪದಿಂದಲೂ, ರೋಷದಿಂದಲೂ, ಉಗ್ರಖಂಡನೆಯಿಂದಲೂ ನಿಮ್ಮಲ್ಲಿ ನ್ಯಾಯತೀರ್ಪುಗಳನ್ನು ನಡೆಸುವಾಗ, ನಿಮ್ಮ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ, ದೂಷಣೆಯೂ, ಶಿಕ್ಷೆಯೂ, ಭಯವೂ ಆಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ.


ಬಂಗಾರವು ಹೇಗೆ ಮಸುಕಾಯಿತು! ಬಹಳ ಶುದ್ಧವಾದ ಬಂಗಾರವು ಹೇಗೆ ಬದಲಾಯಿತು! ಪರಿಶುದ್ಧಸ್ಥಳದ ಕಲ್ಲುಗಳೂ ಬೀದಿಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿವೆ.


‘ನಾನು ಅವರನ್ನು ಅಸಹ್ಯಪಡಿಸುತ್ತೇನೆ. ನಿಂದೆಗೂ, ಗಾದೆಗೂ, ಹಾಸ್ಯಕ್ಕೂ, ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.


ಆದರೆ ನಾವು ಹಾದುಹೋಗುವಂತೆ, ನೀನು ನೆಲಕ್ಕೆ ಬೀಳು ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ ಮತ್ತು ನೀನು ಹಾದುಹೋದವರಿಗೆ ನಿನ್ನ ಶರೀರವನ್ನು ನೆಲದಂತೆಯೂ, ಬೀದಿಯಂತೆಯೂ ಮಾಡಿಕೊಂಡಿಯಲ್ಲಾ.”


ಕಸ್ದೀಯರ ಪುತ್ರಿಯೇ, “ಮೌನವಾಗಿ ಕುಳಿತುಕೋ, ಕತ್ತಲೆಯೊಳಗೆ ಹೋಗು. ಏಕೆಂದರೆ ಇನ್ನು ಮೇಲೆ ನಿನ್ನನ್ನು ರಾಜ್ಯಗಳ ರಾಣಿ ಎಂದು ಕರೆಯುವುದಿಲ್ಲ.


ಲೋಕವನ್ನು ಕಾಡನ್ನಾಗಿ ಮಾಡಿ, ನಗರಗಳನ್ನು ಕೆಡವಿ, ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು ಇವನೋ?” ಎಂದುಕೊಳ್ಳುವರು.


ಆ ಅಧಿಪತಿಗಳು ಕಡುಕೋಪದಿಂದ ಎಡೆಬಿಡದೆ ಜನರನ್ನು ದಂಡಿಸಿ, ನಿಲ್ಲದ ದಬ್ಬಾಳಿಕೆಯಿಂದ ರಾಷ್ಟ್ರಗಳನ್ನು ಅಧೀನಪಡಿಸಿಕೊಂಡಿದ್ದರು.


ರಾಜ್ಯಗಳ ಘನತೆಯೂ, ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬಿಲೋನನ್ನು ದೇವರು ಸೊದೋಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಕೆಡವಿಬಿಡುವನು.


ಇದಲ್ಲದೆ ದೊಡ್ಡವೂ, ಸಣ್ಣವೂ ಆದ ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳು ಆಲಯದ ಬೊಕ್ಕಸಗಳು, ಅರಸನ ಬೊಕ್ಕಸಗಳು, ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬಿಲೋನಿಗೆ ತರಿಸಿದನು.


ಏಕೆಂದರೆ ಅವನ ನೊಗವನ್ನೂ, ಬೆನ್ನನ್ನು ಹೊಡೆದ ಕೋಲನ್ನೂ, ಬಿಟ್ಟೀ ಹಿಡಿದವನ ದೊಣ್ಣೆಯನ್ನೂ, ಮಿದ್ಯಾನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀರಿ.


ಆಮೋಚನ ಮಗ ಯೆಶಾಯನಿಗೆ ಬಾಬಿಲೋನಿನ ವಿಷಯವಾಗಿ ಬಂದ ಪ್ರವಾದನೆ:


ಆಳುತ್ತಿದ್ದ ದುಷ್ಟರ ಕೋಲನ್ನೂ, ಅಧಿಪತಿಗಳ ದಂಡವನ್ನೂ ಯೆಹೋವ ದೇವರು ಮುರಿದುಬಿಟ್ಟರು.


ಮೋವಾಬ್ ದೇಶದಿಂದ ವಲಸೆಹೋದವರು ನಿಮ್ಮಲ್ಲಿ ವಾಸಿಸಲಿ. ವಿನಾಶಕರಿಗೆ ವಶವಾಗದಂತೆ ಅವರಿಗೆ ಆಶ್ರಯ ನೀಡಿರಿ. ದಬ್ಬಾಳಿಕೆ ಮುಗಿಯುತ್ತಾ ಬಂತು. ಸೂರೆಮಾಡುವುದು ನಿಲ್ಲುವುದು, ಪೀಡಿಸುವವರು ದೇಶದಿಂದ ಅಳಿದುಹೋಗುವರು.


ಆಕಾಶವನ್ನು ಹಾಸಿ, ಭೂಮಿಯ ಅಸ್ತಿವಾರವನ್ನು ಹಾಕಿ, ನಿನ್ನನ್ನು ಉಂಟುಮಾಡಿದ ಯೆಹೋವ ದೇವರನ್ನು ನೀನು ಮರೆತುಬಿಟ್ಟು, ಹಿಂಸಕನ ಉಗ್ರಕ್ಕೆ ಎಡೆಬಿಡದೆ ಪ್ರತಿದಿನವೂ ಅವನು ನಾಶಪಡಿಸುವನೋ ಎಂಬಂತೆ ಅಂಜಿಕೊಂಡಿದ್ದೀಯಲ್ಲಾ, ಆ ಹಿಂಸಕನ ಕೋಪವು ಎಲ್ಲಿ?


ನೀನು ನೀತಿಯಲ್ಲಿ ನೆಲೆಗೊಂಡಿರುವೆ. ಬಾಧೆಯಿಂದ ದೂರವಾಗಿರುವೆ. ನೀನು ಭೀತಿಯಿಂದ ಭಯಪಡುವುದಿಲ್ಲ, ಏಕೆಂದರೆ ಅದು ನಿನ್ನ ಸಮೀಪಕ್ಕೆ ಬಾರದು.


ಘೋರ ದರ್ಶನವು ನನಗೆ ತಿಳಿಯಬಂದಿದೆ: ಬಾಧಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.


ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ, ‘ಬಲವಾದ ಕೋಲೂ, ಮಹಿಮೆಯ ಬೆತ್ತವೂ ಹೇಗೆ ಮುರಿದುಹೋಯಿತು?’ ಎಂದು ಹೇಳಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು