ಯೆಶಾಯ 14:31 - ಕನ್ನಡ ಸಮಕಾಲಿಕ ಅನುವಾದ31 ದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಫಿಲಿಷ್ಟಿಯರೇ ಕರಗಿ ಹೋಗಿರಿ. ಹೊಗೆಯು ಉತ್ತರದಿಂದ ಬರುತ್ತದೆ. ಅದರಲ್ಲಿ ಅತ್ತಿತ್ತ ನಡೆಯುವವರು ಯಾರೂ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ಪುರದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಎಲ್ಲಾ ಫಿಲಿಷ್ಟಿಯರೇ, ಕರಗಿ ಹೋಗುವಿರಿ! ಉತ್ತರದಿಂದ ಹೊಗೆಯು ಬರುತ್ತದೆ. ಆ ವ್ಯೂಹದಲ್ಲಿ ಹಿಂದೆ ಬೀಳುವವರು ಯಾರೂ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)31 ಪುರದ್ವಾರವೇ, ಗೋಳಾಡು; ಪಟ್ಟಣವೇ, ಬೊಬ್ಬೆಯಿಡು, ಫಿಲಿಷ್ಟಿಯವೇ, ಕರಗಿಹೋಗು, ಉತ್ತರದಿಂದ ಬರುತ್ತಿದೆ ಧೂಮಧೂಳಿ ಆ ದಂಡಿನಲ್ಲಿಲ್ಲ ನೋಡು, ಯಾವ ಹೇಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)31 ಪುರದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಎಲ್ಲಾ ಫಿಲಿಷ್ಟಿಯರೇ, ಕುಂದಿಹೋಗಿರಿ! ಬಡಗಲಿಂದ ಹೊಗೆಯು ಬರುತ್ತಿದೆ. ಆ ವ್ಯೂಹದಲ್ಲಿ ಹಿಂದು ಬೀಳುವವರಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್31 ಮಹಾದ್ವಾರಗಳ ಬಳಿಯಲ್ಲಿರುವ ಜನರೇ, ಗೋಳಾಡಿರಿ! ಪಟ್ಟಣದೊಳಗಿರುವ ಜನರೇ, ಕೂಗಾಡಿರಿ! ಫಿಲಿಷ್ಟಿಯದಲ್ಲಿರುವವರೆಲ್ಲರೂ ಭಯಪಡುವರು. ನಿಮ್ಮ ಧೈರ್ಯವು ಮೇಣದಂತೆ ಕರಗಿಹೋಗುವದು. ಇಗೋ, ಉತ್ತರದಿಕ್ಕಿನಲ್ಲಿ ಧೂಳು ಏಳುತ್ತಿದೆ. ಅಶ್ಶೂರದ ಸೈನ್ಯವು ಬರುತ್ತಿದೆ. ಅವರೆಲ್ಲರೂ ಬಲಶಾಲಿಗಳಾದ ವೀರರು. ಅಧ್ಯಾಯವನ್ನು ನೋಡಿ |