Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 14:29 - ಕನ್ನಡ ಸಮಕಾಲಿಕ ಅನುವಾದ

29 ಸಮಸ್ತ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದು ಹೋಯಿತೆಂದು ನೀವು ಉಲ್ಲಾಸಿಸಬೇಡಿರಿ. ಏಕೆಂದರೆ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. ಅದರ ಫಲವು ಹಾರುವ ವಿಷಸರ್ಪವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಎಲೈ, ಎಲ್ಲಾ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದುಹೋಯಿತೆಂದು ಉಲ್ಲಾಸಗೊಳ್ಳದಿರಿ; ಏಕೆಂದರೆ ನಾಗರ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. ಅದರ ಸಂತತಿಯು ಹಾರುವ ಸರ್ಪವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 “ನಲಿಯದಿರಿ, ಎಲೈ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿಯಿತೆಂದು. ಹಾವು ಸತ್ತರೂ ಅದರ ಮೂಲದಿಂದ ಹುಟ್ಟುವುದು ಕ್ರೂರ ಕಾಳಿಂಗವು, ಅದರ ಮೊಟ್ಟೆಯಿಂದ ಹೊರಬರುವುದು ಹಾರುವ ಘಟಸರ್ಪವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಎಲೈ, ಎಲ್ಲಾ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದುಹೋಯಿತೆಂದು ಉಲ್ಲಾಸಗೊಳ್ಳದಿರಿ; ಹಾವಿನ ಬೀಜದಿಂದ ಮಹಾ ನಾಗವುಂಟಾಗುವದು, ಆ ಬೀಜದ ಸಂತತಿಯು ಹಾರುವ ಅಗ್ನಿಮಯಸರ್ಪವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಫಿಲಿಷ್ಟಿಯ ದೇಶವೇ, ನಿನ್ನನ್ನು ಹೊಡೆದ ಅರಸನು ಸತ್ತದ್ದಕ್ಕಾಗಿ ನೀನು ಸಂತೋಷಗೊಂಡಿರುವೆ. ಆದರೆ ನೀನು ಸಂತೋಷಗೊಳ್ಳಬಾರದು. ಅವನ ರಾಜ್ಯಭಾರವು ಅಂತ್ಯವಾಯಿತು ಎಂಬುದು ಸತ್ಯ. ಆದರೆ ಅರಸನ ಮಗನು ರಾಜ್ಯವಾಳುವನು. ಒಂದು ಹಾವು ಇನ್ನೊಂದು ಭಯಂಕರ ಹಾವನ್ನು ಹೆರುವಂತೆ ಅದು ಇರುವದು. ಈ ಹೊಸ ಅರಸನು ನಿಮಗೆ ವೇಗವಾದ ಮತ್ತು ಅಪಾಯಕರವಾದ ಹಾವಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 14:29
27 ತಿಳಿವುಗಳ ಹೋಲಿಕೆ  

ನೆಗೆವಿನ ಮೃಗಗಳ ವಿಷಯವಾದ ಪ್ರವಾದನೆ: ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿಗಳ ಬೆನ್ನ ಮೇಲೆ ತಮ್ಮ ಬದುಕನ್ನೂ, ಒಂಟೆಗಳ ಮೇಲೆ ತಮ್ಮ ದ್ರವ್ಯಗಳನ್ನು ತಮಗೆ ಪ್ರಯೋಜನವಿಲ್ಲದ ಜನಕ್ಕೆ ತೆಗೆದುಕೊಂಡು ಹೋಗುತ್ತಾರೆ.


ಹಸುಳೆಯು ನಾಗರ ಹಾವಿನ ಹುತ್ತದ ಮೇಲೆ ಆಡುವುದು ಮತ್ತು ಪುಟ್ಟ ಮಗುವು ಹಾವಿನ ಬಿಲದ ಒಳಗೆ ಕೈ ಹಾಕುವುದು.


ಅವನು ಹೊರಟುಹೋಗಿ ಫಿಲಿಷ್ಟಿಯರ ಮೇಲೆ ಯುದ್ಧಮಾಡಿ, ಗತ್‌ನ ಗೋಡೆಯನ್ನೂ, ಯಬ್ನೆಯ ಗೋಡೆಯನ್ನೂ, ಅಷ್ಡೋದಿನ ಗೋಡೆಯನ್ನೂ ಕೆಡವಿಬಿಟ್ಟು, ಅಷ್ಡೋದಿನ ಮತ್ತು ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು.


ಆ ದಿವಸದಲ್ಲಿ ನೀನು ನನಗೆ ವಿರೋಧವಾಗಿ ಮಾಡಿದ ದುಷ್ಕೃತ್ಯಗಳಿಗಾಗಿ ನಾಚಿಕೆಗೆ ಗುರಿಯಾಗುವುದಿಲ್ಲ; ಏಕೆಂದರೆ ಆಗ ಗರ್ವದಿಂದ ಹೊಗಳಿಕೊಳ್ಳುವವರನ್ನು ನಿನ್ನ ಮಧ್ಯದೊಳಗಿಂದ ತೆಗೆದುಹಾಕುವೆನು. ನನ್ನ ಪರಿಶುದ್ಧ ಪರ್ವತದಲ್ಲಿ ಇನ್ನು ಮೇಲೆ ನೀನು ಗರ್ವಪಡದೇ ಬಾಳುವೆ.


ನನ್ನ ಶತ್ರುವೇ, ನನ್ನ ಮೇಲೆ ಸಂತೋಷ ಪಡಬೇಡ, ನಾನು ಬಿದ್ದಿದ್ದರೂ ತಿರುಗಿ ಏಳುವೆನು. ನಾನು ಕತ್ತಲೆಯಲ್ಲಿ ಕುಳಿತುಕೊಂಡರೂ ಯೆಹೋವ ದೇವರೇ ನನಗೆ ಬೆಳಕಾಗಿರುವರು.


ನಿನ್ನ ಸಹೋದರನ ವಿಪತ್ತಿನ ದಿನದಲ್ಲಿ ನೀನು ಅವನನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. ಯೆಹೂದದ ಜನರು ನಾಶವಾದಾಗ ನೀನು ಸಂತೋಷಪಡಬಾರದಿತ್ತು. ಅವರ ಕಷ್ಟದ ದಿವಸದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು;


ಇಸ್ರಾಯೇಲೇ, ಬೇರೆ ಜನಾಂಗಗಳು ಉಲ್ಲಾಸಿಸುವ ಪ್ರಕಾರ ಸಂತೋಷ ಪಡಬೇಡ. ಏಕೆಂದರೆ ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ಮಾಡಿದ್ದೀಯೆ. ಎಲ್ಲಾ ಧಾನ್ಯದ ಕಣಗಳಲ್ಲಿ ವ್ಯಭಿಚಾರದ ಕೂಲಿಯನ್ನು ಪ್ರೀತಿ ಮಾಡಿದ್ದೀಯೆ.


ಹೇಗೆ ನೀನು ಇಸ್ರಾಯೇಲರ ಸ್ವಾಸ್ತ್ಯದ ನಾಶನಕ್ಕೆ ಹೇಗೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಸೇಯೀರ್ ಪರ್ವತವೇ ಮತ್ತು ಸಮಸ್ತ ಎದೋಮೇ ಸಂಪೂರ್ಣವಾಗಿ ಹಾಳಾಗುವೆ. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿಯುವುದು.’ ”


“ಮನುಷ್ಯಪುತ್ರನೇ, ಟೈರ್, ಯೆರೂಸಲೇಮಿನ ವಿಷಯವಾಗಿ, ‘ಆಹಾ, ಜನರ ದ್ವಾರವಾಗಿದ್ದದ್ದು ಮುರಿದುಹೋಯಿತು, ಅದು ನನ್ನ ಕಡೆಗೆ ತೆರೆದುಕೊಂಡಿದೆ. ಯೆರೂಸಲೇಮು ಹಾಳಾದದ್ದರಿಂದ ನಾನು ವೃದ್ಧಿಗೊಳ್ಳುವೆನು,’


ನಿನ್ನ ಶತ್ರು ಬಿದ್ದರೆ ಆನಂದಿಸಬೇಡ; ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ.


ಇದಲ್ಲದೆ ಫಿಲಿಷ್ಟಿಯರು ತಗ್ಗಿನ ದೇಶದ ಪಟ್ಟಣಗಳಲ್ಲಿಯೂ, ಯೆಹೂದದ ದಕ್ಷಿಣ ಪ್ರಾಂತದಲ್ಲಿಯೂ ನುಗ್ಗಿ, ಬೇತ್ ಷೆಮೆಷ್, ಅಯ್ಯಾಲೋನ್, ಗೆದೇರೋತ್, ಸೋಕೋ ಅದರ ಗ್ರಾಮಗಳನ್ನೂ, ತಿಮ್ನಾ ಅದರ ಗ್ರಾಮಗಳನ್ನೂ, ಗಿಮ್ಜೋ ಅದರ ಗ್ರಾಮಗಳನ್ನೂ ತೆಗೆದುಕೊಂಡು ಅಲ್ಲಿ ವಾಸವಾಗಿದ್ದರು.


ಅವರು ಕಾವಲು ಗೋಪುರದಿಂದ ಕೋಟೆಯುಳ್ಳ ಪಟ್ಟಣಗಳವರೆಗೂ ಫಿಲಿಷ್ಟಿಯರನ್ನು ಗಾಜಪ್ರಾಂತ್ಯದವರೆಗೆ ಸಂಹರಿಸಿದನು.


ಈಜಿಪ್ಟಿಗೆ ಎದುರಾದ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗೂ ಅಂದರೆ, ಗಾಜಾ, ಅಷ್ಡೋದ್, ಅಷ್ಕೆಲೋನ್, ಗಾತ್, ಎಕ್ರೋನ್ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ದಕ್ಷಿಣ ಪ್ರಾಂತ್ಯದಲ್ಲಿದ್ದ ಅವ್ವೀಯರ ಸೀಮೆ;


ಯೆಹೋವ ದೇವರು ಮೋಶೆಗೆ, “ನೀನು ಕಂಚಿನಿಂದ ಒಂದು ಸರ್ಪವನ್ನು ಮಾಡಿಸಿಕೊಂಡು, ಒಂದು ಕಂಬದ ಮೇಲೆ ಇಡು. ಆಗ ಕಚ್ಚಿಸಿಕೊಂಡವರೆಲ್ಲರೂ ಅದರ ಮೇಲೆ ದೃಷ್ಟಿ ಇಟ್ಟರೆ ಅವರು ಬದುಕುವರು,” ಎಂದರು.


ಯಾಕೋಬಿನ ಮನೆತನದವರು ಪೂರ್ವದೇಶಗಳ ಮಂತ್ರತಂತ್ರಗಳಲ್ಲಿ ಮಗ್ನರಾಗಿ, ಫಿಲಿಷ್ಟಿಯರಂತೆ ಕಣಿ ಹೇಳುವವರಾಗಿಯೂ, ಬೇರೆ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆಯುಳ್ಳವರಾಗಿಯೂ ಇರುವುದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀರಿ.


ಆದರೆ ಅವರು ಪಶ್ಚಿಮ ದಿಕ್ಕಿಗೆ ಫಿಲಿಷ್ಟಿಯರ ಇಳಿಜಾರು ಪ್ರದೇಶದ ಮೇಲೆ ಎರಗುವರು. ಅವರು ಜೊತೆಯಾಗಿ ಪೂರ್ವದವರನ್ನು ಸೂರೆ ಮಾಡುವರು, ಅವರು ಎದೋಮಿನ ಮತ್ತು ಮೋವಾಬಿನ ಮೇಲೆ ತಮ್ಮ ಕೈಯನ್ನು ದಾಳಿಮಾಡುವರು ಮತ್ತು ಅಮ್ಮೋನಿಯರು ಅವರಿಗೆ ಅಧೀನರಾಗುವರು.


ದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಫಿಲಿಷ್ಟಿಯರೇ ಕರಗಿ ಹೋಗಿರಿ. ಹೊಗೆಯು ಉತ್ತರದಿಂದ ಬರುತ್ತದೆ. ಅದರಲ್ಲಿ ಅತ್ತಿತ್ತ ನಡೆಯುವವರು ಯಾರೂ ಇಲ್ಲ.


ಫರೋಹನು ಗಾಜಾ ಪಟ್ಟಣವನ್ನು ಮುತ್ತಿಗೆ ಹಾಕುವ ಮೊದಲು, ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆಮೀಯನಿಗೆ ಬಂದ ಯೆಹೋವ ದೇವರ ವಾಕ್ಯವು:


ಯೆಹೋವ ದೇವರು ತಾವು ಸಂಕಲ್ಪಿಸಿದ್ದನ್ನು ಮಾಡಿದ್ದಾರೆ. ಅವರು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತಮ್ಮ ವಾಕ್ಯವನ್ನು ಪೂರೈಸಿದ್ದಾರೆ. ಅವರು ಕೆಡವಿ ಕನಿಕರಿಸಲಿಲ್ಲ. ಅವರು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿದ್ದಾರೆ. ಆತನು ನಿನ್ನ ವೈರಿಗಳ ಕೊಂಬನ್ನು ಎತ್ತಿದ್ದಾರೆ.


“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ತೀರಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಯೆಹೂದವನ್ನು ಕೆಡಿಸಿದರು.


“ಟೈರೇ, ಸೀದೋನೇ, ಫಿಲಿಷ್ಟಿಯದ ಎಲ್ಲಾ ಪ್ರಾಂತ್ಯಗಳೇ, ನನ್ನ ವಿರೋಧವಾಗಿ ನಿಮಗೆ ಏನು ಇದೆ? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ಮುಯ್ಯಿ ನನಗೆ ಸಲ್ಲಿಸಿದರೆ, ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಗಾಜದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ಎಲ್ಲಾ ಸಮುದಾಯಗಳನ್ನು ಸೆರೆಹಿಡಿದು ಎದೋಮಿಗೆ ಮಾರಿಬಿಟ್ಟರು.


ಅಷ್ಡೋದಿನಿಂದ ನಿವಾಸಿಯನ್ನು ಮತ್ತು ಅಷ್ಕೆಲೋನಿನಿಂದ ರಾಜದಂಡ ಹಿಡಿಯುವವನನ್ನು ನಾಶಮಾಡುವೆನು. ಫಿಲಿಷ್ಟಿಯರಲ್ಲಿ ಕೊನೆಯವರು ಸಾಯುವವರೆಗೂ ನಾನು ಎಕ್ರೋನಿನ ವಿರುದ್ಧ ನನ್ನ ಕೈಯನ್ನು ತಿರುಗಿಸುವೆನು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


ಗಾಜವು ಕೈಬಿಡಲಾಗುವುದು; ಅಷ್ಕೆಲೋನ್ ಹಾಳಾಗುವುದು; ಅಷ್ಡೋದನ್ನು ಮಧ್ಯಾಹ್ನದಲ್ಲಿ ಖಾಲಿಮಾಡುವರು, ಎಕ್ರೋನ್ ಕಿತ್ತೆಸೆಯಲಾಗುವುದು.


ಅಯ್ಯೋ, ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನಾಂಗವೇ, ನಿನ್ನ ಗತಿಯನ್ನು ಏನು ಹೇಳಲಿ! ಕಾನಾನೇ, ಫಿಲಿಷ್ಟಿಯ ದೇಶವೇ, ಯೆಹೋವ ದೇವರ ವಾಕ್ಯವು ನಿನಗೆ ವಿರುದ್ಧವಾಗಿದೆ, “ನಿನ್ನಲ್ಲಿ ನಿವಾಸಿಯೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು,” ಎಂದು ಅವರು ಹೇಳುತ್ತಾರೆ.


ಅಷ್ಕೆಲೋನು ಕಂಡು ಭಯಪಡುವುದು, ಗಾಜವು ಸಹ ಅದನ್ನು ಕಂಡು ವೇದನೆ ಪಡುವುದು. ಎಕ್ರೋನಿಗೂ ಸಹ ಹೀಗೆ ಆಗುವುದು. ಏಕೆಂದರೆ ಅವಳ ನಿರೀಕ್ಷೆಯು ಬಾಡುವುದು. ಗಾಜದೊಳಗಿಂದ ಅರಸನು ನಾಶವಾಗುವನು. ಅಷ್ಕೆಲೋನು ನಿವಾಸ ಇಲ್ಲದೆ ಇರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು