Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 13:9 - ಕನ್ನಡ ಸಮಕಾಲಿಕ ಅನುವಾದ

9 ಇಗೋ, ಯೆಹೋವ ದೇವರ ದಿನವು ಬರುತ್ತದೆ. ಅದು ಭೂಮಿಯನ್ನು ಹಾಳು ಮಾಡುವುದಕ್ಕೂ, ಅಲ್ಲಿಂದ ಪಾಪಿಗಳನ್ನು ನಿರ್ಮೂಲ ಮಾಡುವುದಕ್ಕೂ, ಕಡುಕೋಪದಿಂದಲೂ, ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭೂಮಿಯನ್ನು ಹಾಳು ಮಾಡಿ, ಪಾಪಿಗಳನ್ನು ನಿರ್ಮೂಲಮಾಡುವುದಕ್ಕೆ ಆತನ ಕೋಪೋದ್ರೇಕದಿಂದಲೂ, ತೀಕ್ಷ್ಣವಾದ ರೋಷದಿಂದಲೂ ಕ್ರೂರವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಇಗೋ, ಸರ್ವೇಶ್ವರನ ದಿನ ಬರುತ್ತಿದೆ ! ಭೂಮಿಯನ್ನು ಹಾಳುಮಾಡಲು, ಪಾಪಿಗಳನ್ನು ನಿರ್ಮೂಲಮಾಡಲು; ಕೋಪೋದ್ರೇಕದಿಂದ, ರೋಷಾವೇಶದಿಂದ, ಕ್ರೂರವಾಗಿ ಬರುತ್ತಿದೆ !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಇಗೋ, ಯೆಹೋವನ ದಿನವು ಬರುತ್ತಿದೆ; ಅದು ಭೂವಿುಯನ್ನು ಹಾಳುಮಾಡಿ ಪಾಪಿಗಳನ್ನು ನಿರ್ಮೂಲಪಡಿಸುವದಕ್ಕೆ [ಆತನ] ಕೋಪೋದ್ರೇಕದಿಂದಲೂ ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭಯಂಕರವಾದ ದಿನವಾಗಿದೆ. ದೇವರು ಅತ್ಯಂತ ಕೋಪದಿಂದ ದೇಶವನ್ನೆಲ್ಲಾ ನಾಶಮಾಡುವನು; ದುಷ್ಟಜನರನ್ನೆಲ್ಲಾ ದೇಶವನ್ನು ಬಿಟ್ಟುಹೋಗುವಂತೆ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 13:9
27 ತಿಳಿವುಗಳ ಹೋಲಿಕೆ  

“ಖಂಡಿತವಾಗಿ ಆ ದಿನ ಬರುತ್ತದೆ, ಅದು ಒಲೆಯಂತೆ ಉರಿಯುತ್ತದೆ. ಆಗ ಗರ್ವಿಷ್ಠರೆಲ್ಲರೂ ಕೆಟ್ಟದ್ದನ್ನು ಮಾಡುವವರೆಲ್ಲರೂ ಹುಲ್ಲಿನಂತಿರುವರು. ಬರುವ ಆ ದಿನವು ಅವರನ್ನು ಸುಟ್ಟುಬಿಡುವುದು. ಬೇರನ್ನಾದರೂ, ಕೊಂಬೆಯನ್ನಾದರೂ ಅವರಿಗೆ ಬಿಡದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಅವರ ರೌದ್ರದ ಎದುರಿಗೆ ಯಾರು ನಿಲ್ಲುವರು? ಅವರ ರೋಷಾಗ್ನಿಯಲ್ಲಿ ಯಾರು ನಿಂತುಕೊಳ್ಳುವರು? ಅವರ ಕೋಪಾಗ್ನಿ ಬೆಂಕಿಯ ಹಾಗೆ ಸುರಿಸಲಾಗಿದೆ; ಬಂಡೆಗಳು ಆತನ ಮುಂದೆ ಕೆಡವಲಾಗಿವೆ.


ನೀವು ಗೋಳಾಡಿರಿ. ಏಕೆಂದರೆ, ಯೆಹೋವ ದೇವರ ದಿನವು ಸಮೀಪವಾಯಿತು. ಅದು ಸರ್ವಶಕ್ತರಿಂದ ನಾಶರೂಪವಾಗಿ ಬರುವುದು.


ಯೆಹೋವ ದೇವರು ಅಸೂಯೆಪಡುವ ಮತ್ತು ಸೇಡು ತೀರಿಸಿಕೊಳ್ಳುವ ದೇವರು. ಅವರು ತಮ್ಮನ್ನು ಎದುರಿಸುವವರನ್ನು ಎದುರಿಸುತ್ತಾರೆ. ಯೆಹೋವ ದೇವರು ರೋಷದಿಂದ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ. ಯೆಹೋವ ದೇವರು ತಮ್ಮ ವೈರಿಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ಶತ್ರುಗಳ ಮೇಲೆ ಕೋಪವನ್ನು ಪ್ರಕಟಿಸಿಕೊಳ್ಳುತ್ತಾರೆ.


ಪಾಪಿಗಳು ಭೂಮಿಯೊಳಗಿಂದ ಮುಗಿದು ಹೋಗಲಿ; ದುಷ್ಟರು ಇಲ್ಲದೆ ಹೋಗಲಿ. ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು. ಯೆಹೋವ ದೇವರಿಗೆ ಸ್ತೋತ್ರವಾಗಲಿ.


ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲಾಗುವರು; ದ್ರೋಹಿಗಳು ಬೇರುಸಹಿತವಾಗಿ ಕಿತ್ತುಹಾಕಲಾಗುವರು.


ಆದ್ದರಿಂದ ಒಂದೇ ದಿನದಲ್ಲಿ ಆಕೆಯ ಉಪದ್ರವಗಳಾಗಿರುವ ಮರಣ, ಗೋಳಾಟ ಮತ್ತು ಕ್ಷಾಮವು ಬರುವುವು. ಆಕೆಯನ್ನು ತೀರ್ಪುಮಾಡುವ ಕರ್ತದೇವರು ಶಕ್ತರಾಗಿರುವುದರಿಂದ ಆಕೆಯು ಬೆಂಕಿಯಿಂದ ನಾಶವಾಗುವಳು.”


ಸೇನಾಧೀಶ್ವರ ಯೆಹೋವ ದೇವರ ಕೋಪದಿಂದ ದೇಶವು ಒಣಗಿಹೋಗಿದೆ, ಜನರು ಉರಿಯುವ ಸೌದೆಯಂತಿದ್ದಾರೆ. ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವುದಿಲ್ಲ.


ಯೆಹೋವ ದೇವರ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ಇಸ್ರಾಯೇಲ್ ಮನೆತನದವರ ಸುತ್ತಲೂ ಗೋಡೆಯನ್ನು ಕಟ್ಟಲಿಲ್ಲ, ನೀವು ಪೌಳಿಯ ಒಡಕುಗಳನ್ನೇರಲಿಲ್ಲ.


ಆ ದಿನ ಭಯಂಕರವಾದದ್ದು! ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು.


ಯೆಹೋವ ದೇವರ ಭಯಂಕರವಾದ ಮಹಾದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.


ಆದರೆ ಮೇರೆ ಮೀರುವ ಪ್ರಳಯದಿಂದ ನಿನೆವೆಯನ್ನು ಮುಗಿಸಿಬಿಡುವರು. ಕತ್ತಲೆ ಅವರ ಶತ್ರಗಳನ್ನು ಹಿಂದಟ್ಟುವುದು.


ಯೆಹೋವ ದೇವರ ದಿನವು ಬರುತ್ತದೆ. ಓ ಯೆರೂಸಲೇಮೇ, ಆ ದಿನದಲ್ಲಿ ನಿನ್ನ ಐಶ್ವರ್ಯವು ಸೂರೆಯಾಗುವುದು. ಮತ್ತು ಸೂರೆಯಾದದ್ದೆಲ್ಲ ನಿನ್ನ ಗೋಡೆಗಳ ಮಧ್ಯದಲ್ಲಿ ಹಂಚಿಹೋಗುವುದು.


ಸೇನಾಧೀಶ್ವರ ಯೆಹೋವ ದೇವರ ದಿನವು ಗರ್ವ ಹಾಗೂ ಅಹಂಭಾವದಿಂದ ತುಂಬಿರುವವರ ಮೇಲೆಯೂ, ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವುದು, ದೇವರು ಅವರನ್ನು ತಗ್ಗಿಸುವರು.


ಏಕೆಂದರೆ ಅದು ಯೆಹೋವ ದೇವರು ಮುಯ್ಯಿ ತೀರಿಸುವ ದಿನವಾಗಿದೆ, ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರುಷವು ಒದಗಿದೆ.


ಏಕೆಂದರೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು ನನ್ನ ಹೃದಯದಲ್ಲಿದೆ. ನಾನು ವಿಮೋಚಿಸಿದವರ ವರುಷವು ಬಂತು.


“ತೋಟಗಳಲ್ಲಿ ಒಬ್ಬರ ಹಿಂದೊಬ್ಬರು ಮಧ್ಯದಲ್ಲಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು, ಪವಿತ್ರ ಮಾಡಿಕೊಳ್ಳುವವರೂ; ಹಂದಿ ಮಾಂಸವನ್ನೂ, ಅಸಹ್ಯವಾದದ್ದನ್ನೂ, ಇಲಿಯನ್ನೂ ತಿನ್ನುವವರು ಒಟ್ಟಾಗಿ ದಹಿಸಿ ಹೋಗುವರು,” ಎಂದು ಯೆಹೋವ ದೇವರು ಹೇಳುತ್ತಾರೆ.


ಏಕೆಂದರೆ ಆ ದಿನವು ಸಮೀಪವಾಯಿತು, ಯೆಹೋವ ದೇವರ ದಿನವು, ಆ ಕಾರ್ಮುಗಿಲಿನ ದಿನವು ಸಮೀಪವಾಯಿತು. ಅದೇ ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವದು.


ನೀವು ಚೀಯೋನಿನಲ್ಲಿ ಕೊಂಬು ಊದಿರಿ. ನನ್ನ ಪರಿಶುದ್ಧ ಪರ್ವತದಲ್ಲಿ ಆರ್ಭಟಿಸಿರಿ. ದೇಶದ ನಿವಾಸಿಗಳೆಲ್ಲರು ನಡುಗಲಿ. ಏಕೆಂದರೆ ಯೆಹೋವ ದೇವರ ದಿವಸವು ಬರುತ್ತದೆ. ಅದು ಸಮೀಪವಾಗಿದೆ.


ಆ ದಿವಸವು ರೌದ್ರದ ದಿವಸವು, ಇಕ್ಕಟ್ಟು ಸಂಕಟಗಳ ದಿವಸವು, ಹಾಳುಪಾಳುಗಳ ದಿವಸವು, ಕತ್ತಲೆ ಮಬ್ಬುಗಳ ದಿವಸವು, ಕಾರ್ಮುಗಿಲ ಕಗ್ಗತ್ತಲ ದಿವಸವು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು