Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 11:1 - ಕನ್ನಡ ಸಮಕಾಲಿಕ ಅನುವಾದ

1 ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು ಮತ್ತು ಅದರ ಬೇರಿನಿಂದ ಕೊಂಬೆಯು ಫಲಕೊಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇಷಯನ ಬೇರಿನಿಂದ ಒಂದು ಚಿಗುರು ಒಡೆಯುವುದು ಮತ್ತು ಅದರ ಬೇರಿನಿಂದ ಹೊರಟ ಕೊಂಬೆಯು ಫಲಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇಷಯನ ಬುಡದಿಂದ ಒಂದು ಚಿಗುರು ಒಡೆಯುವದು, ಅದರ ಬೇರಿನಿಂದ ಹೊರಟ ತಳಿರು ಫಲಿಸುವದು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು. ಆ ಕೊಂಬೆಯು ಇಷಯನ ಬೇರಿನಿಂದ ಬೆಳೆಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 11:1
26 ತಿಳಿವುಗಳ ಹೋಲಿಕೆ  

“ಇಗೋ, ದಿನಗಳು ಬರಲಿವೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆಗ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಎಬ್ಬಿಸುತ್ತೇನೆ. ಒಬ್ಬ ಅರಸನು ರಾಜ್ಯವನ್ನಾಳಿ ವೃದ್ಧಿಯಾಗುವನು. ಭೂಮಿಯಲ್ಲಿ ನ್ಯಾಯವನ್ನೂ, ನೀತಿಯನ್ನೂ ನಡೆಸುವನು.


“ಯೇಸುವೆಂಬ ನಾನು ನಮ್ಮ ಸಭೆಗಳಲ್ಲಿ ಈ ಸಂಗತಿಗಳ ವಿಷಯವಾಗಿ ನಿಮಗೆ ಸಾಕ್ಷಿ ನೀಡುವಂತೆ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ವಂಶದ ಕುಡಿ, ಅವನ ಸಂತತಿಯೂ ಉದಯದ ಪ್ರಕಾಶಮಾನ ತಾರೆಯೂ ಆಗಿದ್ದೇನೆ!” ಎಂದರು.


ಅವನಿಗೆ ಹೇಳತಕ್ಕದ್ದೇನೆಂದರೆ: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ರೆಂಬೆ,’ ಎಂದು ಹೆಸರುಳ್ಳ ಮನುಷ್ಯನು, ತನ್ನ ಸ್ಥಳದೊಳಗಿಂದ ರೆಂಬೆಯನ್ನು ತೆಗೆದುಹಾಕಿ, ಯೆಹೋವ ದೇವರ ಆಲಯವನ್ನು ಕಟ್ಟುವನು.


ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ನೋಡು, ಯೂದ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ವಂಶಜರೂ ಆಗಿರುವವರು ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನು ಬಿಚ್ಚುವುದಕ್ಕೆ ಜಯವೀರರಾಗಿದ್ದಾರೆ,” ಎಂದು ಹೇಳಿದನು.


“ಮಹಾಯಾಜಕನಾದ ಯೆಹೋಶುವನೇ, ನೀನೂ, ನಿನ್ನ ಮುಂದೆ ಕುಳಿತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ. ಅವರು ಆಶ್ಚರ್ಯವನ್ನುಂಟುಮಾಡುವ ಮನುಷ್ಯರಾಗಿದ್ದಾರೆ. ನಾನು ‘ರೆಂಬೆ’ ಎಂಬ ನನ್ನ ಸೇವಕನನ್ನು ಬರಮಾಡುವೆನು ಎಂಬುದಕ್ಕೆ ಇವರೇ ಮುಂಗುರುತು.


“ ‘ಆ ದಿನಗಳಲ್ಲಿಯೂ ಆ ಕಾಲದಲ್ಲಿಯೂ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಚಿಗುರ ಮಾಡುವೆನು. ಆತನು ದೇಶದಲ್ಲಿ ನ್ಯಾಯವನ್ನೂ, ನೀತಿಯನ್ನೂ ನಡೆಸುವನು.


ಅವನು ಚಿಗುರಿನಂತೆಯೂ, ಒಣ ನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಯೆಹೋವ ದೇವರ ಮುಂದೆ ಬೆಳೆಯುವನು. ಅವನಿಗೆ ಯಾವ ಸೌಂದರ್ಯವಾಗಲಿ ಇಲ್ಲವೆ ಘನತೆಯಾಗಲಿ ಇರಲಿಲ್ಲ. ನಾವು ಅವನನ್ನು ನೋಡಿದಾಗ, ಅವನಲ್ಲಿ ಆಕರ್ಷಿಸತಕ್ಕ ಯಾವ ಚಂದವು ಇರಲಿಲ್ಲ.


ಅವರ ಆಡಳಿತದ ಶ್ರೇಷ್ಠತೆ ಮತ್ತು ಶಾಂತಿಗೆ ಅಂತ್ಯವಿಲ್ಲ. ಅವರ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವುದು, ದಾವೀದನ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು, ಸೇನಾಧೀಶ್ವರ ಯೆಹೋವ ದೇವರ ಅನುಗ್ರಹವು ಇದನ್ನು ನೆರವೇರಿಸುವುದು.


ಪುನಃ ಪ್ರವಾದಿ ಯೆಶಾಯನು ಹೇಳುವುದೇನೆಂದರೆ: “ಇಷಯನ ವಂಶದಿಂದ ಬೇರು ಒಂದು ಚಿಗುರುವುದು, ಜನಾಂಗಗಳನ್ನು ಆಳುವವರಾಗಿ ಅವರು ಉದಯಿಸುವರು. ಯೆಹೂದ್ಯರಲ್ಲದವರು ಆತನಲ್ಲಿ ನಿರೀಕ್ಷೆ ಇಡುವರು.”


ಆ ದಿನದಲ್ಲಿ ಯೆಹೋವ ದೇವರ ಕೊಂಬೆಯು ಸುಂದರವಾಗಿಯೂ, ಮಹಿಮೆಯುಳ್ಳದ್ದಾಗಿಯೂ ಇರುವುದು. ಭೂಮಿಯ ಫಲವು ಇಸ್ರಾಯೇಲರಲ್ಲಿ ಉಳಿದವರಿಗೆ ಅಭಿಮಾನವೂ, ರಮ್ಯವಾಗಿಯೂ ಇರುವುದು.


ಆ ದಿನದಲ್ಲಿ ಇಷಯನ ವಂಶದಿಂದ ಜನರಿಗೆ ಒಂದು ಬೇರು ಗುರುತಿನ ಧ್ವಜವಾಗಿ ನಿಲ್ಲುವುದು. ಅವರ ವಿಶ್ರಾಂತಿ ಸ್ಥಳವು ಮಹಿಮೆಯುಳ್ಳದ್ದಾಗಿರುವುದು.


ಆಗ ಸೌಲನು, “ಯೌವನಸ್ಥನೇ, ನೀನು ಯಾರ ಮಗನು?” ಎಂದು ಅವನನ್ನು ಕೇಳಿದನು. ಅದಕ್ಕೆ ದಾವೀದನು, “ನಾನು ನಿನ್ನ ಸೇವಕನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು,” ಎಂದನು.


ಆಗ ನೆರೆಹೊರೆಯ ಸ್ತ್ರೀಯರು ನೊವೊಮಿಗೆ, “ಒಬ್ಬ ಮಗನು ಹುಟ್ಟಿದ್ದಾನೆ,” ಎಂದು ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ದಾವೀದನ ತಂದೆಯಾದ ಇಷಯನಿಗೆ ತಂದೆಯಾದವನು.


ಕ್ರಿಸ್ತ ಯೇಸುವಿನ ವಂಶಾವಳಿಯ ದಾಖಲೆ. ಯೇಸು ದಾವೀದನ ವಂಶದವರು, ದಾವೀದನು ಅಬ್ರಹಾಮನ ವಂಶದವನು:


ಹೀಗೆ ನಮ್ಮ ಕರ್ತ ಯೇಸು ಯೂದಾ ಗೋತ್ರಕ್ಕೆ ಸೇರಿದವರೆಂದು ತಿಳಿದ ಸಂಗತಿಯಾಗಿದೆ. ಈ ಗೋತ್ರವನ್ನು ಸಂಬಂಧಿಸಿ ಮೋಶೆಯು ಯಾಜಕರ ವಿಷಯವಾಗಿ ಏನನ್ನೂ ಹೇಳಲಿಲ್ಲ.


ಇಸ್ರಾಯೇಲಿನ ದೇವರೂ, ಇಸ್ರಾಯೇಲಿನ ಬಂಡೆಯಾದವರೂ ನನಗೆ ಮಾತನಾಡಿದ್ದು: ‘ಮನುಷ್ಯರ ಮೇಲೆ ನೀತಿಯಿಂದ ಆಳುವವನು, ದೇವರ ಭಯದಿಂದ ಆಳುವವನು.


ಆದರೆ ದೇಶದಲ್ಲಿ ಹತ್ತನೆಯ ಪಾಲು ಉಳಿದಿದ್ದರೂ, ಅದು ಕೂಡ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ ಉಳಿಯುವುದು ಬುಡ ಮಾತ್ರ. ಅದೇ ರೀತಿಯಾಗಿ ಪವಿತ್ರ ಜನರು ದೇಶದಲ್ಲಿ ಬುಡವಾಗಿ ಉಳಿದಿರುವರು.”


ಏಕೆಂದರೆ ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನನ್ನು ನಮಗಾಗಿ ಕೊಡಲಾಗಿದೆ. ಆಡಳಿತವು ಅವರ ಬಾಹುವಿನ ಮೇಲಿರುವುದು, ಅದ್ಭುತವಾದವರು ಸಮಾಲೋಚಕರು, ಪರಾಕ್ರಮಿಯಾದ ದೇವರು, ನಿತ್ಯರಾದ ತಂದೆ, ಸಮಾಧಾನದ ಪ್ರಭು, ಎಂಬುದು ಅವರ ಹೆಸರಾಗಿರುವುದು.


ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ನಿಮ್ಮ ಪಿತೃಗಳು ವಾಸಮಾಡಿದ ಆ ದೇಶದಲ್ಲಿಯೂ ಅವರೂ ಅವರ ಮಕ್ಕಳೂ ಮತ್ತು ಅವರ ಮೊಮ್ಮಕ್ಕಳೂ ಎಂದೆಂದಿಗೂ ಅಲ್ಲಿಯೇ ವಾಸಮಾಡುವರು; ನನ್ನ ಸೇವಕನಾದ ದಾವೀದನು ಎಂದೆಂದಿಗೂ ಅವರಿಗೆ ರಾಜಕುಮಾರನಾಗಿರುವನು.


ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗೋತ್ರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಮೂಲವು ಪೂರ್ವದಿಂದಲೂ ಅನಾದಿ ಕಾಲದಿಂದಲೂ ಆದದ್ದು.


ಬೋವಜನು ಓಬೇದನ ತಂದೆ, ಓಬೇದನು ಇಷಯನ ತಂದೆ.


ನಿಮ್ಮ ರಾಜ್ಯದ ಮಹಿಮೆಯನ್ನು ಹೇಳುವರು; ನಿಮ್ಮ ಪರಾಕ್ರಮವನ್ನು ನುಡಿಯುವರು.


“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಉನ್ನತವಾದ ದೇವದಾರಿನ ಎತ್ತರವಾದ ರೆಂಬೆಗಳನ್ನು ತೆಗೆದುಕೊಂಡು ಅದನ್ನು ನೆಡುವೆನು. ಇದರ ತುದಿಯಲ್ಲಿರುವ ಎಳೆಯದಾದ ಕೊಂಬೆಯನ್ನು ಕತ್ತರಿಸಿ, ಎತ್ತರವಾದ ಪರ್ವತದ ಮೇಲೆ ನಾಟುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು