Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 9:12 - ಕನ್ನಡ ಸಮಕಾಲಿಕ ಅನುವಾದ

12 ಇದನ್ನು ಗ್ರಹಿಸುವ ಜ್ಞಾನಿಯಾದ ಮನುಷ್ಯನು ಯಾರು? ಇದನ್ನು ತಿಳಿಸುವ ಹಾಗೆ ಯೆಹೋವ ದೇವರ ಬಾಯಿ ಯಾರ ಸಂಗಡ ಮಾತನಾಡಿತು? ದೇಶವು ಯಾವುದಕ್ಕಾಗಿ ನಾಶವಾಗಿ ಹಾದು ಹೋಗುವವನಿಲ್ಲದೆ ಮರುಭೂಮಿಯ ಹಾಗೆ ಹಾಳಾಯಿತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯಾರೂ ದಾಟದ ಹಾಗೆ ದೇಶವು ಹಾಳಾಗಿ ಕಾಡಿನಂತೆ ಸುಟ್ಟು ಹೋದದ್ದು ಏಕೆ? ಈ ವಿಚಾರವನ್ನು ಗ್ರಹಿಸತಕ್ಕ ಜ್ಞಾನಿಯು ಯಾರು? ಅದನ್ನು ಯೆಹೋವನ ಬಾಯಿಂದಲೇ ಕೇಳಿ ತಿಳಿಸಬಲ್ಲವನು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಾನು : “ಈ ನಾಡು ಯಾರೂ ಹಾದುಹೋಗದಷ್ಟು ಹಾಳಾಗಿ ಕಾಡಿನಂತೆ ಸುಟ್ಟುಹೋದದ್ದು ಏಕೆ? ಈ ವಿಷಯವನ್ನು ಗ್ರಹಿಸತಕ್ಕ ಜ್ಞಾನಿ ಯಾರು? ಅದನ್ನು ಸರ್ವೇಶ್ವರನ ಬಾಯಿಂದಲೆ ಕೇಳಿ ತಿಳಿಸಬಲ್ಲವನಾರು?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಯಾರೂ ದಾಟದ ಹಾಗೆ ದೇಶವು ಹಾಳಾಗಿ ಕಾಡಿನಂತೆ ಸುಟ್ಟುಹೋದದ್ದು ಏಕೆ? ಈ ವಿಚಾರವನ್ನು ಗ್ರಹಿಸತಕ್ಕ ಜ್ಞಾನಿಯು ಯಾರು? ಅದನ್ನು ಯೆಹೋವನ ಬಾಯಿಂದಲೇ ಕೇಳಿ ತಿಳಿಸಬಲ್ಲವನು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಈ ಭೂಮಿಯನ್ನು ಏಕೆ ಹಾಳು ಮಾಡಲಾಯಿತು? ಇದನ್ನು ಯಾರೂ ಹೋಗದ ಬರಿದಾದ ಮರಳುಗಾಡನ್ನಾಗಿ ಏಕೆ ಮಾಡಲಾಯಿತು? ಇದನ್ನರಿತ ಜ್ಞಾನಿಯೊಬ್ಬನಿದ್ದಾನೆಯೇ? ಯೆಹೋವನಿಂದ ತಿಳಿದುಕೊಂಡ ಜ್ಞಾನಿಯೊಬ್ಬನಿದ್ದಾನೆಯೇ? ಯೆಹೋವನ ಸಂದೇಶವನ್ನು ವಿವರಿಸಬಲ್ಲವನೊಬ್ಬನಿದ್ದಾನೆಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 9:12
22 ತಿಳಿವುಗಳ ಹೋಲಿಕೆ  

ಯಾರು ಬುದ್ಧಿವಂತರು? ಅವರು ಈ ಸತ್ಯಗಳನ್ನು ಅರ್ಥಮಾಡಿಕೊಳ್ಳಲಿ. ಯಾರು ವಿವೇಚನೆಯುಳ್ಳವರು? ಅವರು ಇವುಗಳನ್ನು ತಿಳಿದುಕೊಳ್ಳಲಿ. ಏಕೆಂದರೆ, ಯೆಹೋವ ದೇವರ ಮಾರ್ಗಗಳು ನ್ಯಾಯವಾಗಿವೆ. ನೀತಿವಂತರು ಅದರಲ್ಲಿ ನಡೆಯುವರು. ಆದರೆ ಅಕ್ರಮಗಾರರು ಅವುಗಳಿಂದ ಎಡವಿಬೀಳುವರು.


ಜ್ಞಾನಿಗಳು ಇವುಗಳನ್ನು ಗಮನಿಸಲಿ, ಯೆಹೋವ ದೇವರ ಪ್ರೀತಿಕೃತ್ಯಗಳನ್ನು ಗ್ರಹಿಸಿಕೊಳ್ಳಲಿ.


ದೇವರು ಫಲವುಳ್ಳ ಭೂಮಿಯನ್ನು ಬಂಜರಾಗುವಂತೆ ಮಾಡಿದರು. ಇದಕ್ಕೆಲ್ಲ ಕಾರಣ ಅದರ ನಿವಾಸಿಗಳ ಕೆಟ್ಟತನವೇ ಆಗಿತ್ತು.


ಅವರಿಗೆ ಜ್ಞಾನವಿದ್ದಿದ್ದರೆ ಈ ವಿಷಯಗಳನ್ನೆಲ್ಲಾ ಗ್ರಹಿಸುತ್ತಿದ್ದರು, ತಮ್ಮ ಕಡೆಕಾಲದಲ್ಲಿ ದುರವಸ್ಥೆ ಪ್ರಾಪ್ತವಾಗುವದೆಂದು ತಿಳಿದುಕೊಳ್ಳುತ್ತಿದ್ದರು.


ಈ ಪ್ರವಾದನೆಯ ವಾಕ್ಯಗಳನ್ನು ಓದುವಂಥವರೂ ಕೇಳುವಂಥವರೂ ಈ ಪ್ರವಾದನೆಯ ವಾಕ್ಯಗಳಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು. ಏಕೆಂದರೆ ಸಮಯವು ಸಮೀಪವಾಗಿದೆ.


“ಆದ್ದರಿಂದ ಪ್ರವಾದಿ ದಾನಿಯೇಲನಿಂದ ಹೇಳಿದ ಹಾಗೆ ‘ಅಸಹ್ಯ ವಸ್ತು’ ಪವಿತ್ರ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ, ಓದುವವನು ತಿಳಿದುಕೊಳ್ಳಲಿ.


ನೀವು ಅವರ ದುರ್ಮಾರ್ಗಗಳನ್ನೂ ದುಷ್ಕೃತ್ಯಗಳನ್ನೂ ನೋಡುವಾಗ ಅದರಿಂದಲೇ ನಿಮಗೆ ಸಮಾಧಾನವಾಗುವುದು; ನಾನು ಅದರೊಳಗೆ ಮಾಡಿದ್ದೆಲ್ಲಾ ಕಾರಣವಿಲ್ಲದೆ ಮಾಡಲಿಲ್ಲವೆಂದು ತಿಳಿದುಕೊಳ್ಳುವಿರಿ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”


ನಿಮ್ಮಲ್ಲಿ ಯಾರು ಇವುಗಳಿಗೆ ಕಿವಿಗೊಡುವರು? ಯಾರು ಇನ್ನು ಮುಂದೆ ಆಲಿಸಿ ಕೇಳುವರು?


ಆದ್ದರಿಂದ ಓ ಸ್ತ್ರೀಯರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ನಿಮ್ಮ ಕಿವಿಯು ಆತನ ಬಾಯಿಯ ವಾಕ್ಯವನ್ನು ಅಂಗೀಕರಿಸಲಿ. ನಿಮ್ಮ ಪುತ್ರಿಯರಿಗೆ ಗೋಳಾಟವನ್ನೂ, ನಿಮ್ಮ ನಿಮ್ಮ ನೆರೆಯವರಿಗೆ ಪ್ರಲಾಪವನ್ನೂ ಕಲಿಸಿರಿ.


ಏಕೆಂದರೆ ದೇಶವು ವ್ಯಭಿಚಾರಗಳಿಂದ ತುಂಬಿದೆ. ದೇಶವು ಶಾಪದಿಂದ ದುಃಖಿಸುತ್ತದೆ. ಮರುಭೂಮಿಯ ಮನೋಹರವಾದ ಸ್ಥಳಗಳು ಒಣಗಿ ಹೋಗಿವೆ. ಪ್ರವಾದಿಗಳು ಕೆಟ್ಟ ಮಾರ್ಗವನ್ನು ಅನುಸರಿಸುತ್ತಾರೆ ಮತ್ತು ತಮ್ಮ ಶಕ್ತಿಯನ್ನು ಅನ್ಯಾಯವಾಗಿ ಬಳಸುತ್ತಾರೆ.


ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮಗೆ ಪ್ರವಾದಿಸುವ ಪ್ರವಾದಿಗಳ ವಾಕ್ಯಕ್ಕೆ ಕಿವಿಗೊಡಬೇಡಿರಿ. ಅವರು ನಿಮ್ಮಲ್ಲಿ ವ್ಯರ್ಥವಾದ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ. ಯೆಹೋವ ದೇವರ ಬಾಯಿಂದಲ್ಲ, ಸ್ವಂತ ಹೃದಯದಿಂದ ದರ್ಶನವನ್ನು ಹೇಳುತ್ತಾರೆ.


ಆದರೆ ಅವರು ನನ್ನ ಆಲೋಚನಾ ಸಭೆಯಲ್ಲಿ ನಿಂತಿದ್ದರೆ, ಆಗ ಅವರು ಜನರಿಗೆ ನನ್ನ ವಾಕ್ಯಗಳನ್ನು ಹೇಳಿಕೊಟ್ಟು, ಅವರನ್ನು ತಮ್ಮ ಕೆಟ್ಟ ಮಾರ್ಗದಿಂದಲೂ, ತಮ್ಮ ಕ್ರಿಯೆಗಳ ಕೆಟ್ಟತನದಿಂದಲೂ ತಿರುಗಿಸುತ್ತಿದ್ದರು.”


ಕನಸುಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ ಆದರೆ ನನ್ನ ವಾಕ್ಯವನ್ನು ಕೇಳಿದವನು ಅದನ್ನು ಯಥಾರ್ಥವಾಗಿ ನುಡಿಯಲಿ. ಹೊಟ್ಟನ್ನು ಕಾಳಿನೊಂದಿಗೆ ಹೋಲಿಸಲಾದೀತೆ?” ಎಂದು ಯೆಹೋವ ದೇವರು ಹೇಳುತ್ತಾರೆ.


ರೈತರೇ, ರೋದಿಸಿರಿ, ತೋಟಗಾರರೇ, ಪರಿತಪಿಸಿರಿ; ಗೋಧಿ ಮತ್ತು ಜವೆಗೋಧಿಗಾಗಿ ದುಃಖಿಸಿ; ಏಕೆಂದರೆ ಹೊಲದ ಬೆಳೆ ನಾಶವಾಗಿದೆ.


“ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ. ಅವುಗಳ ಗೋಪುರಗಳು ಹಾಳಾಗಿವೆ. ಅವುಗಳ ಬೀದಿಗಳನ್ನು ಯಾರೂ ಹಾದುಹೋಗದ ಹಾಗೆ ಹಾಳುಮಾಡಿದ್ದೆನೆ. ಅವುಗಳ ಪಟ್ಟಣಗಳು ನಾಶವಾದವು. ಹೀಗೆ ಅಲ್ಲಿ ಯಾವನೂ ಇರುವುದಿಲ್ಲ; ಯಾವ ಮನುಷ್ಯನೂ ಅಲ್ಲಿ ವಾಸಿಸುವುದೂ ಇಲ್ಲ.


“ಏಕೆಂದರೆ ಅವರು ತಿಂದರೂ ಸಾಕಾಗುವುದಿಲ್ಲ. ಅವರು ವ್ಯಭಿಚಾರ ಮಾಡಿದರೂ ಅಭಿವೃದ್ಧಿ ಆಗುವುದಿಲ್ಲ. ಏಕೆಂದರೆ ಅವರು ಯೆಹೋವ ದೇವರನ್ನೇ ಬಿಟ್ಟುಬಿಟ್ಟಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು