ಯೆರೆಮೀಯ 9:10 - ಕನ್ನಡ ಸಮಕಾಲಿಕ ಅನುವಾದ10 ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ, ದುಃಖವನ್ನೂ, ಮರುಭೂಮಿಯ ಸ್ಥಳಗಳಿಗೋಸ್ಕರ ಗೋಳಾಟವನ್ನೂ ಎತ್ತುವೆನು. ಅವುಗಳ ಮೂಲಕ ಹಾದುಹೋಗದಂತೆ ಅವು ಸುಟ್ಟುಹೋಗಿದೆ. ದನಗಳ ಕೂಗು ಕಿವಿಗೆ ಬೀಳುವುದಿಲ್ಲ. ಆಕಾಶದ ಪಕ್ಷಿಗಳೂ, ಮೃಗಗಳೂ ಸಹ ಓಡಿ ಹೋಗಿವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 “ನಾನು ಪರ್ವತಗಳಿಗಾಗಿ ಅತ್ತು ಗೋಳಾಡುವೆನು, ಅಡವಿಯ ಕಾವಲುಗಳಿಗಾಗಿ ಶೋಕಗೀತೆಯನ್ನು ಹಾಡುವೆನು; ಅವು ಸುಟ್ಟುಹೋಗಿವೆ, ಯಾರೂ ಹಾದು ಹೋಗರು, ದನಕರುಗಳ ಶಬ್ದ ಕಿವಿಗೆ ಬೀಳದು, ಮೃಗ ಪಕ್ಷಿಗಳು ತೊಲಗಿಹೋಗಿವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ನಾನು : ಪರ್ವತಗಳಿಗಾಗಿ ಅತ್ತು ಗೋಳಾಡುವೆನು ಅಡವಿಯ ಕಾವಲುಗಳಿಗಾಗಿ ಶೋಕಗೀತೆಯನ್ನು ಹಾಡುವೆನು ಅವು ಸುಟ್ಟುಹೋಗಿವೆ, ಯಾರೂ ಅಲ್ಲಿ ಹಾದುಹೋಗರು. ದನಕರುಗಳ ಸದ್ದೂ ಕಿವಿಗೆ ಬೀಳದು ತೊಲಗಿಹೋಗಿವೆ ಮೃಗಪಕ್ಷಿಗಳೂ ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ನಾನು ಪರ್ವತಗಳಿಗಾಗಿ ಅತ್ತು ಗೋಳಾಡುವೆನು, ಅಡವಿಯ ಕಾವಲುಗಳಿಗಾಗಿ ಶೋಕಗೀತವನ್ನು ಹಾಡುವೆನು; ಅವು ಸುಟ್ಟುಹೋಗಿವೆ, ಯಾರೂ ಹಾದುಹೋಗರು, ದನದ ಸದ್ದು ಕಿವಿಗೆ ಬೀಳದು, ಮೃಗಪಕ್ಷಿಗಳು ತೊಲಗಿಹೋಗಿವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ನಾನು ಪರ್ವತಗಳಿಗಾಗಿ ಗಟ್ಟಿಯಾಗಿ ಅಳುವೆನು; ಬರಿದಾದ ಹೊಲಗಳಿಗಾಗಿ ಶೋಕಗೀತೆಯನ್ನು ಹಾಡುವೆನು. ಏಕೆಂದರೆ ಅಲ್ಲಿ ಸಜೀವ ವಸ್ತುಗಳಿಲ್ಲ. ಯಾರೂ ಅಲ್ಲಿ ತಿರುಗಾಡುವದಿಲ್ಲ. ಆ ಸ್ಥಳಗಳಲ್ಲಿ ದನಗಳ ಸದ್ದು ಕೇಳಿಸುವದಿಲ್ಲ. ಪಕ್ಷಿಗಳು ಹಾರಿಹೋಗಿವೆ; ಪ್ರಾಣಿಗಳು ಓಡಿಹೋಗಿವೆ. ಅಧ್ಯಾಯವನ್ನು ನೋಡಿ |