Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 8:2 - ಕನ್ನಡ ಸಮಕಾಲಿಕ ಅನುವಾದ

2 ಅವರು ಪ್ರೀತಿ ಮಾಡಿದಂಥ, ಸೇವಿಸಿದಂಥ, ಹಿಂಬಾಲಿಸಿದಂಥ, ಹುಡುಕಿದಂಥ, ಆರಾಧಿಸಿದಂಥ, ಸೂರ್ಯನ ಮುಂದೆಯೂ, ಚಂದ್ರನ ಮುಂದೆಯೂ, ಸಮಸ್ತ ಆಕಾಶ ಸೈನ್ಯದ ಮುಂದೆಯೂ ಅವುಗಳನ್ನು ತೆರೆದಿಡುವರು; ಹೌದು, ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರವಾಗುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅನಂತರ ಅವರು ಅದನ್ನು ತಾವು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ ಪೂಜಿಸಿದ ಸೂರ್ಯ, ಚಂದ್ರ ತಾರಾಗಣಗಳ ಎದುರಿಗೆ ಹರಡಿಬಿಡುವರು. ಅವುಗಳನ್ನು ಯಾರೂ ಕೂಡಿಸಿ ಹೂಣಿಡುವುದಿಲ್ಲ; ಅವು ಭೂಮಿಯ ಮೇಲೆ ಗೊಬ್ಬರವಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅವರು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ, ಪೂಜಿಸಿದ ಸೂರ್ಯ,‍ ಚಂದ್ರ, ತಾರಾಗಣಗಳ ಎದುರಿಗೇ ಆ ಎಲುಬುಗಳನ್ನು ಹರಡಿಬಿಡುವರು. ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಆಶ್ರಯಿಸಿ ಪೂಜಿಸಿದ ಸೂರ್ಯಚಂದ್ರತಾರಾಗಣಗಳ ಎದುರಿಗೆ ಹರಡಿಬಿಡುವರು; ಅವುಗಳನ್ನು ಯಾರೂ ಕೂಡಿಸಿ ಹೂಣಿಡುವದಿಲ್ಲ; ಅವು ಭೂವಿುಯ ಮೇಲೆ ಗೊಬ್ಬರವಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಜೆರುಸಲೇಮಿನ ಜನರು ಸೂರ್ಯನನ್ನು, ಚಂದ್ರನನ್ನು, ನಕ್ಷತ್ರಗಣಗಳನ್ನು ಪ್ರೀತಿಸಿ, ಅನುಸರಿಸಿ, ವಿಚಾರಿಸಿ, ಪೂಜಿಸಿದ್ದರಿಂದ ಅವರ ಎಲುಬುಗಳನ್ನು ಅವುಗಳ ಕೆಳಗೆ ಭೂಮಿಯ ಮೇಲೆ ಹರಡುವರು. ಯಾರೊಬ್ಬರೂ ಆ ಎಲುಬುಗಳನ್ನು ಪುನಃ ಒಂದೆಡೆ ಸೇರಿಸಿ ಹೂಳುವುದಿಲ್ಲ. ಆ ಎಲುಬುಗಳು ಭೂಮಿಯ ಮೇಲೆ ಎಸೆದ ಸಗಣಿಯಂತಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 8:2
32 ತಿಳಿವುಗಳ ಹೋಲಿಕೆ  

ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಪೂಜಾಸ್ಥಳಗಳಲ್ಲಿಯೂ, ಯೆರೂಸಲೇಮಿನ ಸುತ್ತಲಿರುವ ಉನ್ನತ ಪೂಜಾಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸರು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ, ಸೂರ್ಯನಿಗೂ, ಚಂದ್ರನಿಗೂ, ಗ್ರಹಗಳಿಗೂ, ಆಕಾಶದ ಸಮಸ್ತ ಸೈನ್ಯಕ್ಕೂ, ಧೂಪಸುಡುವವರನ್ನೂ ತೆಗೆದುಹಾಕಿದನು.


ಆದರೆ ದೇವರು ಅವರಿಗೆ ವಿಮುಖನಾಗಿ, ಆಕಾಶದ ಗ್ರಹಗಳನ್ನೇ ಆರಾಧಿಸುವಂತೆ ಅವರನ್ನು ಬಿಟ್ಟುಬಿಟ್ಟರು. ಇದರ ವಿಷಯವಾಗಿ ಪ್ರವಾದಿಗಳ ಗ್ರಂಥದಲ್ಲಿ: “ ‘ಇಸ್ರಾಯೇಲಿನ ಮನೆತನದವರೇ, ನಲವತ್ತು ವರ್ಷ ಅರಣ್ಯದಲ್ಲಿ ಯಜ್ಞಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಿದ್ದು ನನಗಲ್ಲ.


ಯೆಹೋವ ದೇವರು ನನಗೆ ಹೀಗೆಂದರು: “ ‘ಮನುಷ್ಯರ ಹೆಣಗಳು ಗೊಬ್ಬರದಂತೆ ಬಯಲಿನಲ್ಲಿ ಬೀಳುವುವು. ಧಾನ್ಯ ಕೊಯ್ಯುವವನು ಉಳಿಸಿದ ಕೈಹಿಡಿಯಂತೆ ಕೂಡಿಸುವವನಿಲ್ಲದೆ ಬೀಳುವುವು.’ ”


ನೀವು ನಿಮ್ಮ ಕಣ್ಣುಗಳನ್ನು ಆಕಾಶಕ್ಕೆ ಎತ್ತಿ, ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ, ನಿಮ್ಮ ದೇವರಾದ ಯೆಹೋವ ದೇವರು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಕೊಟ್ಟಿದ್ದಾರೆ. ನೀವು ಅವುಗಳಿಗೆ ಅಡ್ಡಬಿದ್ದು, ಮರುಳುಗೊಂಡು ಅವುಗಳನ್ನು ಪೂಜಿಸದಂತೆಯೂ ನೋಡಿಕೊಳ್ಳಿರಿ.


ಮಾಳಿಗೆಗಳ ಮೇಲೆ ತಲೆಬಾಗಿಸಿ ಆಕಾಶದ ನಕ್ಷತ್ರಗಣಕ್ಕೆ ಆರಾಧಿಸುವವರನ್ನೂ ಯೆಹೋವ ದೇವರ ಮೇಲೆಯೂ ಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ


ಆಗ ಅವನು ನನ್ನನ್ನು ಯೆಹೋವ ದೇವರ ಆಲಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಬಂದನು. ಇಗೋ, ಯೆಹೋವ ದೇವರ ಮಂದಿರದ ಬಾಗಿಲಲ್ಲಿ ದ್ವಾರಾಂಗಳಕ್ಕೂ, ಬಲಿಪೀಠಕ್ಕೂ ಮಧ್ಯದಲ್ಲಿ ಸುಮಾರು ಇಪ್ಪತ್ತೈದು ಮಂದಿಯು ಯೆಹೋವ ದೇವರ ಮಂದಿರಕ್ಕೆ ಬೆನ್ನುಹಾಕಿ, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನಿಟ್ಟು, ಸೂರ್ಯನಮಸ್ಕಾರ ಮಾಡುತ್ತಿದ್ದರು.


ಆದ್ದರಿಂದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: ದಾವೀದನ ಸಿಂಹಾಸನದಲ್ಲಿ ಕುಳಿತುಕೊಳ್ಳುವವನು ಅವನಿಗೆ ಇರುವುದಿಲ್ಲ. ಅವನ ಹೆಣವು ಹಗಲಿನಲ್ಲಿ ಬಿಸಿಲಿಗೂ, ರಾತ್ರಿಯಲ್ಲಿ ಹಿಮಕ್ಕೂ ಬಿಸಾಡಲಾಗುವುದು.


ಕತ್ತೆಯನ್ನು ಹೂಳಿಡುವ ಪ್ರಕಾರ ಅವನನ್ನು ಹೂಳಿಡುವರು. ಅವನನ್ನು ಎಳೆದುಕೊಂಡು ಹೋಗಿ, ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.”


ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ಸೈನ್ಯಕ್ಕೆಲ್ಲಾ ಧೂಪ ಸುಟ್ಟು, ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯ್ದಿದ್ದಾರೋ, ಆ ಎಲ್ಲಾ ಮನೆಗಳ ನಿಮಿತ್ತವಾಗಿ ಯೆರೂಸಲೇಮಿನ ಮನೆಗಳೂ, ಯೆಹೂದದ ಅರಸರ ಮನೆಗಳೂ ತೋಫೆತಿನ ಸ್ಥಳದ ಹಾಗೆ ಅಶುದ್ಧವಾಗುವುವು, ಎಂಬುದೇ.’ ”


“ಅವರು ಮರಣಕರವಾದ ಬೇನೆಗಳಿಂದ ಸಾಯುವರು. ಅವರಿಗೋಸ್ಕರ ಗೋಳಾಟ ಆಗುವುದಿಲ್ಲ. ಅವರಿಗೆ ಸಮಾಧಿಯಾಗುವುದಿಲ್ಲ. ಭೂಮಿಯ ಮೇಲೆ ಅವರು ಗೊಬ್ಬರವಾಗುವರು. ಖಡ್ಗದಿಂದಲೂ ಕ್ಷಾಮದಿಂದಲೂ ಸಂಹಾರವಾಗುವರು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುವು.”


ಅವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು.


ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ, ಬಾಳನಿಗೆ ಬಲಿಪೀಠಗಳನ್ನು ಕಟ್ಟಿಸಿ, ಇಸ್ರಾಯೇಲಿನ ಅರಸನಾದ ಅಹಾಬನು ಮಾಡಿದ ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ಸಮಸ್ತ ನಕ್ಷತ್ರಮಂಡಲಕ್ಕೆ ಅಡ್ಡಬಿದ್ದು ಅವುಗಳನ್ನು ಪೂಜಿಸಿದನು.


“ನಾನು ಮನುಷ್ಯರ ಮೇಲೆ ಇಕ್ಕಟ್ಟು ತರಿಸುವೆನು. ಅವರು ಕುರುಡರ ಹಾಗೆ ತಡಕುವರು. ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ. ಅವರ ರಕ್ತವು ಧೂಳಿನಂತೆಯೂ ಅವರ ಮಾಂಸವು ಗೊಬ್ಬರದಂತೆಯೂ ಸುರಿದಿರುವುದು.


ಒಬ್ಬ ಮನುಷ್ಯನಿಗೆ ನೂರು ಮಕ್ಕಳಿರಬಹುದು ಮತ್ತು ಅವನು ಬಹಳ ವರ್ಷ ಬದುಕಿರಬಹುದು. ಅವನು ತನ್ನ ಐಶ್ವರ್ಯವನ್ನು ಅನುಭವಿಸದೆ, ಸರಿಯಾದ ಶವಸಂಸ್ಕಾರ ಇಲ್ಲದೆ ಹೋದರೆ ಅವನಿಗಿಂತಲೂ ಮೃತ ಸ್ಧಿತಿಯಲ್ಲಿ ಹುಟ್ಟಿರುವ ಕೂಸೇ ಮೇಲು ಎಂದುಕೊಂಡೆ.


ಯೆಹೋವ ದೇವರ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಸಮಸ್ತ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.


ಇದಲ್ಲದೆ ಅವರು ತಮ್ಮ ದೇವರಾದ ಯೆಹೋವ ದೇವರ ಸಮಸ್ತ ಆಜ್ಞೆಗಳನ್ನು ಬಿಟ್ಟುಬಿಟ್ಟು, ತಮಗೆ ತಾವೇ ಎರಡು ಎರಕದ ಕರುಗಳ ಮೂರ್ತಿಗಳನ್ನು ಮಾಡಿಕೊಂಡರು. ಅವರು ಅಶೇರ ಸ್ತಂಭವನ್ನು ನಿಲ್ಲಿಸಿ, ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು, ಬಾಳನನ್ನು ಸೇವಿಸಿ ತಮ್ಮ ಪುತ್ರಪುತ್ರಿಯರನ್ನೂ ಬೆಂಕಿಯಲ್ಲಿ ಬಲಿಕೊಟ್ಟರು.


ಅಂದರೆ, ಸೂರ್ಯನನ್ನಾಗಲಿ, ಚಂದ್ರನನ್ನಾಗಲಿ, ಆಕಾಶದ ನಕ್ಷತ್ರಗಳನ್ನಾಗಲಿ, ಬೇರೆ ದೇವರುಗಳನ್ನಾಗಲಿ, ನನ್ನ ಆಜ್ಞೆಗೆ ವಿರೋಧವಾಗಿ ಅವುಗಳನ್ನು ಆರಾಧಿಸಿದರೆ,


ಭಯವಿಲ್ಲದಿರುವಲ್ಲಿ ಅವರು ಭಯಭ್ರಾಂತರಾದರು; ಏಕೆಂದರೆ ನಿಮಗೆ ವಿರೋಧವಾಗಿ ದಂಡು ಇಳಿಸುವವರನ್ನು ದೇವರು ಚದರಿಸಿಬಿಟ್ಟಿದ್ದಾರೆ. ನೀವು ಅವರನ್ನು ನಾಚಿಕೆಪಡಿಸಿದ್ದೀರಿ. ಏಕೆಂದರೆ ದೇವರು ಅವರನ್ನು ತಿರಸ್ಕರಿಸಿದ್ದಾರೆ.


ಅವರು ಪ್ರವಾದಿಸುವ ಜನರು ಕ್ಷಾಮದ ಮತ್ತು ಖಡ್ಗದ ನಿಮಿತ್ತ ಯೆರೂಸಲೇಮಿನ ಬೀದಿಪಾಲಾಗುವರು. ಅವರನ್ನೂ, ಅವರ ಹೆಂಡತಿಯರನ್ನೂ, ಅವರ ಪುತ್ರಪುತ್ರಿಯರನ್ನೂ ಹೂಳಿಡುವುದಕ್ಕೆ ಯಾರೂ ಇರುವುದಿಲ್ಲ. ಏಕೆಂದರೆ ಅವರಿಗೆ ಅರ್ಹವಾದ ಆಪತ್ತನ್ನು ನಾನು ಅವರ ಮೇಲೆ ಸುರಿಯುತ್ತೇನೆ.


‘ನಿಮ್ಮ ಪಿತೃಗಳು ನನ್ನನ್ನು ಬಿಟ್ಟುಬಿಟ್ಟದ್ದರಿಂದಲೇ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಅವರು ಬೇರೆ ದೇವರುಗಳನ್ನು ಹಿಂಬಾಲಿಸಿ, ಅವುಗಳನ್ನು ಸೇವಿಸಿ, ಅವುಗಳನ್ನು ಆರಾಧಿಸಿ, ನನ್ನನ್ನು ತೊರೆದುಬಿಟ್ಟು, ನನ್ನ ನಿಯಮವನ್ನು ಕೈಗೊಳ್ಳಲಿಲ್ಲ.


ಹೆಣ ಹೂಣುವ ಮತ್ತು ಬೂದಿ ತುಂಬುವ ಕಣಿವೆಯಿಂದ, ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲಮೂಲೆ, ಇವುಗಳವರೆಗಿರುವ ಪ್ರದೇಶವೆಲ್ಲವೂ ಯೆಹೋವ ದೇವರಿಗೆ ಪರಿಶುದ್ಧವಾಗಿರುವುವು. ಈ ಪಟ್ಟಣವು ಇನ್ನೆಂದಿಗೂ ನಿರ್ಮೂಲವಾಗದು, ನಾಶವಾಗದು.”


ಇಸ್ರಾಯೇಲರ ಹೆಣಗಳನ್ನು ದೇವತಾ ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಬಲಿಪೀಠಗಳ ಸುತ್ತಲೂ ನಿಮ್ಮ ಎಲುಬುಗಳನ್ನು ಎರಚಿ ಬಿಡುವೆನು.


ನಿನ್ನನ್ನೂ ನಿನ್ನ ನದಿಗಳ ಮೀನುಗಳನ್ನೂ ಅರಣ್ಯದಲ್ಲಿ ಹಾಕುವೆನು. ನೀನು ಬಯಲುಗಳ ಮೇಲೆ ಬಿದ್ದಿರುವೆ; ನಿನ್ನನ್ನು ಯಾರೂ ಹೊರುವುದೂ ಇಲ್ಲ, ಸೇರಿಸುವುದೂ ಇಲ್ಲ. ನಿನ್ನನ್ನೂ ನಿನ್ನ ನದಿಯ ಎಲ್ಲಾ ಮೀನುಗಳನ್ನೂ ಕಾಡಿನ ಪಾಲುಮಾಡುವೆನು. ಭೂಮಿಯ ಮೇಲಿರುವ ಮೃಗಗಳಿಗೂ ಆಕಾಶದ ಪಕ್ಷಿಗಳಿಗೂ ನಿನ್ನನ್ನು ಆಹಾರವನ್ನಾಗಿ ಕೊಟ್ಟಿದ್ದೇನೆ.


ಅವರನ್ನೂ, ಅವರ ಅಧಿಪತಿಗಳನ್ನೂ, ಓರೇಬ್ ಮತ್ತು ಜೇಬನ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೆಬಹ ಮತ್ತು ಚಲ್ಮುನ್ನರ ಹಾಗೆಯೂ ಮಾಡಿರಿ.


ಆದ್ದರಿಂದ ಓ ಸ್ತ್ರೀಯರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ನಿಮ್ಮ ಕಿವಿಯು ಆತನ ಬಾಯಿಯ ವಾಕ್ಯವನ್ನು ಅಂಗೀಕರಿಸಲಿ. ನಿಮ್ಮ ಪುತ್ರಿಯರಿಗೆ ಗೋಳಾಟವನ್ನೂ, ನಿಮ್ಮ ನಿಮ್ಮ ನೆರೆಯವರಿಗೆ ಪ್ರಲಾಪವನ್ನೂ ಕಲಿಸಿರಿ.


ಏಕೆಂದರೆ, ಮರಣವು ನಮ್ಮ ಕಿಟಕಿಗಳೊಳಗೆ ಏರಿ ಬಂತು. ನಮ್ಮ ಕೋಟೆಗಳಲ್ಲಿ ಸೇರಿತು. ಹೊರಗಡೆ ಮಕ್ಕಳನ್ನೂ, ಬೀದಿಗಳಲ್ಲಿ ಯೌವನಸ್ಥರನ್ನೂ ಕಡಿದು ಹಾಕುತ್ತದೆ.


ದೊಡ್ಡವರೂ ಚಿಕ್ಕವರೂ ಈ ದೇಶದಲ್ಲಿ ಸಾಯುವರು. ಅವರಿಗೆ ಸಮಾಧಿಯಾಗುವುದಿಲ್ಲ, ಅವರಿಗೋಸ್ಕರ ಯಾರೂ ತಮ್ಮನ್ನು ಕೊಯ್ದುಕೊಳ್ಳುವುದಿಲ್ಲ, ತಮ್ಮ ತಲೆ ಬೋಳಿಸಿಕೊಳ್ಳುವುದೂ ಇಲ್ಲ.


ಆ ದಿವಸದಲ್ಲಿ ಭೂಮಿಯ ಈ ಮೇರೆಯಿಂದ ಭೂಮಿಯ ಆ ಮೇರೆಯವರೆಗೆ ಯೆಹೋವ ದೇವರಿಂದ ಹತರಾದವರು ಇರುವರು. ಅವರಿಗೋಸ್ಕರ ಗೋಳಾಡುವುದಿಲ್ಲ. ಅವರನ್ನು ಕೂಡಿಸುವುದಿಲ್ಲ. ಅವರನ್ನು ಹೂಳಿಡುವುದಿಲ್ಲ. ಅವರು ಭೂಮಿಯ ಮೇಲೆ ಗೊಬ್ಬರದಂತಿರುವರು.


ನೀನು ತೆರೆದ ಬಯಲಿನಲ್ಲಿ ಬೀಳುವೆ, ಏಕೆಂದರೆ ನಾನೇ ಇದನ್ನು ಹೇಳಿರುವೆನು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು