ಯೆರೆಮೀಯ 51:62 - ಕನ್ನಡ ಸಮಕಾಲಿಕ ಅನುವಾದ62 ಈ ವಾಕ್ಯಗಳನ್ನೆಲ್ಲಾ ಓದುತ್ತಿರುವಾಗ ಹೇಳತಕ್ಕದ್ದೇನೆಂದರೆ, ‘ಓ ಯೆಹೋವ ದೇವರೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯರಾಗಲಿ, ಮೃಗಗಳಾಗಲಿ, ನಿವಾಸಿಗಳಾಗಲಿ ಎಂದಿಗೂ ಇರದಂತೆ, ಅದು ಸದಾಕಾಲ ಹಾಳಾಗಿಯೇ ಉಳಿಯಲಿ,’ ಎಂದು ನೀವೇ ಮಾತನಾಡ್ದಿದೀರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201962 ‘ಯೆಹೋವನೇ, ನೀನು ಈ ಸ್ಥಳವನ್ನು ನಿರ್ಮೂಲಮಾಡಬೇಕೆಂದು ಉದ್ದೇಶಿಸಿ, ಇದು ಜನರಿಗೂ ಪಶುಗಳಿಗೂ ನೆಲೆಯಾಗದೆ ಸದಾ ಹಾಳಾಗಿಯೇ ಇರಲಿ ಎಂದು ನುಡಿದಿದ್ದೀಯಲ್ಲಾ’ ಎಂಬುದಾಗಿ ಅರಿಕೆಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)62 ಬಳಿಕ, ‘ಸರ್ವೇಶ್ವರಾ, ನೀವು ಈ ಸ್ಥಳವನ್ನು ನಿರ್ಮೂಲಮಾಡಲು ಉದ್ದೇಶಿಸಿ, ಇದು ಜನರಿಗೂ ಜಾನುವಾರುಗಳಿಗೂ ನೆಲೆಯಾಗದೆ ಸದಾಕಾಲ ಹಾಳಾಗಿಯೇ ಉಳಿಯಲಿ ಎಂದು ನುಡಿದಿದ್ದೀರಲ್ಲಾ!’ ಎಂದು ಅರಿಕೆಮಾಡು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)62 ಯೆಹೋವನೇ, ನೀನು ಈ ಸ್ಥಳವನ್ನು ನಿರ್ಮೂಲಮಾಡಬೇಕೆಂದು ಉದ್ದೇಶಿಸಿ ಇದು ಜನರಿಗೂ ಪಶುಗಳಿಗೂ ನೆಲೆಯಾಗದೆ ಸದಾ ಹಾಳಾಗಿಯೇ ಇರಲಿ ಎಂದು ನುಡಿದಿದ್ದೀಯಲ್ಲಾ ಎಂಬದಾಗಿ ಅರಿಕೆಮಾಡಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್62 ಆಮೇಲೆ ಹೀಗೆ ಹೇಳು: ‘ಯೆಹೋವನೇ, ಬಾಬಿಲೋನ್ ನಗರವನ್ನು ನಾಶಮಾಡುವೆನೆಂದು ನೀನು ಹೇಳಿರುವೆ. ಪ್ರಾಣಿಗಳು ಅಥವಾ ಮನುಷ್ಯರು ಯಾರೂ ಇಲ್ಲಿ ವಾಸಮಾಡದಂತೆ, ಇದು ಎಂದೆಂದಿಗೂ ಹಾಳುಬಿದ್ದ ಸ್ಥಳವಾಗಿರುವಂತೆ ಇದನ್ನು ನಾಶಮಾಡುವದಾಗಿ ಹೇಳಿರುವೆ.’ ಅಧ್ಯಾಯವನ್ನು ನೋಡಿ |