Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:6 - ಕನ್ನಡ ಸಮಕಾಲಿಕ ಅನುವಾದ

6 “ಬಾಬಿಲೋನಿನೊಳಗಿಂದ ಓಡಿಹೋಗಿರಿ; ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; ಅದರ ಪಾಪದಲ್ಲಿ ನಾಶವಾಗಬೇಡಿರಿ; ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯ ಕಾಲವು; ಆತನೇ ಅದಕ್ಕೆ ಮುಯ್ಯಿಗೆ ಮುಯ್ಯಿ ಕೊಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನೀವು ಬಾಬೆಲಿನೊಳಗಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ; ಅದಕ್ಕೆ ಉಂಟಾಗುವ ದಂಡನೆಗೆ ಒಳಗಾಗಬೇಡಿರಿ. ಯೆಹೋವನು ಮುಯ್ಯಿತೀರಿಸುವ ಕಾಲ ಬಂದಿದೆ; ಆತನು ಬಾಬಿಲೋನಿಗೆ ಪ್ರತಿಕಾರ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ನೀವು ಬಾಬಿಲೋನಿನಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿ, ಅದಕ್ಕೆ ಉಂಟಾಗುವ ದಂಡನೆಗೆ ನೀವು ಒಳಗಾಗಬೇಡಿ. ಸರ್ವೇಶ್ವರನಾದ ನಾನು ಮುಯ್ಯಿತೀರಿಸುವ ಕಾಲಬಂದಿದೆ. ಬಾಬಿಲೋನಿಗೆ ತಕ್ಕ ಪ್ರತೀಕಾರ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ನೀವು ಬಾಬೆಲಿನೊಳಗಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ; ಅದಕ್ಕೆ ಉಂಟಾಗುವ ದಂಡನೆಗೆ ಒಳಗಾಗಬೇಡಿರಿ; ಯೆಹೋವನು ಮುಯ್ಯಿತೀರಿಸುವ ಕಾಲ ಬಂದಿದೆ; ಆತನು ಬಾಬೆಲಿಗೆ ಪ್ರತೀಕಾರಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಬಾಬಿಲೋನಿನಿಂದ ದೂರ ಓಡಿಹೋಗಿರಿ. ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಓಡಿಹೋಗಿರಿ. ಇಲ್ಲವಾದರೆ ಬಾಬಿಲೋನಿನ ಪಾಪದಿಂದ ನೀವೂ ಮರಣಕ್ಕೆ ಗುರಿಯಾಗುವಿರಿ. ಅವರು ಮಾಡಿದ ದುಷ್ಕೃತ್ಯಗಳಿಗಾಗಿ ದೇವರು ಬಾಬಿಲೋನಿನ ಜನರನ್ನು ಶಿಕ್ಷಿಸುವ ಕಾಲವಿದು. ಅದು ತಕ್ಕ ಶಿಕ್ಷೆಯನ್ನು ಪಡೆಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:6
29 ತಿಳಿವುಗಳ ಹೋಲಿಕೆ  

“ಬಾಬಿಲೋನಿನೊಳಗಿಂದ ಓಡಿಹೋಗಿರಿ; ಬಾಬಿಲೋನಿನ ಸೀಮೆಯಿಂದ ಹೊರಡಿರಿ; ಮಂದೆಯ ಮುಂದೆ ಹೋತಗಳ ಹಾಗೆ ಇರಿ.


ಅವರು ಚೀಯೋನಿನಲ್ಲಿ ನಮ್ಮ ದೇವರಾದ ಯೆಹೋವ ದೇವರ ಪ್ರತಿದಂಡನೆಯನ್ನೂ, ಆತನ ಆಲಯದ ಪ್ರತಿದಂಡನೆಯನ್ನೂ ತಿಳಿಸುತ್ತಾ, ಬಾಬಿಲೋನಿನ ದೇಶದಿಂದ ತಪ್ಪಿಸಿಕೊಂಡು ಓಡಿ ಹೋಗುವವರ ಸ್ವರವನ್ನು ಕೇಳಿರಿ.


ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ; ಅದರ ಬುರುಜುಗಳು ಬಿದ್ದು ಹೋದವು; ಅದರ ಪೌಳಿಗೋಡೆಯನ್ನು ಕೆಡವಲಾಯಿತು. ಅದು ಯೆಹೋವ ದೇವರ ಪ್ರತಿದಂಡನೆ; ಆದ್ದರಿಂದ ನೀವೂ ಅದಕ್ಕೆ ಮುಯ್ಯಿತೀರಿಸಿರಿ. ಅದು ಇತರರಿಗೆ ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ.


“ನನ್ನ ಜನರೇ, ಅದರೊಳಗಿಂದ ಹೊರಡಿರಿ. ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ಯೆಹೋವ ದೇವರ ಕೋಪಕ್ಕೆ ತಪ್ಪಿಸಿರಿ.


ಅನೇಕ ಜನಾಂಗಗಳೂ, ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆಗಳ ಪ್ರಕಾರವೂ, ಅವರ ಕೈಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ಅವನು ಸಮೂಹದವರಿಗೆ, “ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿಹೋಗಿರಿ. ನೀವು ಅವರ ಎಲ್ಲಾ ಪಾಪಗಳ ದೆಸೆಯಿಂದ ನಾಶವಾಗದಂತೆ ಅವರಿಗಿರುವ ಯಾವುದನ್ನು ಮುಟ್ಟಬೇಡಿರಿ,” ಎಂದನು.


ಮಹಾ ಪಟ್ಟಣವು ಮೂರು ಭಾಗಗಳಾಗಿ ಹೋಯಿತು ಮತ್ತು ರಾಷ್ಟ್ರಗಳ ನಗರಗಳು ಬಿದ್ದವು. ಇದಲ್ಲದೆ ಮಹಾ ಬಾಬಿಲೋನಿಗೆ ರೋಷವೆಂಬ ದ್ರಾಕ್ಷಾರಸದ ಬಟ್ಟಲನ್ನು ಕೊಡುವಂತೆ ದೇವರಿಗೆ ಅದು ಜ್ಞಾಪಕಕ್ಕೆ ಬಂತು.


ಅವಸರದಿಂದ ಯಾರ ಮೇಲೆಯೂ ಹಸ್ತವನ್ನಿಟ್ಟು, ಸಭಾ ಹಿರಿಯರನ್ನಾಗಿ ನೇಮಿಸಬೇಡ. ಇತರರ ಪಾಪಗಳಲ್ಲಿ ಪಾಲುಗಾರನಾಗಬೇಡ. ನಿನ್ನನ್ನು ಶುದ್ಧನಾಗಿ ಕಾಪಾಡಿಕೋ.


ಖಡ್ಗದಿಂದ ತಪ್ಪಿಸಿಕೊಂಡವರೇ, ನಡೆಯಿರಿ, ನಿಲ್ಲಬೇಡಿರಿ. ದೂರದಲ್ಲಿ ಯೆಹೋವ ದೇವರನ್ನು ಜ್ಞಾಪಕಮಾಡಿಕೊಳ್ಳಿರಿ, ಯೆರೂಸಲೇಮು ನಿಮ್ಮ ಮನಸ್ಸಿಗೆ ಬರಲಿ.”


“ಬಾಣಗಳನ್ನು ಮೆರುಗು ಮಾಡಿರಿ; ಡಾಲುಗಳನ್ನು ಎತ್ತಿಕೊಳ್ಳಿರಿ, ಯೆಹೋವ ದೇವರು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾರೆ; ಆತನ ಆಲೋಚನೆ ಬಾಬಿಲೋನಿಗೆ ವಿರೋಧವಾಗಿ ಅದನ್ನು ನಾಶಮಾಡುವುದಕ್ಕೆ ಇದೆ. ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯು, ಅವರ ದೇವಾಲಯದ ಪ್ರತಿದಂಡನೆಯಾಗಿದೆ.


“ ‘ನಾವು ಬಾಬಿಲೋನನ್ನು ವಾಸಿಮಾಡಲು ಪ್ರಯತ್ನಿಸಿದೆವು; ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳವರೆಗೂ ಏರುತ್ತದೆ.’


“ಅತಿ ಗರ್ವಿಷ್ಠನೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ,” ಎಂದು ಸೈನ್ಯಗಳ ದೇವರಾದ ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಿನ್ನ ದಿವಸವೂ, ನಿನ್ನ ಶಿಕ್ಷೆಯ ಕಾಲವೂ ಬಂತು.


ಬಾಬಿಲೋನಿನಿಂದ ಹೊರಡಿರಿ. ಕಸ್ದೀಯರ ಕಡೆಯಿಂದ ಓಡಿಹೋಗಿರಿ. ಹರ್ಷಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ. ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ. “ಯೆಹೋವ ದೇವರು ತಮ್ಮ ಸೇವಕನಾದ ಯಾಕೋಬನ್ನು ವಿಮೋಚಿಸಿದ್ದಾರೆ,” ಎಂದು ನೀವು ಹೇಳಿರಿ.


ಏಕೆಂದರೆ ಇದು ಸೇನಾಧೀಶ್ವರ ಯೆಹೋವನಾದ ದೇವರ ದಿವಸವೇ. ಆತನು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು, ಖಡ್ಗವು ಸಂಹರಿಸಿ ಅವರ ರಕ್ತದಿಂದ ತೃಪ್ತಿಯಾಗಿ ಮತ್ತವಾಗುವುದು. ಏಕೆಂದರೆ ಉತ್ತರ ದೇಶದಲ್ಲಿ ಯೂಫ್ರೇಟೀಸ್ ನದಿಯ ಬಳಿಯಲ್ಲಿ ಸೇನಾಧೀಶ್ವರ ಯೆಹೋವರಾದ ದೇವರಿಗೆ ಬಲಿ ಆಗುತ್ತದೆ.


ಅವನ ದೇಶಕ್ಕೆ ನಿಯಮಿತ ಕಾಲ ಬರುವ ತನಕ, ಎಲ್ಲ ರಾಷ್ಟ್ರಗಳು ಅವನಿಗೂ, ಅವನ ಮಗನಿಗೂ, ಮೊಮ್ಮಗನಿಗೂ ಅಡಿಯಾಳಾಗಿ ಇರಬೇಕು. ಆಮೇಲೆ ಅನೇಕ ರಾಷ್ಟ್ರಗಳೂ, ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು,” ಎಂಬುದು.


ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಖಡ್ಗದ ನಿಮಿತ್ತ ಕದಲಿ ಓಲಾಡುವರು.”


ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗುವನು; ಆದರೆ ಮೂರ್ಖರ ಜೊತೆಗಾರನು ಸಂಕಟಪಡುವನು.


ಎಲ್ಲಾ ಜನಾಂಗಗಳೇ, ದೇವಜನರ ಸಂಗಡ ಹರ್ಷಿಸಿರಿ. ಏಕೆಂದರೆ ದೇವರು ತಮ್ಮ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುವರು. ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ದೇಶಕ್ಕೋಸ್ಕರವೂ, ತಮ್ಮ ಜನರಿಗೋಸ್ಕರವೂ ದೋಷಪರಿಹಾರ ಮಾಡುವರು.


ನಾನು ಮಿಂಚುವ ಖಡ್ಗವನ್ನು ಹದಮಾಡಿ, ನನ್ನ ಕೈ ನ್ಯಾಯವನ್ನು ಹಿಡಿದುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ನನ್ನನ್ನು ದ್ವೇಷಿಸುವವರಿಗೆ ಮುಯ್ಯಿತೀರಿಸುವೆನು.


ಮನೆಯ ಹೊರಗೆ ಖಡ್ಗವೂ ಒಳಗೆ ಭಯವೂ ಇವರಲ್ಲಿರುವುವು. ಪ್ರಾಯಸ್ಥರೂ ಕನ್ನಿಕೆಯರೂ ನರೆಕೂದಲಿನವರೂ ಹಾಲು ಕುಡಿಯುವ ಕೂಸುಗಳೂ ಖಡ್ಗಗಳಿಗೆ ಸಂಹಾರವಾಗುವರು.


ಏಕೆಂದರೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು ನನ್ನ ಹೃದಯದಲ್ಲಿದೆ. ನಾನು ವಿಮೋಚಿಸಿದವರ ವರುಷವು ಬಂತು.


ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ತಪ್ಪಿಸಿಕೊಳ್ಳಿರಿ; ಮರುಭೂಮಿಯಲ್ಲಿರುವ ಒಣ ಗಿಡದ ಹಾಗಿರಿ.


ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ. “ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ. ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ. ಅದರ ಸಮುದ್ರವನ್ನು ಒಣಗಿಸುತ್ತೇನೆ. ಅದರ ಬುಗ್ಗೆಯನ್ನು ಬತ್ತಿಹೋಗುವಂತೆ ಮಾಡುತ್ತೇನೆ.


ಏಕೆಂದರೆ ವಿನಾಶ ಮಾಡುವವನು ಅದರ ಮೇಲೆ ಅಂದರೆ ಬಾಬಿಲೋನಿನ ಮೇಲೆಯೇ ಬಂದಿದ್ದಾನೆ. ಅದರ ಪರಾಕ್ರಮಶಾಲಿಗಳು ಸೆರೆಯಾಗಿಬಿಟ್ಟಿದ್ದಾರೆ. ಅವಳ ಬಿಲ್ಲುಗಳು ಮುರಿದುಹೋಗಿವೆ. ಏಕೆಂದರೆ ಪ್ರತಿದಂಡನೆಗಳ ದೇವರಾದ ಯೆಹೋವ ದೇವರು ನಿಶ್ಚಯವಾಗಿ ಮುಯ್ಯಿಗೆ ಮುಯ್ಯಿ ತೀರಿಸುವರು.


ಯೆಹೋವ ದೇವರೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ ಪ್ರತಿಫಲವನ್ನು ಕೊಡಿ.


ಯೆಹೋವ ದೇವರೇ, ನೀವು ಪ್ರತೀಕಾರ ಸಲ್ಲಿಸುವ ದೇವರಾಗಿದ್ದೀರಿ. ಮುಯ್ಯಿ ತೀರಿಸುವವರು ನೀವೇ; ದೇವರೇ, ನ್ಯಾಯ ತೀರಿಸುವಂತೆ ನಿಮ್ಮನ್ನು ಪ್ರಕಟಿಸಿಕೊಳ್ಳಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು