Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:52 - ಕನ್ನಡ ಸಮಕಾಲಿಕ ಅನುವಾದ

52 “ಇಗೋ, ಅಂಥ ದಿನಗಳು ಬರುತ್ತವೆ,” ಎಂದು ಯೆಹೋವ ದೇವರು ಹೇಳುತ್ತಾರೆ, “ಅದು ನಾನು ಬಾಬಿಲೋನಿನ ವಿಗ್ರಹಗಳನ್ನು ದಂಡಿಸುವ ದಿನಗಳು. ಆಗ ಆ ದೇಶದೊಳೆಲ್ಲ ಗಾಯಪಟ್ಟವರು ನರಳಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

52 ಹೀಗಿರಲು ಯೆಹೋವನು ಇಂತೆನ್ನುತ್ತಾನೆ, ‘ಇಗೋ, ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ; ಆಗ ಆ ದೇಶದಲ್ಲೆಲ್ಲಾ ಗಾಯಪಟ್ಟವರು ನರಳಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

52 ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿ: “ಬರಲಿವೆ ಬಾಬಿಲೋನಿನ ವಿಗ್ರಹಗಳನ್ನು ದಂಡಿಸುವ ದಿನಗಳು. ಆಗ ಆ ದೇಶದೊಳೆಲ್ಲ ನರಳಾಡುವರು ಗಾಯಗೊಂಡವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

52 ಹೀಗಿರಲು ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ; ಆಗ ಆ ದೇಶದಲ್ಲೆಲ್ಲಾ ಗಾಯಪಟ್ಟವರು ನರಳಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

52 ಯೆಹೋವನು ಹೀಗೆನ್ನುವನು: “ಬಾಬಿಲೋನಿನ ವಿಗ್ರಹಗಳನ್ನು ನಾನು ದಂಡಿಸುವ ಕಾಲ ಬರುತ್ತಿದೆ. ಆಗ ಆ ದೇಶದಲ್ಲೆಲ್ಲಾ ಗಾಯಗೊಂಡ ಜನರು ನೋವಿನಿಂದ ಗೋಳಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:52
6 ತಿಳಿವುಗಳ ಹೋಲಿಕೆ  

ಆದ್ದರಿಂದ ಇಗೋ, ದಿನಗಳು ಬರುವುವು. ಆಗ ನಾನು ಬಾಬಿಲೋನಿನ ವಿಗ್ರಹಗಳಿಗೆ ದಂಡಿಸುವೆನು. ಆದರೆ ದೇಶವೆಲ್ಲಾ ನಾಚಿಕೆಪಡುವುದು. ಹತರಾದವರ ದೇಹಗಳು ಅದರ ಮಧ್ಯದಲ್ಲಿ ಅಲ್ಲಿ ಇಲ್ಲಿ ಬಿದ್ದಿವೆ.


ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿಹೋಗುವುದು; ಏಕೆಂದರೆ ಅದು ವಿಗ್ರಹಗಳ ದೇಶವೇ, ಅವರು ಭಯಂಕರವಾದ ವಿಗ್ರಹಗಳಿಂದ ಹುಚ್ಚರಾದರು.


ಬಾಬಿಲೋನಿನ ಅರಸನ ತೋಳುಗಳನ್ನು ನಾನು ಬಲಪಡಿಸುವೆನು, ಅವನ ಕೈಯಲ್ಲಿ ನನ್ನ ಖಡ್ಗವನ್ನಿಡುವೆನು. ಫರೋಹನ ತೋಳುಗಳು ಬಿದ್ದು ಹೋಗುವುವು. ಇವನು ಅವನ ಮುಂದೆ ಗಾಯ ಹೊಂದಿದವನಂತೆ ನರಳಾಡುವನು.


ನಾನು ಅದರಲ್ಲಿ ವ್ಯಾಧಿಯನ್ನೂ ಅದರ ಚೌಕಗಳಲ್ಲಿ ಸಂಹಾರವನ್ನೂ ಉಂಟುಮಾಡುವೆನು, ಖಡ್ಗವು ಸುತ್ತುಮುತ್ತಲು ಅದರ ಮೇಲೆ ಬೀಸುತ್ತಿರುವಾಗ ಪ್ರಜೆಗಳು ಅದರ ನಡುವೆ ಹತರಾಗಿ ಬೀಳುವರು, ಆಗ ನಾನೇ ಯೆಹೋವ ದೇವರು ಎಂದು ಅವರಿಗೆ ತಿಳಿದುಬರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು