ಯೆರೆಮೀಯ 50:9 - ಕನ್ನಡ ಸಮಕಾಲಿಕ ಅನುವಾದ9 ಏಕೆಂದರೆ ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ, ಬಾಬಿಲೋನಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ. ಅವರು ಅದಕ್ಕೆ ವಿರೋಧವಾಗಿ ಯುದ್ಧ ಸಿದ್ಧಮಾಡುವರು. ಅಲ್ಲಿಂದ ಅದು ಹಿಡಿಯಲಾಗುವುದು. ಅವರ ಬಾಣಗಳು ಬಲಿಷ್ಠನಾದ ಪ್ರವೀಣ ಶೂರನಂತಿರುವುವು. ಯಾವುದೂ ವ್ಯರ್ಥವಾಗಿ ತಿರುಗದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಇಗೋ, ನಾನು ಮಹಾ ಜನಾಂಗಗಳ ಸಮೂಹವನ್ನು ಎಬ್ಬಿಸಿ ಉತ್ತರ ದಿಕ್ಕಿನಿಂದ ಬಾಬೆಲಿನ ಮೇಲೆ ಬೀಳಮಾಡುವೆನು; ಅವು ಬಾಬಿಲೋನಿಗೆ ವಿರುದ್ಧವಾಗಿ ವ್ಯೂಹಕಟ್ಟಿ ಅದನ್ನು ಅದರ ಸ್ಥಳದೊಳಗಿಂದ ನಿರ್ಮೂಲಮಾಡುವವು; ಅವುಗಳ ಬಾಣಗಳು ಸುಮ್ಮನೆ ಹಿಂದಿರುಗದ ಯುದ್ಧಪ್ರವೀಣರಾದ ಶೂರನಂತಿರುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಇಗೋ, ದೊಡ್ಡ ರಾಷ್ಟ್ರಗಳ ಸಮೂಹವನ್ನು ಎಬ್ಬಿಸಿ ಉತ್ತರದಿಂದ ಬಾಬಿಲೋನಿಯದ ಮೇಲೆ ಬೀಳಮಾಡುವೆನು. ಅವು ಬಾಬಿಲೋನಿಗೆ ವಿರುದ್ಧ, ವ್ಯೂಹಕಟ್ಟಿ ಅದನ್ನು ಬುಡಮೇಲು ಮಾಡುವುವು. ಅವುಗಳು ಪ್ರಯೋಗಿಸುವ ಬಾಣಗಳು ಯುದ್ಧ ಪ್ರವೀಣ ಶೂರನಂತಿರುವುವು; ಅವು ಸುಮ್ಮನೆ ಹಿಂದಿರುಗವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಇಗೋ, ನಾನು ಮಹಾ ಜನಾಂಗಗಳ ಸಮೂಹವನ್ನು ಎಬ್ಬಿಸಿ ಬಡಗಲಿಂದ ಬಾಬೆಲಿನ ಮೇಲೆ ಬೀಳಮಾಡುವೆನು; ಅವು ಬಾಬೆಲಿಗೆ ವಿರುದ್ಧವಾಗಿ ವ್ಯೂಹ ಕಟ್ಟಿ ಅದನ್ನು ಸ್ಥಳದೊಳಗಿಂದ ಕಿತ್ತುಬಿಡುವವು; ಅವುಗಳ ಬಾಣಗಳು ಸುಮ್ಮನೆ ಹಿಂದಿರುಗದ ಯುದ್ಧಪ್ರವೀಣ ಶೂರನಂತಿರುವವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಉತ್ತರ ದಿಕ್ಕಿನ ಹಲವು ಜನಾಂಗಗಳನ್ನು ನಾನು ಒಟ್ಟುಗೂಡಿಸಿ ತರುವೆನು. ಆ ಜನಾಂಗಗಳ ಸಮುದಾಯವು ಬಾಬಿಲೋನಿನ ವಿರುದ್ಧ ಯುದ್ಧಕ್ಕೆ ಸಿದ್ಧವಾಗುತ್ತದೆ. ಬಾಬಿಲೋನ್ ಅವರಿಗೆ ವಶವಾಗುವುದು. ಆ ಜನಾಂಗಗಳ ಜನರು ಬಾಬಿಲೋನಿನ ಮೇಲೆ ಹಲವು ಬಾಣಗಳನ್ನು ಪ್ರಯೋಗ ಮಾಡುವರು. ಆ ಬಾಣಗಳೆಲ್ಲ ಬರಿಗೈಯಲ್ಲಿ ಯುದ್ಧದಿಂದ ಹಿಂದಿರುಗದ ಶೂರ ಸೈನಿಕರಂತಿರುವವು. ಅಧ್ಯಾಯವನ್ನು ನೋಡಿ |