ಯೆರೆಮೀಯ 50:39 - ಕನ್ನಡ ಸಮಕಾಲಿಕ ಅನುವಾದ39 “ಆದ್ದರಿಂದ ಅರಣ್ಯದ ಕಾಡುಮೃಗಗಳು, ನರಿಗಳು ಕೂಡ ಅಲ್ಲಿ ವಾಸಮಾಡುವುವು; ಉಷ್ಟ್ರಪಕ್ಷಿಗಳೂ ಸಹ ಅದರಲ್ಲಿ ವಾಸಮಾಡುವುವು; ತಲತಲಾಂತರಗಳವರೆಗೂ ಯಾರೂ ಅದರಲ್ಲಿ ತಂಗುವುದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201939 ಆದಕಾರಣ ತೋಳ ಮುಂತಾದ ಕಾಡುಮೃಗಗಳು ಅಲ್ಲಿ ಬೀಡು ಮಾಡಿಕೊಳ್ಳುವವು, ಉಷ್ಟ್ರಪಕ್ಷಿಗಳು ತಂಗುವವು; ಅದು ಎಂದಿಗೂ ವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲು ಇರುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)39 ಈ ಕಾರಣ, ತೋಳಗಳೂ ಕಾಡುಮೃಗಗಳೂ ಬೀಡುಮಾಡುವುವಲ್ಲಿ. ಉಷ್ಟ್ರಪಕ್ಷಿಗಳೂ ತಂಗುವುವು ಅಲ್ಲಿ. ಅದೆಂದಿಗೂ ನಿವಾಸಸ್ಥಳ ಆಗದು ತಲತಲಾಂತರಕ್ಕೂ ಜನರು ಅಲ್ಲಿ ಒಕ್ಕಲಿರರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)39 ಆದಕಾರಣ ತೋಳ ಮುಂತಾದ ಕಾಡುಮೃಗಗಳು ಅಲ್ಲಿ ಹಕ್ಕೆಮಾಡಿಕೊಳ್ಳುವವು, ಉಷ್ಟ್ರಪಕ್ಷಿಗಳು ತಂಗುವವು; ಅದು ಎಂದಿಗೂ ನಿವಾಸಸ್ಥಳವಾಗದು, ತಲತಕಾಂತರಕ್ಕೂ ಅಲ್ಲಿ ಜನರು ಒಕ್ಕಲಿರರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್39 ಬಾಬಿಲೋನಿನಲ್ಲಿ ಪುನಃ ಜನರು ವಾಸಿಸುವದಿಲ್ಲ. ಕಾಡುನಾಯಿ, ಉಷ್ಟ್ರಪಕ್ಷಿ ಮತ್ತು ಇನ್ನುಳಿದ ಮರುಭೂಮಿಯ ಪ್ರಾಣಿಗಳು ಅಲ್ಲಿ ವಾಸಿಸುವವು. ಆದರೆ ಎಂದೆಂದಿಗೂ ಅಲ್ಲಿ ಮಾನವರು ವಾಸಿಸುವದಿಲ್ಲ. ಅಧ್ಯಾಯವನ್ನು ನೋಡಿ |