Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 50:21 - ಕನ್ನಡ ಸಮಕಾಲಿಕ ಅನುವಾದ

21 “ಮೆರಾಥಯಿಮ್ ದೇಶಕ್ಕೆ ವಿರೋಧವಾಗಿ, ಪೆಕೋದಿನ ನಿವಾಸಿಗಳಿಗೆ ವಿರೋಧವಾಗಿಯೂ ದಂಡೆತ್ತಿ ಹೋಗು; ಅವರನ್ನು ಹಿಂದಟ್ಟಿ ಸಂಹರಿಸು. ಸಂಪೂರ್ಣ ನಾಶಮಾಡು.” “ನಾನು ನಿನಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮಾಡು, ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಯೆಹೋವನು ಇಂತೆನ್ನುತ್ತಾನೆ, “ಮೆರಾಥಯಿಮ್ ದೇಶಕ್ಕೂ ಮತ್ತು ಪೆಕೋದಿನ ನಿವಾಸಿಗಳಿಗೂ ವಿರುದ್ಧವಾಗಿ ದಂಡೆತ್ತಿ ಹೋಗಿ, ಅವರನ್ನು ಸಂಹರಿಸಿ, ಅನಂತರ ದೇಶವನ್ನು ತೀರಾ ಹಾಳುಮಾಡಿ, ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಸರ್ವೇಶ್ವರ ಹೀಗೆನ್ನುತ್ತಾರೆ: “ಮೆರಾಥಯಿಮ್ ನಾಡಿಗೂ ಪಕೋದಿನ ನಿವಾಸಿಗಳಿಗೂ ವಿರುದ್ಧ ದಂಡೆತ್ತಿಹೋಗಿ ಅವರನ್ನು ಸಂಹರಿಸು. ಆ ನಾಡನ್ನು ಪೂರ್ತಿಯಾಗಿ ಹಾಳುಮಾಡು. ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಯೆಹೋವನು ಇಂತೆನ್ನುತ್ತಾನೆ - ಮೆರಾಥಯಿಮ್ ದೇಶಕ್ಕೂ ಪೆಕೋದಿನ ನಿವಾಸಿಗಳಿಗೂ ವಿರುದ್ಧವಾಗಿ ದಂಡೆತ್ತಿ ಹೋಗಿ ಅವರನ್ನು ಸಂಹರಿಸಿ ಅನಂತರ ದೇಶವನ್ನು ತೀರಾ ಹಾಳುಮಾಡಿ ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಯೆಹೋವನು ಹೀಗೆನ್ನುತ್ತಾನೆ: “ಮೆರಾಥಯಿಮ್ ದೇಶದ ಮೇಲೆ ಧಾಳಿ ಮಾಡಿರಿ. ಪೆಕೋದ ಪ್ರದೇಶದಲ್ಲಿ ವಾಸಮಾಡುವ ಜನಗಳ ಮೇಲೆ ಧಾಳಿ ಮಾಡಿರಿ. ಅವರ ಮೇಲೆ ಧಾಳಿ ಮಾಡಿ ಅವರನ್ನು ಕೊಂದು ಸಂಪೂರ್ಣವಾಗಿ ನಾಶಮಾಡಿರಿ. ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 50:21
17 ತಿಳಿವುಗಳ ಹೋಲಿಕೆ  

ಬಾಬಿಲೋನಿನವರು ಎಲ್ಲಾ ಕಸ್ದೀಯರು, ಪೆಕೋದಿನವರು, ಷೋಯದವರು, ಕೋಯದವರು, ಎಲ್ಲಾ ಅಸ್ಸೀರಿಯರ ಜೊತೆಗೆ ಅವರೆಲ್ಲಾ ಅಪೇಕ್ಷಿಸುವಂತಹ ಯೌವನಸ್ಥರೂ ಸೈನ್ಯಾಧಿಪತಿಗಳೂ ಅಧಿಕಾರಸ್ಥರೂ ಯುದ್ಧಶಾಲಿಗಳೂ ಖ್ಯಾತಿ ಹೊಂದಿದವರೂ ಎಲ್ಲರೂ ಕುದುರೆಗಳ ಮೇಲೆ ಬೀಳುವಂತೆ ಮಾಡುವೆನು.


ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ; ಅದರ ಬುರುಜುಗಳು ಬಿದ್ದು ಹೋದವು; ಅದರ ಪೌಳಿಗೋಡೆಯನ್ನು ಕೆಡವಲಾಯಿತು. ಅದು ಯೆಹೋವ ದೇವರ ಪ್ರತಿದಂಡನೆ; ಆದ್ದರಿಂದ ನೀವೂ ಅದಕ್ಕೆ ಮುಯ್ಯಿತೀರಿಸಿರಿ. ಅದು ಇತರರಿಗೆ ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ.


ಏಕೆಂದರೆ ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ, ಬಾಬಿಲೋನಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ. ಅವರು ಅದಕ್ಕೆ ವಿರೋಧವಾಗಿ ಯುದ್ಧ ಸಿದ್ಧಮಾಡುವರು. ಅಲ್ಲಿಂದ ಅದು ಹಿಡಿಯಲಾಗುವುದು. ಅವರ ಬಾಣಗಳು ಬಲಿಷ್ಠನಾದ ಪ್ರವೀಣ ಶೂರನಂತಿರುವುವು. ಯಾವುದೂ ವ್ಯರ್ಥವಾಗಿ ತಿರುಗದು.


ಏಕೆಂದರೆ ಉತ್ತರದಿಂದ ಅವಳ ವಿರೋಧವಾಗಿ ಜನಾಂಗವು ಬರುತ್ತದೆ; ಅದು ಅವಳ ದೇಶವನ್ನು ಹಾಳುಮಾಡಿಬಿಡುವುದು; ಅವಳಲ್ಲಿ ಯಾರೂ ವಾಸಿಸುವುದಿಲ್ಲ; ಮನುಷ್ಯರೂ, ಮೃಗಗಳೂ ಒಟ್ಟಾಗಿ ತೊಲಗಿಬಿಡುತ್ತಾರೆ, ಓಡಿಹೋಗುತ್ತಾರೆ.


“ಯೆಹೋವ ದೇವರು ನೇಮಿಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ; ರಕ್ತದಿಂದ ತನ್ನ ಖಡ್ಗವನ್ನು ಹಿಂದೆಗೆಯುವವನಿಗೆ ಶಾಪವಾಗಲಿ.


ಯೆಹೋವ ದೇವರು ಹೇಳುತ್ತಾರೆ, ಇಗೋ, ನಾನು ಆಜ್ಞಾಪಿಸಿ ಅವರನ್ನು ಈ ಪಟ್ಟಣದ ಬಳಿಗೆ ತಿರುಗಿ ಬರಮಾಡುವೆನು; ಅವರು ಅದಕ್ಕೆ ವಿರೋಧವಾಗಿ ಯುದ್ಧಮಾಡಿ, ಅದನ್ನು ಹಿಡಿದು ಬೆಂಕಿಯಿಂದ ಸುಡುವರು ಮತ್ತು ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳಾಗಿ ಮಾಡುವೆನು.”


“ನೀವೆಲ್ಲರೂ ಕೂಡಿಕೊಂಡು ಕೇಳಿರಿ. ಅವುಗಳ ಮಧ್ಯದಲ್ಲಿ ಈ ಸಂಗತಿಗಳನ್ನು ಪ್ರಕಟಿಸಿದವರು ಯಾರು? ಯೆಹೋವ ದೇವರು ಆಯ್ಕೆ ಮಾಡಿದ ಮಿತ್ರನು ಬಾಬಿಲೋನಿನ ವಿರುದ್ಧ ತನ್ನ ಉದ್ದೇಶವನ್ನು ಪೂರೈಸುತ್ತಾನೆ. ತನ್ನ ತೋಳು ಕಸ್ದೀಯರ ಮೇಲೆ ಇರುವುದು.


ಕೋರೆಷನ ವಿಷಯವಾಗಿ ಹೀಗೆ ಹೇಳುವೆನು, ‘ನನ್ನ ಕುರುಬನು, ನನ್ನ ಇಷ್ಟವನ್ನೆಲ್ಲಾ ಪೂರೈಸುವವನು, ಯೆರೂಸಲೇಮಿಗೆ, “ನೀನು ಪುನಃ ನಿರ್ಮಾಣವಾಗುವೆ,” ದೇವಾಲಯಕ್ಕೆ, “ನಿನಗೆ ಅಸ್ತಿವಾರವು ಹಾಕಲಾಗುವುದು,” ಎಂದು ಅನ್ನುವವನೂ ನಾನೇ.’


ನಾನು ಅವನನ್ನು ಭಕ್ತಿಹೀನ ಜನರಿಗೆ ವಿರುದ್ಧವಾಗಿ ಕಳುಹಿಸಿ, ನನ್ನ ಕೋಪಕ್ಕೆ ಗುರಿಯಾದ ನನ್ನ ಪ್ರಜೆಯನ್ನು ಸೂರೆಮಾಡಿ, ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದುಹಾಕಬೇಕೆಂದು ಅಪ್ಪಣೆ ಕೊಡುವೆನು.


“ಪಾರಸಿಯ ಅರಸ ಕೋರೆಷನು ಹೀಗೆ ಹೇಳುತ್ತಾನೆ: “ ‘ಪರಲೋಕದ ದೇವರಾದ ಯೆಹೋವ ದೇವರು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾರೆ ಮತ್ತು ಅವರು ಯೆಹೂದ ದೇಶದ ಯೆರೂಸಲೇಮಿನಲ್ಲಿ ತಮಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾರೆ. ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತೀರೋ, ಅಂಥವರು ಸ್ವಂತನಾಡಿಗೆ ಹೋಗಬಹುದು. ದೇವರಾದ ಯೆಹೋವ ದೇವರು ಅವರ ಸಂಗಡ ಇರಲಿ!’ ” ಎಂದನು.


ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’ ” ಎಂದನು.


ದಾವೀದನು ಅಬೀಷೈಯನಿಗೂ, ತನ್ನ ಸಮಸ್ತ ಸೇವಕರಿಗೂ, “ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗನು ನನ್ನ ಪ್ರಾಣವನ್ನು ಹುಡುಕಿದರೆ, ಎಷ್ಟೋ ಅಧಿಕವಾಗಿ ಬೆನ್ಯಾಮೀನನಾದವನು ಈಗ ಏನು ಮಾಡಿಯಾನು? ಅವನನ್ನು ಬಿಟ್ಟುಬಿಡಿರಿ. ಅವನು ದೂಷಿಸಲಿ. ಏಕೆಂದರೆ ಯೆಹೋವ ದೇವರು ಅವನಿಗೆ ಹಾಗೆಯೇ ಹೇಳಿದ್ದಾರೆ.


ಈಗ ನೀನು ಹೋಗಿ ಅಮಾಲೇಕ್ಯರನ್ನು ಹೊಡೆದು, ಅವರಿಗೆ ಉಂಟಾದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿಬಿಟ್ಟು, ಅವರನ್ನು ಕನಿಕರಿಸದೆ ಪುರುಷರನ್ನೂ, ಸ್ತ್ರೀಯರನ್ನೂ, ಚಿಕ್ಕವರನ್ನೂ, ಹಸುಗೂಸುಗಳನ್ನೂ, ದನಗಳನ್ನೂ, ಕುರಿಗಳನ್ನೂ, ಒಂಟೆಗಳನ್ನೂ, ಕತ್ತೆಗಳನ್ನೂ ಕೊಂದುಹಾಕು,’ ” ಎಂಬದು.


ನಿತ್ಯ ದೇವರು ನಿನ್ನ ಆಶ್ರಯವು. ದೇವರ ಶಾಶ್ವತ ತೋಳುಗಳು ನಿನಗೆ ಆಶ್ರಯ. ನಿನ್ನ ವೈರಿಗಳನ್ನು ನಿನ್ನ ಮುಂದೆ ಓಡಿಸಿ, ‘ಅವರನ್ನು ಸಂಹರಿಸಿರಿ,’ ಎಂದು ಆಜ್ಞಾಪಿಸುವರು.


ನಾನೇ, ನಾನಾಗಿಯೇ ಮಾತನಾಡಿದ್ದೇನೆ. ನಾನೇ ಅವನನ್ನು ಕರೆದದ್ದು; ಅವನನ್ನು ನಾನೇ ಬರಮಾಡಿದ್ದೇನೆ. ಅವನ ಮಾರ್ಗವು ಯಶಸ್ವಿಯಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು