Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:22 - ಕನ್ನಡ ಸಮಕಾಲಿಕ ಅನುವಾದ

22 ನೀವು ನನಗೆ ಭಯಪಡುವುದಿಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ಸಮ್ಮುಖದಲ್ಲಿ ನಡುಗುವುದಿಲ್ಲವೋ? ನಾನು ಮರಳನ್ನು ನಿತ್ಯ ನೇಮವಾಗಿ ಸಮುದ್ರಕ್ಕೆ, ಅದು ದಾಟಕೂಡದ ಹಾಗೆ ಮೇರೆಯಾಗಿಟ್ಟಿದ್ದೇನೆ. ಅದರ ತೆರೆಗಳು ಎದ್ದರೂ ದಡ ಮೀರಲಾರವು; ಘೋಷಿಸಿದರೂ ಅದನ್ನು ದಾಟಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನೀವು ನನಗೆ ಅಂಜುವುದಿಲ್ಲವೋ, ನನ್ನೆದುರಿಗೆ ನಡುಗುವುದಿಲ್ಲವೋ? ಸಮುದ್ರವು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದ್ದೇನಷ್ಟೆ. ತೆರೆಗಳು ಅಲ್ಲಕಲ್ಲೋಲವಾದರೂ ಮೀರಲಾರವು, ಭೋರ್ಗರೆದರೂ ಹಾಯಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ನೀವು ನನಗೆ ಅಂಜುವುದಿಲ್ಲವೋ? ನನ್ನೆದುರಿಗೆ ನಡುಗುವುದಿಲ್ಲವೊ? ಕಡಲು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದವನು ನಾನು.ತೆರೆಗಳು ಅಲ್ಲಕಲ್ಲೋಲವಾದರೂ ಅದನ್ನು ಮೀರಲಾರವು. ಭೋರ್ಗರೆದರೂ ಹಾಯಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ನೀವು ನನಗೆ ಅಂಜುವದಿಲ್ಲವೋ, ನನ್ನೆದುರಿಗೆ ನಡುಗುವದಿಲ್ಲವೋ? ಸಮುದ್ರವು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇವಿುಸಿದ್ದೇನಷ್ಟೆ. ತೆರೆಗಳು ಅಲ್ಲಕಲ್ಲೋಲವಾದರೂ ಮೀರಲಾರವು, ಭೋರ್ಗರೆದರೂ ಹಾಯಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ನೀವು ನನಗೆ ಅಂಜುವುದಿಲ್ಲವೇ?” ಇದು ಯೆಹೋವನ ಸಂದೇಶ: “ನೀವು ನನ್ನ ಎದುರಿಗೆ ಭಯದಿಂದ ನಡುಗುವುದಿಲ್ಲವೇ? ಸಾಗರಗಳಿಗೆ ಗಡಿಯಂತೆ ದಡವನ್ನು ನಿರ್ಮಿಸಿದವನು ನಾನೇ. ಸಮುದ್ರವು ನಿರಂತರವಾಗಿ ತನ್ನ ಸೀಮೆಯಲ್ಲಿಯೇ ಹರಿಯಬೇಕೆಂದು ಹಾಗೆ ಮಾಡಿದೆ. ತೆರೆಗಳು ದಡವನ್ನು ಅಪ್ಪಳಿಸಬಹುದು ಆದರೆ ಅವುಗಳು ಅದನ್ನು ನಾಶಮಾಡಲಾರವು. ತೆರೆಗಳು ಬರುವಾಗ ಭೋರ್ಗರೆಯಬಹುದು, ಆದರೆ ದಡವನ್ನು ದಾಟಿಹೋಗಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:22
29 ತಿಳಿವುಗಳ ಹೋಲಿಕೆ  

ಅವು ದಾಟದ ಹಾಗೆಯೂ, ಭೂಮಿಯನ್ನು ಮುಚ್ಚುವುದಕ್ಕೆ ತಿರುಗಿ ಬಾರದ ಹಾಗೆಯೂ ನೀವು ಮೇರೆಯನ್ನು ಇಟ್ಟಿದ್ದೀರಿ.


ಬೆಳಕು ಮತ್ತು ಕತ್ತಲುಗಳ ಸಂಧಿಸುವ ಸ್ಥಾನದಲ್ಲಿ, ಸಮುದ್ರದ ಮೇಲೆ ಸುತ್ತಲೂ ವೃತ್ತ ಮೇರೆಯನ್ನು ಹಾಕಿದ್ದಾರೆ.


ಪ್ರವಾಹಗಳು ತನ್ನ ಆಜ್ಞೆಯನ್ನು ಮೀರದಂತೆ ಸಮುದ್ರಕ್ಕೆ ಅವರು ಮೇರೆಯನ್ನು ಮಾಡಿ ಭೂಮಿಯ ಅಸ್ತಿವಾರಗಳನ್ನು ನೇಮಿಸಿದಾಗ, ನಾನು ಅಲ್ಲಿ ಇದ್ದೆನು.


ನಿಮ್ಮ ಭಯದಿಂದ ನನ್ನ ಶರೀರವು ನಡುಗುತ್ತದೆ; ನಿಮ್ಮ ನಿಯಮಗಳಿಗೆ ನಾನು ಭಯಭಕ್ತಿಯುಳ್ಳವನಾಗಿದ್ದೇನೆ.


ನಿಮ್ಮ ದೇವರಾದ ಯೆಹೋವ ದೇವರೆಂಬ ಈ ಘನವುಳ್ಳ ಹೆಸರಿಗೆ ನೀವು ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನಿಯಮದ ಮಾತುಗಳನ್ನು ಅಲಕ್ಷಿಸಿ, ತಪ್ಪು ದಾರಿ ಹಿಡಿದರೆ,


ಅವರು ಸಮುದ್ರವನ್ನು ಗದರಿಸಿ, ಅದನ್ನು ಒಣಗುವಂತೆ ಮಾಡುತ್ತಾರೆ. ಸಕಲನದಿಗಳನ್ನು ಬತ್ತಿಸುತ್ತಾರೆ. ಬಾಷಾನು, ಕರ್ಮೆಲು ಬಾಡಿ ಹೋಗುತ್ತವೆ ಮತ್ತು ಲೆಬನೋನಿನ ಹೂವು ಬಾಡಿ ಹೋಗುತ್ತದೆ.


ಓ ಜನಾಂಗಗಳ ಅರಸರಾದವರೇ, ನಿಮಗೆ ಭಯಪಡದವನ್ಯಾರು? ಏಕೆಂದರೆ, ನಿಮಗೆ ಅದು ಸಲ್ಲತಕ್ಕದ್ದು. ಏಕೆಂದರೆ, ಜನಾಂಗಗಳ ಎಲ್ಲಾ ಜ್ಞಾನಿಗಳಲ್ಲಿಯೂ, ಅವುಗಳ ಎಲ್ಲಾ ರಾಜ್ಯಗಳಲ್ಲಿಯೂ ನಿಮ್ಮ ಹಾಗೆ ಯಾರೂ ಇಲ್ಲ.


ಯೇಸು ಎದ್ದು ಬಿರುಗಾಳಿಯನ್ನು ಗದರಿಸಿದರು ಮತ್ತು ಅಲೆಗಳಿಗೆ, “ಸುಮ್ಮನಿರು, ಶಾಂತವಾಗು!” ಎಂದು ಆಜ್ಞಾಪಿಸಿದರು. ಆಗ ಬಿರುಗಾಳಿಯು ನಿಂತು ಹೋಗಿ ಎಲ್ಲವೂ ಪ್ರಶಾಂತವಾಯಿತು.


ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರು? ಏಕೆಂದರೆ ನೀನೊಬ್ಬನೇ ಪರಿಶುದ್ಧನು. ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಟವಾದ್ದರಿಂದ ಎಲ್ಲಾ ರಾಷ್ಟ್ರಗಳವರು ಬಂದು, ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು,” ಎಂದು ಹೇಳಿದರು.


ಆಕಾಶದಲ್ಲಿ ಉಪ್ಪರಿಗೆಗಳನ್ನು ಕಟ್ಟಿಕೊಂಡು, ಭೂಮಿಯ ಮೇಲೆ ತಮ್ಮ ತಂಡಗಳನ್ನು ಸ್ಥಾಪಿಸಿ, ಸಮುದ್ರದ ನೀರನ್ನು ಕರೆದು, ಅದನ್ನು ಭೂಮಿಯ ಮೇಲೆ ಹೊಯ್ಯುವಂತೆ ಮಾಡುವಾತರು ಅವರೇ. ಅವರ ಹೆಸರು ಯೆಹೋವ ದೇವರು.


ಯೆಹೋವ ದೇವರು ಆಳಿಕೆ ಮಾಡುತ್ತಾರೆ. ರಾಷ್ಟ್ರಗಳು ನಡುಗಲಿ. ಅವರು ಕೆರೂಬಿಗಳ ಮಧ್ಯದಲ್ಲಿ ಕೂತಿದ್ದಾರೆ. ಭೂಮಿಯು ಕದಲಲಿ.


ಅವರು ಸಮುದ್ರದ ನೀರನ್ನು ಒಟ್ಟುಗೂಡಿಸುತ್ತಾರೆ; ಅವರು ಅಗಾಧವನ್ನು ಉಗ್ರಾಣಗಳಲ್ಲಿ ಇಡುತ್ತಾರೆ.


ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾಗದವರಿಗೆ ಹೆದರಬೇಡಿರಿ. ಆದರೆ ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿರಿ.


ನಾನು ಬಂದಾಗ ಏಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಏಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಕೈ ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೆ ನನಗೆ ಬಿಡಿಸುವುದಕ್ಕೆ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಮರುಭೂಮಿಯನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ಮೀನುಗಳು ಬಾಯಾರಿ, ಸತ್ತು ನಾರುವುವು.


ಆದರೆ ಯಾರಿಗೆ ನೀವು ಭಯಪಡಬೇಕೆಂದು ನಾನು ನಿಮಗೆ ತೋರಿಸುತ್ತೇನೆ: ನಿಮ್ಮ ದೇಹವನ್ನು ಕೊಂದ ಮೇಲೆ, ನರಕದಲ್ಲಿ ಹಾಕುವುದಕ್ಕೆ ಅಧಿಕಾರವಿರುವ ದೇವರಿಗೆ ಭಯಪಡಿರಿ. ಹೌದು, ದೇವರಿಗೇ ಭಯಪಡಿರಿ, ಎಂದು ನಾನು ನಿಮಗೆ ಹೇಳುತ್ತೇನೆ.


“ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯನು ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂಬ ನಿರ್ಣಯ ಹೊರಡಿಸಿದ್ದೇನೆ. “ಅವರೇ ಜೀವವುಳ್ಳ ದೇವರಾಗಿದ್ದು, ಎಂದೆಂದಿಗೂ ಸ್ಥಿರವಾಗಿರುವವರಾಗಿದ್ದಾರೆ. ಅವರ ರಾಜ್ಯವು ನಾಶವಾಗದೆ, ಅವರ ಆಳ್ವಿಕೆ ಶಾಶ್ವತವಾಗಿ ನಿಲ್ಲುವುದು.


ಯೆಹೋವ ದೇವರ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ! “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು, ‘ಯೆಹೋವ ದೇವರು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ’ ಎಂದು ಹೇಳಿದ್ದಾರಲ್ಲಾ. ಅವರಿಗಂತೂ ಅವಮಾನವಾಗುವುದು.


ಆಗ ದೇವರು, “ಆಕಾಶದ ಕೆಳಗಿರುವ ನೀರು ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣ ನೆಲವು ಕಾಣಿಸಲಿ,” ಎಂದರು. ಅದು ಹಾಗೆಯೇ ಆಯಿತು.


“ಭೂಗರ್ಭವನ್ನು ನುಗ್ಗಿಕೊಂಡು ಬಂದ, ಸಮುದ್ರವನ್ನು ದ್ವಾರಗಳಿಂದ ಮುಚ್ಚಿದವರು ಯಾರು?


ಅದರ ಸಮುದ್ರವು ಘೋಷಿಸಿ ನೊರೆಕಾರಿದರೂ, ಉಬ್ಬರದಿಂದ ಬೆಟ್ಟಗಳು ಅಲ್ಲಾಡಿದರೂ ನಾವು ಭಯಪಡೆವು.


ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ, ಬೆಂಕಿ ನೀರನ್ನು ಉಕ್ಕಿಸುವಂತೆಯೂ, ನೀನು ಇಳಿದುಬಂದು ನಿನ್ನ ಹೆಸರನ್ನು ನಿನ್ನ ವೈರಿಗಳಿಗೆ ತಿಳಿಯುವಂತೆ ಮಾಡು!


ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವುದು. ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವುದು. ಹೀಗಿರುವುದರಿಂದ ನೀನು ನಿನ್ನ ದೇವರಾದ ಯೆಹೋವ ದೇವರನ್ನು ಬಿಟ್ಟದ್ದೂ, ನನ್ನ ಭಯವು ನಿನ್ನಲ್ಲಿ ಇಲ್ಲದಿರುವುದೂ, ಕೆಟ್ಟದ್ದೂ, ಕಹಿಯಾದದ್ದೂ ಎಂದು ತಿಳಿದುಕೊಂಡು ನೋಡು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಇಸ್ರಾಯೇಲೇ, ನಾನು ನಿನಗೆ ಹೀಗೆ ಮಾಡುತ್ತೇನೆ. ನಾನು ನಿನಗೆ ಹೀಗೆ ಮಾಡುವುದರಿಂದ, ನೀನು ನಿನ್ನ ದೇವರನ್ನು ಎದುರುಗೊಳ್ಳಲು ಸಿದ್ಧಮಾಡಿಕೋ.


ಅವನು ಹೋಗಿ ಇವನ ಹೆಣವು ದಾರಿಯಲ್ಲಿ ಬಿದ್ದಿರುವುದನ್ನೂ, ಕತ್ತೆಯೂ, ಸಿಂಹವೂ ಹೆಣದ ಬಳಿಯಲ್ಲಿ ನಿಂತಿರುವುದನ್ನೂ ಕಂಡನು.


ಆದ್ದರಿಂದ ಮನುಷ್ಯರು ದೇವರಿಗೆ ಭಯಪಡುತ್ತಾರೆ; ಆದರೆ ತಾವೇ ಜ್ಞಾನಿಗಳೆಂದು ತಿಳಿದಿರುವವರು ದೇವರು ಲಕ್ಷಿಸುವುದಿಲ್ಲ.”


ಇದು ಯೆಹೋವ ದೇವರಾದ ನನ್ನ ನುಡಿ, ಯೆಹೋವ ದೇವರು, ಹಗಲಲ್ಲಿ ಬೆಳಕು ನೀಡಲು ಸೂರ್ಯನನ್ನು ನೇಮಿಸಿದವರು. ಇರುಳಲ್ಲಿ ಬೆಳಕು ನೀಡಲು ಚಂದ್ರ ನಕ್ಷತ್ರಗಳನ್ನು ಏರ್ಪಡಿಸಿದವರು. ಅಲೆಗಳು ಭೋರ್ಗರೆಯುವಷ್ಟು ಸಮುದ್ರವನ್ನು ಕೆರಳಿಸುವವರು, ಸೇನಾಧೀಶ್ವರ ಯೆಹೋವ ದೇವರು ಎಂಬ ನಾಮಧೇಯದಿಂದ ಪ್ರಸಿದ್ಧರು.


ಆಗ ಆ ಜನರು, ಯೆಹೋವ ದೇವರಿಗೆ ಬಹಳವಾಗಿ ಭಯಪಟ್ಟು, ಅವರಿಗೆ ಬಲಿ ಅರ್ಪಿಸಿ, ಹರಕೆಗಳನ್ನು ಸಲ್ಲಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು