Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 49:35 - ಕನ್ನಡ ಸಮಕಾಲಿಕ ಅನುವಾದ

35 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಗೋ, ನಾನು ಏಲಾಮಿನ ಬಿಲ್ಲನ್ನೂ, ಅವರ ಪರಾಕ್ರಮವನ್ನೂ, ಶ್ರೇಷ್ಠತ್ವವನ್ನೂ ಮುರಿಯುತ್ತೇನೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ಏಲಾಮಿನ ಬಲವಾದ ಮುಖ್ಯ ಬಿಲ್ಲನ್ನು ಮುರಿದುಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಸೇನಾಧೀಶ್ವರ ಸರ್ವೇಶ್ವರ ಹೀಗೆಂದರು - “ಇಗೋ, ಏಲಾಮಿನ ಮುಖ್ಯ ಬಲವಾದ ಬಿಲ್ಲನ್ನು ಮುರಿದುಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಏಲಾವಿುನ ಮುಖ್ಯ ಬಲವಾದ ಬಿಲ್ಲನ್ನು ಮುರಿದುಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ನಾನು ಅತಿ ಶೀಘ್ರದಲ್ಲಿ ಏಲಾಮಿನ ಬಿಲ್ಲನ್ನು ಮುರಿದುಹಾಕುವೆನು. ಏಲಾಮಿಗೆ ಬಿಲ್ಲು ಬಹು ಮುಖ್ಯವಾದ ಆಯುಧವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 49:35
8 ತಿಳಿವುಗಳ ಹೋಲಿಕೆ  

ಏಲಾಮಿನವರು ಕುದುರೆಗಳ, ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿಯನ್ನು ತೆರೆದರು.


ಏಕೆಂದರೆ ವಿನಾಶ ಮಾಡುವವನು ಅದರ ಮೇಲೆ ಅಂದರೆ ಬಾಬಿಲೋನಿನ ಮೇಲೆಯೇ ಬಂದಿದ್ದಾನೆ. ಅದರ ಪರಾಕ್ರಮಶಾಲಿಗಳು ಸೆರೆಯಾಗಿಬಿಟ್ಟಿದ್ದಾರೆ. ಅವಳ ಬಿಲ್ಲುಗಳು ಮುರಿದುಹೋಗಿವೆ. ಏಕೆಂದರೆ ಪ್ರತಿದಂಡನೆಗಳ ದೇವರಾದ ಯೆಹೋವ ದೇವರು ನಿಶ್ಚಯವಾಗಿ ಮುಯ್ಯಿಗೆ ಮುಯ್ಯಿ ತೀರಿಸುವರು.


ದೇವರು ಯುದ್ಧಗಳನ್ನು ಭೂಮಿಯ ಅಂತ್ಯದವರೆಗೆ ನಿಲ್ಲಿಸುತ್ತಾರೆ. ಬಿಲ್ಲನ್ನೂ ಭಲ್ಲೆಯನ್ನೂ ಮುರಿದು ಹಾಕಿದ್ದಾರೆ. ರಥಗಳನ್ನು ಬೆಂಕಿಯಿಂದ ಸುಡುತ್ತಾರೆ.


“ಬಾಬಿಲೋನಿಗೆ ವಿರೋಧವಾಗಿ ಬಿಲ್ಲುಬಾಣಗಾರರನ್ನೆಲ್ಲ ಒಟ್ಟಾಗಿ ಕರೆಯಿರಿ; ಅದರ ಸುತ್ತಲು ದಂಡಿಳಿಸಿರಿ ಅದರ ನಿವಾಸಿಗಳಲ್ಲಿ ಯಾರೂ ತಪ್ಪಿಸಿಕೊಳ್ಳದ ಹಾಗಿರಲಿ. ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿತೀರಿಸಿರಿ ಅದು ಮಾಡಿದಂತೆಯೇ ಅದಕ್ಕೆ ಮಾಡಿ. ಏಕೆಂದರೆ ಅದು ಅಹಂಕಾರದಿಂದ ಇಸ್ರಾಯೇಲರ ಪರಿಶುದ್ಧ ಯೆಹೋವ ದೇವರನ್ನು ಅಸಡ್ಡೆಮಾಡಿತು.


“ಬಿಲ್ಲನ್ನು ಬಗ್ಗಿಸುವವರೇ, ಬಾಬಿಲೋನಿಗೆ ವಿರೋಧವಾಗಿ ಸುತ್ತಲೂ ಯುದ್ಧ ಸಿದ್ಧಮಾಡಿರಿ; ಅದಕ್ಕೆ ಎಸೆಯಿರಿ; ಬಾಣಗಳನ್ನು ಕಡಿಮೆ ಮಾಡಬೇಡಿರಿ; ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿತಲ್ಲಾ.


ಆ ದಿನದಲ್ಲಿ, ನಾನು ಇಸ್ರಾಯೇಲಿನ ಬಿಲ್ಲು ಶಕ್ತಿಯನ್ನು ಇಜ್ರೆಯೇಲ್ ಕಣಿವೆಯಲ್ಲಿ ಮುರಿದು ಹಾಕುವೆನು,” ಎಂದು ಹೇಳಿದರು.


“ಶಾಂತವಾಗಿರಿ, ನಾನೇ ದೇವರಾಗಿದ್ದೇನೆಂದು ತಿಳಿದುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ಉನ್ನತನಾಗಿರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ಘೋರ ದರ್ಶನವು ನನಗೆ ತಿಳಿಯಬಂದಿದೆ: ಬಾಧಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು