Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:24 - ಕನ್ನಡ ಸಮಕಾಲಿಕ ಅನುವಾದ

24 ಬೊಚ್ರ, ಕೆರೀಯೋತ್, ಹೀಗೆ ಸಮೀಪದಲ್ಲಾಗಲಿ, ದೂರದಲ್ಲಾಗಲಿ ಇರುವ, ಮೋವಾಬಿನ ಸಮಸ್ತ ಪಟ್ಟಣಗಳ ಮೇಲೆಯೂ ಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಕೆರೀಯೋತ್, ಬೊಚ್ರ ಅಂತು ದೂರದ ಮತ್ತು ಹತ್ತಿರದ ಮೋವಾಬಿನ ಎಲ್ಲಾ ಪಟ್ಟಣಗಳಿಗೂ ದಂಡನೆಯಾಗದೆ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಬೊಚ್ರ, ಹೀಗೆ ದೂರದ ಹತ್ತಿರದ ಮೋಬಾವಿನ ಎಲ್ಲ ನಗರಗಳಿಗೂ ದಂಡನೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಕೆರೀಯೋತ್, ಬೊಚ್ರ, ಅಂತು ದೂರದ ಹತ್ತಿರದ ಮೋವಾಬಿನ ಎಲ್ಲಾ ಪಟ್ಟಣಗಳಿಗೂ ದಂಡನೆಯಾಗದೆ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಕೆರೀಯೋತ್, ಬೊಚ್ರ ಮೊದಲಾದ ಮೋವಾಬಿನ ದೂರದ ಹತ್ತಿರದ ಎಲ್ಲಾ ಪಟ್ಟಣಗಳಿಗೆ ದಂಡನೆ ವಿಧಿಸಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:24
8 ತಿಳಿವುಗಳ ಹೋಲಿಕೆ  

ನಾನು ಮೋವಾಬಿನ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಕೆರೀಯೋತಿನ ಕೋಟೆಗಳನ್ನು ದಹಿಸಿಬಿಡುವುದು. ಮೋವಾಬು ಆರ್ಭಟದ ಮತ್ತು ತುತೂರಿಯ ಧ್ವನಿಯ ಸಂಗಡ ಗಲಿಬಿಲಿಯಲ್ಲಿ ಸಾಯುವುದು.


ಕೆರೀಯೋತ್ ಅವನಿಗೆ ವಶವಾಗುವುದು; ಬಲವಾದ ಕೋಟೆಗಳು ಅವನ ಕೈವಶವಾಗುವುವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೆರುವ ಹೆಣ್ಣಿನ ಎದೆಯದಂತೆ ಅದರುವುದು.


ಇದಲ್ಲದೆ ರೂಬೇನನ ಗೋತ್ರದಲ್ಲಿ ಬೆಚೆರನ್ನೂ ಯಹಚವನ್ನೂ


ಅವು ಯಾವುವೆಂದರೆ, ರೂಬೇನ್ಯರಿಗೆ ಮರುಭೂಮಿಯ ಬಯಲಿನಲ್ಲಿ ಇರುವ ಬೆಚೆರ್, ಗಾದನವರಿಗೆ ಗಿಲ್ಯಾದಿನ ರಾಮೋತ್, ಮನಸ್ಸೆಯವರಿಗೆ ಬಾಷಾನಿನಲ್ಲಿರುವ ಗೋಲಾನ್.


ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು.


ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರವನ್ನು ತೊಟ್ಟುಕೊಂಡವನಾಗಿ, ತನ್ನ ಮಹಾ ಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? “ನೀತಿಯನ್ನು ಘೋಷಿಸುವವನೂ, ರಕ್ಷಿಸಲು ಬಲಿಷ್ಠನೂ ನಾನೇ.”


ಏಕೆಂದರೆ ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವುದೆಂದೂ ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾಗುವುವೆಂದೂ, ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆ,” ಎಂದು ಯೆಹೋವ ದೇವರು ಅನ್ನುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು