Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:15 - ಕನ್ನಡ ಸಮಕಾಲಿಕ ಅನುವಾದ

15 ಮೋವಾಬು ಸೂರೆಯಾಯಿತು. ಅದರ ಪಟ್ಟಣಗಳು ಏರಿ ಹೋದವು, ಅದರ ಶ್ರೇಷ್ಠ ಯೌವನಸ್ಥರು ಹತರಾಗುವುದಕ್ಕೆ ಹೋಗಿದ್ದಾರೆ,” ಎಂದು ಸರ್ವಶಕ್ತ ಯೆಹೋವ ಎಂಬ ಹೆಸರುಳ್ಳ ರಾಜಾಧಿರಾಜರ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಮೋವಾಬು ಹಾಳಾಗಿದೆ; ಸುಟ್ಟುಹೋದ ಅದರ ಪಟ್ಟಣಗಳಿಂದ ಹೊಗೆ ಎದ್ದಿದ್ದೆ. ಅದರಲ್ಲಿನ ಶ್ರೇಷ್ಠ ಯುವಕರು ಹತರಾಗುವುದಕ್ಕೆ ಇಳಿದುಹೋಗಿದ್ದಾರೆ. ಇದು ಸೇನಾಧೀಶ್ವರನಾದ ಯೆಹೋವನೆಂಬ ನಾಮವುಳ್ಳ ರಾಜಾಧಿರಾಜನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಮೋವಾಬು ಹಾಳಾಗಿದೆ ಸುಟ್ಟುಹೋದ ಅದರ ನಗರಗಳಿಂದ ಹೊಗೆ ಎದ್ದಿದೆ. ಅದರ ಸರ್ವಶ್ರೇಷ್ಟ ಯುವಕರು ಹೋಗಿದ್ದಾರೆ ಹತರಾಗುವುದಕ್ಕೆ, ಸರ್ವಶಕ್ತ ಸರ್ವೇಶ್ವರನೆಂಬ ನಾಮವುಳ್ಳ ರಾಜಾಧಿರಾಜನ ನುಡಿಯಂತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಸುಟ್ಟುಹೋದ ಅದರ ಪಟ್ಟಣಗಳಿಂದ ಹೊಗೆ ಎದ್ದಿದೆ; ಅದರ ಯುವಕ ಶ್ರೇಷ್ಠರು ಹತರಾಗುವದಕ್ಕೆ ಇಳಿದುಹೋಗಿದ್ದಾರೆ. ಇದು ಸೇನಾಧೀಶ್ವರನಾದ ಯೆಹೋವನೆಂಬ ನಾಮವುಳ್ಳ ರಾಜಾಧಿರಾಜನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ವೈರಿಯು ಮೋವಾಬಿನ ಮೇಲೆ ಧಾಳಿ ಮಾಡುವನು. ವೈರಿಯು ಆ ಪಟ್ಟಣಗಳಲ್ಲಿ ಪ್ರವೇಶಮಾಡಿ ಅವುಗಳ ಧ್ವಂಸ ಮಾಡುವನು. ಅವಳ ಅತ್ಯುತ್ತಮ ತರುಣರು ಕೊಲೆಗೀಡಾಗುವರು.” ಈ ಸಂದೇಶವು ರಾಜನಿಂದ ಬಂದಿದೆ. ಆ ರಾಜನ ಹೆಸರು ಸರ್ವಶಕ್ತನಾದ ಯೆಹೋವನು ಎಂದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:15
17 ತಿಳಿವುಗಳ ಹೋಲಿಕೆ  

ಅದರ ಹೋರಿಗಳನ್ನೆಲ್ಲಾ ಕೊಲ್ಲಿರಿ, ಅವು ವಧ್ಯಸ್ಥಾನಕ್ಕೆ ಹೋಗಲಿ, ಅವುಗಳ ಗತಿಯನ್ನು ಏನೆಂದು ಹೇಳಲಿ! ಅವುಗಳಿಗೆ ವಿಪತ್ಕಾಲವು ಒದಗಿದೆ. ದಂಡನೆಯ ದಿನವು ಸಂಭವಿಸಿದೆ.


“ಸೇನಾಧೀಶ್ವರ ಯೆಹೋವ ದೇವರೆಂದು ಹೆಸರುಳ್ಳ ಅರಸನು ಹೇಳುವುದೇನೆಂದರೆ, ‘ನನ್ನ ಜೀವದಾಣೆ,’ ಬೆಟ್ಟಗಳಲ್ಲಿ ತಾಬೋರಿನಂತೆಯೂ, ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯವಾಗಿ ಬರುವನು.


ಇದಲ್ಲದೆ ನಾನು ಅವಳ ಪ್ರಧಾನರನ್ನೂ, ಅವಳ ಜ್ಞಾನಿಗಳನ್ನೂ, ಅವಳ ಅಧಿಪತಿಗಳನ್ನೂ, ಅವಳ ಅಧಿಕಾರಿಗಳನ್ನೂ, ಅವಳ ಪರಾಕ್ರಮಶಾಲಿಗಳನ್ನೂ ಮತ್ತರಾಗಿ ಮಾಡುತ್ತೇನೆ. ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಎಂಬ ಹೆಸರುಳ್ಳ ರಾಜಾಧಿರಾಜರು ಸಾರುತ್ತಾರೆ.


“ಆದರೆ ತನ್ನ ಮಂದೆಯಲ್ಲಿ ದೋಷವಿಲ್ಲದ ಗಂಡು ಪಶು ಇರಲಾಗಿ ಅದನ್ನು ಅರ್ಪಿಸಲು ಪ್ರಮಾಣಮಾಡಿ, ಯೆಹೋವ ದೇವರಿಗೆ ದೋಷವುಳ್ಳದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ, ಏಕೆಂದರೆ ನಾನು ಮಹಾ ಅರಸನು, ನನ್ನ ಹೆಸರು ಇತರ ಜನಾಂಗಗಳಲ್ಲಿ ಭಯಭಕ್ತಿಯುಳ್ಳದ್ದಾಗಿರಬೇಕು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಆತನ ತೊಡೆಯ ಮೇಲಣ ವಸ್ತ್ರದಲ್ಲಿ: ರಾಜಾಧಿರಾಜನೂ ಕರ್ತರ ಕರ್ತನೂ. ಎಂಬ ಹೆಸರು ಬರೆದಿದೆ.


ಇಗೋ ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ. ಕೊಯಿದವರ ಕೂಗು ಸೈನ್ಯಗಳ ಅಧಿಪತಿ ಆಗಿರುವ ಕರ್ತದೇವರ ಕಿವಿಗಳಲ್ಲಿ ಬಿದ್ದಿದೆ.


ಯೆಹೋವ ದೇವರು ಭೂಮಿಗೆಲ್ಲಾ ಅರಸನಾಗಿರುವರು. ಆ ದಿವಸದಲ್ಲಿ ಯೆಹೋವ ದೇವರು ಒಬ್ಬರೇ ಇರುವರು. ಆತನ ಹೆಸರು ಒಂದೇ ಹೆಸರಾಗಿರುವುದು.


ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸರನ್ನು ಸ್ತುತಿಸಿ, ಹೆಚ್ಚಿಸಿ ಘನಪಡಿಸುತ್ತೇನೆ. ಅವರ ಕ್ರಿಯೆಗಳೆಲ್ಲಾ ಸತ್ಯವೇ. ಅವರ ಮಾರ್ಗಗಳು ನ್ಯಾಯವೇ. ಗರ್ವದಲ್ಲಿ ನಡೆಯುವವರನ್ನು ಅವರೇ ತಗ್ಗಿಸಬಲ್ಲರು.


“ಕುರಿ, ಟಗರು, ಹೋತಗಳ ಹಾಗೆ ಅವರನ್ನು ವಧ್ಯಸ್ಥಾನಕ್ಕೆ ಬರಮಾಡುವೆನು. ಇದು ಯೆಹೋವನಾದ ನನ್ನ ನುಡಿ.


ಮೋವಾಬು ನಾಶವಾಯಿತು: ಅದರ ಚಿಕ್ಕವರು ಕೂಗನ್ನು ಕೇಳುವಂತೆ ಮಾಡಿದರು.


ಏಕೆಂದರೆ ಮಹೋನ್ನತರಾದ ಯೆಹೋವ ದೇವರು ಭಯಭಕ್ತಿಗೆ ಪಾತ್ರರೂ ಭೂಮಿಯ ಮೇಲೆಲ್ಲಾ ಮಹಾರಾಜರೂ ಆಗಿದ್ದಾರೆ.


“ಹಿಂದೊಮ್ಮೆ ಈಜಿಪ್ಟಿಗೆ ನಾನು ಮಾಡಿದಂತೆ ನಿಮ್ಮನ್ನು ವ್ಯಾಧಿಯಿಂದ ಬಾಧಿಸಿದೆ. ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ, ನಿಮ್ಮ ಯೌವನಸ್ಥರನ್ನೂ ಖಡ್ಗದಿಂದ ಕೊಂದು ಹಾಕಿದ್ದೇನೆ. ನಿಮ್ಮ ಪಾಳೆಯಗಳ ದುರ್ವಾಸನೆಯು ನಿಮ್ಮ ಮೂಗು ಸಹಿಸದ ಹಾಗೆ ಮಾಡಿದ್ದೇನೆ. ಆದರೂ ನೀವು ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.


ಅವರ ವಿಮೋಚಕನು ಬಲಿಷ್ಠನೇ, ಸೇನಾಧೀಶ್ವರ ಯೆಹೋವ ದೇವರೆಂಬುದೇ ಅವರ ಹೆಸರು; ಅವರು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ, ಬಾಬಿಲೋನಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ, ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು