ಯೆರೆಮೀಯ 48:10 - ಕನ್ನಡ ಸಮಕಾಲಿಕ ಅನುವಾದ10 “ಯೆಹೋವ ದೇವರು ನೇಮಿಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ; ರಕ್ತದಿಂದ ತನ್ನ ಖಡ್ಗವನ್ನು ಹಿಂದೆಗೆಯುವವನಿಗೆ ಶಾಪವಾಗಲಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಯೆಹೋವನು ನೇಮಿಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ; ತನ್ನ ಕತ್ತಿಯನ್ನು ರಕ್ತಸುರಿಸದಂತೆ ತಡೆಯುವವನಿಗೆ ಶಾಪ ತಗಲಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಸರ್ವೇಶ್ವರನು ನೇಮಿಸಿದ ಕೆಲಸವನ್ನು ನಿರ್ವಹಿಸುವುದರಲ್ಲಿ ಆಲಸ್ಯನಾಗಿರುವವನು ಶಾಪಗ್ರಸ್ತನು. ತನ್ನ ಕತ್ತಿ ರಕ್ತಸುರಿಸದಂತೆ ತಡೆಯುವವನಿಗೆ ಶಾಪ ತಗಲಲಿ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಯೆಹೋವನು ನೇವಿುಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ; ತನ್ನ ಕತ್ತಿಯನ್ನು ರಕ್ತಸುರಿಸದಂತೆ ತಡೆಯುವವನಿಗೆ ಶಾಪತಗಲಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಯೆಹೋವನು ಹೇಳಿದಂತೆ ನಡೆಯದಿದ್ದವನಿಗೆ ಮತ್ತು ಆ ಜನರನ್ನು ಕೊಲ್ಲಲು ತನ್ನ ಖಡ್ಗವನ್ನು ಬಳಸದಿದ್ದವನಿಗೆ ಕೇಡಾಗುವುದು. ಅಧ್ಯಾಯವನ್ನು ನೋಡಿ |
ಅರಸನು ಹಾದು ಹೋಗುತ್ತಿರುವಾಗ, ಪ್ರವಾದಿಯು ಅರಸನಿಗೆ ಕೂಗಿ ಹೇಳಿದ್ದೇನೆಂದರೆ, “ನಿನ್ನ ಸೇವಕನು ಯುದ್ಧಕ್ಕೆ ಹೋಗಿರುವಾಗ ಇಗೋ, ಒಬ್ಬ ಮನುಷ್ಯನು ಸೆರೆಯವನನ್ನು ನನ್ನ ಬಳಿಗೆ ಹಿಡಿದುಕೊಂಡು ಬಂದು, ‘ಈ ಮನುಷ್ಯನನ್ನು ಕಾಯಿ. ಇವನು ತಪ್ಪಿಸಿಕೊಂಡುಹೋದರೆ ನಿನ್ನ ಪ್ರಾಣವು ಇವನ ಪ್ರಾಣಕ್ಕೆ ಬದಲಾಗಿರುವುದು. ಇಲ್ಲವೆ ನೀನು ಮೂರು ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಡಬೇಕು,’ ಎಂದನು.