ಯೆರೆಮೀಯ 46:27 - ಕನ್ನಡ ಸಮಕಾಲಿಕ ಅನುವಾದ27 “ಆದರೆ ನೀನು, ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡಬೇಡ; ಇಸ್ರಾಯೇಲೇ, ದಿಗ್ಭ್ರಮೆಗೊಳ್ಳಬೇಡ; ಏಕೆಂದರೆ ಇಗೋ, ನಾನು ನಿನ್ನನ್ನು ದೂರದಿಂದಲೂ, ನಿನ್ನ ಸಂತಾನವನ್ನು ಅವರು ಸೆರೆಯಾಗಿ ಹೋದ ದೇಶದಿಂದಲೂ ರಕ್ಷಿಸುವೆನು; ಅವನನ್ನು ಭಯಪಡಿಸುವುದಕ್ಕೆ ಯಾರು ಇರುವುದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ನನ್ನ ಸೇವಕ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ, ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು; ಯಾಕೋಬು ಹಿಂದಿರುಗಿ ನೆಮ್ಮದಿಯಾಗಿಯೂ, ಹಾಯಾಗಿಯೂ ಇರುವುದು; ಯಾರೂ ಅದನ್ನು ಹೆದರಿಸರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 “ನನ್ನ ದಾಸ ಯಕೋಬೇ, ಭಯಪಡಬೇಡ ಇಸ್ರಯೇಲೇ, ಅಂಜಬೇಡ, ಇಗೋ, ನಾನು ನಿನ್ನನ್ನು ಉದ್ಧರಿಸುವೆನು ದೂರದೇಶದಿಂದ ನಿನ್ನ ಸಂತಾನವನ್ನು ರಕ್ಷಿಸುವೆನು ಸೆರೆಹೋದ ಸೀಮೆಯಿಂದ. ಯಕೋಬು ಹಾಯಾಗಿ ಹಿಂತಿರುಗಿ ಬಾಳುವುದು ನೆಮ್ಮದಿಯಿಂದ. ಭಯಪಡಬೇಡ ನನ್ನ ದಾಸ ಯಕೋಬೇ, ನಾನಿದ್ದೇನೆ ನಿನ್ನೊಂದಿಗೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ನನ್ನ ಸೇವಕ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ, ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು; ಯಾಕೋಬು ಹಿಂದಿರುಗಿ ನೆಮ್ಮದಿಯಾಗಿಯೂ ಹಾಯಾಗಿಯೂ ಇರುವದು; ಯಾರೂ ಅದನ್ನು ಹೆದರಿಸರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ. ಇಸ್ರೇಲೇ, ಅಂಜಬೇಡ. ಆ ದೂರಸ್ಥಳಗಳಿಂದ ನಾನು ನಿನ್ನನ್ನು ಖಂಡಿತವಾಗಿ ರಕ್ಷಿಸುತ್ತೇನೆ. ಬಂಧಿಯಾಗಿರುವ ದೇಶಗಳಿಂದ ನಾನು ನಿನ್ನ ಮಕ್ಕಳನ್ನು ರಕ್ಷಿಸುತ್ತೇನೆ. ಯಾಕೋಬು ಪುನಃ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇರುವುದು. ಯಾರೂ ಅದನ್ನು ಹೆದರಿಸಲಾರರು.” ಅಧ್ಯಾಯವನ್ನು ನೋಡಿ |