Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 45:4 - ಕನ್ನಡ ಸಮಕಾಲಿಕ ಅನುವಾದ

4 ಆದರೆ ನಿಮಗೆ ಹೇಳಲು ಯೆಹೋವ ದೇವರು ನನಗೆ ಹೇಳಿದ್ದಾರೆ. ‘ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಕಟ್ಟಿದ್ದನ್ನು ಕೆಡವಿಬಿಡುತ್ತೇನೆ; ನಾನು ನೆಟ್ಟದ್ದನ್ನು ಕಿತ್ತು ಹಾಕುತ್ತೇನೆ. ಹೌದು, ಈ ಸಮಸ್ತ ದೇಶವನ್ನೇ ನಾಶಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಯೆಹೋವನ ಈ ವಾಕ್ಯವನ್ನು ಕೇಳು, ಇಗೋ, ನಾನು ಕಟ್ಟಿದ್ದನ್ನು ನಾನೇ ಕೆಡವುವೆನು, ನಾನು ನೆಟ್ಟದ್ದನ್ನು ನಾನೇ ಕಿತ್ತುಹಾಕುವೆನು; ಹೌದು, ಭೂಮಂಡಲದಲ್ಲೆಲ್ಲಾ ಹಾಗೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 “ಸರ್ವೇಶ್ವರನ ಈ ವಾಣಿಯನ್ನು ಕೇಳು: ‘ನೋಡು, ನಾನು ಕಟ್ಟಿದ್ದನ್ನು ನಾನೇ ಕೆಡವುತ್ತೇನೆ. ನಾನು ನೆಟ್ಟಿದ್ದನ್ನು ನಾನೇ ಕಿತ್ತುಹಾಕುತ್ತೇನೆ. ಹೌದು ಜಗದಲ್ಲೆಲ್ಲ ಹಾಗೆ ಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಯೆಹೋವನ ಈ ವಾಕ್ಯವನ್ನು ಕೇಳು - ಇಗೋ, ನಾನು ಕಟ್ಟಿದ್ದನ್ನು ನಾನೇ ಕೆಡವುವೆನು, ನಾನು ನೆಟ್ಟದ್ದನ್ನು ನಾನೇ ಕಿತ್ತುಹಾಕುವೆನು; ಹೌದು, ಭೂಮಂಡಲದಲ್ಲೆಲ್ಲಾ ಹಾಗೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಯೆರೆಮೀಯನೇ, “ಯೆಹೋವನು ಹೀಗೆ ಹೇಳುತ್ತಾನೆಂದು ಬಾರೂಕನಿಗೆ ತಿಳಿಸು. ನಾನು ಕಟ್ಟಿದ್ದನ್ನು ಕೆಡಿಸುತ್ತೇನೆ. ನಾನು ನೆಟ್ಟಿದ್ದನ್ನು ಕಿತ್ತು ಎಸೆಯುತ್ತೇನೆ. ನಾನು ಈ ರೀತಿ ಯೆಹೂದದಲ್ಲಿ ಎಲ್ಲಾ ಕಡೆಗೂ ಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 45:4
12 ತಿಳಿವುಗಳ ಹೋಲಿಕೆ  

ನಾನು ಅವರನ್ನು ಕೀಳಲು, ಕೆಡವಲು, ಅಳಿಸಲು ಹಾಳುಮಾಡಲು, ಎಚ್ಚರವಹಿಸಿದ ಹಾಗೆಯೇ ಇನ್ನು ಮುಂದೆ ಅವರನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಅವರ ವಿಷಯವಾಗಿ ಎಚ್ಚರವಹಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ನೋಡು, ಈ ಹೊತ್ತು ನೀನು ಕೀಳುವುದಕ್ಕೂ, ಕೆಳಗೆ ಹಾಕಿಬಿಡುವುದಕ್ಕೂ, ನಾಶಮಾಡುವುದಕ್ಕೂ, ಕೆಡವಿ ಹಾಕುವುದಕ್ಕೂ, ಕಟ್ಟುವುದಕ್ಕೂ, ನೆಡುವುದಕ್ಕೂ ನಾನು ನಿನ್ನನ್ನು ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ನಿನ್ನನ್ನು ನೇಮಿಸಿದ್ದೇನೆ,” ಎಂದರು.


ಇಸ್ರಾಯೇಲಿನ ವಂಶವೂ ಯೆಹೂದದ ವಂಶವೂ ನನಗೆ ಕೋಪವನ್ನೆಬ್ಬಿಸುವ ಹಾಗೆ ಬಾಳನಿಗೆ ಧೂಪವನ್ನರ್ಪಿಸಿ, ತಮಗೆ ವಿರೋಧವಾಗಿ ಮಾಡಿಕೊಂಡ ಕೇಡಿನ ನಿಮಿತ್ತ, ನಿನ್ನನ್ನು ನೆಟ್ಟ ಸೇನಾಧೀಶ್ವರ ಯೆಹೋವ ದೇವರು ನಿನ್ನ ಮೇಲೆ ಕೆಡುಕಾಗಲಿ ಎಂದು ಪ್ರಕಟಿಸಿದ್ದಾರೆ.


ಯೆಹೋವ ದೇವರು ಹೇಗೆ ನಿಮಗೆ ಸಮೃದ್ಧಿಯನ್ನು ಕೊಡುವುದಕ್ಕೂ ನಿಮ್ಮನ್ನು ಹೆಚ್ಚಿಸುವುದಕ್ಕೂ ನಿಮಗೋಸ್ಕರ ಸಂತೋಷಿಸಿದರೋ, ಹಾಗೆಯೇ ಯೆಹೋವ ದೇವರು ನಿಮ್ಮನ್ನು ಕೆಡಿಸಿ, ನಾಶಮಾಡುವುದಕ್ಕೂ ನಿಮಗೆ ವಿರೋಧವಾಗಿ ಸಂತೋಷಿಸುವರು. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಿಂದಲೂ ನಿಮ್ಮನ್ನು ಕಿತ್ತುಹಾಕುವರು.


ದ್ರೋಹಿಗಳೆಲ್ಲರೂ ನೆಮ್ಮದಿಯಾಗಿರುವುದು ಏಕೆ? ನೀವು ಅವರನ್ನು ನಾಟಿದ್ದೀರಿ, ಅವರು ಬೇರೂರಿ ಬೆಳೆದು ಹಣ್ಣು ಬಿಟ್ಟಿದ್ದಾರೆ, ನೀವು ಅವರ ಬಾಯಿಗೆ ಸಮೀಪ, ಅಂತರಿಂದ್ರಿಯಕ್ಕೆ ದೂರ.


ಕೊಲ್ಲುವುದಕ್ಕೆ ಒಂದು ಸಮಯ, ಸ್ವಸ್ಥ ಮಾಡುವುದಕ್ಕೆ ಒಂದು ಸಮಯ, ಕೆಡವಿಬಿಡುವುದಕ್ಕೆ ಒಂದು ಸಮಯ, ಕಟ್ಟುವುದಕ್ಕೆ ಒಂದು ಸಮಯ.


ಅವರು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾರೆ. ಅವರು ತನ್ನ ಸಭಾ ಸ್ಥಾನಗಳನ್ನು ನಾಶಮಾಡಿದ್ದಾರೆ. ಯೆಹೋವ ದೇವರು ಚೀಯೋನಿಗೆ ಪವಿತ್ರ ಹಬ್ಬಗಳನ್ನೂ, ಸಬ್ಬತ್ ದಿನಗಳನ್ನೂ ಮರೆತುಬಿಡುವಂತೆ ಮಾಡಿದ್ದಾರೆ. ತನ್ನ ಕೋಪದ ಉರಿಯಲ್ಲಿ ಅರಸನನ್ನೂ, ಯಾಜಕನನ್ನೂ ತುಚ್ಛೀಕರಿಸಿದ್ದಾರೆ.


ಆದ್ದರಿಂದ ನಾನು ಅವಳನ್ನು ಮೋಹಿಸಿ, ಅವಳನ್ನು ಮರುಭೂಮಿಯೊಳಗೆ ಕರೆದುಕೊಂಡು ಬಂದು, ಅವಳ ಸಂಗಡ ಹಿತಕರವಾಗಿ ಮಾತನಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು