ಯೆರೆಮೀಯ 44:15 - ಕನ್ನಡ ಸಮಕಾಲಿಕ ಅನುವಾದ15 ಆಗ ತಮ್ಮ ಹೆಂಡತಿಯರು ಅನ್ಯ ದೇವತೆಗಳಿಗೆ ಧೂಪ ಹಾಕುತ್ತಿದ್ದರೆಂದು ತಿಳಿದುಕೊಂಡ ಗಂಡಸರು, ಅಲ್ಲಿ ದೊಡ್ಡ ಗುಂಪಾಗಿ ನಿಂತುಕೊಂಡಿದ್ದ ಹೆಂಗಸರು, ಅಂತು ಈಜಿಪ್ಟಿನಲ್ಲೂ ಪತ್ರೋಸಿನಲ್ಲೂ ವಾಸವಾಗಿದ್ದವರೆಲ್ಲರೂ ಯೆರೆಮೀಯನಿಗೆ ಹೀಗೆ ಹೇಳಿದರು: ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 “ಆಗ ತಮ್ಮ ಹೆಂಡತಿಯರು ಅನ್ಯದೇವತೆಗಳಿಗೆ ಧೂಪಹಾಕುತ್ತಿದ್ದರೆಂದು ತಿಳಿದುಕೊಂಡಿದ್ದ ಗಂಡಸರು, ಅಲ್ಲಿ ದೊಡ್ಡ ಗುಂಪಾಗಿ ನಿಂತುಕೊಂಡಿದ್ದ ಹೆಂಗಸರು ಅಂತು ಐಗುಪ್ತದಲ್ಲಿಯೂ, ಪತ್ರೋಸಿನಲ್ಲಿಯೂ ವಾಸವಾಗಿದ್ದವರೆಲ್ಲರೂ ಯೆರೆಮೀಯನಿಗೆ” ಹೀಗೆ ಹೇಳಿದರು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಆಗ ತಮ್ಮ ಹೆಂಡತಿಯರು ಅನ್ಯದೇವತೆಗಳಿಗೆ ಧೂಪಾರತಿ ಎತ್ತುತ್ತಿದ್ದರೆಂದು ತಿಳಿದುಕೊಂಡ ಗಂಡಸರು, ಅಲ್ಲೆ ದೊಡ್ಡ ಗುಂಪಾಗಿ ನಿಂತಿದ್ದ ಹೆಂಗಸರು, ಹಾಗೂ ಈಜಿಪ್ಟಿನಲ್ಲೂ ಪತ್ರೋಸಿನಲ್ಲೂ ವಾಸವಾಗಿದ್ದ ಎಲ್ಲ ಜನರು ಯೆರೆಮೀಯನಿಗೆ ಹೀಗೆಂದು ಉತ್ತರಕೊಟ್ಟರು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಆಗ ತಮ್ಮ ಹೆಂಡತಿಯರು ಅನ್ಯದೇವತೆಗಳಿಗೆ ಧೂಪಹಾಕುತ್ತಿದ್ದರೆಂದು ತಿಳಿದುಕೊಂಡ ಗಂಡಸರು, ಅಲ್ಲಿ ದೊಡ್ಡ ಗುಂಪಾಗಿ ನಿಂತುಕೊಂಡಿದ್ದ ಹೆಂಗಸರು, ಅಂತು ಐಗುಪ್ತದಲ್ಲಿಯೂ ಪತ್ರೋಸಿನಲ್ಲಿಯೂ ವಾಸವಾಗಿದ್ದವರೆಲ್ಲರೂ ಯೆರೆಮೀಯನಿಗೆ ಹೀಗೆ ಹೇಳಿದರು - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಅನೇಕ ಯೆಹೂದಿ ಸ್ತ್ರೀಯರು ಬೇರೆ ದೇವರುಗಳಿಗೆ ನೈವೇದ್ಯಗಳನ್ನು ಅರ್ಪಿಸುತ್ತಿದ್ದರು. ಅವರ ಗಂಡಂದಿರಿಗೆ ಅದು ಗೊತ್ತಿತ್ತು. ಆದರೆ ಅವರು ಅದನ್ನು ತಡೆಯಲಿಲ್ಲ. ಯೆಹೂದದ ಜನರ ಒಂದು ದೊಡ್ಡ ಗುಂಪು ಸೇರಿತ್ತು. ಅವರು ಈಜಿಪ್ಟಿನ ದಕ್ಷಿಣಭಾಗದಲ್ಲಿ ವಾಸಿಸುವ ಯೆಹೂದಿಗಳಾಗಿದ್ದರು. ಅನ್ಯದೇವರುಗಳಿಗೆ ನೈವೇದ್ಯವನ್ನು ಅರ್ಪಿಸುತ್ತಿದ್ದ ಸ್ತ್ರೀಯರ ಗಂಡಂದಿರು ಯೆರೆಮೀಯನಿಗೆ ಹೀಗೆಂದರು: ಅಧ್ಯಾಯವನ್ನು ನೋಡಿ |