Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 43:12 - ಕನ್ನಡ ಸಮಕಾಲಿಕ ಅನುವಾದ

12 ನಾನು ಈಜಿಪ್ಟ್ ದೇವರುಗಳ ಆಲಯಗಳಲ್ಲಿ ಬೆಂಕಿ ಹಚ್ಚುವೆನು. ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು. ಕುರುಬನು ತನ್ನ ಉಡುಪನ್ನು ಹೇನುಗಳಿಂದ ಶುದ್ಧೀಕರಿಸುವಂತೆ ಅವನು ಈಜಿಪ್ಟ್ ದೇಶವನ್ನು ಶುದ್ಧವಾಗಿಸಿಕೊಂಡು ಅಲ್ಲಿಂದ ಸಮಾಧಾನವಾಗಿ ಹೊರಟು ಹೋಗುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಾನು ಐಗುಪ್ತದ ದೇವಾಲಯಗಳಲ್ಲಿ ಬೆಂಕಿಹೊತ್ತಿಸುವೆನು, ಅವನು ಅವುಗಳನ್ನು ಸುಟ್ಟು ದೇವತೆಗಳನ್ನು ಸೆರೆ ಒಯ್ಯುವನು; ಕುರುಬನು ತನ್ನ ಕಂಬಳಿಯನ್ನು ಸುತ್ತಿಕೊಳ್ಳುವಂತೆ ಅವನು ಐಗುಪ್ತ ದೇಶವನ್ನು ಸುತ್ತಿಕೊಳ್ಳುವನು; ಸಮಾಧಾನವಾಗಿ ಅಲ್ಲಿಂದ ಹೊರಟು ಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅವನು ಈಜಿಪ್ಟಿನ ದೇವತೆಗಳ ಆಲಯಗಳಿಗೆ ಬೆಂಕಿ ಹೊತ್ತಿಸುವನು. ಅವುಗಳನ್ನು ಸುಟ್ಟು ಆ ದೇವತೆಗಳನ್ನು ಸೆರೆಗೊಯ್ಯುವನು. ಕುರುಬನು ತನ್ನ ಕಂಬಳಿಯನ್ನು ಸೋಸುವಂತೆ ಅವನು ಈಜಿಪ್ಟನ್ನು ಸೋಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಾನು ಐಗುಪ್ತದ ದೇವಾಲಯಗಳಲ್ಲಿ ಬೆಂಕಿಹೊತ್ತಿಸುವೆನು, ಅವನು ಅವುಗಳನ್ನು ಸುಟ್ಟು ದೇವತೆಗಳನ್ನು ಸೆರೆ ಒಯ್ಯುವನು; ಕುರುಬನು ತನ್ನ ಕಂಬಳಿಯನ್ನು ಸುತ್ತಿಕೊಳ್ಳುವಂತೆ ಅವನು ಐಗುಪ್ತದೇಶವನ್ನು ಸುತ್ತಿಕೊಳ್ಳುವನು; ಸಮಾಧಾನವಾಗಿ ಅಲ್ಲಿಂದ ಹೊರಟು ಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಈಜಿಪ್ಟಿನ ಸುಳ್ಳುದೇವರುಗಳ ಆಲಯದಲ್ಲಿ ನೆಬೂಕದ್ನೆಚ್ಚರನು ಬೆಂಕಿಯನ್ನು ಹೊತ್ತಿಸುವನು, ಅವನು ಆಲಯಗಳನ್ನು ಸುಟ್ಟು ಆ ವಿಗ್ರಹಗಳನ್ನು ತೆಗೆದುಕೊಂಡು ಹೋಗುವನು. ಕುರುಬನು ತನ್ನ ಬಟ್ಟೆಗಳಿಂದ ತಿಗಣೆ ಮತ್ತು ಹೇನುಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸುವಂತೆ ನೆಬೂಕದ್ನೆಚ್ಚರನು ಈಜಿಪ್ಟನ್ನು ಬಿಟ್ಟು ಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 43:12
36 ತಿಳಿವುಗಳ ಹೋಲಿಕೆ  

“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನಾನು ಮೂರ್ತಿಗಳನ್ನು ನಾಶಮಾಡುವೆನು. ಮತ್ತು ನೋಫಿನ ವಿಗ್ರಹಗಳನ್ನು ಕೊನೆಗೊಳಿಸುವೆನು. ಈಜಿಪ್ಟ್ ದೇಶದ ರಾಜಕುಮಾರ ಇನ್ನು ಮುಂದೆ ಇರುವುದಿಲ್ಲ, ನಾನು ಈಜಿಪ್ಟ್ ದೇಶದಲ್ಲಿ ಭಯವನ್ನು ಉಂಟುಮಾಡುವೆನು.


ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಯೆಹೋವ ದೇವರು ಹೇಳುವುದೇನೆಂದರೆ,” ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವೆ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿಕೊಳ್ಳುವೆ.


ಈಜಿಪ್ಟಿನವರ ವಿಷಯವಾದ ಪ್ರವಾದನೆ: ಇಗೋ, ಯೆಹೋವ ದೇವರು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಈಜಿಪ್ಟಿಗೆ ಬರುತ್ತಾರೆ. ಅವರು ಸಮ್ಮುಖರಾದಾಗ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯಗಳು ಅದರ ಮಧ್ಯೆ ಭಯದಿಂದ ಕರಗುವುವು.


ಏಕೆಂದರೆ ನಿನ್ನ ಕ್ರಿಯೆಗಳಲ್ಲಿಯೂ, ನಿನ್ನ ದ್ರವ್ಯಗಳಲ್ಲಿಯೂ ನಂಬಿಕೆ ಇಟ್ಟಿದ್ದರಿಂದ, ನೀನು ಸಹ ಸೆರೆಯಾಗುವಿ ಮತ್ತು ಕೆಮೋಷನು, ಅವನ ಯಾಜಕರು, ಅವನ ಪ್ರಧಾನರು ಸಹಿತವಾಗಿ ಸೆರೆಗೆ ಹೋಗುವರು.


ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ತೆಬೆಸ್ ನಗರದಲ್ಲಿನ ಆಮೋನ್ ದೇವತೆಯನ್ನೂ, ಫರೋಹನನ್ನೂ, ಈಜಿಪ್ಟನ್ನೂ, ಅದರ ದೇವರುಗಳನ್ನೂ, ಅದರ ಅರಸರನ್ನೂ, ಅಂತೂ ಫರೋಹನನ್ನೂ, ಅವನಲ್ಲಿ ನಂಬಿಕೆ ಇಡುವ ಎಲ್ಲರನ್ನೂ ದಂಡಿಸುವೆನು.


ದೇವರು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುತ್ತಾರೆ, ಆಕಾಶವನ್ನು ಗುಡಾರದ ಹಾಗೆ ಹರಡಿಸಿದ್ದಾರೆ.


ಹಾಗಾದರೆ, ಮಹಿಮೆ ಘನತೆಗಳಿಂದ ನಿನ್ನನ್ನು ಅಲಂಕರಿಸಿಕೋ; ನೀನು ಗೌರವ ಪ್ರಭಾವಗಳನ್ನೂ ಧರಿಸಿಕೋ.


ಆ ವಸ್ತ್ರಗಳನ್ನೂ ಕುದುರೆಯನ್ನೂ ಅರಸನ ಪ್ರಧಾನರಲ್ಲಿ ಒಬ್ಬನ ವಶಕ್ಕೆ ಕೊಡಬೇಕು. ಇವನು ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಗೆ ರಾಜವಸ್ತ್ರಗಳನ್ನು ತೊಡಿಸಿದ ತರುವಾಯ, ಅವನನ್ನು ಕುದುರೆಯ ಮೇಲೆ ಕೂರಿಸಿ ಪಟ್ಟಣ ಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ಅವನ ಮುಂದೆ, ‘ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಗೌರವಿಸುವ ರೀತಿ ಇದೇ!’ ಎಂದು ಪ್ರಕಟಿಸಬೇಕು,” ಎಂದನು.


ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟು ಹೋದುದರಿಂದ ದಾವೀದನೂ, ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು.


“ಏಕೆಂದರೆ ನಾನು ಈ ರಾತ್ರಿ ಈಜಿಪ್ಟ್ ದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಇರುವ ಚೊಚ್ಚಲಾದವುಗಳನ್ನು ಸಂಹರಿಸುವೆನು. ಈಜಿಪ್ಟಿನ ದೇವರುಗಳಿಗೆಲ್ಲಾ ನಾನು ನ್ಯಾಯತೀರಿಸುವೆನು. ನಾನೇ ಯೆಹೋವ ದೇವರು.


ಎಲ್ಲದಕ್ಕಿಂತ ಮಿಗಿಲಾಗಿ, ಎಲ್ಲವನ್ನೂ ಪರಿಪೂರ್ಣವಾದ ಐಕ್ಯತೆಯಲ್ಲಿ ಬಂಧಿಸುವ ಪ್ರೀತಿಯನ್ನು ಧರಿಸಿಕೊಳ್ಳಿರಿ.


ಆದಕಾರಣ ದೇವರಿಂದ ಆಯ್ಕೆಯಾದವರೂ ಪರಿಶುದ್ಧರೂ ಪ್ರಿಯರೂ ಆಗಿರುವ ನೀವು ಕನಿಕರ, ದಯೆ, ದೀನತ್ವ, ಸಾತ್ವಿಕತ್ವ, ದೀರ್ಘಶಾಂತಿ ಇವುಗಳನ್ನು ಧರಿಸಿಕೊಳ್ಳಿರಿ.


ನೀವು ಪಿಶಾಚನ ತಂತ್ರಗಳನ್ನು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.


ಸತ್ಯವಾದ ನೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ದೇವರ ಹೋಲಿಕೆಯ ಪ್ರಕಾರವಾಗಿರಲು ಸೃಷ್ಟಿಸಲಾದ ಹೊಸ ಸ್ವಭಾವವನ್ನು ಧರಿಸಿಕೊಳ್ಳಿರಿ.


ರಾತ್ರಿಯು ಬಹಳಷ್ಟು ಕಳೆದು ಹಗಲು ಸಮೀಪಿಸಿದೆ. ಆದ್ದರಿಂದ ನಾವು ಕತ್ತಲೆಯ ಕೃತ್ಯಗಳನ್ನು ಎಸೆದು ಬೆಳಕಿನ ಆಯುಧಗಳನ್ನು ಧರಿಸಿಕೊಳ್ಳೋಣ.


ಅವರು ಭೂಮಿಯ ಎಲ್ಲಾ ದೇವರುಗಳನ್ನು ನಾಶಮಾಡುವಾಗ, ಯೆಹೋವ ದೇವರು ಅವರಿಗೆ ಭಯಂಕರವಾಗಿರುವರು. ಇತರ ಜನಾಂಗಗಳ ದ್ವೀಪಗಳವರೆಲ್ಲರು ತಮ್ಮ ತಮ್ಮ ಸ್ಥಳಗಳಲ್ಲಿ ಅವರನ್ನು ಆರಾಧಿಸುವರು.


ಏಕೆಂದರೆ ನಾನು ಬಾಬಿಲೋನಿನಲ್ಲಿರುವ ಬೇಲ್‌ನನ್ನು ದಂಡಿಸಿ, ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ಕಕ್ಕಿಸುವೆನು. ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವುದಿಲ್ಲ. ಹೌದು, ಬಾಬಿಲೋನಿನ ಗೋಡೆ ಬೀಳುವುದು.


“ಜನಾಂಗಗಳಲ್ಲಿ ಪ್ರಚುರಪಡಿಸಿರಿ, ಧ್ವಜವನ್ನೆತ್ತಿ ಪ್ರಕಟಿಸಿರಿ; ಮರೆಮಾಡದೇ ಹೀಗೆ ಸಾರಿರಿ, ‘ಬಾಬಿಲೋನ್ ಶತ್ರುವಶವಾಯಿತು; ಬೇಲ್ ದೇವತೆಗೆ ನಾಚಿಕೆಯಾಯಿತು; ಮೆರೋದಾಕ್ ತುಂಡುತುಂಡಾಗಿ ಮುರಿದು ಹೋದನು. ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಮತ್ತು ಅವಳ ವಿಗ್ರಹಗಳು ಭಯದಿಂದ ತುಂಬಿವೆ.’


ನಾನು ಯೆಹೋವ ದೇವರಲ್ಲಿ ಬಹಳವಾಗಿ ಸಂತೋಷಿಸುವೆನು. ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸಪಡುವುದು. ವರನು ಸೌಂದರ್ಯವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ, ವಧುವು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ, ಅವನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ. ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.


ಪರನಾಡಿನವರು ನಿಂತು ನಿಮ್ಮ ಮಂದೆಗಳನ್ನು ಮೇಯಿಸುವರು. ಇತರರು ನಿಮಗೆ ನೇಗಿಲು ಹೂಡುವವರೂ, ದ್ರಾಕ್ಷಿತೋಟ ಕಾಯುವವರೂ ಆಗಿರುವರು.


ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು. ಪ್ರತೀಕಾರದ ವಸ್ತ್ರಗಳನ್ನು ಹೊದಿಕೆಯಾಗಿ ಹೊದ್ದುಕೊಂಡು, ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.


ಚೀಯೋನೇ, ಎಚ್ಚರವಾಗು, ಎಚ್ಚರವಾಗು, ನಿನ್ನ ಬಲವನ್ನು ಧರಿಸಿಕೋ! ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, ನಿನ್ನ ವೈಭವದ ಉಡುಪುಗಳನ್ನು ಹಾಕಿಕೋ ಏಕೆಂದರೆ ಇಂದಿನಿಂದ ಸುನ್ನತಿ ಇಲ್ಲದವರೂ, ಅಶುದ್ಧರೂ ನಿನ್ನೊಳಗೆ ಬರುವುದಿಲ್ಲ.


ಬೇಲ್ ದೇವತೆಯು ತಗ್ಗಿದೆ, ನೆಬೋ ದೇವತೆಯು ಕುಗ್ಗಿದೆ. ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು. ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು.


ಇಗೋ, ಎರಡು ಕುದುರೆಗಳನ್ನು ಹೊಂದಿರುವ ರಥದಲ್ಲಿ ಒಬ್ಬ ವ್ಯಕ್ತಿ ಸವಾರಿ ಮಾಡಿ ಬರುತ್ತಿದ್ದಾನೆ ಬಾಬಿಲೋನ್ ಬಿದ್ದುಹೋಯಿತು, ಬಾಬಿಲೋನ್ ಬಿದ್ದುಹೋಯಿತು! ಅದರ ಕೆತ್ತಿದ ದೇವತೆಗಳ ವಿಗ್ರಹಗಳೆಲ್ಲ ಮುರಿದು ನೆಲಸಮವಾಗಿವೆ.”


ಇಲ್ಲಿ ಆತನ ಶತ್ರುಗಳಿಗೆ ನಾಚಿಕೆಯ ವಸ್ತ್ರವನ್ನು ಹೊದಿಸುವೆನು; ಆದರೆ ಆತನ ತೆರೆಯ ಮೇಲೆ ಕಿರೀಟವು ಶೋಭಿಸುವುದು.”


ಇಲ್ಲಿನ ಯಾಜಕರಿಗೆ ರಕ್ಷಣೆಯನ್ನು ಹೊದಿಸುವೆನು; ಚೀಯೋನಿನ ನಂಬಿಗಸ್ತ ಸೇವಕರು ಉತ್ಸಾಹಧ್ವನಿಯಿಂದ ಹಾಡುವರು.


ಒಟ್ಟಿಗೆ ಕುಗ್ಗಿ ಬಗ್ಗಿವೆ. ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ, ತಾವೇ ಸೆರೆಗೆ ಹೋದವು.


ಇದಲ್ಲದೆ ಈಜಿಪ್ಟಿನ ದೇಶದಲ್ಲಿರುವ ಸೂರ್ಯ ದೇವಾಲಯವನ್ನು ಒಡೆದುಹಾಕಿ, ಈಜಿಪ್ಟ್ ದೇವರುಗಳ ಆಲಯಗಳನ್ನು ಬೆಂಕಿಯಿಂದ ಸುಡುವನು.’ ”


“ಏಕೆಂದರೆ ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವುದು.”


ಯಾವ ಮನುಷ್ಯನ ಪಾದವಾದರೂ ಅದರಲ್ಲಿ ಹಾದು ಹೋಗುವುದಿಲ್ಲ. ಮೃಗಗಳ ಪಾದವೂ ಅದರಲ್ಲಿ ಹಾದು ಹೋಗುವುದಿಲ್ಲ ಅಥವಾ ನಲವತ್ತು ವರ್ಷಗಳ ಕಾಲ ಅದರಲ್ಲಿ ವಾಸಮಾಡುವವರೇ ಇರುವುದಿಲ್ಲ.


ಅವರ ದೇವರುಗಳನ್ನೂ, ಅವರ ವಿಗ್ರಹಗಳನ್ನೂ ಅವರ ಬೆಳ್ಳಿ ಬಂಗಾರಗಳ ಪಾತ್ರೆಗಳನ್ನೂ ಅವನು ಸೂರೆಮಾಡಿ, ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋಗುವನು. ಕೆಲವು ವರ್ಷಗಳವರೆಗೆ ಅವನು ಉತ್ತರದ ಅರಸನ ಮೇಲೆ ಬಿಟ್ಟುಬಿಡುವನು.


“ನೀವು ಅವರಿಗೆ ಹೀಗೆ ಹೇಳಬೇಕು: ‘ಆಕಾಶಗಳನ್ನೂ ಭೂಮಿಯನ್ನೂ ಉಂಟು ಮಾಡದ ದೇವರುಗಳು, ಭೂಮಿಯ ಮೇಲಿನಿಂದಲೂ ಈ ಆಕಾಶದ ಕೆಳಗಿನಿಂದಲೂ ನಾಶವಾಗುವುವು.’ ”


ಅವು ವ್ಯರ್ಥ, ಹಾಸ್ಯಾಸ್ಪದದ ಕೆಲಸ. ಅವುಗಳ ದಂಡನೆಯ ಕಾಲದಲ್ಲಿ ಅವು ನಾಶವಾಗುವುವು.


ಈಜಿಪ್ಟಿನ ಅರಸನಾದ ಫರೋಹನಿಗೂ, ಅವನ ಸೇವಕರಿಗೂ, ಅವನ ಅಧಿಕಾರಿಗಳಿಗೂ, ಅವನ ಎಲ್ಲಾ ಜನರಿಗೂ,


ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಈಜಿಪ್ಟ್ ದೇಶವನ್ನು ಕೊಡುತ್ತೇನೆ, ಅವನು ಅದರ ಜನಸಮೂಹವನ್ನೂ ಅದರ ಕೊಳ್ಳೆಯನ್ನೂ ಅದರ ಸುಲಿಗೆಯನ್ನೂ ಸೂರೆಮಾಡುವನು. ಇದೇ ಅವನ ದಂಡು ಪಟ್ಟ ಶ್ರಮಕ್ಕೆ ಪ್ರತಿಫಲವಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು