Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 42:3 - ಕನ್ನಡ ಸಮಕಾಲಿಕ ಅನುವಾದ

3 ನಾವು ನಡೆಯತಕ್ಕ ಮಾರ್ಗವನ್ನೂ, ನಾವು ಮಾಡತಕ್ಕ ಕಾರ್ಯವನ್ನೂ ನಿನ್ನ ದೇವರಾದ ಯೆಹೋವ ದೇವರು ನಮಗೆ ತಿಳಿಸುವ ಹಾಗೆ, ನಿನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆ ಮಾಡು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಿನ್ನ ದೇವರಾದ ಯೆಹೋವನು ನಾವು ನಡೆಯಬೇಕಾದ ಮಾರ್ಗವನ್ನೂ, ಮಾಡತಕ್ಕ ಕಾರ್ಯವನ್ನೂ ತೋರಿಸುವ ಹಾಗೆ ನಮಗಾಗಿ ಅಂದರೆ ಉಳಿದಿರುವ ಈ ಜನರೆಲ್ಲರಿಗಾಗಿ ನಿನ್ನ ದೇವರಾದ ಯೆಹೋವನನ್ನು ಪ್ರಾರ್ಥಿಸು” ಎಂದು ವಿಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿ ನಾವು ನಡೆಯಬೇಕಾದ ಮಾರ್ಗವನ್ನೂ ಕೈಗೊಳ್ಳಬೇಕಾದ ಕಾರ್ಯವನ್ನೂ ತೋರಿಸುವಂತೆ ನಮಗಾಗಿ ಪ್ರಾರ್ಥಿಸಬೇಕು. ಅಳಿದುಳಿದಿರುವ ಈ ಎಲ್ಲ ಜನರಿಗಾಗಿ ನಿಮ್ಮ ದೇವರಾದ ಸರ್ವೇಶ್ವರನನ್ನು ನೀವು ಪ್ರಾರ್ಥಿಸಬೇಕು. ನಿಮ್ಮ ಕಣ್ಣಿಗೆ ಕಾಣುವಂತೆ ಹೇರಳವಾದ ಜನರಲ್ಲಿ ನಾವು ಕೆಲವರು ಮಾತ್ರ ಉಳಿದಿದ್ದೇವೆ,” ಎಂದು ವಿಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಿನ್ನ ದೇವರಾದ ಯೆಹೋವನು ನಾವು ನಡೆಯಬೇಕಾದ ಮಾರ್ಗವನ್ನೂ ಮಾಡತಕ್ಕ ಕಾರ್ಯವನ್ನೂ ತೋರಿಸುವ ಹಾಗೆ ನಮಗಾಗಿ, ಅಂದರೆ ಉಳಿದಿರುವ ಈ ಜನರೆಲ್ಲರಿಗಾಗಿ ನಿನ್ನ ದೇವರಾದ ಯೆಹೋವನನ್ನು ಪ್ರಾರ್ಥಿಸು; ನಿನ್ನ ಕಣ್ಣಿಗೆ ಕಾಣುವ ಪ್ರಕಾರ ಅಪಾರ ಜನರಲ್ಲಿ ನಾವು ಕೆಲವರು ಮಾತ್ರ ಉಳಿದಿದ್ದೇವೆ ಎಂದು ವಿಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಯೆರೆಮೀಯನೇ, ನಾವು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂಬುದನ್ನು ಹೇಳಬೇಕೆಂದು ನಿನ್ನ ದೇವರನ್ನು ಪ್ರಾರ್ಥಿಸು” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 42:3
13 ತಿಳಿವುಗಳ ಹೋಲಿಕೆ  

ನಿನ್ನ ಎಲ್ಲಾ ಮಾರ್ಗಗಳಲ್ಲಿ ದೇವರಿಗೆ ಅಧೀನವಾಗಿರು. ಆಗ ದೇವರು ನಿನ್ನ ಮಾರ್ಗಗಳನ್ನು ಸರಾಗ ಮಾಡುವರು.


ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ. ಆಗ, ನಿಮ್ಮ ಸತ್ಯದಲ್ಲಿ ನಡೆದುಕೊಳ್ಳುವೆನು; ನಿಮ್ಮ ಹೆಸರಿಗೆ ಭಯಪಡುವಂತೆ ನನಗೆ ವಿಭಾಗವಿಲ್ಲದೆ ಹೃದಯವನ್ನು ದಯಪಾಲಿಸಿರಿ.


ಅನೇಕ ಜನಾಂಗಗಳು ಬಂದು ಹೀಗೆಂದು ಹೇಳುವರು, “ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ. ಅವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು. ನಾವು ಅವರ ದಾರಿಗಳಲ್ಲಿ ನಡೆಯುವೆವು. ಚೀಯೋನಿನಿಂದ ದೇವರ ನಿಯಮವೂ ಯೆರೂಸಲೇಮಿನಿಂದ ದೇವರ ವಾಕ್ಯವೂ ಹೊರಡುವುವು.”


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಮಾರ್ಗಗಳಲ್ಲಿ ನಿಂತುಕೊಂಡು ನೋಡಿರಿ, ಮೊದಲಿನ ಹಾದಿಗಳನ್ನು ಕೇಳಿಕೊಳ್ಳಿರಿ, ಒಳ್ಳೆಯ ಮಾರ್ಗ ಎಲ್ಲಿದೆಯೋ ಅದರಲ್ಲಿ ನಡೆಯಿರಿ. ಆಗ ನಿಮ್ಮ ಪ್ರಾಣಗಳಿಗೆ ವಿಶ್ರಾಂತಿ ಸಿಕ್ಕುವುದು, ಆದರೆ ಅವರು, ‘ನಾವು ನಡೆಯುವುದಿಲ್ಲ,’ ಎಂದರು.


ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳುವುದಕ್ಕೂ, ನಮಗೂ ನಮ್ಮ ಮಕ್ಕಳಿಗೂ, ನಮ್ಮ ಎಲ್ಲಾ ಸ್ಥಿತಿಗೂ ಅವರಿಂದ ಸರಿಯಾದ ಮಾರ್ಗವನ್ನು ಹುಡುಕುವುದಕ್ಕೂ, ನಾನು ಅಲ್ಲಿ ಅಹಾವ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಪ್ರಕಟಿಸಿದೆನು.


ಅನೇಕ ಪ್ರಜೆಗಳು ಬಂದು ಹೀಗೆ ಹೇಳುವರು, “ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ, ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ. ದೇವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು, ನಾವು ಅವರ ದಾರಿಗಳಲ್ಲಿ ನಡೆಯುವೆವು.” ಏಕೆಂದರೆ ಚೀಯೋನಿನಿಂದ ದೇವರ ನಿಯಮವೂ, ಯೆರೂಸಲೇಮಿನಿಂದ ಯೆಹೋವ ದೇವರ ವಾಕ್ಯವೂ ಹೊರಡುವುವು.


ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ಅವರಿಗೆ ಕಲಿಸಿ, ನಿಮ್ಮ ಜನರಿಗೆ ಬಾಧ್ಯತೆಯಾಗಿ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡಿರಿ.


ಅವರು ನನಗೆ ಭಯಪಟ್ಟು, ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಗೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೆಯದು. ಆಗ ಅವರಿಗೂ, ಅವರ ಮಕ್ಕಳಿಗೂ ಎಂದೆಂದಿಗೂ ಒಳ್ಳೆಯದಾಗುವುದು.”


ಸಮಸ್ತ ಜನರಲ್ಲಿ ಯಾರು ನಮ್ಮ ಹಾಗೆ ಬೆಂಕಿಯೊಳಗಿಂದ ಮಾತನಾಡುವ ಜೀವವುಳ್ಳ ದೇವರ ಸ್ವರವನ್ನು ಕೇಳಿ ಬದುಕಿದರು?


ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ; ನನ್ನ ವಿರೋಧಿಗಳ ನಿಮಿತ್ತ ಸಮಹಾದಿಯಲ್ಲಿ ನನ್ನನ್ನು ನಡೆಸಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು