Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 41:7 - ಕನ್ನಡ ಸಮಕಾಲಿಕ ಅನುವಾದ

7 ಆಗ ಅವರು ಪಟ್ಟಣದ ಮಧ್ಯಕ್ಕೆ ಬಂದಾಗ, ನೆತನ್ಯನ ಮಗ ಇಷ್ಮಾಯೇಲನೂ ತನ್ನ ಸಂಗಡ ಇದ್ದ ಮನುಷ್ಯರೂ ಅವರನ್ನು ಕೊಂದು, ಬಾವಿಯೊಳಗೆ ಹಾಕಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅವರು ಊರೊಳಕ್ಕೆ ಬಂದ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನೂ ಮತ್ತು ಅವನ ಸಂಗಡಿಗರೂ ಅವರನ್ನು ಕೊಲ್ಲಿಸಿ ಬಾವಿಯಲ್ಲಿ ಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಅವರು ಊರೊಳಕ್ಕೆ ಬಂದಮೇಲೆ ನೆತನ್ಯನ ಮಗ ಇಷ್ಮಾಯೇಲನೂ ಅವನ ಸಂಗಡಿಗರೂ ಅವರನ್ನು ಕೊಂದು ಬಾವಿಯಲ್ಲಿ ಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅವರು ಊರೊಳಕ್ಕೆ ಬಂದ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನೂ ಅವನ ಸಂಗಡಿಗರೂ ಅವರನ್ನು ಹತಿಸಿ ಬಾವಿಯಲ್ಲಿ ಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆ ಎಂಭತ್ತು ಜನರು ಮಿಚ್ಫಪಟ್ಟಣಕ್ಕೆ ಹೋದರು. ಆಗ ಇಷ್ಮಾಯೇಲ ಮತ್ತು ಅವನ ಸಂಗಡಿಗರು ಅವರಲ್ಲಿ ಎಪ್ಪತ್ತು ಮಂದಿಯನ್ನು ಕೊಂದರು. ಇಷ್ಮಾಯೇಲ ಮತ್ತು ಅವನ ಸಂಗಡಿಗರು ಆ ಎಪ್ಪತ್ತು ಮಂದಿ ದೇಹಗಳನ್ನು ಒಂದು ಆಳವಾದ ಬಾವಿಯಲ್ಲಿ ಎಸೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 41:7
11 ತಿಳಿವುಗಳ ಹೋಲಿಕೆ  

ಅಲ್ಲಿಯ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ಪ್ರಾಣಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿದ್ದಾರೆ.


ಅವರ ಕಾಲುಗಳು ಪಾಪಕ್ಕೆ ಓಡುತ್ತವೆ. ಅಪರಾಧವಿಲ್ಲದ ರಕ್ತವನ್ನು ಚೆಲ್ಲುವುದಕ್ಕೆ ತ್ವರೆ ಪಡುತ್ತವೆ. ಅವರ ಆಲೋಚನೆಗಳು ಅಧರ್ಮದ ಆಲೋಚನೆಗಳೇ. ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿವೆ.


ಆದರೆ ದೇವರೇ, ದುಷ್ಟರನ್ನು ನಾಶದ ಕುಣಿಯಲ್ಲಿ ಇಳಿಯ ಮಾಡುವಿರಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಕಾಲದಲ್ಲಿ ಅರ್ಧವನ್ನೂ ಜೀವಿಸುವುದಿಲ್ಲ. ನಾನಾದರೋ ನಿಮ್ಮಲ್ಲಿ ಭರವಸವಿಡುತ್ತೇನೆ.


“ಅವರ ಕಾಲುಗಳು ರಕ್ತಪಾತಕ್ಕೆ ಆತುರಗೊಂಡಿವೆ.


ಏಕೆಂದರೆ ಅವರ ಪಾದಗಳು ಕೇಡಿಗೆ ಓಡುತ್ತವೆ, ರಕ್ತಸುರಿಸುವುದಕ್ಕೆ ಆತುರಪಡುತ್ತವೆ.


ಆದರೆ ಅವನ ಅಧಿಪತಿಯಾದಂಥ ರೆಮಲ್ಯನ ಮಗ ಪೆಕಹನು ಗಿಲ್ಯಾದಿನ ಐವತ್ತು ಮಂದಿಯನ್ನು ತನ್ನ ಸಂಗಡ ಕೂಡಿಸಿಕೊಂಡು ಪೆಕಹ್ಯನ ವಿರುದ್ಧ ಒಳಸಂಚುಮಾಡಿ, ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಪೆಕಹ್ಯನನ್ನು ಮತ್ತು ಅರ್ಗೋಬ್, ಅರ್ಯೇ ಎಂಬವರನ್ನು ಕೊಂದುಹಾಕಿದನು. ಅನಂತರ, ಪೆಕಹ್ಯನಿಗೆ ಬದಲಾಗಿ ಪೆಕಹನು ಅರಸನಾದನು.


ಆದರೆ ನೀನು ತಿರಸ್ಕರಿಸಿದ ಕೊಂಬೆಯಂತೆಯೂ, ಖಡ್ಗ ತಿವಿದು ಕಲ್ಲುಗುಂಡಿಗೆ ಪಾಲಾದ ಹೆಣಗಳ ಹೊದಿಕೆಯಂತೆಯೂ, ಪರರ ತುಳಿತಕ್ಕೆ ಈಡಾಗಿ, ಸಮಾಧಿಯೊಳಗಿಂದ ಹೊರಗೆ ಬಿಸಾಡಿರುವ ಶವದ ಹಾಗಿದ್ದೀ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು