ಯೆರೆಮೀಯ 41:16 - ಕನ್ನಡ ಸಮಕಾಲಿಕ ಅನುವಾದ16 ಆಗ ಕಾರೇಹನ ಮಗನಾದ ಯೋಹಾನಾನನೂ, ತನ್ನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ತಾನು ನೆತನ್ಯನ ಮಗನಾದ ಇಷ್ಮಾಯೇಲನ ಕೈಯೊಳಗಿಂದ ಅವನು ಅಹೀಕಾಮನ ಮಗ ಗೆದಲ್ಯನನ್ನು ಕೊಂದುಹಾಕಿದ ತರುವಾಯ, ತಪ್ಪಿಸಿಬಿಟ್ಟಿದ್ದ ಉಳಿದ ಜನರೆಲ್ಲರನ್ನು ಎಂದರೆ, ಗಿಬ್ಯೋನನಿಂದ ತಾನು ತಿರುಗಿ ತಂದಿದ್ದ ಬಲಿಷ್ಠರಾದ ಯುದ್ಧದ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಕಂಚುಕಿಯರನ್ನೂ ಮಿಚ್ಪದಿಂದ ಕರೆದುಕೊಂಡು ಹೊರಟು, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಆಗ ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಮಸ್ತ ಸೇನಾಧಿಪತಿಗಳೂ ತಾವು ನೆತನ್ಯನ ಮಗನಾದ ಇಷ್ಮಾಯೇಲನ ಕೈಯಿಂದ ತಪ್ಪಿಸಿ ಗಿಬ್ಯೋನಿನಿಂದ ತಂದಿದ್ದ ಭಟರು, ಹೆಂಗಸರು, ಮಕ್ಕಳು, ಕಂಚುಕಿಗಳು, ಅಂತು ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನನ್ನು ಕೊಂದ ಮೇಲೆ ಮಿಚ್ಪದಿಂದ ಒಯ್ದ ಉಳಿದ ಜನರನ್ನೆಲ್ಲಾ ಕರೆದುಕೊಂಡು ಹೋದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಆಗ ಕಾರೇಹನ ಮಗ ಯೋಹಾನಾನನು ಮತ್ತು ಅವನೊಂದಿಗಿದ್ದ ಸೇನಾಪತಿಗಳೆಲ್ಲರು ತಾವು ನೆತನ್ಯನ ಮಗ ಇಷ್ಮಾಯೇಲನ ಕೈಯಿಂದ ತಪ್ಪಿಸಿ ಗಿಬ್ಯೋನಿನಿಂದ ತಂದಿದ್ದ ಜನರನ್ನು ಅಂದರೆ ಯೋಧರು, ಮಹಿಳೆಯರು, ಮಕ್ಕಳು, ಕಂಚುಕಿಗಳು, ಹೀಗೆ ಇಷ್ಮಾಯೇಲನು ಅಹೀಕಾಮನ ಮಗ ಗೆದಲ್ಯನನ್ನು ಕೊಂದ ಬಳಿಕ ಜನರನ್ನೆಲ್ಲರನ್ನು ಕರೆದುಕೊಂಡು ಹೊರಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಆಗ ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಮಸ್ತ ಸೇನಾಪತಿಗಳೂ ತಾವು ನೆತನ್ಯನ ಮಗನಾದ ಇಷ್ಮಾಯೇಲನ ಕೈಯಿಂದ ತಪ್ಪಿಸಿ ಗಿಬ್ಯೋನಿನಿಂದ ತಂದಿದ್ದ ಭಟರು, ಹೆಂಗಸರು, ಮಕ್ಕಳು, ಕಂಚುಕಿಗಳು, ಅಂತು ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನನ್ನು ಕೊಂದ ಮೇಲೆ ವಿುಚ್ಪದಿಂದ ಒಯ್ದ ಜನಶೇಷವನ್ನೆಲ್ಲಾ ಕರೆದುಕೊಂಡು ಹೋಗಿ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಇಷ್ಮಾಯೇಲನು ಗೆದಲ್ಯನನ್ನು ಕೊಂದು ಮಿಚ್ಫದಲ್ಲಿ ಸೆರೆಹಿಡಿದ ಬಂದಿಗಳನ್ನು ಕಾರೇಹನ ಮಗನಾದ ಯೋಹಾನಾನನು ಮತ್ತು ಅವನ ಸೇನಾಪತಿಗಳು ರಕ್ಷಿಸಿದರು. ಆಗ ಉಳಿದುಕೊಂಡವರಲ್ಲಿ ಸೈನಿಕರು, ಹೆಂಗಸರು, ಮಕ್ಕಳು ಮತ್ತು ಅಧಿಕಾರಿಗಳು ಸೇರಿದ್ದರು. ಯೋಹಾನಾನನು ಗಿಬ್ಯೋನಿನಿಂದ ಅವರನ್ನು ಹಿಂದಕ್ಕೆ ಕರೆತಂದನು. ಅಧ್ಯಾಯವನ್ನು ನೋಡಿ |