Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 4:31 - ಕನ್ನಡ ಸಮಕಾಲಿಕ ಅನುವಾದ

31 ಏಕೆಂದರೆ ಪ್ರಸವವೇದನೆ ಪಡುವವಳಂತೆ, ಚೊಚ್ಚಲನ್ನು ಹೆರುವವಳ ಸಂಕಟಕ್ಕೆ ಸಮಾನವಾಗಿರುವ ಚೀಯೋನಿನ ಮಗಳ ಕಿರಿಚುವ ಕೂಗನ್ನು ಕೇಳಿದ್ದೇನೆ. ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ, “ಅಯ್ಯೋ, ನನಗೀಗ ಕಷ್ಟ! ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ,” ಎಂದು ಅರಚಿಕೊಳ್ಳುತ್ತಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಚೀಯೋನ್ ನಗರವು ಬೇನೆತಿನ್ನುವವಳಂತೆ, ಚೊಚ್ಚಲಹೆರಿಗೆಯ ವೇದನೆಯನ್ನು ಅನುಭವಿಸುವವಳ ಹಾಗೆ ಕೂಗಿಕೊಳ್ಳುವುದನ್ನು ನಾನು ಕೇಳಿದ್ದೇನೆ; ಏದುಸಿರುಬಿಡುತ್ತಾ ಕೈಚಾಚಿ, “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ಕೊಲೆಗಾರರಿಂದ ನನ್ನ ಪ್ರಾಣವು ಬಳಲುತ್ತದೆ” ಎಂದು ಅರಚಿಕೊಳ್ಳುತ್ತಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಸಿಯೋನ್ ನಗರಿ ಪ್ರಸವವೇದನೆ ಪಡುವವಳಂತೆ ಚೊಚ್ಚಲ ಹೆರಿಗೆಯ ವೇದನೆಯನ್ನು ಅನುಭವಿಸುವವಳಂತೆ ಕಿರಿಚಿಕೊಳ್ಳುವ ಕೂಗನ್ನು ನಾನು ಕೇಳಿದ್ದೇನೆ. ಉಬ್ಬಸಪಡುತ್ತಾ ಎರಡು ಕೈಗಳನ್ನೂ ಚಾಚಿ ‘ಅಯ್ಯೋ ನನಗೆ ಕೇಡು, ಕೊಲೆಗಡುಕನ ಮುಂದೆ ನನ್ನ ಪ್ರಾಣ ಉಡುಗುತ್ತಿದೆ’ ಎಂದು ಅರುಚಿಕೊಳ್ಳುತ್ತಿಹಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಚೀಯೋನ್ ನಗರಿಯು ಬೇನೆ ತಿನ್ನುವವಳಂತೆ, ಚೊಚ್ಚಲಹೆರಿಗೆಯ ವೇದನೆಯನ್ನು ಅನುಭವಿಸುವವಳ ಹಾಗೆ ಕೂಗಿಕೊಳ್ಳುವದನ್ನು ನಾನು ಕೇಳಿದ್ದೇನೆ; ಏದುತ್ತಾ ಕೈಚಾಚಿ - ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ಕೊಲೆಗಾರರಿಂದ ನನ್ನ ಆತ್ಮವು ಉಡುಗುತ್ತದೆ ಎಂದು ಬಡುಕೊಳ್ಳುತ್ತಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಮೊದಲನೆ ಹೆರಿಗೆಯ ಸಮಯದಲ್ಲಿ ವೇದನೆಪಡುವ ಹೆಂಗಸಿನ ಸ್ವರದಂತಿರುವ ಒಂದು ಧ್ವನಿಯನ್ನು ನಾನು ಕೇಳಿದೆ, ಇದು ಚೀಯೋನ್ ನಗರಿಯ ಮಗಳ ಕೂಗಾಟ. ಅವಳು ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಪ್ರಾರ್ಥಿಸುತ್ತಾ, “ಅಯ್ಯೋ, ನಾನು ಮೂರ್ಛೆ, ಹೋಗುವುದರಲ್ಲಿದ್ದೇನೆ, ನನ್ನ ಸುತ್ತಲೆಲ್ಲ ಕೊಲೆಗಡುಕರಿದ್ದಾರೆ” ಎಂದು ಹೇಳುತ್ತಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 4:31
35 ತಿಳಿವುಗಳ ಹೋಲಿಕೆ  

ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ. ಅವಳನ್ನು ಆದರಿಸುವವನು ಒಬ್ಬನೂ ಇಲ್ಲ. ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದಾರೆ. ಯೆರೂಸಲೇಮ್ ಅವರ ಮಧ್ಯದಲ್ಲಿ ಅಶುದ್ಧ ವಸ್ತುವಿನಂತಿದೆ.


ನೀವು ಪ್ರಾರ್ಥಿಸಲು ನಿಮ್ಮ ಕೈಗಳನ್ನು ಚಾಚುವಾಗ, ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು. “ನಿಮ್ಮ ಕೈಗಳು ರಕ್ತದಿಂದ ತೊಯ್ದಿವೆ!


ನಿಮ್ಮ ವಿಶೇಷ ಮಿತ್ರರಾಗಿ ನೀವು ಬೆಳೆಸಿದವರನ್ನು ಯೆಹೋವ ದೇವರು ನಿನಗೆ ತಲೆಯಾಗಿ ನೇಮಿಸುವಾಗ ಏನು ಹೇಳುವಿ? ವೇದನೆಯು ನಿನ್ನನ್ನು ಹೆರುವವಳೋ ಎಂಬಂತೆ ಹಿಡಿಯುವುದಲ್ಲವೆ?


ಆದರೆ, “ಸಮಾಧಾನ, ಸುರಕ್ಷಿತ,” ಎಂದು ಜನರು ಹೇಳುತ್ತಿರುವಾಗಲೇ, ಅವರ ಮೇಲೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಬರುವಂತೆ ಫಕ್ಕನೆ ಬರುವುದು. ಅವರು ಹೇಗೂ ತಪ್ಪಿಸಿಕೊಳ್ಳಲಾರರು.


ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಸಿಕೊಳ್ಳುವ ಯಾವ ಆಸೆಯೂ ನನಗೆ ಇಲ್ಲ. ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಸಾಲಗಾರನಾಗಿದ್ದೇನೆ. ಸುವಾರ್ತೆಯನ್ನು ಸಾರದಿದ್ದರೆ, ನನ್ನ ಗತಿ ಏನೆಂದು ಹೇಳಲಿ!


“ಚೀಯೋನಿನ ಪುತ್ರಿಗೆ ಹೇಳಿರಿ, ‘ಇಗೋ, ನಿನ್ನ ಅರಸನು, ಸಾತ್ವಿಕನಾಗಿ, ಕತ್ತೆಯನ್ನೂ, ಕತ್ತೆಯಮರಿಯನ್ನೂ ಹತ್ತಿದವನಾಗಿ ನಿನ್ನ ಬಳಿಗೆ ಬರುತ್ತಾನೆ.’ ”


ಎಂತಹ ಸಂಕಟ ನನ್ನದು! ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವವರ ಹಾಗೆಯೂ ದ್ರಾಕ್ಷಿ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ. ತಿನ್ನುವುದಕ್ಕೆ ಗೊಂಚಲೇ ಇಲ್ಲ. ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣುಗಳೂ ಇಲ್ಲ.


ಎಫ್ರಾಯೀಮಿಗೆ ಪ್ರಸವವೇದನೆ ಬಂದಿದೆ. ಅಷ್ಟೇ ಅಲ್ಲ. ಅದೊಂದು ಮಂಕು ಮಗುವಿನಂತಿದೆ. ಹುಟ್ಟಿ, ಹೊರಗೆ ಬರಬಹುದಾದರೂ, ಅವನು ಬಾರದೆ ಇದ್ದಾನೆ.


ಯುವಕರು ಮತ್ತು ವೃದ್ಧರು ಬೀದಿಗಳ ನೆಲದ ಮೇಲೆ ಮಲಗಿದ್ದಾರೆ. ನನ್ನ ಯುವಕರು, ಯುವತಿಯರು ಖಡ್ಗದಿಂದ ಹತರಾಗಿದ್ದಾರೆ. ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿರಿ, ಕೊಂದುಹಾಕಿದಿರಿ, ಕನಿಕರಿಸಲಿಲ್ಲ.


ಯೆಹೋವ ದೇವರೇ ನೋಡು, ಏಕೆಂದರೆ ನಾನು ಇಕ್ಕಟ್ಟಿನಲ್ಲಿದ್ದೇನೆ. ನನ್ನ ಆತ್ಮವು ಕಳವಳಗೊಂಡಿದೆ. ನನ್ನ ಹೃದಯವು ನನ್ನೊಂದಿಗೆ ತಿರುಗಿಕೊಂಡಿದೆ. ಏಕೆಂದರೆ ನಾನು ಘೋರವಾಗಿ ಬಿದ್ದಿದ್ದೇನೆ. ಹೊರಗೆ ಖಡ್ಗದಿಂದ ಸಂಹಾರ, ಮನೆಯೊಳಗೆ ಮರಣ.


ಬಾಬಿಲೋನಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ; ಅವನ ಕೈಗಳು ನಿತ್ರಾಣವಾದವು; ಸಂಕಟವೂ, ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು.


ದಮಸ್ಕವು ನಿತ್ರಾಣವಾಯಿತು; ಓಡಿಹೋಗುವುದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡಿದುಕೊಂಡಿದೆ; ಹೆರುವ ಸ್ತ್ರೀಯ ಹಾಗೆ ಸಂಕಟವೂ, ವೇದನೆಗಳೂ ಅದನ್ನು ಹಿಡಿದಿವೆ.


ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮಶಾಲಿಗಳು ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವುದು.


ಕೆರೀಯೋತ್ ಅವನಿಗೆ ವಶವಾಗುವುದು; ಬಲವಾದ ಕೋಟೆಗಳು ಅವನ ಕೈವಶವಾಗುವುವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೆರುವ ಹೆಣ್ಣಿನ ಎದೆಯದಂತೆ ಅದರುವುದು.


“ಬಾರೂಕನೇ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ನಿನ್ನನ್ನು ಕುರಿತು ಹೀಗೆ ಹೇಳುತ್ತಾರೆ.


ಈಗ ವಿಚಾರಿಸಿ ನೋಡಿರಿ. ಪುರುಷನು ಮಗುವನ್ನು ಹೆರಬಲ್ಲನೇ. ನಾನು ಏಕೆ ಪುರುಷರೆಲ್ಲರೂ ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲಕ್ಕೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಏಕೆ ಮುಖಗಳೆಲ್ಲಾ ಕಳೆಗುಂದಿದವು?


ಓ, ‘ಲೆಬನೋನಿನಲ್ಲಿ’ ವಾಸಮಾಡುವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡವಳೇ, ನಿನ್ನ ಮೇಲೆ ಬೇನೆಗಳೂ, ಹೆರುವವಳಂತಿರುವ ವೇದನೆಯೂ ಬರುವಾಗ ಎಷ್ಟೋ ದುಃಖಕರವಾಗಿರುವೆ.


ಆದ್ದರಿಂದ ಅವರ ಮಕ್ಕಳನ್ನು ಕ್ಷಾಮಕ್ಕೆ ಕೊಡು. ಖಡ್ಗದ ಬಲದಿಂದ ಅವರ ರಕ್ತವನ್ನು ಸುರಿದುಬಿಡು. ಅವರ ಹೆಂಡತಿಯರು ಮಕ್ಕಳಿಲ್ಲದೆ ವಿಧವೆಯರಾಗಲಿ. ಅವರ ಗಂಡಸರು ಹತರಾಗಲಿ. ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗಕ್ಕೆ ತುತ್ತಾಗಲಿ.


ಏಕೆ ನನ್ನ ವ್ಯಥೆಯು ನಿರಂತರವಾಗಿದೆ? ನನ್ನ ಗಾಯವು ಗಡುಸಾಗಿ ಗುಣ ಹೋಗಲೊಲ್ಲದೇಕೆ? ನೀನು ನನಗೆ ನೀರು ಬತ್ತುವ ಕಳ್ಳತೊರೆಯಂತಿರಬೇಕೋ? ಎಂದು ಅರಿಕೆಮಾಡಿಕೊಂಡೆನು.


ನಾನು ಹೊಲಕ್ಕೆ ಹೋದರೆ ಇಗೋ, ಖಡ್ಗದಿಂದ ಸತ್ತವರು ಕಾಣಿಸುತ್ತಾರೆ. ಪಟ್ಟಣದಲ್ಲಿ ಪ್ರವೇಶಿಸಿದರೆ ಇಗೋ, ಕ್ಷಾಮದಿಂದ ರೋಗದಲ್ಲಿ ಬಿದ್ದವರು ಕಾಣಿಸಿಕೊಳ್ಳುತ್ತಾರೆ. ಹೌದು, ಪ್ರವಾದಿಯೂ, ಯಾಜಕನೂ ತಮಗೆ ತಿಳಿಯದ ದೇಶಕ್ಕೆ ಸಂಚಾರ ಮಾಡುವರು.’ ”


ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, ನನ್ನ ಗಾಯವು ವಾಸಿಪಡಿಸಲಾಗದು. ಆದರೆ ನಾನು ನಿಶ್ಚಯವಾಗಿ, “ಇದು ನನ್ನ ರೋಗ, ಇದನ್ನು ನಾನು ಸಹಿಸಲೇಬೇಕಾಗಿದೆ,” ಎಂದೆನು.


ಸುಂದರಿ ಮತ್ತು ಕೋಮಲಳಾದ ಚೀಯೋನಿನ ಮಗಳನ್ನು ನಾನು ನಾಶಮಾಡುತ್ತೇನೆ.


“ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು. ನಾನು ನಾಶಮಾಡಿ, ಒಂದೇ ಸಾರಿ ನುಂಗಿಬಿಡುವೆನು.


ಆದ್ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ. ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ. ಕಣ್ಣು ಕುರುಡಾಗುವಷ್ಟು ಭ್ರಾಂತನಾಗಿದ್ದೇನೆ.


ಅವರು ಭಯಪಡುವರು. ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವುವು. ಪ್ರಸವವೇದನೆಯಲ್ಲಿರುವ ಸ್ತ್ರೀಯರಂತೆ ಸಂಕಟಪಡುವರು. ಅವರು ಒಬ್ಬರಿಗೊಬ್ಬರು ಭ್ರಮೆ ಪಡುವರು. ಅವರ ಮುಖಗಳು ಜ್ವಾಲೆಯಂತಿರುವುವು.


ಆಗ ನಾನು, “ಅಯ್ಯೋ, ನಾನು ನಾಶವಾದೆನಲ್ಲಾ! ಏಕೆಂದರೆ, ನಾನು ಅಶುದ್ಧ ತುಟಿಯವನು. ನಾನು ಅಶುದ್ಧ ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು. ನನ್ನ ಕಣ್ಣುಗಳು ರಾಜಾಧಿರಾಜರೂ ಸೇನಾಧೀಶ್ವರ ಯೆಹೋವ ದೇವರನ್ನು ಕಂಡವು!” ಎಂದೆನು.


ಅಯ್ಯೋ, ನಾನು ಮೆಷೆಕಿನಲ್ಲಿ ತಂಗಬೇಕಲ್ಲಾ! ಕೇದಾರಿನ ಗುಡಾರಗಳ ಬಳಿ ವಾಸಮಾಡುತ್ತೇನೆ.


“ನನ್ನ ಜೀವನವೇ ನನಗೆ ಬೇಸರವಾಗಿದೆ; ನನ್ನ ದೂರುಗಳನ್ನು ಮನಬಿಚ್ಚಿ ನುಡಿಯುವೆನು; ನನ್ನ ಪ್ರಾಣದ ಕಹಿಯಿಂದ ಮಾತನಾಡುವೆನು.


ರೆಬೆಕ್ಕಳು ಇಸಾಕನಿಗೆ, “ಹಿತ್ತಿಯ ಸ್ತ್ರೀಯರ ದೆಸೆಯಿಂದ ನನ್ನ ಜೀವ ನನಗೆ ಬೇಸರವಾಗಿದೆ. ಇಂಥ ಹಿತ್ತಿಯ ಸ್ತ್ರೀಯರಲ್ಲಿ ಒಬ್ಬಳನ್ನು ತನ್ನ ಹೆಂಡತಿಯಾಗಿ ಯಾಕೋಬನು ಮದುವೆ ಮಾಡಿಕೊಂಡರೆ, ನಾನು ಬದುಕಿರುವುದು ವ್ಯರ್ಥ,” ಎಂದಳು.


ಗರ್ಭಿಣಿ ಸ್ತ್ರೀಯು ಹೆರುವುದಕ್ಕೆ ಸಮೀಪ ಬಂದಾಗ ನೋವಿನಲ್ಲಿದ್ದು ತನ್ನ ಬೇನೆಯಲ್ಲಿ ಅರಚುವಂತೆ, ಯೆಹೋವ ದೇವರೇ, ನಾವು ನಿಮ್ಮ ಸಮ್ಮುಖದಲ್ಲಿದ್ದೆವು.


ಈಗ ಏಕೆ ಗಟ್ಟಿಯಾಗಿ ಕೂಗುತ್ತೀ? ನಿನ್ನಲ್ಲಿ ಅರಸನಿಲ್ಲವೋ? ನಿನ್ನ ಅಧಿಕಾರಿಯು ನಾಶವಾದನೋ? ಹೆರುವವಳಂತೆ ನಿನಗೆ ವೇದನೆ ಬಂದಿರುವುದೋ?


ಚೀಯೋನ್ ಪುತ್ರಿಯೇ ಹೆರುವವಳಂತೆ ವೇದನೆ ತಾಳಿಕೋ, ಏಕೆಂದರೆ ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬಿಲೋನಿಗೆ ಹೋಗುವೆ, ಅಲ್ಲಿ ನಿನಗೆ ಬಿಡುಗಡೆಯಾಗುವುದು. ಅಲ್ಲಿ ಯೆಹೋವ ದೇವರು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು