ಯೆರೆಮೀಯ 4:3 - ಕನ್ನಡ ಸಮಕಾಲಿಕ ಅನುವಾದ3 ಏಕೆಂದರೆ ಯೆಹೋವ ದೇವರು ಯೆಹೂದದ ಮತ್ತು ಯೆರೂಸಲೇಮಿನ ಜನರಿಗೆ ಹೀಗೆ ಹೇಳುತ್ತಾರೆ: “ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನಿಮ್ಮ ಬಂಜರು ಭೂಮಿಯನ್ನು ಗೆಯ್ಯಿರಿ. ಮುಳ್ಳುಗಳಲ್ಲಿ ಬೀಜ ಬಿತ್ತಬೇಡಿರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಯೆಹೋವನು ಯೆಹೂದದವರಿಗೂ ಮತ್ತು ಯೆರೂಸಲೇಮಿನವರಿಗೂ, “ಪಾಳು ಬಿದ್ದಿರುವ ನಿಮ್ಮ ಭೂಮಿಯನ್ನು ಉತ್ತು ಹದಮಾಡಿ, ಮುಳ್ಳುಗಳಲ್ಲಿ ಬಿತ್ತಬೇಡಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಜುದೇಯದವರಿಗೂ ಜೆರುಸಲೇಮಿನವರಿಗೂ ಸರ್ವೇಶ್ವರ ಹೇಳುವುದೇನೆಂದರೆ - “ಪಾಳುಬಿದ್ದ ನಿಮ್ಮ ಹೊಲಗದ್ದೆಗಳನ್ನು ಉತ್ತು ಹದಮಾಡಿ, ಮುಳ್ಳುಗಳ ನಡುವೆ ಬಿತ್ತಬೇಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಯೆಹೋವನು ಯೆಹೂದದವರಿಗೂ ಯೆರೂಸಲೇವಿುನವರಿಗೂ ಹೀಗೆ ಹೇಳುತ್ತಾನೆ - ಗೆಯ್ಯದ ನಿಮ್ಮ ಭೂವಿುಯನ್ನು ಗೆಯ್ಯಿರಿ, ಮುಳ್ಳುಗಳಲ್ಲಿ ಬಿತ್ತಬೇಡಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಯೆಹೂದ ಜನಾಂಗದ ಜನರಿಗೂ ಜೆರುಸಲೇಮ್ ನಗರದ ಜನರಿಗೂ ಯೆಹೋವನು ಹೀಗೆ ಹೇಳುತ್ತಾನೆ: “ನಿಮ್ಮ ಹೊಲಗಳಲ್ಲಿ ನೇಗಿಲು ಹೊಡೆದಿಲ್ಲ, ಆ ಹೊಲಗಳನ್ನು ನೇಗಿಲು ಹೊಡೆದು ಸ್ವಚ್ಛಮಾಡಿರಿ. ಮುಳ್ಳುಗಳಲ್ಲಿ ಬೀಜಗಳನ್ನು ಬಿತ್ತಬೇಡಿರಿ. ಅಧ್ಯಾಯವನ್ನು ನೋಡಿ |