Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 4:29 - ಕನ್ನಡ ಸಮಕಾಲಿಕ ಅನುವಾದ

29 ರಾವುತರ ಮತ್ತು ಬಿಲ್ಲಿನವರ ಶಬ್ದದ ನಿಮಿತ್ತ ಪಟ್ಟಣವೆಲ್ಲಾ ಓಡಿ ಹೋಗುವುದು. ಪೊದೆಗಳಲ್ಲಿ ಹೊಕ್ಕು, ಬಂಡೆಗಳನ್ನು ಹತ್ತುವರು. ಪಟ್ಟಣಗಳೆಲ್ಲಾ ನಾಶವಾಗುವುವು. ಅವುಗಳಲ್ಲಿ ಒಬ್ಬನಾದರೂ ವಾಸಮಾಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಪಟ್ಟಣದವರೆಲ್ಲರೂ ಸವಾರರ ಮತ್ತು ಬಿಲ್ಲುಗಾರರ ಆರ್ಭಟಕ್ಕೆ ಹೆದರಿ ಓಡುತ್ತಾರೆ; ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ, ಅತ್ತ ಬಂಡೆಗಳನ್ನು ಹತ್ತುತ್ತಾರೆ; ಪ್ರತಿಯೊಂದು ಪಟ್ಟಣವು ಯಾವ ನಿವಾಸಿಯೂ ಇಲ್ಲದೆ ನಿರ್ಜನವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ರಾಹುತರ ಹಾಗೂ ಬಿಲ್ಲುಗಾರರ ಅಬ್ಬರಕ್ಕೆ ಓಡುತ್ತಿರುವವರು ಪಟ್ಟಣಿಗರೆಲ್ಲರು ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ. ಅತ್ತ ಬಂಡೆಗಳನ್ನು ಹತ್ತುತ್ತಿದ್ದಾರೆ. ಪ್ರತಿಯೊಂದು ಪಟ್ಟಣ ಪಾಳುಬಿದ್ದ ಬೀಡು ಅದರಲ್ಲಿ ಮತ್ತೆ ವಾಸಮಾಡುವವರು ಒಬ್ಬರೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಪಟ್ಟಣದವರೆಲ್ಲರೂ ಸವಾರರ ಮತ್ತು ಬಿಲ್ಲುಗಾರರ ಆರ್ಭಟಕ್ಕೆ ಹೆದರಿ ಓಡುತ್ತಾರೆ; ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ, ಅತ್ತ ಬಂಡೆಗಳನ್ನು ಹತ್ತುತ್ತಾರೆ; ಪ್ರತಿಯೊಂದು ಪಟ್ಟಣವು ಯಾವ ನಿವಾಸಿಯೂ ಇಲ್ಲದೆ ನಿರ್ಜನವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಯೆಹೂದದ ಜನರು ಕುದುರೆಗಳ, ಸವಾರರ, ಬಿಲ್ಲುಗಾರರ ಶಬ್ಧಗಳನ್ನು ಕೇಳಿ ಓಡಿಹೋಗುವರು. ಕೆಲವು ಜನರು ಗುಹೆಯಲ್ಲಿ ಅಡಗಿಕೊಳ್ಳುವರು. ಕೆಲವರು ಪೊದೆಗಳಲ್ಲಿ ಅವಿತುಕೊಳ್ಳುವರು. ಕೆಲವರು ಬೆಟ್ಟಗಳನ್ನು ಹತ್ತಿಹೋಗುವರು. ಯೆಹೂದದ ಎಲ್ಲಾ ನಗರಗಳು ಬರಿದಾಗುವವು. ಅಲ್ಲಿ ಒಬ್ಬರೂ ಇರುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 4:29
14 ತಿಳಿವುಗಳ ಹೋಲಿಕೆ  

ಸಿಂಹವು ತನ್ನ ಪೊದೆಯೊಳಗಿಂದ ಏರಿ ಬರುತ್ತದೆ. ಇತರ ಜನಾಂಗಗಳನ್ನು ನಾಶ ಮಾಡುವವನು ಹೊರಟಿದ್ದಾನೆ. ನಿನ್ನ ದೇಶವನ್ನು ಹಾಳು ಮಾಡುವುದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ. ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವುದು.


ಆಗ ಅವರು, “ ‘ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ!” ಗುಡ್ಡಗಳಿಗೆ, “ನಮ್ಮನ್ನು ಮುಚ್ಚಿಕೊಳ್ಳಿರಿ!” ’ ಎಂದು ಹೇಳಲಾರಂಭಿಸುವರು.


ಕರ್ತದೇವರು ಬಲಿಪೀಠದ ಪಕ್ಕದಲ್ಲಿ ನಿಂತಿರುವುದನ್ನು ನಾನು ಕಂಡೆನು. ಅವರು ಹೇಳಿದ್ದೇನೆಂದರೆ: “ಹೊಸ್ತಿಲುಗಳು ಕದಲುವಂತೆ ಆಧಾರ ಬೋದಿಗೆಗಳನ್ನು ಬಲವಾಗಿ ಹೊಡೆದು, ಅವು ಎಲ್ಲರ ತಲೆಗಳ ಮೇಲೆ ಬೀಳುವ ಹಾಗೆ ಅವುಗಳನ್ನು ಕಡಿದುಬಿಡು. ಅವರಲ್ಲಿ ಉಳಿದವರನ್ನು ಖಡ್ಗದಿಂದ ಕೊಲ್ಲುವೆನು. ಅವರಲ್ಲಿ ಓಡಿಹೋಗುವವನು ಓಡಿಹೋಗಲಾಗುವುದಿಲ್ಲ.


ಆಗ ಪಟ್ಟಣದ ಗೋಡೆ ಮುರಿಯಲಾಯಿತು. ಸೈನಿಕರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನ ಮಾರ್ಗವಾಗಿ ಹೊರಟು, ಬಾಬಿಲೋನಿನವರು ಪಟ್ಟಣದ ಬಳಿಯಲ್ಲಿ ಇದ್ದದ್ದರಿಂದ ಅವರು ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು.


ಒಬ್ಬನ ಬೆದರಿಕೆಗೆ ಸಾವಿರ ಜನರು ಓಡುವರು, ಐವರು ಹೆದರಿಸುವುದರಿಂದ ನೀವೆಲ್ಲರೂ ಓಡಿಹೋಗುವಿರಿ, ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಣ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.”


ಆದಕಾರಣ ಯೆಹೋವ ದೇವರು ಅಸ್ಸೀರಿಯದ ಅರಸನ ಸೈನ್ಯದ ಅಧಿಪತಿಗಳನ್ನೂ ಅವನ ಮೇಲೆ ಬರಮಾಡಿದರು. ಆ ಅಧಿಪತಿಗಳು ಮನಸ್ಸೆಯ ಮೂಗಿಗೆ ಕೊಂಡಿಗಳನ್ನು ಹಾಕಿ, ಅವನಿಗೆ ಕಂಚಿನ ಸಂಕೋಲೆಗಳಿಂದ ಬಂಧಿಸಿ, ಅವನನ್ನು ಬಾಬಿಲೋನಿಗೆ ಒಯ್ದರು.


ಆಗ ಇಸ್ರಾಯೇಲ್ ಜನರು ತಮಗೆ ಶ್ರಮೆ ಉಂಟಾದದ್ದರಿಂದ ತಾವು ಇಕ್ಕಟ್ಟಿನಲ್ಲಿ ಇರುವುದನ್ನು ಕಂಡು, ಗವಿಗಳಲ್ಲಿಯೂ, ಮುಳ್ಳಿನ ಪೊದೆಗಳಲ್ಲಿಯೂ, ಗುಡ್ಡಗಳಲ್ಲಿಯೂ, ಕುಣಿಗಳಲ್ಲಿಯೂ ಬಾವಿಗಳಲ್ಲಿಯೂ ಅಡಗಿಕೊಂಡರು.


ಯೆಹೋವ ದೇವರಾದ ನಾನು ಮನುಷ್ಯರನ್ನು ದೂರ ಮಾಡುವವರೆಗೂ, ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವವರೆಗೂ ಅದು ಹೀಗಿರುವುದು.


ಅವರು ಬಿಲ್ಲನ್ನೂ, ಭಲ್ಲೆಯನ್ನೂ ಹಿಡಿದುಕೊಂಡಿದ್ದಾರೆ; ಅವರು ಕ್ರೂರರು; ಕನಿಕರ ತೋರಿಸುವುದಿಲ್ಲ. ಅವರ ಶಬ್ದವು ಸಮುದ್ರದ ಹಾಗೆ ಭೋರ್ಗರೆಯುತ್ತದೆ. ಓ ಚೀಯೋನಿನ ಪುತ್ರಿಯೇ, ನಿನಗೆ ವಿರೋಧವಾಗಿಯೇ ಯುದ್ಧಮಾಡುವುದಕ್ಕೆ ಸಿದ್ಧವಾಗಿರುವ ಶೂರರಂತೆ ಕುದುರೆಗಳನ್ನು ಹತ್ತಿಕೊಂಡು ಬರುತ್ತಿದ್ದಾರೆ.”


“ಇಗೋ, ನಾನು ಅನೇಕ ಮೀನುಗಾರರನ್ನು ಕಳುಹಿಸುತ್ತೇನೆ. ಇವರು ಅವರನ್ನು ಹಿಡಿಯುವರು. ಆಮೇಲೆ ಅನೇಕ ಬೇಟೆಗಾರರನ್ನು ಕಳುಹಿಸುವೆನು. ಇವರು ಎಲ್ಲಾ ಬೆಟ್ಟಗಳ ಮೇಲೆಯೂ, ಎಲ್ಲಾ ಗುಡ್ಡಗಳ ಮೇಲೆಯೂ, ಎಲ್ಲಾ ಬಂಡೆಗಳ ಬಿರುಕುಗಳಲ್ಲಿಯೂ ಅವರನ್ನು ಬೇಟೆಯಾಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು