Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 4:13 - ಕನ್ನಡ ಸಮಕಾಲಿಕ ಅನುವಾದ

13 ಇಗೋ, ಮೇಘಗಳ ಹಾಗೆ ಏರಿ ಬರುವನು. ಆತನ ರಥಗಳು ಬಿರುಗಾಳಿಯ ಹಾಗೆ ಇರುವುವು. ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ. ನಮ್ಮ ಗತಿಯನ್ನು ಏನು ಹೇಳೋಣ, ಏಕೆಂದರೆ ಹಾಳಾದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಇಗೋ, ಆ ಶತ್ರುವು ಮೇಘಗಳೋಪಾದಿಯಲ್ಲಿ ಬರುತ್ತಾನೆ, ಅವರ ರಥಗಳು ಬಿರುಗಾಳಿಯಂತಿವೆ, ಅವನ ಅಶ್ವಗಳು ಹದ್ದುಗಳಿಗಿಂತ ವೇಗವಾಗಿವೆ! ನಮ್ಮ ಗತಿಯನ್ನು ಏನು ಹೇಳೋಣ, ಹಾಳಾದೆವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಮೇಘಗಳೋಪಾದಿಯಲ್ಲಿ ಶತ್ರು ಬರುತ್ತಿರುವುದನ್ನು ನೋಡು. ಅವನ ರಥಗಳು ಬಿರುಗಾಳಿಯಂತೆ ! ಅವನ ಕುದುರೆಗಳು ರಣಹದ್ದುಗಳಂತೆ ! ಅಯ್ಯೋ ನಮಗೆ ಕೇಡು, ಇನ್ನು ನಮ್ಮ ಗತಿ ಮುಗಿಯಿತು !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಇಗೋ, [ಆ ಶತ್ರುವು] ಮೇಘಗಳೋಪಾದಿಯಲ್ಲಿ ಬರುತ್ತಾನೆ, ಅವನ ರಥಗಳು ಬಿರುಗಾಳಿಯಂತಿವೆ, ಅವನ ಅಶ್ವಗಳು ಹದ್ದುಗಳಿಗಿಂತ ವೇಗವಾಗಿವೆ! ನಮ್ಮ ಗತಿಯನ್ನು ಏನು ಹೇಳೋಣ, ಹಾಳಾದೆವಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಇಗೋ, ಆ ಶತ್ರುವು ಮೇಘಮಾಲೆಯಂತೆ ಬರುತ್ತಿದ್ದಾನೆ. ಅವನ ರಥಗಳು ಬಿರುಗಾಳಿಯಂತೆ ಕಾಣುತ್ತಿವೆ. ಅವನ ಕುದುರೆಗಳು ಹದ್ದುಗಳಿಗಿಂತ ವೇಗವಾಗಿ ಓಡುತ್ತಿವೆ. ಇದು ನಮಗೆ ತುಂಬ ಅಪಾಯಕಾರಿಯಾಗಿದೆ; ನಾವು ಹಾಳಾಗಿಹೋದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 4:13
28 ತಿಳಿವುಗಳ ಹೋಲಿಕೆ  

ಈಜಿಪ್ಟಿನವರ ವಿಷಯವಾದ ಪ್ರವಾದನೆ: ಇಗೋ, ಯೆಹೋವ ದೇವರು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಈಜಿಪ್ಟಿಗೆ ಬರುತ್ತಾರೆ. ಅವರು ಸಮ್ಮುಖರಾದಾಗ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯಗಳು ಅದರ ಮಧ್ಯೆ ಭಯದಿಂದ ಕರಗುವುವು.


ಯೆಹೋವ ದೇವರು ಬೆಂಕಿಯೊಡನೆ ಬರುವರು. ಅವರ ರಥಗಳು ಬಿರುಗಾಳಿಯ ಹಾಗೆ ಇರುವುವು. ಕಠಿಣವಾದ ತಮ್ಮ ಕೋಪವನ್ನೂ ಅಗ್ನಿಜ್ವಾಲೆಗಳಿಂದ ತಮ್ಮ ಗದರಿಕೆಯನ್ನೂ ಸಲ್ಲಿಸುವುದಕ್ಕಾಗಿಯೇ ಬರುವರು.


ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿಯೂ, ಸಂಜೆಯ ತೋಳಗಳಿಗಿಂತ ಚುರುಕಾಗಿಯೂ ಇವೆ. ಅವರ ಅಶ್ವಸೈನ್ಯ ಎರಗುವುದು. ಅವರ ಕುದುರೆ ಸವಾರರು ದೂರದಿಂದ ಬರುವರು; ನುಂಗುವುದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿ ಬರುವರು.


ನಮ್ಮನ್ನು ಹಿಂಸಿಸುವವರು ಆಕಾಶದಲ್ಲಿ ಹಾರುವ ಹದ್ದುಗಳಿಗಿಂತ ತೀವ್ರವಾಗಿದ್ದಾರೆ. ಅವರು ಪರ್ವತಗಳ ಮೇಲೆ ನಮ್ಮನ್ನು ಹಿಂದಟ್ಟಿ, ಅರಣ್ಯದಲ್ಲಿ ಹೊಂಚು ಹಾಕಿದರು.


ಅವರ ಬಾಣಗಳು ಹದವಾಗಿವೆ. ಅವರ ಬಿಲ್ಲುಗಳು ಬಿಗಿದಿವೆ, ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ, ಅವರ ರಥಗಳ ಚಕ್ರಗಳು ಬಿರುಗಾಳಿಯಂತೆಯೂ ರಭಸವಾಗಿವೆ.


ಯೆಹೋವ ದೇವರು ಕೋಪಗೊಳ್ಳುವುದರಲ್ಲಿ ಶಾಂತಿಸ್ವರೂಪರು. ಆದರೂ ಶಕ್ತಿಯಲ್ಲಿ ಮಹತ್ತಾದವರು. ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ಶಿಕ್ಷಿಸದೆ ಇರರು. ಯೆಹೋವ ದೇವರ ಮಾರ್ಗವು ಸುಳಿಗಾಳಿಯಲ್ಲಿಯೂ, ಬಿರುಗಾಳಿಯಲ್ಲಿಯೂ ಇದೆ. ಮೇಘಗಳು ಅವರ ಕಾಲುಗಳ ಧೂಳೇ.


ಯೆಹೋವ ದೇವರು ಮತ್ತು ಅವರ ರೋಷಕ್ಕೆ ಆಯುಧಗಳಾದವರು ದೂರದೇಶದಿಂದ ಎಂದರೆ, ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವುದಕ್ಕಾಗಿ ಬರುತ್ತಾರೆ.


ಯೆಹೋವ ದೇವರು ದೂರದಿಂದ ಅಂದರೆ, ಭೂಮಿಯ ಕೊನೆಯಿಂದ ರಣಹದ್ದು ಹೇಗೆ ಹಾರಿಬರುವುದೋ ಹಾಗೆಯೇ, ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗವನ್ನು ನಿಮ್ಮ ಮೇಲೆ ಬರುವಂತೆ ಮಾಡುವರು.


ಏಕೆಂದರೆ ಪ್ರಸವವೇದನೆ ಪಡುವವಳಂತೆ, ಚೊಚ್ಚಲನ್ನು ಹೆರುವವಳ ಸಂಕಟಕ್ಕೆ ಸಮಾನವಾಗಿರುವ ಚೀಯೋನಿನ ಮಗಳ ಕಿರಿಚುವ ಕೂಗನ್ನು ಕೇಳಿದ್ದೇನೆ. ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ, “ಅಯ್ಯೋ, ನನಗೀಗ ಕಷ್ಟ! ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ,” ಎಂದು ಅರಚಿಕೊಳ್ಳುತ್ತಾಳೆ.


“ಇಗೋ, ಯೇಸು ಮೇಘಗಳೊಂದಿಗೆ ಬರುತ್ತಾರೆ,” ಮತ್ತು “ಎಲ್ಲರ ಕಣ್ಣುಗಳು ಅವರನ್ನು ಕಾಣುವವು, ಅವರನ್ನು ಇರಿದವರು ಸಹ ಕಾಣುವರು.” ಭೂಲೋಕದಲ್ಲಿರುವ ಎಲ್ಲಾ ಜನರು, “ಅವರ ದೆಸೆಯಿಂದ ಗೋಳಾಡುವರು.” ಹೌದು, ಹಾಗೆಯೇ ಆಗುವುದು! ಆಮೆನ್.


“ಆಗ ಮನುಷ್ಯಪುತ್ರನಾದ ನನ್ನ ಸೂಚನೆಯು ಆಕಾಶದಲ್ಲಿ ಕಾಣುವುದು. ಭೂಮಿಯ ಎಲ್ಲಾ ಜನಾಂಗದವರು ಗೋಳಾಡುವರು. ಮನುಷ್ಯಪುತ್ರನಾದ ನಾನು ಆಕಾಶದ ಮೇಘಗಳಲ್ಲಿ, ಶಕ್ತಿಯಿಂದಲೂ ಮಹಾಪ್ರಭಾವದಿಂದಲೂ ಬರುವುದನ್ನು ಅವರು ಕಾಣುವರು.


“ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ. ಅವರು ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ನ್ಯಾಯ ಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಶತ್ರುಗಳು ಹದ್ದಿನ ಹಾಗೆ ಯೆಹೋವ ದೇವರ ಆಲಯದ ಮೇಲೆ ಬರುವರು.


“ಮೊದಲನೆಯದು ಸಿಂಹದ ಹಾಗಿತ್ತು, ಆದರೆ ಹದ್ದಿನ ರೆಕ್ಕೆಗಳುಳ್ಳದ್ದಾಗಿತ್ತು. ನಾನು ಗಮನಿಸಲು, ಅದರ ರೆಕ್ಕೆಗಳನ್ನು ಕಿತ್ತುಹಾಕಲಾಗಿ, ಅದು ನೆಲದಿಂದ ಎತ್ತರಕ್ಕೆ ಮನುಷ್ಯನಂತೆ ಕಾಲೂರಿ ನಿಂತಿತ್ತು. ಅದಕ್ಕೆ ಮನುಷ್ಯನ ಹೃದಯವು ಕೊಡಲಾಯಿತು.


ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, ನನ್ನ ಗಾಯವು ವಾಸಿಪಡಿಸಲಾಗದು. ಆದರೆ ನಾನು ನಿಶ್ಚಯವಾಗಿ, “ಇದು ನನ್ನ ರೋಗ, ಇದನ್ನು ನಾನು ಸಹಿಸಲೇಬೇಕಾಗಿದೆ,” ಎಂದೆನು.


ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ, ಸಂತೋಷಕರವಾಗಿಯೂ ಇದ್ದರು. ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ, ಸಿಂಹಗಳಿಗಿಂತ ಬಲವುಳ್ಳವರೂ ಆಗಿದ್ದರು.


ಏಕೆಂದರೆ ಯೆರೂಸಲೇಮು ಹಾಳಾಗಿದೆ, ಯೆಹೂದವು ಬಿದ್ದುಹೋಗಿದೆ. ಅವರ ನಡೆನುಡಿಗಳು ಯೆಹೋವ ದೇವರಿಗೆ ವಿರುದ್ಧವಾಗಿ ದೇವರ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತಾರೆ.


ಅದಕ್ಕಿಂತ ಬಿರುಸಾದ ಗಾಳಿ ಆ ಸ್ಥಳಗಳಿಂದ ನನ್ನ ಬಳಿಗೆ ಬರುವುದು. ಈಗಲೂ ನಾನು ಅವರಿಗೆ ವಿರೋಧವಾಗಿ ನ್ಯಾಯತೀರ್ಪುಗಳನ್ನು ಕೊಡುವೆನು.”


‘ನಾವು ಹೇಗೆ ಹಾಳಾದೆವು, ನಾವು ದೇಶವನ್ನು ಬಿಟ್ಟದ್ದರಿಂದಲೂ, ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ ಬಹಳವಾಗಿ ನಾಚಿಕೆ ಪಡುತ್ತೇವೆ, ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿಬಂತು.’ ”


ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮಶಾಲಿಗಳು ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವುದು.


ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಸುಕುವದು, ಒಡಕು ಬಿದ್ದ ಕೋಟೆಯೊಳಗೆ ಶತ್ರುಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲುಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವುವು.


ನೀನು ಮೇಲೇರಿ ಬಿರುಗಾಳಿಯಂತೆ ಬರುವೆ. ನೀನೂ ನಿನ್ನ ಎಲ್ಲಾ ದಂಡುಗಳೂ ಅನೇಕ ಜನರಸಹಿತವಾಗಿ ಮೇಘದಂತೆ ದೇಶವನ್ನು ಮುಚ್ಚುವಿರಿ.


ಅಂತ್ಯಕಾಲದಲ್ಲಿ ದಕ್ಷಿಣದ ಅರಸನು ಅವನ ಮೇಲೆ ಬೀಳುವನು; ಉತ್ತರದ ಅರಸನು ರಥಗಳೊಂದಿಗೂ, ಸವಾರರೊಂದಿಗೂ, ಅನೇಕ ಹಡಗುಗಳೊಂದಿಗೂ ಸುಳಿಗಾಳಿಯಂತೆ ಅವನಿಗೆ ವಿರೋಧವಾಗಿ ದೇಶಗಳನ್ನು ಪ್ರವೇಶಿಸಿ ಪ್ರಳಯದಂತೆ ಹಾದುಹೋಗುವನು.


ಆ ದಿನದಲ್ಲಿ ಜನರು ನಿಮ್ಮನ್ನು ಅಪಹಾಸ್ಯ ಮಾಡುವರು. ‘ನಾವು ಸಂಪೂರ್ಣವಾಗಿ ಹಾಳಾಗಿದ್ದೇವೆ. ನನ್ನ ಪ್ರಜೆಗಳ ಆಸ್ತಿ ವಿಭಾಗವಾಗಿದೆ. ಆತನು ಅದನ್ನು ನನ್ನಿಂದ ತೆಗೆದುಕೊಳ್ಳುವನು. ಆತನು ನಮ್ಮ ಹೊಲಗಳನ್ನು ದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ,’ ” ಎಂಬ ದುಃಖದಾಯಕ ಸಂಗೀತದಿಂದ ಹಾಸ್ಯಮಾಡುವರು.


ಅವರು ಬಿಲ್ಲನ್ನೂ, ಭಲ್ಲೆಯನ್ನೂ ಹಿಡಿದುಕೊಂಡಿದ್ದಾರೆ; ಅವರು ಕ್ರೂರರು; ಕನಿಕರ ತೋರಿಸುವುದಿಲ್ಲ. ಅವರ ಶಬ್ದವು ಸಮುದ್ರದ ಹಾಗೆ ಭೋರ್ಗರೆಯುತ್ತದೆ. ಓ ಚೀಯೋನಿನ ಪುತ್ರಿಯೇ, ನಿನಗೆ ವಿರೋಧವಾಗಿಯೇ ಯುದ್ಧಮಾಡುವುದಕ್ಕೆ ಸಿದ್ಧವಾಗಿರುವ ಶೂರರಂತೆ ಕುದುರೆಗಳನ್ನು ಹತ್ತಿಕೊಂಡು ಬರುತ್ತಿದ್ದಾರೆ.”


“ಸೇನಾಧೀಶ್ವರ ಯೆಹೋವ ದೇವರೆಂದು ಹೆಸರುಳ್ಳ ಅರಸನು ಹೇಳುವುದೇನೆಂದರೆ, ‘ನನ್ನ ಜೀವದಾಣೆ,’ ಬೆಟ್ಟಗಳಲ್ಲಿ ತಾಬೋರಿನಂತೆಯೂ, ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯವಾಗಿ ಬರುವನು.


ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಅವನು ಹದ್ದಿನ ಹಾಗೆ ಹಾರಿ, ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು.


ನಾನು ಕಣ್ಣೆತ್ತಿ ನೋಡಿದಾಗ, ನಾಲ್ಕು ರಥಗಳು ಎರಡು ಬೆಟ್ಟಗಳ ಮಧ್ಯದಿಂದ ಹೊರಟು ಬಂದವು. ಆ ಬೆಟ್ಟಗಳು ಕಂಚಿನ ಬೆಟ್ಟಗಳಾಗಿದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು