Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 36:22 - ಕನ್ನಡ ಸಮಕಾಲಿಕ ಅನುವಾದ

22 ಆಗ ಒಂಬತ್ತನೆಯ ತಿಂಗಳಿನ ಅರಸನು ಚಳಿಗಾಲದ ಮನೆಯಲ್ಲಿ ಕುಳಿತುಕೊಂಡಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯಲ್ಲಿ ಬೆಂಕಿ ಉರಿಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆಗ ಪುಷ್ಯಮಾಸ; ಅರಸನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯು ಉರಿಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅದು ವರ್ಷದ ಒಂಬತ್ತನೇ ತಿಂಗಳು. ಅರಸನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು. ಅವನ ಮುಂದೆ ಅಗ್ಗಿಷ್ಟಿಕೆ ಉರಿಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಆಗ ಪುಷ್ಯಮಾಸ; ಅರಸನು ಚಳಿಗಾಲದ ಮನೆಯಲ್ಲಿ ಕೂತಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯು ಉರಿಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಅದು ನಡೆದದ್ದು ಒಂಭತ್ತನೇ ತಿಂಗಳಲ್ಲಿ, ರಾಜನಾದ ಯೆಹೋಯಾಕೀಮನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು. ರಾಜನ ಎದುರಿಗಿದ್ದ ಒಂದು ಸಣ್ಣ ಅಗ್ಗಿಷ್ಟಿಕೆಯಲ್ಲಿ ಬೆಂಕಿಯು ಉರಿಯುತ್ತಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 36:22
6 ತಿಳಿವುಗಳ ಹೋಲಿಕೆ  

ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ ಹೊಡೆದು ಹಾಕುವೆನು. ಆಗ ದಂತ ಮಂದಿರಗಳು ನಾಶವಾಗುವುವು. ದೊಡ್ಡ ಮನೆಗಳು ಕೊನೆಗಾಣುವುವು,” ಎಂದು ಯೆಹೋವ ದೇವರು ಹೇಳುತ್ತಾರೆ.


ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಐದನೆಯ ವರ್ಷದ ಒಂಬತ್ತನೆಯ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿರುವ ಎಲ್ಲಾ ಜನರಿಗೂ, ಯೆಹೂದದ ಪಟ್ಟಣಗಳಿಂದ ಯೆರೂಸಲೇಮಿಗೆ ಬಂದ ಜನರೆಲ್ಲರಿಗೂ ಯೆಹೋವ ದೇವರ ಸನ್ನಿಧಿಯಲ್ಲಿ ಉಪವಾಸವನ್ನು ಸಾರಿದನು.


ನಿಶ್ಚಯವಾಗಿ ಹೆಂಡತಿ ತನ್ನ ಗಂಡನನ್ನು ವಂಚಿಸಿಬಿಡುವ ಕಾರಣ, ಓ ಇಸ್ರಾಯೇಲಿನ ಮನೆತನದವರೇ, ನನಗೆ ವಂಚನೆ ಮಾಡಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.


ಅವನು ತನಗೋಸ್ಕರ ಮಾತ್ರ ಇದ್ದ ಬೇಸಿಗೆಯ ಕೊಠಡಿಯಲ್ಲಿ ಕುಳಿತಾಗ, ಏಹೂದನು ಅವನ ಬಳಿಗೆ ಪ್ರವೇಶಿಸಿ, “ನಿನ್ನ ಸಂಗಡ ಹೇಳಬೇಕಾದ ದೇವರ ಸಂದೇಶ ನನಗಿದೆ,” ಎಂದನು. ಅವನು ತನ್ನ ಸಿಂಹಾಸನದಿಂದ ಎದ್ದನು.


ಆಗ ಯೆಹೂದ ಮತ್ತು ಬೆನ್ಯಾಮೀನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿದರು. ಅದು ಒಂಬತ್ತನೆಯ ತಿಂಗಳ, ಇಪ್ಪತ್ತನೆಯ ದಿವಸವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೋಸ್ಕರವೂ, ಮಳೆಗೋಸ್ಕರವೂ ನಡುಗಿ ಕುಳಿತುಕೊಂಡಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು