Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 35:6 - ಕನ್ನಡ ಸಮಕಾಲಿಕ ಅನುವಾದ

6 ಆದರೆ ಅವರು, “ನಾವು ದ್ರಾಕ್ಷಾರಸ ಕುಡಿಯುವುದಿಲ್ಲ; ಏಕೆಂದರೆ ನಮ್ಮ ಪೂರ್ವಜನಾದ ರೇಕಾಬನ ಮಗ ಯೋನಾದಾಬನು ನಮಗೆ ಈ ಆಜ್ಞೆಯನ್ನು ಕೊಟ್ಟನು. ಅದು ಏನೆಂದರೆ ನೀವಾದರೂ, ನಿಮ್ಮ ಮಕ್ಕಳಾದರೂ ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯಬೇಡಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅದಕ್ಕೆ ಅವರು, “ನಾವು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ, ನಮ್ಮ ಪಿತೃವಾದ ರೇಕಾಬನ ಮಗನಾದ ಯೋನಾದಾಬನು ನಮಗೆ, ‘ನೀವಾಗಲಿ ನಿಮ್ಮ ಸಂತಾನದವರಾಗಲಿ ಯುಗಯುಗಾಂತರಕ್ಕೂ ದ್ರಾಕ್ಷಾರಸ ಕುಡಿಯಬಾರದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಅದಕ್ಕೆ ಅವರು, “ನಾವು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. ನಮ್ಮ ಪೂರ್ವಜನಾದ ರೇಕಾಬನ ಮಗ ಯೋನಾದಾಬನು ನಮಗೆ, ‘ನೀವಾಗಲಿ ನಿಮ್ಮ ಸಂತಾನದವರಾಗಲಿ ಯುಗಯುಗಾಂತರಕ್ಕೂ ದ್ರಾಕ್ಷಾರಸವನ್ನು ಕುಡಿಯಲೇಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅದಕ್ಕವರು - ನಾವು ದ್ರಾಕ್ಷಾರಸವನ್ನು ಕುಡಿಯುವದೇ ಇಲ್ಲ; ನಮ್ಮ ಪಿತೃವಾದ ರೇಕಾಬನ ಮಗನಾದ ಯೋನಾದಾಬನು ನಮಗೆ - ನೀವಾಗಲಿ ನಿಮ್ಮ ಸಂತಾನದವರಾಗಲಿ ಯುಗಯುಗಾಂತರಕ್ಕೂ ದ್ರಾಕ್ಷಾರಸ ಕುಡಿಯಬಾರದು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆದರೆ ರೇಕಾಬ್ಯರು, “ನಾವು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ. ಏಕೆಂದರೆ ನಮ್ಮ ಪೂರ್ವಿಕನಾದ ರೇಕಾಬನ ಮಗನಾದ ಯೋನಾದಾಬನು ನಮಗೆ, ‘ನೀವು ಮತ್ತು ನಿಮ್ಮ ಸಂತಾನದವರು ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 35:6
21 ತಿಳಿವುಗಳ ಹೋಲಿಕೆ  

ಅವನು ಕರ್ತದೇವರ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಕುಡಿಯುವುದಿಲ್ಲ, ಅವನು ತಾಯಿಯ ಗರ್ಭದಿಂದಲೇ ಪವಿತ್ರಾತ್ಮ ಭರಿತನಾಗಿರುವನು.


ಯಾಬೇಚಿನಲ್ಲಿ ವಾಸಿಸುವ ಬರಹಗಾರರ ಕುಟುಂಬದವರಾದ ತಿರ್ರಾತ್ಯರು, ಶಿಮೆಯಾತ್ಯರು, ಸೂಕಾತ್ಯರು ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮ್ಮತನಿಂದ ಉತ್ಪನ್ನರಾದ ಕೇನ್ಯರು.


ಯೇಹುವು ಅಲ್ಲಿಂದ ಹೋಗಿ, ತನ್ನನ್ನು ಎದುರುಗೊಳ್ಳಲು ಬಂದ ರೇಕಾಬನ ಮಗ ಯೆಹೋನಾದಾಬನನ್ನು ಕಂಡು ಅವನನ್ನು ವಂದಿಸಿ ಅವನಿಗೆ, “ನನ್ನ ಹೃದಯವು ನಿನ್ನ ಹೃದಯದ ಸಂಗಡ ಇರುವ ಹಾಗೆ ನಿನ್ನ ಹೃದಯವು ಯಥಾರ್ಥವಾಗಿ ಇದೆಯೋ?” ಎಂದನು. ಯೆಹೋನಾದಾಬನು, “ಇದೆ,” ಎಂದನು. “ಹಾಗಾದರೆ ನಿನ್ನ ಕೈ ಕೊಡು,” ಎಂದನು. ಇವನು ತನ್ನ ಕೈ ಕೊಟ್ಟನು. ತನ್ನ ಬಳಿಗೆ ರಥದ ಮೇಲೆ ಹತ್ತಿಸಿಕೊಂಡು ಅವನಿಗೆ,


ದ್ರಾಕ್ಷಿ ಗಿಡದಲ್ಲಿ ಹುಟ್ಟುವ ಒಂದನ್ನೂ ತಿನ್ನದೆ, ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುಚಿಯಾದ ಒಂದನ್ನೂ ತಿನ್ನದೆ ಇದ್ದು, ನಾನು ಅವಳಿಗೆ ಆಜ್ಞಾಪಿಸಿದ್ದೆಲ್ಲಾ ಕೈಗೊಳ್ಳಲಿ,” ಎಂದನು.


ಅವನು ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಈಗ ನೀನು ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುದ್ಧವಾದ ಒಂದನ್ನಾದರೂ ತಿನ್ನದೆ ಇರು. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಮರಣಹೊಂದುವವರೆಗೆ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು,’ ಎಂದಳು.”


“ನೀನು ಸಾಯದಂತೆ ದೇವದರ್ಶನದ ಗುಡಾರಕ್ಕೆ ಬರುವಾಗ ನೀನೂ ಇಲ್ಲವೆ ನಿನ್ನ ಪುತ್ರರೂ ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಕುಡಿಯಬಾರದು. ಇದು ನಿಮ್ಮ ವಂಶಾವಳಿಯು ಇರುವವರೆಗೂ ಶಾಶ್ವತವಾಗಿರುವ ಕಟ್ಟಳೆಯಾಗಿದೆ.


ಪ್ರಿಯರೇ, ಈ ಲೋಕದಲ್ಲಿ ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.


ಗುಡಾರಗಳಲ್ಲಿ ವಾಸಮಾಡುತ್ತೇವೆ. ನಮ್ಮ ಪೂರ್ವಜನಾದ ಯೋನಾದಾಬನು ನಮಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಕೇಳಿ ನಡೆದಿದ್ದೇವೆ.


ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.


ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.


ಆಗ ಯೇಹುವೂ, ರೇಕಾಬನ ಮಗ ಯೆಹೋನಾದಾಬನೂ ಬಾಳನ ದೇವಸ್ಥಾನದಲ್ಲಿ ಪ್ರವೇಶಿಸಿದರು. ಯೇಹುವು, “ಬಾಳನನ್ನು ಸೇವಿಸುವವರ ಹೊರತು ಅವರ ಸಂಗಡ ಯೆಹೋವ ದೇವರ ಸೇವಕರಲ್ಲಿ ಒಬ್ಬನೂ ಇರದ ಹಾಗೆ ಪರಿಶೋಧಿಸಿ ನೋಡಿರಿ,” ಎಂದು ಬಾಳನನ್ನು ಸೇವಿಸುವವರಿಗೆ ಹೇಳಿದನು.


ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ದೇಶದಲ್ಲಿ ನೀನು ಬಹುಕಾಲ ಬಾಳುವಂತೆ ನಿನ್ನ ತಂದೆತಾಯಿಗಳನ್ನು ಗೌರವಿಸು.


ಏಕೆಂದರೆ ಅವರ ಸಂಪತ್ತು ಅವರು ಕೂಡಿ ಇರುವುದಕ್ಕೆ ಆಗದಷ್ಟು ಅಭಿವೃದ್ಧಿಯಾಗಿತ್ತು. ಅವರ ಪಶುಪ್ರಾಣಿಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.


ಆ ಹುಡುಗರು ಬೆಳೆದಾಗ ಏಸಾವನು ಬೇಟೆಯಾಡುವುದರಲ್ಲಿ ಜಾಣನಾಗಿದ್ದು, ಅಡವಿಯ ಮನುಷ್ಯನಾದನು. ಯಾಕೋಬನು ಗುಡಾರಗಳಲ್ಲಿ ವಾಸಮಾಡುವ ಸಾಧು ಮನುಷ್ಯನಾಗಿದ್ದನು.


ರೇಕಾಬನ ಮಗ ಯೆಹೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ. ಅವರು ಇಂದಿನವರೆಗೂ ಕುಡಿಯಲಿಲ್ಲ. ತಮ್ಮ ಪೂರ್ವಜನ ಆಜ್ಞೆಯನ್ನು ಕೈಗೊಂಡಿದ್ದಾರೆ. ನೀವೋ, ನಾನು ನಿಮಗೆ ಪದೇಪದೇ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು