Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 35:2 - ಕನ್ನಡ ಸಮಕಾಲಿಕ ಅನುವಾದ

2 “ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು. ಅವರನ್ನು ಯೆಹೋವ ದೇವರ ಆಲಯದ ಒಂದು ಕೋಣೆಯೊಳಕ್ಕೆ ಕರೆದು, ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ ಅವರ ಸಂಗಡ ಮಾತನಾಡಿ ಅವರನ್ನು ಯೆಹೋವನ ಆಲಯದ ಒಂದು ಕೋಣೆಯೊಳಕ್ಕೆ ಕರೆದು ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ, ಅವರ ಸಂಗಡ ಮಾತಾಡು. ಅವರನ್ನು ಸರ್ವೇಶ್ವರನಾಲಯದ ಒಂದು ಕೋಣೆಯೊಳಕ್ಕೆ ಕರೆದು ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ ಅವರ ಸಂಗಡ ಮಾತಾಡಿ ಅವರನ್ನು ಯೆಹೋವನ ಆಲಯದ ಒಂದು ಕೋಣೆಯೊಳಕ್ಕೆ ಕರೆದು ದ್ರಾಕ್ಷಾರಸವನ್ನು ಕುಡಿಯುವದಕ್ಕೆ ಕೊಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 “ಯೆರೆಮೀಯನೇ, ರೇಕಾಬನ ಕುಟುಂಬದವರಲ್ಲಿಗೆ ಹೋಗು. ಅವರನ್ನು ಯೆಹೋವನ ಆಲಯದ ಒಂದು ಪಕ್ಕದ ಕೋಣೆಗೆ ಕರೆದು, ಕುಡಿಯುವದಕ್ಕೆ ದ್ರಾಕ್ಷಾರಸವನ್ನು ಕೊಡು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 35:2
21 ತಿಳಿವುಗಳ ಹೋಲಿಕೆ  

ಯಾಬೇಚಿನಲ್ಲಿ ವಾಸಿಸುವ ಬರಹಗಾರರ ಕುಟುಂಬದವರಾದ ತಿರ್ರಾತ್ಯರು, ಶಿಮೆಯಾತ್ಯರು, ಸೂಕಾತ್ಯರು ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮ್ಮತನಿಂದ ಉತ್ಪನ್ನರಾದ ಕೇನ್ಯರು.


ಏಕೆಂದರೆ ದ್ವಾರಪಾಲಕರಲ್ಲಿರುವ ನಾಲ್ಕು ಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯದ ಉಗ್ರಾಣಗಳ ಮೇಲೆಯೂ ಬೊಕ್ಕಸಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು.


ಕೋಣೆಯ ಉಪವಿಭಾಗಗಳು ಮತ್ತು ಬಾಗಿಲ ಚೌಕಟ್ಟಿನ ಒಳಗಡೆ ಇರುವ ಅವುಗಳ ಕಂಬಗಳಲ್ಲಿಯೂ ಇಕ್ಕಟ್ಟಾದ ಕಿಟಕಿಗಳಿದ್ದವು. ಕೈಸಾಲೆಗಳಿಗೂ ಸಹ ಒಳಗಡೆ ಸುತ್ತಲೂ ಕಿಟಕಿಗಳಿದ್ದವು. ಒಂದೊಂದು ಕಂಬದ ಮೇಲೆ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು.


ಈ ಪ್ರಕಾರ ನಾವು ನಮ್ಮ ಪೂರ್ವಜನಾದ ರೇಕಾಬನ ಮಗ ಯೆಹೋನಾದಾಬನ ಮಾತನ್ನು, ಅವನು ನಮಗೆ ಆಜ್ಞಾಪಿಸಿದ್ದೆಲ್ಲದರಲ್ಲಿ ನಾವೂ, ನಮ್ಮ ಹೆಂಡತಿಯರೂ, ನಮ್ಮ ಪುತ್ರರೂ, ನಮ್ಮ ಪುತ್ರಿಯರೂ ನಮ್ಮ ದಿವಸಗಳಲ್ಲೆಲ್ಲಾ ದ್ರಾಕ್ಷಾರಸ ಕುಡಿಯದ ಹಾಗೆಯೂ,


ಕರೆದುಕೊಂಡು ಯೆಹೋವ ದೇವರ ಆಲಯಕ್ಕೆ ದ್ವಾರಪಾಲಕನಾದ ಶಲ್ಲೂಮನ ಮಗನಾದ ಮಾಸೇಯನ ಕೊಠಡಿಯ ಮೇಲಿರುವ ಪ್ರಧಾನರ ಕೊಠಡಿಯ ಬಳಿಯಲ್ಲಿರುವ ದೇವರ ಮನುಷ್ಯನಾದ ಇಗ್ದಲ್ಯನ ಮಗನಾದ ಹಾನಾನನ ಪುತ್ರರ ಕೊಠಡಿಗೆ ತಂದು,


ಲೇವಿಯರಿಗೂ, ಹಾಡುಗಾರರಿಗೂ, ದ್ವಾರಪಾಲಕರಿಗೂ ನೇಮಕವಾದ ಕಾಣಿಕೆಗಳನ್ನೂ, ಧೂಪವನ್ನೂ, ಸಾಮಗ್ರಿಗಳನ್ನೂ, ಧಾನ್ಯದ ಹತ್ತನೆಯ ಪಾಲುಗಳನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಯಾಜಕರ ಕಾಣಿಕೆಗಳನ್ನೂ ಪೂರ್ವಕಾಲದಲ್ಲಿ ಇಡುತ್ತಿದ್ದ ದೊಡ್ಡ ಕೊಠಡಿಯನ್ನು ಎಲ್ಯಾಷೀಬನು ಟೋಬೀಯನಿಗೋಸ್ಕರ ಸಿದ್ಧ ಮಾಡಿಕೊಟ್ಟಿದ್ದನು.


ನೀವು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯದ ಕೊಠಡಿಗಳೊಳಗೆ ಯಾಜಕರ ಲೇವಿಯರ, ಪ್ರಧಾನರ ಮುಂದೆಯೂ ಇಸ್ರಾಯೇಲ್ ಕುಟುಂಬಗಳ ಪ್ರಧಾನರ ಮುಂದೆಯೂ ತೂಕಮಾಡುವವರೆಗೆ ಜಾಗ್ರತೆಯಾಗಿ ಕಾಪಾಡಿರಿ,” ಎಂದೆನು.


ಬಳಿಕ ಹಿಜ್ಕೀಯನು ಯೆಹೋವ ದೇವರ ಆಲಯದಲ್ಲಿ ಕೊಠಡಿಗಳನ್ನು ಸಿದ್ಧಮಾಡಲು ಆಜ್ಞಾಪಿಸಿದನು.


ಅದರ ಮೊಳೆಗಳು ಐನೂರ ಎಪ್ಪತ್ತು ಕಿಲೋಗ್ರಾಂಗಳ ತೂಕ ಬಂಗಾರದ್ದಾಗಿತ್ತು. ಹಾಗೆಯೇ ಮೇಲಿನ ಕೊಠಡಿಗಳನ್ನು ಬಂಗಾರದಿಂದ ಹೊದಿಸಿದನು.


ಅವರು ಆರೋನನ ವಂಶಸ್ಥರ ಕೈಕೆಳಗಿದ್ದುಕೊಂಡು ಯೆಹೋವ ದೇವರ ಆಲಯದ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳಲ್ಲಿಯೂ ಸಮಸ್ತ ಪರಿಶುದ್ಧ ಸಾಮಗ್ರಿಗಳನ್ನು ಶುದ್ಧ ಮಾಡುವುದರಲ್ಲಿಯೂ,


ಇದಲ್ಲದೆ ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು, ಸ್ವತಂತ್ರವಾದ ಕೊಠಡಿಗಳಲ್ಲಿ ವಾಸವಾಗಿದ್ದರು. ಏಕೆಂದರೆ ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.


ಅವನು 2.2 ಮೀಟರ್ ಎತ್ತರವಾದ ಕೊಠಡಿಗಳನ್ನು ಆಲಯದ ಬಳಿಯಲ್ಲಿ ಸುತ್ತಲು ಕಟ್ಟಿಸಿದನು. ಅವು ಆಲಯದ ಮೇಲೆ ಇರಿಸಿದ ದೇವದಾರು ತೊಲೆಗಳ ಮೇಲೆ ನಿಂತಿದ್ದವು.


ಮಧ್ಯ ಕೊಠಡಿಯ ಬಾಗಿಲು ಆಲಯದ ದಕ್ಷಿಣ ಭಾಗದಲ್ಲಿ ಇತ್ತು. ಅಲ್ಲಿಂದ ಮಧ್ಯ ಕೊಠಡಿಗೂ, ಮಧ್ಯ ಕೊಠಡಿಯಿಂದ ಮೂರನೆಯ ಕೊಠಡಿಗೂ ಹತ್ತಲು ಸುರುಳಿಯಾಕಾರದ ಮೆಟ್ಟಲುಗಳಿದ್ದವು.


ಆಗ ನಾನು ಹಬಚ್ಚಿನ್ಯನ ಮಗ, ಯೆರೆಮೀಯನ ಮಗನಾದ, ಯಾಜನ್ಯನೂ, ಅವನ ಸಹೋದರರನ್ನೂ, ಅವನ ಪುತ್ರರೆಲ್ಲರನ್ನೂ ರೇಕಾಬನ ಸಮಸ್ತ ಮನೆಯವರನ್ನೂ ಕರೆಯುವುದಕ್ಕೆ ಹೋದೆನು.


ಯೆಹೋವ ದೇವರ ಮನೆಯ ಅಂಗಳಗಳು, ಸುತ್ತಲಿರುವ ಕೊಠಡಿಗಳಾದ ಯೆಹೋವ ದೇವರ ಮನೆಯ ಉಗ್ರಾಣಗಳು, ಪ್ರತಿಷ್ಠೆ ಮಾಡಿದವುಗಳ ಉಗ್ರಾಣಗಳು, ಆತ್ಮದಿಂದ ತನಗುಂಟಾದ ಇವುಗಳ ಸಮಸ್ತ ಮಾದರಿಯನ್ನೂ ಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು