“ಮಗನು ತಂದೆಯನ್ನೂ, ದಾಸನು ಯಜಮಾನನನ್ನೂ ಸನ್ಮಾನಿಸುತ್ತಾನೆ. ಹಾಗಾದರೆ ನಾನು ತಂದೆಯಾಗಿದ್ದರೆ ನನ್ನ ಸನ್ಮಾನವೆಲ್ಲಿ? ನಾನು ಯಜಮಾನನಾಗಿದ್ದರೆ ನನಗೆ ತೋರಿಸುವ ಭಯಭಕ್ತಿಯೆಲ್ಲಿ?” “ನನ್ನ ಹೆಸರನ್ನು ಅಸಡ್ಡೆ ಮಾಡುವ ಯಾಜಕರು ನೀವೇ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಆದರೆ ನೀವು, ‘ನಿಮ್ಮ ಹೆಸರನ್ನು ಯಾವುದರಲ್ಲಿ ನಾವು ಅಸಡ್ಡೆ ಮಾಡಿದ್ದೇವೆ?’ ಎಂದು ಕೇಳುತ್ತೀರಿ.”
ರೇಕಾಬನ ಮಗ ಯೆಹೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ. ಅವರು ಇಂದಿನವರೆಗೂ ಕುಡಿಯಲಿಲ್ಲ. ತಮ್ಮ ಪೂರ್ವಜನ ಆಜ್ಞೆಯನ್ನು ಕೈಗೊಂಡಿದ್ದಾರೆ. ನೀವೋ, ನಾನು ನಿಮಗೆ ಪದೇಪದೇ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.”
ಆದರೆ ಸೌಲನ ಮಗನಿಗೆ ಸೇನಾಪತಿಗಳು ಇಬ್ಬರಿದ್ದರು. ಒಬ್ಬನ ಹೆಸರು ಬಾಣನು. ಮತ್ತೊಬ್ಬನ ಹೆಸರು ರೇಕಾಬನು. ಇವರು ಬೆನ್ಯಾಮೀನ್ ಗೋತ್ರದಲ್ಲಿ ಬೇರೋತ್ ಗ್ರಾಮದವನಾದ ರಿಮ್ಮೋನನ ಮಕ್ಕಳು. ಏಕೆಂದರೆ ಬೇರೋತ್ ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ.
ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಿಮ್ಮ ಮಾರ್ಗಗಳನ್ನೂ, ನಿಮ್ಮ ಕ್ರಿಯೆಗಳನ್ನೂ ನೆಟ್ಟಗೆಮಾಡಿರಿ. ಆಗ ನಿಮ್ಮನ್ನು ಈ ಸ್ಥಳದಲ್ಲಿ ವಾಸಿಸುವಂತೆ ಮಾಡುವೆನು.