Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 32:32 - ಕನ್ನಡ ಸಮಕಾಲಿಕ ಅನುವಾದ

32 ಇಸ್ರಾಯೇಲರೂ, ಯೆಹೂದದ ಮಕ್ಕಳೂ, ಅವರೂ, ಅವರ ಅರಸರೂ, ಅವರ ಪ್ರಧಾನರೂ, ಅವರ ಯಾಜಕರೂ, ಅವರ ಪ್ರವಾದಿಗಳೂ, ಯೆಹೂದದ ಜನರೂ, ಯೆರೂಸಲೇಮಿನ ನಿವಾಸಿಗಳೂ ಸಹಿತವಾಗಿ ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ ಮಾಡಿದರು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಅರಸರು, ಪ್ರಧಾನರು, ಯಾಜಕರು, ಪ್ರವಾದಿಗಳು, ಯೆಹೂದದ ಪ್ರಜೆಗಳು, ಯೆರೂಸಲೇಮಿನ ನಿವಾಸಿಗಳು, ಅಂತು ಎಲ್ಲಾ ಇಸ್ರಾಯೇಲರೂ ಮತ್ತು ಯೆಹೂದ್ಯರೂ ನನ್ನನ್ನು ರೇಗಿಸತಕ್ಕ ಅಧರ್ಮವನ್ನು ತುಂಬಾ ಮಾಡಿದ್ದರಿಂದ ನಾನು ಈ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೊಲಗಿಸಬೇಕಾಗಿ ಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಅದರ ಅರಸರು, ಮಂತ್ರಿಗಳು, ಯಾಜಕರು, ಪ್ರವಾದಿಗಳು, ಜುದೇಯದ ಪ್ರಜೆಗಳು, ಜೆರುಸಲೇಮಿನ ನಿವಾಸಿಗಳು, ಹೀಗೆ ಎಲ್ಲ ಇಸ್ರಯೇಲರೂ ಯೆಹೂದ್ಯರೂ ಅಧರ್ಮವನ್ನು ಹೇರಳವಾಗಿಮಾಡಿ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ಈ ನಗರವನ್ನು ನನ್ನ ಸನ್ನಿಧಿಯಿಂದ ತೊಲಗಿಸಬೇಕಾಗಿ ಬಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಅರಸರು, ಪ್ರಧಾನರು, ಯಾಜಕರು, ಪ್ರವಾದಿಗಳು, ಯೆಹೂದದ ಪ್ರಜೆಗಳು, ಯೆರೂಸಲೇವಿುನ ನಿವಾಸಿಗಳು, ಅಂತು ಎಲ್ಲಾ ಇಸ್ರಾಯೇಲ್ಯರೂ ಯೆಹೂದ್ಯರೂ ನನ್ನನ್ನು ರೇಗಿಸತಕ್ಕ ಅಧರ್ಮವನ್ನು ತುಂಬಾ ಮಾಡಿದ್ದರಿಂದ ನಾನು ಈ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೊಲಗಿಸಬೇಕಾಗಿ ಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಇಸ್ರೇಲಿನ ಮತ್ತು ಯೆಹೂದದ ಜನರು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನಾನು ಜೆರುಸಲೇಮ್ ನಗರವನ್ನು ನಾಶಮಾಡುತ್ತೇನೆ. ಜನರು, ರಾಜರು, ಮುಂದಾಳುಗಳು, ಯಾಜಕರು, ಪ್ರವಾದಿಗಳು, ಯೆಹೂದದ ಪ್ರಜೆಗಳು, ಜೆರುಸಲೇಮಿನ ನಿವಾಸಿಗಳು ಇವರೆಲ್ಲರೂ ನನಗೆ ಕೋಪ ಬರುವಂತೆ ಮಾಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 32:32
19 ತಿಳಿವುಗಳ ಹೋಲಿಕೆ  

ಯೆಹೋವ ದೇವರೇ, ನಮ್ಮ ಅರಸರಿಗೂ ನಮ್ಮ ರಾಜಕುಮಾರರಿಗೂ, ನಮ್ಮ ಪೂರ್ವಜರಿಗೂ, ನಮಗೂ ನಾಚಿಕೆಯಾಗಿದೆ. ಏಕೆಂದರೆ ನಿಮಗೆ ವಿರುದ್ಧವಾಗಿ ನಾವು ಪಾಪಮಾಡಿದ್ದೇವೆ.


“ಕಳ್ಳನು ಸಿಕ್ಕಿದ ಮೇಲೆ ನಾಚಿಕೆಪಡುವ ಪ್ರಕಾರ ಇಸ್ರಾಯೇಲ್ ಜನರಿಗೆ ನಾಚಿಕೆ ಆಯಿತು. ಅವರ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು, ಇವರೆಲ್ಲರೂ ನಾಚಿಕೆಗೆ ಈಡಾಗುವರು.


ನಿನ್ನ ಪ್ರಭುಗಳು ಎದುರುಬೀಳುವವರೂ, ಕಳ್ಳರ ಜೊತೆಗಾರರೂ ಆಗಿದ್ದಾರೆ. ಪ್ರತಿಯೊಬ್ಬನೂ ಲಂಚ ಪ್ರಿಯನೂ, ಬಹುಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ. ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವುದಿಲ್ಲ.


ನಮ್ಮ ತಂದೆಗಳ ದಿವಸಗಳು ಮೊದಲ್ಗೊಂಡು ಈ ದಿವಸದವರೆಗೆ ದೊಡ್ಡ ಅಪರಾಧಕ್ಕೊಳಗಾಗಿದ್ದೇವೆ. ಇಂದಿನ ಪ್ರಕಾರವೇ ನಾವು ಅನ್ಯದೇಶಗಳ ಅರಸರ ಕೈಗೆ ಸಿಕ್ಕಿಬಿದ್ದೆವು. ನಮ್ಮ ಅಕ್ರಮಗಳಿಗೋಸ್ಕರ ನಾವೂ, ನಮ್ಮ ಅರಸರೂ ನಮ್ಮ ಯಾಜಕರೂ ಖಡ್ಗವೂ ಸೆರೆಗೂ ಕೊಳ್ಳೆಗೂ ನಾಚಿಕೆಗೂ ಗುರಿಯಾಗಿದ್ದೇವೆ.


ನಿಮ್ಮ ಹೆಸರಿನಲ್ಲಿ ನಮ್ಮ ಅರಸರಿಗೂ, ನಮ್ಮ ರಾಜಕುಮಾರರಿಗೂ, ನಮ್ಮ ಪೂರ್ವಜರಿಗೂ ದೇಶದ ಎಲ್ಲಾ ಜನರಿಗೂ ಮಾತನಾಡಿದ ನಿಮ್ಮ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡಲಿಲ್ಲ.


“ ‘ಇಸ್ರಾಯೇಲಿನ ಅರಸರು ಪ್ರತಿಯೊಬ್ಬನು ತಮ್ಮ ತಮ್ಮ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾರೆ.


ಆದರೆ ಸ್ವಂತ ಬಾಯಿಂದ ಹೊರಡುವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ. ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನಾರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ. ನಾವೂ, ನಮ್ಮ ತಂದೆಗಳೂ, ನಮ್ಮ ಅರಸರೂ, ನಮ್ಮ ಪ್ರಧಾನರೂ ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ಮಾಡುವೆವು. ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ.


“ನೀವೂ, ನಿಮ್ಮ ಪಿತೃಗಳೂ, ನಿಮ್ಮ ಅರಸರೂ, ನಿಮ್ಮ ಪ್ರಧಾನರೂ, ದೇಶದ ಜನರೂ ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಸುಟ್ಟ ಧೂಪವನ್ನೇ, ಯೆಹೋವ ದೇವರು ಜ್ಞಾಪಕ ಮಾಡಿಕೊಂಡಿದ್ದು ಅಲ್ಲವೋ?


ಕರ್ತದೇವರೇ, ನಿಮ್ಮ ಎಲ್ಲಾ ನೀತಿಗಳ ಪ್ರಕಾರ ನಿಮ್ಮ ಕೋಪವನ್ನು, ನಿಮ್ಮ ಉಗ್ರತ್ವವನ್ನು ನಿಮ್ಮ ಪಟ್ಟಣವಾದ ಯೆರೂಸಲೇಮಿನಿಂದಲೂ ನಿಮ್ಮ ಪರಿಶುದ್ಧ ಪರ್ವತದಿಂದಲೂ ತಿರುಗಿಸಿಬಿಡಿರಿ. ನಮ್ಮ ಪಾಪಗಳ ನಿಮಿತ್ತದಿಂದಲೂ, ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮ್ ಮತ್ತು ನಿಮ್ಮ ಜನರು ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆ.


ದಿವ್ಯ ದರ್ಶನದ ತಗ್ಗಿನ ವಿಷಯವಾದ ಪ್ರವಾದನೆ: ನಿನ್ನವರೆಲ್ಲರು ಮಾಳಿಗೆಗಳ ಮೇಲೆ ಏರುವ ಹಾಗೆ, ಈಗ ನಿನಗೆ ಏನಾಯಿತು?


ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡುವುದನ್ನು ನೀನು ನೋಡುವುದಿಲ್ಲವೋ?


“ಕರ್ತದೇವರೇ, ನೀವು ನೀತಿವಂತರು, ಆದರೆ ನಾವು ಈ ದಿನ ಬಹಳ ಲಜ್ಜೆಗೆಟ್ಟವರು. ಯೆಹೂದ್ಯರು ಹಾಗು ಯೆರೂಸಲೇಮಿನ ನಿವಾಸಿಗಳು ಈಗಾಗಲೇ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ಚದರಿಹೋಗಿದ್ದಾರೆ. ದೂರದ ದೇಶಗಳಿಗೂ, ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಆ ಎಲ್ಲಾ ಇಸ್ರಾಯೇಲರು ನಾಚಿಕೆಗೆ ಈಡಾಗಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು