Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 32:27 - ಕನ್ನಡ ಸಮಕಾಲಿಕ ಅನುವಾದ

27 “ಇಗೋ, ನಾನೇ ಯೆಹೋವ ದೇವರು, ಸಮಸ್ತ ಜನರ ದೇವರು, ನನಗೆ ಯಾವುದಾದರೂ ಅಸಾಧ್ಯವಾದ ಕಾರ್ಯ ಉಂಟೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 “ಇಗೋ, ನಾನು ಯೆಹೋವನು, ನರಪ್ರಾಣಿಗೆಲ್ಲಾ ದೇವರು; ನನಗೆ ಅಸಾಧ್ಯವಾದದ್ದುಂಟೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 “ನೋಡು, ನಾನು ಸರ್ವೇಶ್ವರ, ನರಪ್ರಾಣಿಗಳಿಗೆ ದೇವರು. ನನಗೆ ಅಸಾಧ್ಯವಾದುದು ಯಾವುದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಇಗೋ, ನಾನು ಯೆಹೋವನು, ನರಪ್ರಾಣಿಗೆಲ್ಲಾ ದೇವರು; ನನಗೆ ಅಸಾಧ್ಯವಾದದ್ದುಂಟೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 “ಯೆರೆಮೀಯನೇ, ನಾನೇ ಯೆಹೋವನು, ನಾನು ಈ ಭೂಮಂಡಲದ ಪ್ರತಿಯೊಬ್ಬನ ದೇವರು. ಯೆರೆಮೀಯನೆ, ನನಗೆ ಯಾವುದೂ ಅಸಾಧ್ಯವಲ್ಲವೆಂಬುದನ್ನು ನೀನು ಬಲ್ಲೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 32:27
15 ತಿಳಿವುಗಳ ಹೋಲಿಕೆ  

ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.


“ಸಾರ್ವಭೌಮ ಯೆಹೋವ ದೇವರೇ, ಇಗೋ, ನೀವು ನಿಮ್ಮ ಮಹಾ ಬಲದಿಂದಲೂ, ನಿಮ್ಮ ಚಾಚಿದ ಕೈಯಿಂದಲೂ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ. ನಿಮಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ.


ಆದರೆ ಈಗ ಯೆಹೋವ ದೇವರೇ, ನಮ್ಮ ತಂದೆಯು ನೀನೇ, ನಾವು ಮಣ್ಣು. ನೀನು ನಮ್ಮ ಕುಂಬಾರನು. ನಾವೆಲ್ಲರೂ ನಿನ್ನ ಕೈಕೆಲಸಗಳು.


ನೀವು ಎಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವಿರಿ.


ಪ್ರಾರ್ಥನೆಯನ್ನು ಕೇಳುವವರೇ, ಎಲ್ಲಾ ಜನರು ನಿಮ್ಮ ಬಳಿಗೆ ಬರುವರು.


ಮಾನವರೆಲ್ಲರೂ ದೇವರ ರಕ್ಷಣೆಯನ್ನು ಕಾಣುವರು.’ ”


“ಎಲ್ಲಾ ಮನುಷ್ಯರ ಆತ್ಮಗಳ ದೇವರಾದ ಯೆಹೋವ ದೇವರು ಈ ಜನಸಮೂಹದ ಮೇಲೆ ಒಬ್ಬ ಮನುಷ್ಯನನ್ನು ನೇಮಿಸಿ ಇಡಲಿ.


ಆಗ ಅವರು ಬೋರಲು ಬಿದ್ದು, “ದೇವರೇ, ಎಲ್ಲಾ ಮಾನವರ ಆತ್ಮಗಳ ದೇವರೇ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ನೀವು ಸಮಸ್ತ ಸಭೆಯ ಮೇಲೆ ಕೋಪಿಸಿಕೊಳ್ಳುತ್ತೀರೋ?” ಎಂದರು.


ಯೆಹೋವ ದೇವರಿಗೆ ಅಸಾಧ್ಯವಾದದ್ದು ಯಾವುದಾದರೂ ಇದೆಯೋ? ಬರುವ ವರ್ಷ ಇದೇ ಸಮಯದಲ್ಲಿ ನಾನು ತಿರುಗಿ ನಿನ್ನ ಬಳಿಗೆ ಬರುವೆನು. ಆಗ ಸಾರಳಿಗೆ ಒಬ್ಬ ಮಗನಿರುವನು,” ಎಂದರು.


ಇದಲ್ಲದೆ ಇದು ಯೆಹೋವ ದೇವರ ದೃಷ್ಟಿಗೆ ಅಲ್ಪವಾಗಿರುವುದು. ಅವರು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವರು.


ಆಗ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಉಂಟಾಗಿ,


‘ನನ್ನನ್ನು ಕರೆ, ಆಗ ನಿನಗೆ ಉತ್ತರಕೊಡುವೆನು. ನಿನಗೆ ತಿಳಿಯದ ಮತ್ತು ಪರಿಶೋಧನೆಗೆ ಮೀರಿದ ಮಹಾಕಾರ್ಯಗಳನ್ನೂ ನಿನಗೆ ಹೇಳಿಕೊಡುವೆನು.’


ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇದು ಈ ದಿವಸಗಳಲ್ಲಿ ಉಳಿದ ಈ ಜನರ ದೃಷ್ಟಿಗೆ ಆಶ್ಚರ್ಯವಾಗಿ ತೋರಿದರೂ, ನನ್ನ ಕಣ್ಣುಗಳಿಗೆ ಸಹ ಆಶ್ಚರ್ಯವಾಗಿ ತೋರುವುದೋ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಯೆಹೋವ ದೇವರು ಮೋಶೆಗೆ, “ಯೆಹೋವ ದೇವರ ಕೈ ಮೋಟುಗೈಯೋ? ನನ್ನ ಮಾತು ನೆರವೇರುತ್ತದೋ, ಇಲ್ಲವೋ ಎಂದು ನೀನು ನೋಡುವೆ,” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು