Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 30:7 - ಕನ್ನಡ ಸಮಕಾಲಿಕ ಅನುವಾದ

7 ಅಯ್ಯೋ, ಈ ದಿನವು ಘೋರವಾದದ್ದು, ಅದಕ್ಕೆ ಎಣೆ ಇಲ್ಲ; ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅಯ್ಯೋ, ಆ ದಿನವು ಘೋರವಾದದ್ದು, ಅಂಥ ದಿನ ಮತ್ತೊಂದಿಲ್ಲ, ಅದು ಯಾಕೋಬರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಹೌದು, ಭಯಂಕರವಾದ ದಿನ ಬರಲಿದೆ, ಅದಕ್ಕಿರದು ಎಣೆ! ಅದು ಇಕ್ಕಟ್ಟಿನ ದಿನ, ಆದರೂ ಅದರಿಂದ ಯಕೋಬ್ಯರಿಗಿದೆ ಬಿಡುಗಡೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅಯ್ಯೋ, ಆ ದಿನವು ಘೋರವಾದದ್ದು, ಅದಕ್ಕೆ ಎಣೆಯಿಲ್ಲ; ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ; ಆದರೂ ಅದರಿಂದ ಪಾರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 “ಇದು ಯಾಕೋಬ್ಯರಿಗೆ ಬಹು ಮುಖ್ಯವಾದ ಸಮಯ. ಇದು ಬಹಳ ಕಷ್ಟದ ಸಮಯ. ಎಂದೂ ಇಂಥ ಕಷ್ಟದ ಸಮಯ ಬರುವದಿಲ್ಲ. ಆದರೆ ಯಾಕೋಬ್ ಇದರಿಂದ ಪಾರಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 30:7
37 ತಿಳಿವುಗಳ ಹೋಲಿಕೆ  

“ಆ ಕಾಲದಲ್ಲಿ ನಿನ್ನ ಜನರನ್ನು ಕಾಪಾಡುವುದಕ್ಕಾಗಿ ಮಹಾರಾಜಕುಮಾರನಾದ ಮೀಕಾಯೇಲನು ಏಳುವನು. ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನವರೆಗೂ ಸಂಭವಿಸದಂತಹ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಎಂದರೆ ಜೀವ ಪುಸ್ತಕದಲ್ಲಿ ಯಾರ ಹೆಸರು ಬರೆಯಲಾಗಿದೆಯೋ, ಅವರೆಲ್ಲರೂ ಬಿಡುಗಡೆಯಾಗುವರು.


“ಖಂಡಿತವಾಗಿ ಆ ದಿನ ಬರುತ್ತದೆ, ಅದು ಒಲೆಯಂತೆ ಉರಿಯುತ್ತದೆ. ಆಗ ಗರ್ವಿಷ್ಠರೆಲ್ಲರೂ ಕೆಟ್ಟದ್ದನ್ನು ಮಾಡುವವರೆಲ್ಲರೂ ಹುಲ್ಲಿನಂತಿರುವರು. ಬರುವ ಆ ದಿನವು ಅವರನ್ನು ಸುಟ್ಟುಬಿಡುವುದು. ಬೇರನ್ನಾದರೂ, ಕೊಂಬೆಯನ್ನಾದರೂ ಅವರಿಗೆ ಬಿಡದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಅವರು ನಮಗೂ, ನಮಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳಿಗೂ ವಿರೋಧವಾಗಿ ತಾವು ಹೇಳಿದ ಮಾತುಗಳನ್ನು ನೆರವೇರಿಸಿ, ನಮ್ಮ ಮೇಲೆ ದೊಡ್ಡ ವಿನಾಶ ಬರುವ ಹಾಗೆ ಮಾಡಿದ್ದಾರೆ. ಯೆರೂಸಲೇಮಿನಲ್ಲಿ ನಡೆದ ಹಾಗೆ ಇಡೀ ಆಕಾಶದ ಕೆಳಗೆ ಎಲ್ಲೂ ನಡೆಯಲಿಲ್ಲ.


ಯೆಹೋವ ದೇವರು ತಮ್ಮ ಸೈನ್ಯಕ್ಕೆ ಗುಡುಗಿನಂತೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ಬಹು ದೊಡ್ಡದಾಗಿದೆ. ಅವರ ಆಜ್ಞೆಯನ್ನು ಪಾಲಿಸುವವನು ಪರಾಕ್ರಮಿಯು. ಯೆಹೋವ ದೇವರ ದಿವಸವು ದೊಡ್ಡದು, ಮಹಾ ಭಯಂಕರವಾದದ್ದು. ಅದನ್ನು ಸಹಿಸಿಕೊಳ್ಳುವವರು ಯಾರು?


ಹೀಗೆ ಪವಿತ್ರ ವೇದದಲ್ಲಿ ಬರೆದಿರುವಂತೆ, ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು: “ವಿಮೋಚಿಸುವವರು ಒಬ್ಬರು ಚೀಯೋನಿನಿಂದ ಬರುತ್ತಾರೆ, ಅವರು ಯಾಕೋಬನ ಸಂತತಿಯಲ್ಲಿ ದೇವರನ್ನು ಅಲ್ಲಗಳೆಯುವ ಸ್ವಭಾವನ್ನು ತಾವೇ ತೆಗೆದುಹಾಕುವರು.


ಆ ದಿವಸಗಳಲ್ಲಿ ಮಹಾ ಸಂಕಟವಿರುವುದು, ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ಸಮಯದವರೆಗೂ ಅಂಥ ಸಂಕಟವು ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ.


ಆಗ ಯೆಹೂದದ ಜನರು ಮತ್ತು ಇಸ್ರಾಯೇಲ್ ಜನರು ಒಟ್ಟುಗೂಡಿಕೊಂಡು ತಮಗೆ ಒಬ್ಬ ನಾಯಕನನ್ನು ನೇಮಕ ಮಾಡಿಕೊಂಡು, ದೇಶದೊಳಗಿಂದ ಹೊರಗೆ ಬರುವರು. ಏಕೆಂದರೆ ಇಜ್ರೆಯೇಲಿನ ಆ ದಿನವು ಮಹಾದಿನವಾಗಿರುವುದು.


ಹಾದು ಹೋಗುವವರೇ, ಇದು ನಿಮಗೆ ಏನೂ ಇಲ್ಲವೋ? ಸುತ್ತಲೂ ದೃಷ್ಟಿಸಿ ನೋಡಿರಿ. ಯೆಹೋವ ದೇವರ ಉಗ್ರಕೋಪದ ದಿನದಲ್ಲಿ ನನ್ನನ್ನು ಸಂಕಟ ಪಡಿಸಿದ ಇಂಥಾ ದುಃಖವು, ಯಾರಿಗಾದರೂ ಉಂಟೋ ನೋಡಿರಿ.


“ ‘ಆದ್ದರಿಂದ ನನ್ನ ಸೇವಕನಾದ ಯಾಕೋಬನೇ ಭಯಪಡಬೇಡ, ಇಸ್ರಾಯೇಲೇ ಹೆದರಬೇಡ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಏಕೆಂದರೆ ಇಗೋ, ನಾನು ನಿನ್ನನ್ನು ದೂರದಿಂದಲೇ ನಿನ್ನ ಸಂತಾನವನ್ನು ಸೆರೆ ಒಯ್ದ ದೇಶದಿಂದಲೂ ರಕ್ಷಿಸುತ್ತೇನೆ. ಯಾಕೋಬನು ತಿರುಗಿಬಂದು ವಿಶ್ರಾಂತಿಯಲ್ಲಿರುವನು. ಹೆದರಿಸುವವನಿಲ್ಲದೆ ಸುರಕ್ಷಿತವಾಗಿರುವನು.


ನೀತಿವಂತನಿಗೆ ತೊಂದರೆಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಯೆಹೋವ ದೇವರು ಅವನನ್ನು ಬಿಡಿಸುತ್ತಾರೆ.


ಏಕೆಂದರೆ, ಅವರ ಕೋಪಾಗ್ನಿಯ ಮಹಾದಿನವು ಬಂದಿದೆ, ಅದರ ಮುಂದೆ ಯಾರು ನಿಂತಾರು?” ಎಂದು ಹೇಳಿದರು.


ಕರ್ತದೇವರ ಮಹಿಮೆಯುಳ್ಳ ಮಹಾದಿನವೂ ಬರುವುದಕ್ಕೆ ಮೊದಲು ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.


ಯೆಹೋವ ದೇವರ ಭಯಂಕರವಾದ ಮಹಾದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.


ನನ್ನ ಜನರ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು. ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲಾಯಿತು ಮತ್ತು ಅವಳಿಗೆ ಸಹಾಯಮಾಡಲು ಯಾವ ಕೈಗಳೂ ಇರಲಿಲ್ಲ.


ಯೆರೂಸಲೇಮಿನ ಪುತ್ರಿಯೇ, ನಾನು ಯಾವುದನ್ನು ನಿನಗೆ ಸಾಕ್ಷಿಯನ್ನಾಗಿಡಲಿ? ಯಾವುದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಕನ್ಯೆಯೇ, ನಿನ್ನನ್ನು ಆದರಿಸುವವರು ಯಾರು?


ದೇವರೇ, ಇಸ್ರಾಯೇಲರನ್ನು ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ವಿಮೋಚಿಸಿರಿ.


ಆಗ ಯಾಕೋಬನು ಬಹಳವಾಗಿ ಭಯಪಟ್ಟು, ತನ್ನ ಸಂಗಡ ಇದ್ದ ಜನರನ್ನೂ, ಕುರಿಗಳನ್ನೂ, ದನಗಳನ್ನೂ, ಒಂಟೆಗಳನ್ನೂ ಎರಡು ಗುಂಪುಗಳಾಗಿ ವಿಭಾಗಿಸಿದನು.


ಆ ದಿನದಲ್ಲಿ ಕರಾವಳಿಯ ನಿವಾಸಿಗಳು, ‘ಇಗೋ, ಅಸ್ಸೀರಿಯದ ಅರಸರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ, ನಿರೀಕ್ಷಿಸಿದ್ದೆವೋ ಅವರಿಗೆ ಈ ಗತಿ ಬಂತಲ್ಲಾ ಮತ್ತು ನಾವು ತಪ್ಪಿಸಿಕೊಳ್ಳುವುದು ಹೇಗೆ?’ ಎಂದುಕೊಳ್ಳುವರು.”


ಅವರು ಮರಕ್ಕೆ, ‘ನೀನು ನನ್ನ ತಂದೆ,’ ಎಂದೂ ಕಲ್ಲಿಗೆ, ‘ನೀನು ನನ್ನನ್ನು ಹೆತ್ತಿದ್ದೀ,’ ಎಂದೂ ಹೇಳುತ್ತಾರಲ್ಲಾ. ಏಕೆಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ. ಆದರೂ ಅವರ ಕಷ್ಟಕಾಲದಲ್ಲಿ ಎದ್ದು, ‘ನಮ್ಮನ್ನು ರಕ್ಷಿಸು,’ ಎಂದು ಮೊರೆಯಿಡುವರು.


ಆದರೆ ನೀನು ನಿನಗೋಸ್ಕರ ಮಾಡಿಕೊಂಡ ನಿನ್ನ ದೇವರುಗಳು ಎಲ್ಲಿ? ನಿನ್ನ ಕಷ್ಟಕಾಲದಲ್ಲಿ ನಿನ್ನನ್ನು ರಕ್ಷಿಸಲು ಸಾಧ್ಯವಾದರೆ ಅವರೇ ಏಳಲಿ, ಓ ಯೆಹೂದವೇ, ನಿನ್ನ ಪಟ್ಟಣಗಳ ಲೆಕ್ಕದ ಹಾಗೆ ನಿನ್ನ ದೇವರುಗಳು ಇದ್ದಾರೆ.


ಓ ಇಸ್ರಾಯೇಲಿನ ನಿರೀಕ್ಷೆಯೇ, ಇಕ್ಕಟ್ಟಿನ ಕಾಲದಲ್ಲಿ ಅವನನ್ನು ರಕ್ಷಿಸುವವರೇ, ನೀನು ಏಕೆ ದೇಶದಲ್ಲಿ ಅನ್ಯನ ಹಾಗೆಯೂ, ರಾತ್ರಿ ಕಳೆಯುವುದಕ್ಕೆ ಇಳಿದುಕೊಳ್ಳುವ ಪ್ರಯಾಣಸ್ಥನ ಹಾಗೆಯೂ ಇರಬೇಕು?


ಹಿರಿಯರೇ, ಇದನ್ನು ಕೇಳಿರಿ: ದೇಶದ ನಿವಾಸಿಗಳೇ, ಕಿವಿಗೊಡಿರಿ. ಇಂಥ ದುರ್ಘಟನೆಯು ನಿಮ್ಮ ದಿವಸಗಳಲ್ಲಾದರೂ ನಿಮ್ಮ ಪೂರ್ವಿಕರ ದಿವಸಗಳಲ್ಲಾದರೂ ಉಂಟಾಯಿತೋ?


ಆ ದಿನ ಭಯಂಕರವಾದದ್ದು! ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು.


ಆದರೆ ಅದು ಒಂದು ವಿಶಿಷ್ಟ ದಿವಸವಾಗಿರುವುದು. ಯೆಹೋವ ದೇವರಿಗೆ ಮಾತ್ರ ತಿಳಿದಿರುವ ಒಂದು ದಿನ ಇರುವುದು. ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಆದರೆ, ಸಾಯಂಕಾಲದ ಸಮಯದಲ್ಲಿ ಬೆಳಕು ಇರುವುದು.


ಈಗ ಏಕೆ ಗಟ್ಟಿಯಾಗಿ ಕೂಗುತ್ತೀ? ನಿನ್ನಲ್ಲಿ ಅರಸನಿಲ್ಲವೋ? ನಿನ್ನ ಅಧಿಕಾರಿಯು ನಾಶವಾದನೋ? ಹೆರುವವಳಂತೆ ನಿನಗೆ ವೇದನೆ ಬಂದಿರುವುದೋ?


ನಾನು ಕೇಳಿದಾಗ ನನ್ನ ಹೃದಯ ಬಡಿದುಕೊಂಡಿತು; ಆ ಶಬ್ದಕ್ಕೆ ನನ್ನ ತುಟಿಗಳು ಕದಲಿದವು; ನನ್ನ ಎಲುಬುಗಳು ಕ್ಷಯಗೊಂಡವು; ನನ್ನ ಕಾಲುಗಳು ನಡುಗಿದವು; ಆದರೂ ನಮ್ಮ ಮೇಲೆ ದಾಳಿಮಾಡುವ ಜನರ ಮೇಲೆ ನಾಶನ ಬರುವುದನ್ನು ನೋಡಲು ತಾಳ್ಮೆಯಿಂದ ಕಾದಿರುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು